ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bro Gowda: ಲಕ್ಷ್ಮೀ ಬಾರಮ್ಮ ಮುಗಿದ ಬೆನ್ನಲ್ಲೇ ಶಮಂತ್​ಗೆ ಬಂಪರ್ ಆಫರ್: ತೆಲುಗಿನಿಂದ ಬಂತು ಕರೆ

ಲಕ್ಷ್ಮೀ ಬಾರಮ್ಮ ಧಾರಾವಾಹಿ ವೈಷ್ಣವ್ ಪಾತ್ರದ ಮೂಲಕ ಇವರು ಕನ್ನಡಿಗರ ಮನೆ ಮನಗಳಿಗೆ ಹತ್ತಿರವಾಗುತ್ತಾರೆ. ಸುಮಾರು 2 ವರ್ಷಗಳ ಕಾಲ ವೈಷ್ಣವ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಮಂತ್‌. ಇದೀಗ ಮೊದಲ ಧಾರಾವಾಹಿ ಮುಕ್ತಾಯವಾದ ಬೆನ್ನಲ್ಲೇ ಅವರ ಅದೃಷ್ಟ ಬದಲಾಯಿಸಿದಂತಿದೆ. ಅವರು ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ.

ಲಕ್ಷ್ಮೀ ಬಾರಮ್ಮ ಮುಗಿದ ಬೆನ್ನಲ್ಲೇ ಶಮಂತ್​ಗೆ ಬಂಪರ್ ಆಫರ್

Shamanth Gowda

Profile Vinay Bhat Apr 18, 2025 7:09 AM

ಬ್ರೋ ಗೌಡ (Bro Gowda) ಎಂದೇ ಖ್ಯಾತಿಯಾಗಿರುವ ಕಿರುತೆರೆ ನಟ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಸ್ಪರ್ಧಿ ಶಮಂತ್ ಇತ್ತೀಚೆಗಷ್ಟೆ ಎಂಗೇಜ್ಮೆಂಟ್ ಆಗಿ ಸರ್​ಪ್ರೈಸ್ ಕೊಟ್ಟಿದ್ದರು. ಸಿಂಗರ್ ಆಗಿ, ಲವ್ವರ್ ಬಾಯ್ ಆಗಿ ಬಳಿಕ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಪಕ್ಕ ಫ್ಯಾಮಿಲಿ ಮ್ಯಾನ್ ಆಗಿ ಎಲ್ಲರ ಮನಸ್ಸನ್ನು ಗೆದ್ದ ಶಮಂತ್ ಸದ್ಯದಲ್ಲೇ ರಿಯಲ್ ಲೈಫ್ ನಲ್ಲೂ ಹೊಸ ಬಾಳಿನ ಕಡೆಗೆ ಹೆಜ್ಜೆಯಾಕಲಿದ್ದಾರೆ. ಕಳೆದ ವಾರವಷ್ಟೆ ಶಮಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಮುಕ್ತಾಯಗೊಂಡಿತು.

ಲಕ್ಷ್ಮೀ ಬಾರಮ್ಮ ಧಾರಾವಾಹಿ ವೈಷ್ಣವ್ ಪಾತ್ರದ ಮೂಲಕ ಇವರು ಕನ್ನಡಿಗರ ಮನೆ ಮನಗಳಿಗೆ ಹತ್ತಿರವಾಗುತ್ತಾರೆ. ಸುಮಾರು 2 ವರ್ಷಗಳ ಕಾಲ ವೈಷ್ಣವ್ ಪಾತ್ರಕ್ಕೆ ಜೀವ ತುಂಬಿದ್ದಾರೆ ಶಮಂತ್‌. ಯೂಟ್ಯೂಬರ್ ಆಗಿ ಗುರುತಿಸಿಕೊಂಡಿದ್ದ ಶಮಂತ್ ಬ್ರೋ ಗೌಡ, ಕನ್ನಡಿಗರಿಗೆ ಪರಿಚಿತರಾಗಿದ್ದು, ಬಿಗ್ ಬಾಸ್ ಸೀಸನ್ 8ರ ಮೂಲಕ. ಬಿಗ್ ಬಾಸ್ ನಲ್ಲಿ ತನ್ನ ಹಾಡು, ಸ್ಪರ್ಧೆಯ ಮೂಲಕ ಜನಮನ ಗೆದ್ದು, ಲಕ್ಷ್ಮೀ ಬಾರಮ್ಮ ಮೂಲಕ ಜನಪ್ರಿಯತೆ ಪಡೆದಿದ್ದರು.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಬ್ರೋ ಗೌಡ ಅವರ ಚೊಚ್ಚಲ ಧಾರಾವಾಹಿಯಾಗಿತ್ತು. ಮೊದಲ ಧಾರಾವಾಹಿಯಲ್ಲೇ ಅದ್ಭುತವಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದರು ಶಮಂತ್‌. ಇದೀಗ ಮೊದಲ ಧಾರಾವಾಹಿ ಮುಕ್ತಾಯವಾದ ಬೆನ್ನಲ್ಲೇ ಅವರ ಅದೃಷ್ಟ ಬದಲಾಯಿಸಿದಂತಿದೆ. ಅವರು ಈಗ ತೆಲುಗಿಗೆ ಪದಾರ್ಪಣೆ ಮಾಡಲಿದ್ದಾರೆ. ತೆಲುಗಿನ ಹೊಸ ಧಾರಾವಾಹಿಯೊಂದಕ್ಕೆ ನಾಯಕನಾಗಿ ಬ್ರೋ ಗೌಡ ಆಯ್ಕೆಯಾಗಿದ್ದಾರೆ.

Vinay Gowda: ರಜತ್ ಎರಡನೇ ಬಾರಿ ಜೈಲಿಗೆ ಹೋದ ಬಗ್ಗೆ ವಿನಯ್ ಗೌಡ ಏನಂದ್ರು..?

ಹೌದು ಲಕ್ಷ್ಮಿ ಬಾರಮ್ಮ ಧಾರಾವಾಹಿ ಮುಗಿಯುತ್ತಿದ್ದಂತೆ ತೆಲುಗಿನಲ್ಲಿ ಹೊಸದೊಂದು ಧಾರಾವಾಹಿಯಲ್ಲಿ ನಟಿಸಲಿದ್ದಾರಂತೆ ಬ್ರೋ ಗೌಡ. ತೆಲುಗಿನಲ್ಲಿ ಶುರುವಾಗಲಿರುವ ಹೊಚ್ಚ ಹೊಸ ಧಾರಾವಾಹಿಯೊಂದರಲ್ಲಿ ಬಣ್ಣ ಹಚ್ಚಲಿದ್ದಾರೆ ಶಮಂತ್ ಗೌಡ. ಆದರೆ ಯಾವ ಧಾರಾವಾಹಿ, ಧಾರಾವಾಹಿಯ ಹೆಸರೇನು ಎಂಬುದೆಲ್ಲಾ ಇನ್ನು ತಿಳಿಯಬೇಕಾಗಿದೆ. ಈಗಾಗಲೇ ಕನ್ನಡದ ಸಾಕಷ್ಟು ಕಲಾವಿದರು ತೆಲುಗು ಕಿರುತೆರೆಯಲ್ಲಿ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಹೊಸ ಸೇರ್ಪಡೆಯಾಗಲಿದ್ದಾರೆ ಶಮಂತ್ ಗೌಡ.

ಮೊದಲ ಧಾರಾವಾಹಿಯಿಂದಲೇ ನೇರವಾಗಿ ತೆಲುಗಿನಲ್ಲಿ ಅವಕಾಶ ಪಡೆದಿರುವುದಕ್ಕೆ ಇವರ ಅಭಿಮಾನಿಗಳು ಸಾಕಷ್ಟು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಟನಿಗೆ ಆಲ್‌ ದಿ ಬೆಸ್ಟ್ ಜೊತೆಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸುತ್ತಿದ್ದಾರೆ.