ಭಾರತ-ಪಾಕ್ ಯುದ್ಧ ಆರಂಭ; ವಾಣಿಜ್ಯ ವಿಮಾನಗಳ ಹಾರಾಟ ಸ್ಥಗಿತ
Operation Sindoor: ಭಾರತ ನಡೆಸಿರುವ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ʼಇದು ನಾಚಿಕೆಗೇಡು. ಈಗಷ್ಟೇ ಇದರ ಬಗ್ಗೆ ತಿಳಿಯಿತು. ಹಲವು ದಶಕಗಳು ಮತ್ತು ಶತಮಾನಗಳಿಂದ ಸಂಘರ್ಷ ನಡೆಸುತ್ತಿದ್ದಾರೆ. ಅದು ಬೇಗ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆʼ ಎಂದು ಹೇಳಿದ್ದಾರೆ.


ನವದೆಹಲಿ: ಬುಧವಾರ ಭಾರತವು ಆಪರೇಷನ್ ಸಿಂಧೂರ್(Operation Sindoor)ನ ಭಾಗವಾಗಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ(India strikes terror camps) ನಡೆಸಿದ್ದರಿಂದ, ಶ್ರೀನಗರ, ಜಮ್ಮು ಮತ್ತು ಅಮೃತಸರಕ್ಕೆ ಇಂಡಿಗೋ (IndiGo flights) ಮತ್ತು ಏರ್ ಇಂಡಿಯಾ ವಿಮಾನ ಸೇವೆಗಳ ಮೇಲೆ ಪರಿಣಾಮ ಬೀರಿದೆ. 'ವಾಯುಪ್ರದೇಶದ ಪರಿಸ್ಥಿತಿಗಳಿಂದಾಗಿ, ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ಧರ್ಮಶಾಲಾಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆʼ ಎಂದು ಇಂಡಿಗೋ ಎಕ್ಸ್‌ನಲ್ಲಿ ಬರೆದಿದೆ.
#6ETravelAdvisory: Due to changing airspace conditions in the region, our flights to and from #Srinagar, #Jammu, #Amritsar, #Leh, #Chandigarh and #Dharamshala are impacted. We request you to check your flight status at https://t.co/CjwsVzFov0 before reaching the airport.
— IndiGo (@IndiGo6E) May 6, 2025
ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಉದ್ದಕ್ಕೂ ಉದ್ವಿಗ್ನತೆ ಹೆಚ್ಚಿರುವ ಪರಿಣಾಮ ಭಾರತೀಯ ವಾಯುಪಡೆಯು (ಐಎಎಫ್) ಶ್ರೀನಗರ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆದಿದೆ. ಜತೆಗೆ, ನಾಗರಿಕ ವಿಮಾನಗಳ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರತದ ದಾಳಿಯ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನವು ಭಾರತದತ್ತ ಗುಂಡು ಹಾರಿಸಲು ಆರಂಭಿಸಿದ್ದು, ಎರಡೂ ಸೇನೆಗಳ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ. ಸದ್ಯ ಪಾಕಿಸ್ತಾನದ ಲಾಹೋರ್, ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳು ಬಂದ್ ಆಗಿವೆ.
ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿ ನಡೆಸಲಾಗಿತ್ತು. ಭಾರತೀಯ ಸೇನೆಯ ಈ ದಾಳಿಯಿಂದ ಪಾಕ್ ಅಕ್ಷರಶಃ ತತ್ತರಿಸಿ ಹೋಗಿದೆ. ಈ ದಾಳಿಯನ್ನು ಖಂಡಿಸಿರುವ ಪಾಕಿಸ್ತಾನ, ʼʼಇದು ವಿಶ್ವಸಂಸ್ಥೆಯ ಚಾರ್ಟರ್, ಅಂತಾರಾಷ್ಟ್ರೀಯ ಕಾನೂನು ಮತ್ತು ಅಂತಾರಾಜ್ಯ ಸಂಬಂಧಗಳ ಸ್ಥಾಪಿತ ಮಾನದಂಡಗಳ ಉಲ್ಲಂಘನೆʼʼ ಎಂದು ಹೇಳಿದೆ. ಜತೆಗೆ ಭಾರತಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ತಿಳಿಸಿದ್ದಾರೆ.
"Airports in parts of Northern India to remain closed until further notice": Spicejet issues travel advisory amid tension between India and Pakistan
— ANI Digital (@ani_digital) May 6, 2025
Read @ANI story | https://t.co/V5FII9py1w#Spicejet #traveladvisory #flights pic.twitter.com/wAHJ5LzoUG
ನಿರ್ದಿಷ್ಟ ದಾಳಿ ನಡೆಸಿರುವ ಬಗ್ಗೆ ಭಾರತೀಯ ಸೇನೆಯು ಟ್ವಿಟರ್ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ʼಆಪರೇಷನ್ ಸಿಂಧೂರʼ ಎಂಬ ಚಿತ್ರದ ಪೋಸ್ಟ್ ಜತೆಗೆ ಹ್ಯಾಶ್‌ಟ್ಯಾಗ್ ಪಹಲ್ಗಾಮ್ ಭಯೋತ್ಪಾದನಾ ದಾಳಿ ನ್ಯಾಯ ದೊರಕಿತು ಜೈ ಹಿಂದ್ ಎಂದು ಬರೆದಿದೆ. ದಾಳಿಗಳಲ್ಲಿ ಮೂವತ್ತಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎಂಬುದಾಗಿ ಕೆಲ ವರದಿಗಳು ಹೇಳಿವೆ.
ಇದನ್ನೂ ಓದಿ Operation Sindoor: ಭಾರತದ ದಾಳಿ ಖಚಿತಪಡಿಸಿ ಯುದ್ಧಕ್ಕೆ ಸನ್ನದ್ಧ ಎಂದ ಪಾಕ್ ಪ್ರಧಾನಿ
ಭಾರತ ನಡೆಸಿರುವ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ʼಇದು ನಾಚಿಕೆಗೇಡು. ಈಗಷ್ಟೇ ಇದರ ಬಗ್ಗೆ ತಿಳಿಯಿತು. ಹಲವು ದಶಕಗಳು ಮತ್ತು ಶತಮಾನಗಳಿಂದ ಸಂಘರ್ಷ ನಡೆಸುತ್ತಿದ್ದಾರೆ. ಅದು ಬೇಗ ಕೊನೆಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆʼ ಎಂದು ಹೇಳಿದ್ದಾರೆ.
#WATCH | #OperationSindoor | US President Donald Trump's first comments on Indian strikes inside Pakistan.
— ANI (@ANI) May 6, 2025
US President says "It's a shame. We just heard about it as we were walking in the doors of the Oval. I guess people knew something was going to happen based on a little bit… pic.twitter.com/KFdNC1OCJT