Jyoti Malhotra: ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗು.. ಐಎಸ್‌ಐ ಏಜೆಂಟ್ ಜೊತೆಗಿನ ಜ್ಯೋತಿ ಮಲ್ಹೋತ್ರಾ ಚಾಟ್ ರಿವೀಲ್
ಪಾಕಿಸ್ತಾನಕ್ಕೆ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತಳಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ ಅಸಲಿಯತ್ತು ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿ ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಅವರನ್ನು ಮದುವೆಯಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆ ಆಕೆಯ ಕೆಲವು ವಾಟ್ಸಾಪ್ ಚಾಟ್‌ಗಳು ಬಹಿರಂಗಗೊಂಡಿದೆ.


ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ (Pakistan) ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿತಳಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಳ (Jyoti Malhotra) ಅಸಲಿಯತ್ತು ಬಗೆದಷ್ಟು ಬಯಲಾಗುತ್ತಿದೆ. ಜ್ಯೋತಿ ಪಾಕಿಸ್ತಾನ ಹೈಕಮಿಷನ್ ಅಧಿಕಾರಿ ಡ್ಯಾನಿಶ್ ಅವರನ್ನು ಮದುವೆಯಾಗಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದರ ನಡುವೆ ಆಕೆಯ ಕೆಲವು ವಾಟ್ಸಾಪ್ ಚಾಟ್‌ಗಳು ಬಹಿರಂಗಗೊಂಡಿದೆ. ಆಕೆ ಪಾಕಿಸ್ತಾನದ ಜೊತೆ ನಂಟಿರುವುದು ಖಚಿತವಾಗಿದೆ. ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಕೆಲಸ ಮಾಡುತ್ತಿದ್ದ ಏಜೆಂಟ್ ಅಲಿ ಹಸನ್ ಜೊತೆ ಜ್ಯೋತಿ ಮಾತನಾಡಿದ್ದ ಚಾಟ್‌ಗಳು ಅಧಿಕಾರಿಗಳಿಗೆ ದೊರೆತಿದೆ.
ಪಾಕಿಸ್ತಾನದ ಗೂಢಾಚಾರಿಯಾಗಿದ್ದ ಜ್ಯೋತಿ, ಅಲ್ಲಿಯೇ ನೆಲೆಸಲು ಪ್ಲಾನ್ ಮಾಡಿದ್ದಳು ಎನ್ನಲಾಗಿದೆ. ಆಕೆ ಹಸನ್‌ಗೆ ತನ್ನನ್ನು ಪಾಕಿಸ್ತಾನದಲ್ಲಿಯೇ ಮದುವೆಯಾಗು ಎಂದು ಹೇಳಿರುವ ಮೇಸೇಜ್ ಅಧಿಕಾರಿಗಳಿಗೆ ದೊರೆತಿದೆ. ಅದಕ್ಕೆ ಪ್ರತಿಕ್ರಿಯಿಸಿದ್ದ ಹಸನ್, “ಜೋ (ಜ್ಯೋತಿ), ನೀವು ಯಾವಾಗಲೂ ಸಂತೋಷವಾಗಿರಲು ನಾನು ಪ್ರಾರ್ಥಿಸುತ್ತೇನೆ, ನೀವು ನಗುತ್ತಲೇ ಇರಬೇಕು. ನಿಮ್ಮ ಜೀವನದಲ್ಲಿ ಎಂದಿಗೂ ನಿರಾಶೆಗಳನ್ನು ಎದುರಿಸಬಾರದು” ಎಂದು ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿರುವ ಆರೋಪದ ಮೇಲೆ ಭಾರತದ ಪೊಲೀಸರು ಯೂಟ್ಯೂಬರ್ ವಿರುದ್ಧ ತನಿಖೆ ಮುಂದುವರಿಸಿದ್ದಾರೆ.
ಹರಿಯಾಣದ ಹಿಸಾರ್‌ನಲ್ಲಿ ವಾಸಿಸುತ್ತಿದ್ದ ಮತ್ತು 'ಟ್ರಾವೆಲ್ ವಿತ್ ಜೋ' ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಮಲ್ಹೋತ್ರಾಳನ್ನು ಕಳೆದ ವಾರ ಪೊಲೀಸರು ಬಂಧಿಸಿದ್ದರು. ಪಾಕಿಸ್ತಾನದ ಗೂಢಚಾರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಗಾಗಿ ಕೆಲಸ ಮಾಡುತ್ತಿದ್ದ ಜ್ಯೋತಿ ಪಾಕ್ ಹೈ ಕಮೀಷನರ್ ಅಧಿಕಾರಿ ದ್ಯಾನಿಶ್ ಜೊತೆ ಕೆಲ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಳು.
ಈ ಸುದ್ದಿಯನ್ನೂ ಓದಿ: YouTuber Jyoti Malhotra: ಪಾಕ್‌ನೊಂದಿಗೆ ನಂಟು, ದೇಶಕ್ಕೆ ದ್ರೋಹ..... ಡೈರಿಯಿಂದ ಬಯಲಾಯ್ತು ಜ್ಯೋತಿ ಮಲ್ಹೋತ್ರಾ ಗುಟ್ಟು!
ಪೊಲೀಸರು ಜ್ಯೋತಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಗೆ ಸಂಬಂಧಿಸಿದ ಎಲ್ಲಾ ವಿಚಾರಣೆ ನಡೆಸಲಾಗುತ್ತಿದೆ. ಆಕೆಯ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಲಾಗಿದ್ದು, ಆದಯ ಮೂಲವನನ್ನು ಹುಡುಕಲಾಗುತ್ತಿದೆ. ಆಪರೇಷನ್ ಸಿಂಧೂರ್’ ಸಂದರ್ಭದಲ್ಲಿ ಭಾರತದಲ್ಲಿ ಬ್ಲ್ಯಾಕೌಟ್ ಹೇರಿದ ಬಗ್ಗೆ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ವಿವರಗಳನ್ನು ಸೋರಿಕೆ ಮಾಡಿದ್ದಾಳೆ ಎಂದು ತಿಳಿದ ಕೆಲವೇ ಗಂಟೆಗಳ ನಂತರ ಈ ವಿಷಯ ಹೊರಬಿದ್ದಿದೆ. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆಕೆಯ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.