ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hina Khan: ಅಲೆಮಾರಿ ಮಹಿಳೆಯ ಅತ್ಯಾಚಾರ; ಬಾಲಿವುಡ್ ನಟಿ ಹಿನಾ ಖಾನ್ ಆಕ್ರೋಶ

ʼಫಿಯರ್ ಫ್ಯಾಕ್ಟರ್ ಕತ್ರೋಕಿ ಕಿಲಾಡಿʼ, ʼಬಿಗ್ ಬಾಸ್ʼ, ʼಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಮೂಲಕ ಗಮನ ಸೆಳೆದ ನಟಿ ಹಿನಾ ಖಾನ್ ಇತ್ತೀಚೆಗಷ್ಟೇ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಸೋಶಿಯಲ್ ಮಿಡಿಯಾದಲ್ಲೂ ಬಹಳ ಆ್ಯಕ್ಟಿವ್ ಆಗಿರುವ ನಟಿ ವೈಯಕ್ತಿಕ ವಿಚಾರ ಸೇರಿದಂತೆ ಇತರ ಸಾಮಾಜಿಕ ವಿಚಾರಗಳ ಬಗ್ಗೆಯು‌ ಧ್ವನಿ ಎತ್ತುತ್ತಾರೆ. ಇದೀಗ ಜಮ್ಮು- ಕಾಶ್ಮೀರದಲ್ಲಿ ನಡೆದ ಮಹಿಳೆಯ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಅತ್ಯಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದ ನಟಿ ಹಿನಾ ಖಾನ್

Hina Khan slams those using alcohol as excuse in Nishat sexual assault case

Profile Pushpa Kumari May 7, 2025 4:52 PM

ನವದೆಹಲಿ: ಬಾಲಿವುಡ್ ಸಿನೆಮಾ, ಕಿರುತೆರೆ ಮತ್ತು ರಿಯಾಲಿಟಿ ಶೋ ಖ್ಯಾತಿಯ ಹಿನಾ ಖಾನ್ (Hina Khan) ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ʼಫಿಯರ್ ಫ್ಯಾಕ್ಟರ್ʼ, ʼಕತ್ರೋಕಿ ಕಿಲಾಡಿʼ, ʼಬಿಗ್ ಬಾಸ್ʼ, ʼಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಮೂಲಕ ಗಮನ ಸೆಳೆದ ನಟಿ ಹಿನಾ ಖಾನ್ ಇತ್ತೀಚೆಗಷ್ಟೇ ಕ್ಯಾನ್ಸರ್‌ನಿಂದ ಗುಣಮುಖರಾಗುತ್ತಿದ್ದ ಬಗ್ಗೆ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಸೋಶಿಯಲ್ ಮೀಡಿಯಾದಲ್ಲೂ ಬಹಳ ಆ್ಯಕ್ಟಿವ್ ಆಗಿರುವ ನಟಿ ವೈಯಕ್ತಿಕ ವಿಚಾರ ಹಂಚಿಕೊಳ್ಳುವ ಜತೆಗೆ ಸಾಮಾಜಿಕ ವಿಚಾರಗಳ ಬಗ್ಗೆಯೂ ಧ್ವನಿ ಎತ್ತುತ್ತಾರೆ. ಇದೀಗ ಜಮ್ಮು - ಕಾಶ್ಮೀರದಲ್ಲಿ ನಡೆದ ನಿಶಾತ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಶ್ರೀನಗರದ ನಿಶಾತ್ ಪ್ರದೇಶದಲ್ಲಿ ಅಲೆಮಾರಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿದ್ದ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ನಾಲ್ವರು ದುಷ್ಕರ್ಮಿಗಳು 45 ವಯಸ್ಸಿನ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲು ಮುಂದಾಗಿದ್ದರು. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ಬಾಲಿವುಡ್ ಖ್ಯಾತ ನಟಿ ಹಿನಾ ಖಾನ್ ಕೂಡ ವಿರೋಧ ಹೊರ ಹಾಕಿದ್ದಾರೆ.

ಯಾವುದೇ ಅತ್ಯಾಚಾರ ಪ್ರಕರಣದಲ್ಲಿ ತಾವೇ ಮಾಡಿದ್ದು ಎಂದು ಒಪ್ಪಿಕೊಳ್ಳುವವರಿಲ್ಲ. ಅತ್ಯಾಚಾರ ಎಸಗಿದವನು ತನ್ನನ್ನು ಹೊರತುಪಡಿಸಿ ಬೇರೆಯವರನ್ನು ದೂಷಿಸುತ್ತಾನೆ. ಕೆಲವು ಅಪರಾಧವನ್ನು ಸಮರ್ಥಿಸಿಕೊಳ್ಳಲು ಮದ್ಯಪಾನ ಮಾಡಿರುವ ಕಾರಣ ಎಂದು ಹೇಳುವವರು ಇದ್ದಾರೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಮಾಡುವ ರಾಕ್ಷಸರು ಎಲ್ಲೆಡೆ, ಪ್ರತಿಯೊಂದು ಸಮುದಾಯದಲ್ಲಿ, ಪ್ರತಿಯೊಂದು ಧರ್ಮದಲ್ಲಿಯೂ ಇದ್ದೇ ಇರುತ್ತಾರೆ. ಕೆಲವರು ಅತ್ಯಾಚಾರ ಮಾಡಿ ಬಳಿಕ ಅದನ್ನು ಲೈಂಗಿಕ ದೌರ್ಜನ್ಯ ಎಂದು ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಮೂರ್ಖರಿಗೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾ ಚಾರದ ನಡುವಿನ ವ್ಯತ್ಯಾಸವನ್ನು ಯಾರಾದರೂ ಕಲಿಸಬಹುದೇ? ಎಂದು ಪ್ರಶ್ನಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಎನ್ನುವುದು ಅತ್ಯಾಚಾರಕ್ಕೂ ಮೊದಲೇ ನಡೆಯುವ ಒಂದು ಪ್ರಕ್ರಿಯೆಯಾಗಿದೆ. ಹಾಗೆಂದ ಮಾತ್ರಕ್ಕೆ ಅತ್ಯಾಚಾರ ನಡೆದಿದ್ದನ್ನು ಲೈಂಗಿಕ ದೌರ್ಜನ್ಯ ಎಂದು ಹೇಳಲಾಗದು. ಲೈಂಗಿಕ ದೌರ್ಜನ್ಯಕ್ಕಿಂತ ಅತ್ಯಾಚಾರ ದೊಡ್ಡ ಮಟ್ಟಿಗಿನ ಅಪರಾಧವಾಗಿದ್ದು ಇಡೀ ದೇಶಕ್ಕೆ ಮಾರಕವಾಗುವ ಬಹುದೊಡ್ಡ ಸಮಸ್ಯೆಯಾಗಿದೆ. ಅತ್ಯಾಚಾರ ನಡೆಯಲು ಮದ್ಯದ ಅಮಲಿನ ನಶೆಯೇ ಮುಖ್ಯ ಕಾರಣ. ಹಾಗಾಗಿ ಇದು ತಿಳಿಯದೇ ಆದ ಅಪರಾಧ ವೆಂದು ಅತ್ಯಾಚಾರಿಗಳ ಬಗ್ಗೆ ಮೃದು ಧೋರಣೆಯನ್ನು ತಾಳಬಾರದು. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು‌. ಬದಲಿಗೆ ಜನರು ಮಾಡಿದ್ದ ಕೃತ್ಯಕ್ಕೆ ಮದ್ಯವನ್ನು ದೋಷಿಸಿ ಸಮರ್ಥನೆ ನೀಡುವುದು ಸರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.

ಇದನ್ನು ಓದಿ: Hina Khan: ಕ್ಯಾನ್ಸರ್‌ ಟ್ರೀಟ್‌ಮೆಂಟ್‌ ಮಧ್ಯೆಯೇ ಮೆಕ್ಕಾ ಯಾತ್ರೆ ಕೈಗೊಂಡ ಹೀನಾ ಖಾನ್‌- ವಿಡಿಯೊ ಇಲ್ಲಿದೆ

ಕಾಶ್ಮೀರಿ ಮುಸ್ಲಿಮರು ಸೇರಿದಂತೆ ಯಾವುದೇ ಸಮುದಾಯದ ವ್ಯಕ್ತಿಗಳು ಮಾಡಿದ ಅಪರಾಧಗಳ ಬಗ್ಗೆ ಸಾಫ್ಟ್ ಕಾರ್ನರ್ ಬೇಡ. ಕೃತ್ಯಗಳ ತೀವ್ರತೆಯನ್ನು ಬಹಿರಂಗವಾಗಿ ಖಂಡಿಸಬೇಕು ಈ‌ ಮೂಲಕ ಅಪರಾಧ ಕೃತ್ಯಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ನಟಿ ಹಿನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ‌ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಸಿಜೆಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು 6 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದ್ದು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.