ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Saif Ali Khan: ಮನೆಗೆ ಹೋದಾಗ ಮಕ್ಕಳು ಮಲಗಿರುವುದನ್ನು ನೋಡಲು ಇಷ್ಟವಿಲ್ಲ: ದೀಪಿಕಾಗೆ ಸೈಫ್ ಅಲಿ ಖಾನ್ ಬೆಂಬಲ

Deepika Padukone: ಟಾಲಿವುಡ್‌ ಸ್ಟಾರ್‌ ನಿರ್ದೇಶಕ ಮತ್ತು ಪ್ರಭಾಸ್‌ ಮೊದಲ ಒಂದಾಗುತ್ತಿರುವ ʼಸ್ಪಿರಿಟ್‌ʼ ಚಿತ್ರದಲ್ಲಿ ಮೊದಲು ನಾಯಕಿಯಾಗಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರು. ಆದರೆ ಅವರು ಕೆಲವೊಂದು ಷರತ್ತು ವಿಧಿಸಿದ್ದರಿಂದ ಕೊನಗೆ ಚಿತ್ರದಿಂದ ಹೊರ ಬರಬೇಕಾಯಿತು. ಚಿಕ್ಕ ಮಗುವಿರುವ ಕಾರಣ ಅವರು ಕುಟುಂಬಕ್ಕೂ ಸಮಯ ನೀಡಲು ಷರತ್ತು ವಿಧಿಸಿದ್ದರು ಎನ್ನಲಾಗಿದೆ. ಅವರಿಗೆ ಇದೀಗ ಸೈಫ್‌ ಆಲಿ ಕಾನ್‌ ಬೆಂಬಲ ಸೂಚಿಸಿದ್ದಾರೆ.

ದೀಪಿಕಾಗೆ ಬೆಂಬಲ ಸೂಚಿಸಿದ ಸೈಫ್ ಅಲಿ ಖಾನ್

ಸೈಫ್‌ ಆಲಿ ಖಾನ್‌ ಮತ್ತು ದೀಪಿಕಾ ಪಡುಕೋಣೆ.

Profile Sushmitha Jain Jun 1, 2025 2:18 PM

ಮುಂಬೈ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ʼಸ್ಪಿರಿಟ್ʼ (Spirit) ಚಿತ್ರದ ಶೂಟಿಂಗ್‌ಗೆ ಕಟ್ಟುನಿಟ್ಟಾದ ಸಮಯದ ಷರತ್ತು ವಿಧಿಸಿದ ಬಳಿಕ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ನಟ ಸೈಫ್ ಅಲಿ ಖಾನ್ (Saif Ali Khan) ಕುಟುಂಬದ ಸಮಯಕ್ಕೆ ಆದ್ಯತೆ ನೀಡುವ ಬಗ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಾನು ಮನೆಗೆ ತಡವಾಗಿ ಹಿಂದಿರುಗಿದಾಗ ಮಕ್ಕಳು ಮಲಗಿದ್ದರೆ ಇರುಸು ಮುರುಸಾಗುವುದಾಗಿ ಎಂದು ಸೈಫ್ ಹೇಳಿದ್ದಾರೆ.

ಅರಬ್ ಮೀಡಿಯಾ ಸಮ್ಮಿಟ್‌ನಲ್ಲಿ ಮಾತನಾಡಿದ ಸೈಫ್, “ಮನೆಗೆ ಬಂದಾಗ ಮಕ್ಕಳು ಮಲಗಿರುವುದನ್ನು ನೋಡುವುದು ನನಗೆ ಇಷ್ಟವಿಲ್ಲ. ಅದು ಯಶಸ್ಸಲ್ಲ. ಯಶಸ್ಸೆಂದರೆ, ‘ನಾನು ಈಗ ಮನೆಗೆ ಹೋಗಿ ಅವರೊಂದಿಗೆ ಅರ್ಧ ಗಂಟೆ ಕಳೆಯಬೇಕು’ ಎಂದು ಹೇಳುವುದು” ಎಂದು ತಿಳಿಸಿದ್ದಾರೆ. ʼʼನಮಗೆ ವರ್ಷಕ್ಕೆ 4 ರಜೆಗಳು ಸಿಗುತ್ತವೆ. ಮಕ್ಕಳಿಗೆ ರಜೆ ಇದ್ದಾಗ ನಾನು ಕೆಲಸ ಮಾಡುವುದಿಲ್ಲ. ಆ ಸಮಯ ಪವಿತ್ರವಾದದ್ದು. ನಾನು ತಾಯಿಯನ್ನೂ, ಮಕ್ಕಳನ್ನೂ ಕರೆಯಬೇಕಾದ ವಯಸ್ಸಿನಲ್ಲಿದ್ದೇನೆ. ಮೊದಲು ಕೇವಲ ಪೋಷಕರನ್ನು ಗಮನಿಸಬೇಕೆಂದು ಭಾವಿಸುತ್ತೇವೆ. ಆದರೆ ನಂತರ ಎರಡೂ ಕಡೆ ಗಮನ ಹರಿಸಬೇಕಾಗುತ್ತದೆ'' ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Tripti Dimri: ಪ್ರಭಾಸ್‌ ʼಸ್ಪಿರಿಟ್‌ʼಗೆ ಕೊನೆಗೂ ನಾಯಕಿ ಆಯ್ಕೆ; ʼಅನಿಮಲ್‌ʼ ನಟಿಗೆ ಮಣೆ ಹಾಕಿದ ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ

ʼʼಕೆಲಸ ಮಾಡುವುದು ಮುಖ್ಯ,. ಆದರೆ ಒಟ್ಟಿಗೆ ಪಾಸ್ತಾ ತಯಾರಿಸುವುದು, ಊಟವನ್ನು ಒಟ್ಟಿಗೆ ಸವಿಯುವುದು, ಮಕ್ಕಳಿಗೆ ಸಮಯ ಕೊಡುವುದು ಜೀವನದ ನಿಜವಾದ ಸಂತೋಷ. ಕೆಲಸ ಮಾಡಲು ಇಲ್ಲ ಎನ್ನುವುದು, ನನ್ನ ಕುಟುಂಬದೊಂದಿಗೆ ಸಮಯ ಕಳೆಯಲು ಹೌದು ಎಂದು ಹೇಳಲು ಸಾಧ್ಯವಾಗುವುದೇ ನನ್ನ ಪಾಲಿನ ಯಶಸ್ಸುʼʼ ಎಂದು ಸೈಫ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಭಾಸ್‌ ನಟನೆಯ ʼಸ್ಪಿರಿಟ್ʼ ಚಿತ್ರದ ಚಿತ್ರೀಕರಣಕ್ಕೆ ದೀಪಿಕಾ ಕೆಲವೊಂದು ಷರತ್ತು ವಿಧಿಸಿದ್ದರು. 8 ಗಂಟೆಗಳ ಕಾಲ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗುವುದಾಗಿ ಹೇಳಿದ್ದರು ಎಂದು ವರದಿಯಾಗಿದೆ. ಈ ಬೇಡಿಕೆಗಳು ಈಡೇರದಿದ್ದಾಗ ಅವರು ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ. ಕೆಲವರು ದೀಪಿಕಾ ಅವರ ಬೇಡಿಕೆಗಳನ್ನು “ಅತಿಯಾದವು” ಎಂದು ಟೀಕಿಸಿದರೆ, ಇನ್ನು ಕೆಲವರು ಅವರು ಮಗುವಿನ ಜತೆ ಸಮಯ ಕಳೆಯಲು ನಿಗದಿತ ಕೆಲಸದ ಸಮಯವನ್ನು ಕೋರಿದ್ದಕ್ಕಾಗಿ ಶ್ಲಾಘಿಸಿದ್ದರು. ದೀಪಿಕಾ ಈ ವಿವಾದದ ಬಗ್ಗೆ ಮೌನವಾಗಿದ್ದರೆ, ವಂಗಾ ಆಕೆ ತಮ್ಮ ಚಿತ್ರದ ಸ್ಕ್ರಿಪ್ಟ್ ಸೋರಿಕೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಆರೋಪಿಸಿದ್ದಾರೆ. ʼಸ್ಪಿರಿಟ್ʼ ಚಿತ್ರದಲ್ಲಿ ಈಗ ತೃಪ್ತಿ ಡಿಮ್ರಿ ನಾಯಕಿಯಾಗಿ ನಟಿಸುತ್ತಿದ್ದಾರೆ.