ಶಾಸಕರು ಮತದಾರರನ್ನು ಭ್ರಷ್ಟಗೊಳಿಸಿದ್ದಲ್ಲದೆ;ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ವಿಫಲವಾಗಿದ್ದಾರೆಶಾಸಕರು ಮತದಾರರನ್ನು ಭ್ರಷ್ಟಗೊಳಿಸಿದ್ದಲ್ಲದೆ;ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ವಿಫಲವಾಗಿದ್ದಾರೆ : ಡಾ.ಅನಿಲ್ ಕುಮಾರ್ ಆರೋಪ : ಡಾ.ಅನಿಲ್ ಕುಮಾರ್ ಆರೋಪ
ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯ ಒಟ್ಟು ೩೨ ಸರ್ಕಾರಿ ಪ್ರೌಢ ಶಾಲೆಗಳಿದ್ದು, ಸುಮಾರು ೨೩೦೦ ಮಕ್ಕಳಿದ್ದಾರೆ, ೨೩೦೦ ಮಕ್ಕಳಿಗೆ ಇಂದು ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗದ ಕಾರಣ ಜಿಲ್ಲೆಯಲ್ಲಿ ಬಾಗೇಪಲ್ಲಿ, ಗುಡಿಬಂಡೆ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಉನ್ನತ ಶಿಕ್ಷಣ ಸಚಿವರ ಸ್ವಂತ ಜಿಲ್ಲೆಯಲ್ಲಿ ಫಲಿತಾಂಶ ೨೨ ನೇ ಸ್ಥಾನಕ್ಕೆ ಕುಸಿದಿದೆ

ಶಾಸಕರು ಮತದಾರರನ್ನು ಭ್ರಷ್ಟಗೊಳಿಸಿದ್ದಲ್ಲದೆ,ಕ್ಷೇತ್ರದಲ್ಲಿ ಉತ್ತಮ ಶಿಕ್ಷಣ ಕೊಡಿಸುವಲ್ಲಿ ವಿಫಲವಾಗಿದ್ದಾರೆ ಎಂದು ಡಾ.ಅನಿಲ್ ಕುಮಾರ್ ಆರೋಪ ಮಾಡಿದರು.

ಬಾಗೇಪಲ್ಲಿ : ಕ್ಷೇತ್ರದ ಎರಡು ಲಕ್ಷ ಮತದಾರರನ್ನು ವ್ಯವಸ್ಥಿತವಾಗಿ ಖರೀಧಿಸಿ ಓಟಿಗೆ ಎರಡು ಸಾವಿರ ಹಂಚುವುದು ಗೊತ್ತಿರುವ ಶಾಸಕರಿಗೆ ಕ್ಷೇತ್ರದ ಎರಡು ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ಕಲ್ಪಿಸಲು ಗೊತ್ತಿಲ್ಲದ ನಾಲಾಯಕ್ ಶಾಸಕರು ಕಮೀಷನ್ ಹೊಡೆದು ಸರ್ಕಾರ ಮಾಡುತ್ತಿರುವ ದಂಧೆಯಲ್ಲಿ ಬ್ರೋಕರ್ ಕೆಲಸ ಮಾಡುತ್ತಿದ್ದಾರೆಂದು ಸಿಪಿಐ(ಎಂ) ರಾಜ್ಯಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಶಿಕ್ಷಣ ವ್ಯವಸ್ಥೆ ಕುರಿತು ಬೇಸರ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಪಟ್ಟಣದ ಪತ್ರಕರ್ತರ ಭವನದಲ್ಲಿ ಸಿಪಿಐ(ಎಂ) ತಾಲೂಕು ಸಮಿತಿ ವತಿಯಿಂದ ೨೦೨೪-೨೫ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪಲಿತಾಂಶ ಕುರಿತು ಸುದ್ದಿಗೋಷ್ಠಿ ಅಯೋಜಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವೈಪಲ್ಯ ಹಾಗೂ ವೈಪಲ್ಯಕ್ಕೆ ಕಾರಣರಾಗಿರುವ ಅಧಿಕಾರಿಗಳ, ಶಾಸಕರ ವಿರುದ್ದ ಕಿಡಿಕಾರಿದರು.
ಸಿಪಿಐ(ಎಂ) ರಾಜ್ಯಸಮಿತಿ ಸದಸ್ಯ ಡಾ.ಅನಿಲ್ ಕುಮಾರ್ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರ ವ್ಯಾಪ್ತಿಯ ಒಟ್ಟು ೩೨ ಸರ್ಕಾರಿ ಪ್ರೌಢ ಶಾಲೆಗಳಿದ್ದು, ಸುಮಾರು ೨೩೦೦ ಮಕ್ಕಳಿದ್ದಾರೆ, ೨೩೦೦ ಮಕ್ಕಳಿಗೆ ಇಂದು ಗುಣಮಟ್ಟದ ಶಿಕ್ಷಣ ಕೊಡಿಸಲು ಸಾಧ್ಯವಾಗದ ಕಾರಣ ಜಿಲ್ಲೆಯಲ್ಲಿ ಬಾಗೇಪಲ್ಲಿ, ಗುಡಿಬಂಡೆ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಉನ್ನತ ಶಿಕ್ಷಣ ಸಚಿವರ ಸ್ವಂತ ಜಿಲ್ಲೆಯಲ್ಲಿ ಫಲಿತಾಂಶ ೨೨ ನೇ ಸ್ಥಾನಕ್ಕೆ ಕುಸಿದಿದೆ. ಸ್ಥಳೀಯ ಶಾಸಕ ರಿಗೆ ಮಕ್ಕಳ ಭವಿಷ್ಯಕ್ಕಿಂತ ಗುತ್ತಿಗೆದಾರರಿಂದ ಕಮೀಷನ್ ಹೇಗೆ ಹೊಡೆಯಬೇಕು, ಹಳ್ಳಿಗಳಲ್ಲಿ ಅವರ ಬಾಲಂಗೋಚಿಗಳಿಗೆ ಹೇಗೆ ಬಾರ್‌ಗಳು ಸ್ಥಾಪಿಸಿಕೊಡಬೇಕು, ಬಡವರ ಜಮೀನುಗಳನ್ನು ಹೇಗೆ ಲಪಟಾಯಿಸಬೇಕೆಂಬುದರ ಬಗ್ಗೆ ಚನ್ನಾಗಿ ಗೊತ್ತಿದೆ ಎಂದು ದೂರಿದರು.
ಯಾವುದೇ ಬದುಕಿನ ಆಸರೆ ಇಲ್ಲದೆ ಜೀವನ ನಡೆಸುತ್ತಿರುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಆಗತ್ಯವಾಗಿರುವ ಶಿಕ್ಷಣ ಸೌಲಭ್ಯಗಳ ಜತೆಗೆ, ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆ ನೀಗಿಸಿ, ಕೌಶಲ್ಯ ಅಭಿವೃದ್ದಿ ಕೇಂದ್ರಗಳನ್ನು ಸ್ಥಾಪಿಸಿ ಮಕ್ಕಳ ಶಿಕ್ಷಣ ಕೌಶಲ್ಯತೆಯನ್ನು ಹೇಗೆ ವೃದ್ದಿಗೊಳಿಸ ಬೇಕೆಂಬುದು ಗೊತ್ತಿಲ್ಲ, ಹೋದರೆ ಹೋಗಲಿ ಶಾಸಕರಿಗೆ ಶಿಕ್ಷಣದ ಬಗ್ಗೆ ಕಾಳಜಿ ಇಲ್ಲ ಅಂತ ಅಂದುಕೊಂಡರೆ ಸರ್ಕಾರವೇ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡಿದ್ದು, ಸರ್ಕಾರ ನಡೆಸು ತ್ತಿರುವ ಕಮೀಷನ್ ದಂಧೆಗೆ ರಾಜ್ಯದ ಶಾಸಕರು ಬ್ರೋಕರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ.
ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಹಲವು ಬಗೆಯ ಜಾತ್ರಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಶಿಕ್ಷಕರ, ವಿದ್ಯಾರ್ಥಿಗಳ ಸಮಯವನ್ನು ವ್ಯರ್ಥಗೊಳಿಸಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳ ಶಿಕ್ಷಣವನ್ನು ಪಾತಾಳಕ್ಕೆ ತುಳಿದಿದೆ. ಸರ್ಕಾರಿ ಶಾಲೆಗಳ ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿ ಉತ್ತಮ ಪಲಿತಾಂಶಕ್ಕೆ ಪೂರಕವಾದ ಶಿಕ್ಷಣ ನೀಡಲು ಸಾಧ್ಯವಾಗದ ಇಲ್ಲಿನ ಸಚಿವರು, ಶಾಸಕರು ಇದಕ್ಕೆ ಹೊಣೆ ಹೊತ್ತಬೇಕು, ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಸಿಪಿಎಂ ಪಕ್ಷದ ಮುಖಂಡರ ತಂಡ ಬೇಟಿ ನೀಡಿ ಶಾಲೆಯ ಸ್ಥಿತಿ ಗತಿಗಳ, ಶಿಕ್ಷಕರ ಕೊರತೆ ಬಗ್ಗೆ, ಮಕ್ಕಳ ಶಿಕ್ಷಣಕ್ಕೆ ಆಗತ್ಯವಾದ ಮಾಹಿತಿ ಪಡೆದುಕೊಂಡು ನಿಗಾವಹಿಸಿ ಸರ್ಕಾರಿ ಶಾಲೆಯ ಮಕ್ಕಳ ಜತೆ ನಾವು ಇರುತ್ತೇವೆ ಎಂಬುದನ್ನು ಈ ಸಂದರ್ಭದಲ್ಲಿ ಹೇಳಿತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿ ವೆಂಕಟಪ್ಪ, ತಾಲೂಕು ಕಾರ್ಯದರ್ಶಿ ಎಂ.ಎನ್.ರಘುರಾಮರೆಡ್ಡಿ, ಮುಖಂಡರಾದ ಚನ್ನರಾಯಪ್ಪ, ಬಿಳ್ಳುರು ನಾಗರಾಜ್, ವಾಲ್ಮೀಕಿ ಅಶ್ವತ್ಥಪ್ಪ, ಕೆ.ಮುನಿಯಪ್ಪ, ಎಸ್‌ಎಫ್‌ಐ ಸೋಮಶೇಖರ್, ಎಸ್.ಲಕ್ಷ್ಮಣ ರೆಡ್ಡಿ, ಕೃಷ್ಣಪ್ಪ, ರಫೀಕ್, ಮಂಜುನಾಥ, ವೆಂಕಟಸ್ವಾಮಿ ಮತ್ತಿತರರು ಇದ್ದರು.