Viral News: ಭಾರತ-ಪಾಕ್ ಸಂಘರ್ಷದ ಮಧ್ಯೆ ಅಂಗಳಕ್ಕೆ ಬಂದು ಬಿದ್ದಉಕ್ಕಿನಂಥ ವಸ್ತು; ಬೆಚ್ಚಿಬಿದ್ದ ಸ್ಥಳೀಯರು
ರಾಜಸ್ಥಾನದ ಪೋಖ್ರಾನ್ ಪಟ್ಟಣದ ಸಮೀಪದ ಜಾಮ್ಲಾ ಗ್ರಾಮದಲ್ಲಿ ಇತ್ತೀಚೆಗೆ ಭಯಾನಕ ಶಬ್ದವೊಂದು ಕೇಳಿಬಂದಿತ್ತು. ಪದ್ಮಾ ರಾಥ್ ಅವರ ಮನೆ ಬಳಿ ದೊಡ್ಡದಾದ 10-12 ಅಡಿ ಉಬ್ಬಿದ, ಕಪ್ಪು ಉಕ್ಕಿನ ವಸ್ತುವೊಂದು ಬಿದ್ದಿತ್ತು. ಈ ಸುದ್ದಿ ಈಗ ವೈರಲ್ ಆಗಿದೆ.


ಜೈಪುರ: ಪಹಲ್ಗಾಮ್‍ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಭಾರತೀಯ ಪ್ರವಾಸಿಗರನ್ನು ಕೊಂದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಮಟ್ಟದ ಯುದ್ಧದ ವಾತಾವರಣ ಏರ್ಪಟ್ಟಿತ್ತು. ಇದೇ ವೇಳೆ ಭಯಾನಕ ಶಬ್ದವೊಂದು ರಾಜಸ್ಥಾನದ ಪೋಖ್ರಾನ್ ಪಟ್ಟಣದ ಸಮೀಪದ ಜಾಮ್ಲಾ ಗ್ರಾಮದಲ್ಲಿ 65 ವರ್ಷದ ಪದ್ಮಾ ರಾಥ್ ಅವರ ಮನೆಯ ಸಮೀಪದಲ್ಲಿ ಕೇಳಿಬಂದಿದೆ. ಶಬ್ಧ ಕೇಳಿ ಆ ಮನೆಯ ಸದಸ್ಯರು ಭಯಭೀತರಾಗಿದ್ದಾರೆ. ಹೊರಗೆ ಬಂದು ನೋಡಿದಾಗ ದೊಡ್ಡದಾದ 10-12 ಅಡಿ ಉಬ್ಬಿದ, ಉಕ್ಕಿನ ವಸ್ತುವೊಂದು ಅವರ ಮನೆಯ ಪಕ್ಕದಲ್ಲಿ ಬಿದ್ದಿರುವುದು ಕಂಡುಬಂದಿದೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಬೆಳಗ್ಗೆ ಸುಮಾರು 4.40ಕ್ಕೆ ಶಬ್ದ ಕೇಳಿ ಪದ್ಮಾ ರಾಥ್ ಹಾಗೂ ಅವರ ಮಗ ಹೊರಗೆ ಬಂದಾಗ ಆಕಾಶದಲ್ಲಿ ಜೆಟ್ ಹೋದ ಶಬ್ದ ಕೇಳಿಸಿತಂತೆ. ಕೊನೆಗೆ ಆಕಾಶದಲ್ಲಿ ಒಂದು ದೊಡ್ಡ ಸ್ಫೋಟ ಕೂಡ ಆಗಿತಂತೆ. ಬಳಿಕ ದೊಡ್ಡದಾದ 10-12 ಅಡಿ ಉಬ್ಬಿದ, ಕಪ್ಪು ಉಕ್ಕಿನ ವಸ್ತುವೊಂದು ಅವರ ಮನೆಯ ಪಕ್ಕದಲ್ಲಿ ಬಿದ್ದಿದೆ. ಅಷ್ಟೇ ಅಲ್ಲದೇ ಮತ್ತಷ್ಟು ಸ್ಫೋಟ ಕಂಡುಬಂದಿತಂತೆ. ಇದರಿಂದ ಹೆದರಿದ ಅವರು ಮನೆಯೊಳಗೆ ಓಡಿಹೋಗಿದ್ದಾರೆ. 15-20 ನಿಮಿಷಗಳ ಬಳಿಕ, ಶಬ್ದ ನಿಂತಾಗ ಅವರು ಮನೆಯಿಂದ ಹೊರೆಗ ಬಂದು ಅನುಮಾನಾಸ್ಪದ ವಸ್ತುವನ್ನು ಕಂಡು ಸಂಬಂಧಪಟ್ಟವರಿಗೆ ಕರೆ ಮಾಡಿದ್ದಾರೆ.
ಪೊಲೀಸರು, ಪತ್ರಕರ್ತರು, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಸ್ಥಳೀಯ ಅಧಿಕಾರಿಗಳು ಸಹ ವಸ್ತುವನ್ನು ಪರಿಶೀಲಿಸಿದ್ದಾರೆ. ಮತ್ತು ಆ ಪ್ರದೇಶದಲ್ಲಿ ಕೂಡಲೇ ಜನರನ್ನು ಮನೆಯಿಂದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಭಾರತ ಸೇನೆಯ ಸಿಬ್ಬಂದಿ ಬಂದ ನಂತರ ವಸ್ತುವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿ ಈಗ ಸಂಪೂರ್ಣ ತಪಾಸಣೆ ನಡೆಸಲಾಗುತ್ತಿದೆ.
ಭಾರತದ ಆಪರೇಷನ್ ಸಿಂದೂರ್ ಕಾರ್ಯಚರಣೆಯಲ್ಲಿ ಪಾಕಿಸ್ತಾನ ವಶಪಡಿಸಿಕೊಂಡ ಕಾಶ್ಮೀರ ಮತ್ತು ಪಾಕಿಸ್ತಾನದ ಕೆಲವು ಪ್ರದೇಶಗಳಿಂದ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿದ ಬಳಿಕ ರಾಜಸ್ತಾನ ಒಳಗೊಂಡಂತೆ ಇಂಡೋ-ಪಾಕ್ ಸೇನಾ ಗಡಿಯಲ್ಲಿ ತೀವ್ರ ಕ್ರಾಸ್-ಬೋರ್ಡರ್ ಫೈರಿಂಗ್ ವರದಿಯಾಗಿದ್ದು, ಅದರ ನಂತರ ಈ ಘಟನೆ ಸಂಭವಿಸಿತು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಲಾಹೋರ್ ದಾಳಿಯಲ್ಲಿ ಬಿದ್ದಿದ್ದ ಭಾರತದ ಡ್ರೋನ್ ತುಣಕನ್ನು ಕದ್ದೊಯ್ಯುತ್ತಿರುವ ಯುವಕರು.. ವಿಡಿಯೊ ವೈರಲ್
ಜಾಮ್ಲಾ ಘಟನೆ ನಡೆಯುವ ಕೆಲವೇ ಗಂಟೆಗಳ ನಂತರ, ಜೋದ್‌ಪುರದ ನಿರ್ಜನ ಗ್ರಾಮೀಣ ಪ್ರದೇಶದಲ್ಲಿ ಇಂತಹದೊಂದು ವಸ್ತು ಮಣ್ಣಿನಲ್ಲಿ ಹುದುಗಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಎರಡೂ ಘಟನೆಗಳಲ್ಲಿ ಯಾವುದೇ ಆಸ್ತಿ-ಪಾಸ್ತಿ, ಜೀವಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.