Shivraj Kumar: ಕ್ಯಾನ್ಸರ್ನಿಂದ ಚೇತರಿಸಿಕೊಂಡು ಸರಿಗಮಪ ವೇದಿಕೆ ಮೇಲೆ ಧೂಳೆಬ್ಬಿಸಿದ ಶಿವಣ್ಣ: ವಿಡಿಯೋ
ಇಷ್ಟು ದಿನ ಶಿವಣ್ಣನ ಡ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದ ವೇದಿಕೆ, ಅಭಿಮಾನಿಗಳಿಗೆ ಇದು ಹಬ್ಬವೇ ಎನ್ನಬಹುದು. ಸರಿಗಮಪ ವೇದಿಕೆ ಮೇಲೆ ಅವರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಇದರ ಪ್ರೊಮೋ ಬಿಡುಗಡೆ ಆಗಿದ್ದು, ಭರ್ಜರಿ ವೈರಲ್ ಆಗುತ್ತಿದೆ.

Shivraj Kumar

ಕಳೆದ ಡಿಸೆಂಬರ್ನಲ್ಲಿ ಕ್ಯಾನ್ಸರ್ಗೆ ಒಳಗಾಗಿರುವ ವಿಷಯ ಬಹಿರಂಗಪಡಿಸಿದ ಕರುನಾಡ ಚಕ್ರವರ್ತಿ ನಟ ಶಿವರಾಜ್ಕುಮಾರ್ (Shivraj Kumar) ಬಳಿಕ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಯಶಸ್ವಿ ಸರ್ಜರಿ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದ ಶಿವಣ್ಣ ಈಗ ಡಬಲ್ ಎನರ್ಜಿಯೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿರುವ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಕೂಡ ಸೆಂಚುರಿ ಸ್ಟಾರ್ ಮಿಂಚುತ್ತಿದ್ದಾರೆ. ಸದ್ಯ ಸರಿಗಮಪ ವೇದಿಕೆಗೆ ಪವರ್ ಪ್ಯಾಕ್ಡ್ ಎಂಟ್ರಿ ಕೊಟ್ಟಿದ್ದಾರೆ.
ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಿಂದ ತುಂಬಿದ ಕಣ್ಣುಗಳಲ್ಲಿ ಶಿವಣ್ಣನ ಬಿಳ್ಕೋಡಲಾಗಿತ್ತು. ಚಿಕಿತ್ಸೆಗೆ ತೆರಳುವಾಗ ಎಲ್ಲರ ಹೃದಯ ಭಾರವಾಗಿತ್ತು. ಇಡೀ ರಾಜ್ಯ ಅದೇ ನಗು, ಅದೇ ಎನಿರ್ಜಿ ಜೊತೆಗೆ ಶಿವಣ್ಣ ಮರಳಿ ಬರಲಿ ಎಂದು ಹಾರೈಸಿದ್ದರು. ಕೋಟ್ಯಾಂತರ ಅಭಿಮಾನಿಗಳ ಹಾರೈಕೆ ಫಲ ಕೊಟ್ಟಿದೆ. ಇದೀಗ ಮತ್ತೆ ಧೂಳ್ ಎಬ್ಬಿಸೋಕೆ ಮರಳಿದ್ದಾರೆ ಎನರ್ಜಿ ಕಿಂಗ್.
ಶಿವಣ್ಣ ಸದ್ಯ ಸರಿಗಮಪ ವೇದಿಕೆ ಮೇಲೆ ಅತಿಥಿಯಾಗಿ ಆಗಮಿಸಿದ್ದಾರೆ. ಅವರ ಜೊತೆ ಮಗಳು ನಿವೇದಿತಾ ಕೂಡ ಇದ್ದರು. ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಚಿತ್ರದ ಪ್ರಚಾರ ಮಾಡಲಾಗಿದೆ. ಅವರನ್ನು ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಶಿವಣ್ಣ ಅವರು ಮೊದಲಿನ ಎನರ್ಜಿಯಲ್ಲೇ ಡ್ಯಾನ್ಸ್ ಮಾಡಿರೋದು ವಿಶೇಷ.
ಇಷ್ಟು ದಿನ ಶಿವಣ್ಣನ ಡ್ಯಾನ್ಸ್ ಮಿಸ್ ಮಾಡಿಕೊಳ್ಳುತ್ತಿದ್ದ ವೇದಿಕೆ, ಅಭಿಮಾನಿಗಳಿಗೆ ಇದು ಹಬ್ಬವೇ ಎನ್ನಬಹುದು. ಸರಿಗಮಪ ವೇದಿಕೆ ಮೇಲೆ ಅವರು ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ಶಿವಣ್ಣ ಅವರನ್ನು ನೋಡಿ ಆ್ಯಂಕರ್ ಅನುಶ್ರೀ, ಗಾಯಕ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಹಾಗೂ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಖುಷಿ ಆಗಿದ್ದಾರೆ.
Bhagya Lakshmi Serial: ಮನೆಗೆ ಬಂದ ಕನ್ನಿಕಾಳ ಮೈಚಳಿ ಬಿಡಿಸಿದ ಭಾಗ್ಯ