ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CRPF Jawan : ಪಾಕ್‌ ಮಹಿಳೆಯೊಂದಿಗೆ ವಿವಾಹವಾಗಿದ್ದ CRPF ಯೋಧ ಸೇವೆಯಿಂದ ವಜಾ

ಪಹಲ್ಗಾಮ್‌ ದಾಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅದರ ಮಧ್ಯದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF Jawan) ಜವಾನ್ ಮುನೀರ್ ಅಹ್ಮದ್ ಅವರು ಪಾಕಿಸ್ತಾನಿ ಮಹಿಳೆಯನ್ನು ವಿವಾಹವಾದ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ಪಾಕ್‌ ಮಹಿಳೆಯೊಂದಿಗೆ ವಿವಾಹವಾಗಿದ್ದ CRPF ಯೋಧ ಸೇವೆಯಿಂದ ವಜಾ

Profile Vishakha Bhat May 4, 2025 11:15 AM

ನವದೆಹಲಿ: ಪಹಲ್ಗಾಮ್‌ ದಾಳಿಗೆ (Pahalgam Terror Attack) ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಅದರ ಮಧ್ಯದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಜವಾನ್ ಮುನೀರ್ ಅಹ್ಮದ್ ಅವರು ಪಾಕಿಸ್ತಾನಿ ಮಹಿಳೆಯನ್ನು ವಿವಾಹವಾದ ವಿಷಯ ಮುನ್ನಲೆಗೆ ಬರುತ್ತಿದ್ದಂತೆ ಮುನೀರ್ ಅಹ್ಮದ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಮುನೀರ್‌ ಶಾಕಿಂಗ್‌ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಹೌದು ಮದುವೆಯಾಗಲು ಅನುಮತಿ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸೇವೆಯಿಂದ ವಜಾಗೊಳಿಸಲಾದ ಕೆಲವೇ ಗಂಟೆಗಳ ನಂತರ, ಸಿಆರ್‌ಪಿಎಫ್ ಯೋಧ ಮುನೀರ್ ಅಹ್ಮದ್ ಶನಿವಾರ, ಕಳೆದ ವರ್ಷ ತಾನು ತಮ್ಮ ಕೇಂದ್ರ ಕಚೇರಿಯಿಂದ ಅನುಮತಿ ಪಡೆದ ಸುಮಾರು ಒಂದು ತಿಂಗಳ ನಂತರ ತಮ್ಮ ವಿವಾಹವಾಗಿದ್ದಾಗಿ ಹೇಳಿದ್ದಾರೆ. ಜಮ್ಮುವಿನ ಘರೋಟಾ ನಿವಾಸಿ ಮುನೀರ್ ಅವರು ಏಪ್ರಿಲ್ 2017 ರಲ್ಲಿ CRPF ಸೇರಿದ್ದಾರೆ. ಅವರು 2023 ರ ಮೇ 24 ರಂದು ಪಾಕಿಸ್ತಾನದ ಮಿನಾಲ್ ಖಾನ್ ಅವರನ್ನು ಆನ್​ಲೈನ್​ನಲ್ಲೇ ವಿವಾಹವಾಗಿದ್ದಾರೆ. ಆದರೆ ಅವರು ಹೇಳಿರುವ ಪ್ರಕಾರ CRPF ಪ್ರಧಾನ ಕಚೇರಿಯಿಂದ ಅನುಮತಿ ಪಡೆದ ನಂತರವೇ ನಡೆಯಿತು ಎಂದು ಹೇಳಿದ್ದಾರೆ.

ಡಿಸೆಂಬರ್ 31, 2022 ರಂದು ಪಾಕಿಸ್ತಾನಿ ಮಹಿಳೆಯನ್ನು ಮದುವೆಯಾಗಲು ಅನುಮತಿ ಕೋರಿದ್ದರು ಮತ್ತು ಪಾಸ್‌ಪೋರ್ಟ್, ವಿವಾಹ ಪ್ರಮಾಣಪತ್ರ ಮತ್ತು ಅಫಿಡವಿಟ್‌ನಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಅಂತಿಮವಾಗಿ, ಏಪ್ರಿಲ್ 30, 2023 ರಂದು, ಅವರು ಪ್ರಧಾನ ಕಚೇರಿಯಿಂದ ಅನುಮತಿ ಪಡೆದರು. ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಜೊತೆಗಿನ ತನ್ನ ವಿವಾಹವನ್ನು "ಮರೆಮಾಚಿದ್ದಕ್ಕಾಗಿ" ಮತ್ತು ಆಕೆಯ ವೀಸಾದ ಸಿಂಧುತ್ವವನ್ನು ಮೀರಿ ಆಕೆಗೆ ತಿಳಿದೂ ಆಶ್ರಯ ನೀಡಿದ್ದಕ್ಕಾಗಿ ಕೇಂದ್ರ ಮೀಸಲು ಪೊಲೀಸ್ ಪಡೆ ಅಹ್ಮದ್ ಅವರನ್ನು ವಜಾಗೊಳಿಸಿದೆ.

ಇದೀಗ ಈ ಕುರಿತು ಮಾತನಾಡಿರುವ ಯೋಧ, ನನ್ನ ವಜಾಗೊಳಿಸುವಿಕೆಯ ಬಗ್ಗೆ ನನಗೆ ಮೊದಲು ಮಾಧ್ಯಮ ವರದಿಗಳ ಮೂಲಕ ತಿಳಿಯಿತು. ಇದು ನನಗೆ ಮತ್ತು ನನ್ನ ಕುಟುಂಬಕ್ಕೆ ಆಘಾತವನ್ನುಂಟುಮಾಡಿದೆ, ಏಕೆಂದರೆ ನಾನು ಪ್ರಧಾನ ಕಚೇರಿಯಿಂದ ಪಾಕಿಸ್ತಾನಿ ಮಹಿಳೆಯೊಂದಿಗೆ ನನ್ನ ಮದುವೆಗೆ ಅನುಮತಿ ಕೋರಿದ್ದೇನೆ ಮತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Pahalgam Terror Attack: ಭಾರತೀಯ ಹಡಗುಗಳಿಗೆ ಬಂದರುಗಳನ್ನು ಮುಚ್ಚಿದ ಪಾಕಿಸ್ತಾನ

ಮಿನಲ್ ಖಾನ್ ಈ ವರ್ಷ ಫೆಬ್ರವರಿ 28 ರಂದು ವಾಘಾ-ಅತ್ತಾರಿ ಗಡಿಯ ಮೂಲಕ ಭಾರತಕ್ಕೆ ಬಂದರು. ಮಾರ್ಚ್ 22 ರಂದು ಅವರ ವೀಸಾ ಅವಧಿ ಮುಗಿದಿತ್ತು, ಆದರೆ ಅವರು ಜಮ್ಮುವಿನಲ್ಲಿರುವ ಮುನೀರ್ ಅವರ ಮನೆಯಲ್ಲಿಯೇ ಉಳಿದುಕೊಂಡರು. ಆದಾಗ್ಯೂ, ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಹೈಕೋರ್ಟ್ ಪ್ರಸ್ತುತ ಮೀನಾಲ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸುವುದಕ್ಕೆ ತಡೆ ನೀಡಿತ್ತು.