ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಹಿಮಾಲಯದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾಳೆ ಭಾಗ್ಯಕ್ಕ

ಇದ್ದಕ್ಕಿದ್ದಂತೆ ಭಾಗ್ಯ ಅಲಿಯಾಸ್ ಸುಷ್ಮಾ ಧಾರಾವಾಹಿಯಿಂದ ಕೆಲ ದಿನಗಳ ಬ್ರೇಕ್ ಪಡೆದುಕೊಂಡು ದೂರದೂರಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸುಷ್ಮಾ ರಾವ್ ಮೌಂಟ್ ಎವರೆಸ್ಟ್ ಕಡೆಗೆ ಹೋಗುವ ಬಗ್ಗೆ ವಿಡಿಯೋ ಮಾಡಿ ಹಾಕಿದ್ದರು. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು.

ಹಿಮಾಲಯದಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾಳೆ ಭಾಗ್ಯಕ್ಕ

Sushma K Rao

Profile Vinay Bhat Apr 23, 2025 7:21 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ (Bhagya Lakshmi Serial) ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್​ ಲಿಸ್ಟ್​ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.

ಇದೀಗ ಇದ್ದಕ್ಕಿದ್ದಂತೆ ಭಾಗ್ಯ ಅಲಿಯಾಸ್ ಸುಷ್ಮಾ ಧಾರಾವಾಹಿಯಿಂದ ಕೆಲ ದಿನಗಳ ಬ್ರೇಕ್ ಪಡೆದುಕೊಂಡು ದೂರದೂರಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೆ ಸುಷ್ಮಾ ರಾವ್ ಮೌಂಟ್ ಎವರೆಸ್ಟ್ ಕಡೆಗೆ ಹೋಗುವ ಬಗ್ಗೆ ವಿಡಿಯೋ ಮಾಡಿ ಹಾಕಿದ್ದರು. ಮೌಂಟ್ ಎವರೆಸ್ಟ್ ಹತ್ತಬೇಕು ಅನ್ನೋದು ಸುಷ್ಮಾ ರಾವ್ ಅವರ ಬಹುದಿನಗಳ ಕನಸು. ಹಾಗಂತ ಈ ಬಾರಿ ಅವರು ಹೋಗ್ತಾ ಇರೋದು ಮೌಂಟ್ ಎವರೆಸ್ಟ್ ಹತ್ತೋಕೆ ಅಲ್ಲ, ಬದಲಾಗಿ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ, ಅದು ಒಂಟಿಯಾಗಿ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಷ್ಮಾ ವಿಡಿಯೋ ಹಂಚಿಕೊಂಡಿದ್ದರು. ಇದೀಗ ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅನೇಕ ಫೋಟೋ-ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಲ್ಲಿನ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈಗ ಎವರೆಸ್ಟ್ ಬೇಸ್ ಕ್ಯಾಂಪ್​ವರೆಗೂ ಟ್ರೆಕ್ಕಿಂಗ್​ ಮಾಡಿ ಸಾಹಸ ಮಾಡಿರುವ ಸುಷ್ಮಾ ಅವರ ಮುಂದಿನ ನಡೆ ಮೌಂಟ್ ಎವರೆಸ್ಟ್ ಹತ್ತೋದು ಎಂದು ಹೇಳಿದ್ದಾರೆ.

ಇತ್ತೀಚಿಗೆ ಕುಂಭಮೇಳಕ್ಕೂ ಹೋಗಿ ಬಂದಿದ್ದರು ಸುಷ್ಮಾ. ಸದ್ಯ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್‌ಗಾಗಿ ಅವರು ದಿನ-ರಾತ್ರಿ ಶೂಟಿಂಗ್‌ ಮಾಡಿ ಕೆಲವು ಎಪಿಸೋಡ್‌ಗಳನ್ನು ಮುಗಿಸಿ ಬಂದಿರುವುದಾಗಿ ಹೇಳಿದ್ದಾರೆ. ಚಾರಣಕ್ಕೆ ಹೊರಡುವಾಗ ಹಲವಾರು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು. ಆದರೆ ಶೂಟಿಂಗ್‌ ಮಧ್ಯೆ ಬಿಡುವು ಸಿಗದ ಕಾರಣ, ಮನೆಯವರೇ ಎಲ್ಲಾ ಅರೇಂಜ್‌ ಮಾಡಿ ಕೊಟ್ಟಿದ್ದಾರೆ. ಏನೇನು ಇದೆ ಎಂದು ನೋಡುವುದಕ್ಕೂ ಟೈಮ್‌ ಇರಲಿಲ್ಲ. ಹಾಗೆಯೇ ಬಂದಿದ್ದೇನೆ ಎಂದಿದ್ದಾರೆ ನಟಿ.

ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್‌. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Bigg Boss Voice: ಅಲ್ಲಿ ಬರುವ ವಾಯ್ಸ್ ನನ್ನದಲ್ಲ: ಬಿಗ್ ಬಾಸ್​ನ ಸತ್ಯ ಬಿಚ್ಚಿಟ್ಟ ಪ್ರದೀಪ್ ಬಡೆಕ್ಕಿಲ