Aamir Khan: ಈ ವರ್ಷವೇ ಸೆಟ್ಟೇರುತ್ತಾ ಮಹಾಭಾರತ ಸಿನಿಮಾ? ಬಿಗ್ ಅಪ್ಡೇಟ್ ನೀಡಿದ ಆಮೀರ್ ಖಾನ್
ಮಹಾಭಾರತದ ಕಥೆಯನ್ನು ಆಧಾರವಾಗಿಟ್ಟುಕೊಂಡು ಈಗಾಗಲೇ ಅನೇಕ ಸಿನಿಮಾಗಳು ತೆರೆ ಮೇಲೆ ಬಂದಿದೆ. ಇದೀಗ ಬಾಲಿ ವುಡ್ ಖ್ಯಾತ ನಟ ಆಮೀರ್ ಖಾನ್ ಮಹಾಭಾರತ ಸಿನಿಮಾ ತೆರೆ ಮೇಲೆ ತರುವುದಾಗಿ ಗುಡ್ ನ್ಯೂಸ್ ನೀಡಿದ್ದಾರೆ. ಮಹಾಭಾರತದ ಮಹಾಕಾವ್ಯವನ್ನು ಚಲನಚಿತ್ರ ರೂಪಕ್ಕೆ ತರುವುದು ತನ್ನ ಜೀವನದ ಅತೀ ದೊಡ್ಡ ಆಸೆ ಎಂಬ ಬಗ್ಗೆ ನಟ ಆಮೀರ್ ಖಾನ್ ಇತ್ತೀಚಿನ ಸಂದರ್ಶನವೊಂದರಲ್ಲಿ ತಿಳಿಸಿದ್ದು ಬಿಗ್ ಪ್ರಾಜೆಕ್ಟ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.



ಇತ್ತೀಚೆಗೆ ಬಾಲಿವುಡ್, ಟಾಲಿವುಟ್ ಸೇರಿದಂತೆ ಚಿತ್ರರಂಗದಲ್ಲಿ ಪೌರಾಣಿಕ, ಐತಿಹಾಸಿಕ ಸಿನಿಮಾಗಳ ಟ್ರೆಂಡ್ ಶುರುವಾಗಿದೆ. ಭಾರತದಲ್ಲಿ ಈಗಾಗಲೇ ಹತ್ತಾರು ಪೌರಾಣಿಕ ಕಥೆಯ ಸಿನಿಮಾಗಳು ತೆರೆಗೆ ಬಂದಿದೆ. ಆದರೆ ಇದೀಗ ಬಾಲಿವುಡ್ನ ಪ್ರಸಿದ್ದ ನಟ, ನಿರ್ಮಾಪಕ ಆಮೀರ್ ಖಾನ್ ಮಹಾಭಾರತʼ ವನ್ನು ಸಿನಿಮಾವಾಗಿ ತರುವುದು ನನ್ನ ಬಹುದೊಡ್ಡ ಆಸೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು ಬಿಗ್ ಪ್ರಾಜೆಕ್ಟ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ಕಳೆದ 2 ವರ್ಷಗಳಿಂದ ಯಾವುದೇ ಸಿನಿಮಾ ಬಿಡುಗಡೆ ಮಾಡಲಿರಲಿಲ್ಲ. ಆದರೆ ಇದೀಗ ಅಮಿರ್ ಖಾನ್ ಮಹಾಕಾವ್ಯ ಮಹಾಭಾರತವನ್ನು ಸಿನಿಮಾ ಮಾಡುವ ಆಸಕ್ತಿ ತೋರಿಸಿದ್ದಾರೆ. ಮಹಾಭಾರತ’ ಕತೆಯನ್ನು ಸಿನಿಮಾ ಮಾಡಬೇಕು ಎಂಬುದು ನಟ ಆಮೀರ್ ಖಾನ್ ಅವರ ಜೀವನದ ಬಹು ದೊಡ್ಡ ಆಸೆಯಂತೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಆಮೀರ್ ಖಾನ್, ತಾನು ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿದ್ದಾರೆ.

2018ರಲ್ಲೇ ಆಮೀರ್ ಖಾನ್ ʼಮಹಾಭಾರತʼದ ಸಿನಿಮಾವನ್ನು ಮಾಡಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಬಿಗ್ ಬಜೆಟ್ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬರಲಿದೆ ಎನ್ನಲಾಗಿತ್ತು. ಆದರೆ ಆದಾದ ಬಳಿಕ ಈ ಬಗ್ಗೆ ಯಾವ ಅಪ್ಡೇಟ್ ಕೂಡ ಸಿಕ್ಕಿರ ಲಿಲ್ಲ. ಇದೀಗ ಅಮೀರ್ ಖಾನ್ ಕೊನೆಗೂ ಗುಡ್ ನ್ಯೂಸ್ ನೀಡಿದ್ದು, ಮಹಾಭಾರತ ಸಿನಿಮಾ ಮಾಡುವುದು ನನ್ನ ಜೀವಮಾನದ ಕನಸಾಗಿದೆ. ಪ್ರಯತ್ನಗಳು ತೆರೆ ಮರೆಯಲ್ಲಿ ನಡೆಯುತ್ತಲೇ ಇದ್ದವು. ಕೊನೆಗೆ ಇದೇ ವರ್ಷ ಸಿನಿಮಾ ಪ್ರಾರಂಭ ಆಗುವ ಸಾಧ್ಯತೆ ಇದೆ. ಸಿನಿಮಾದ ನಟರು, ತಂತ್ರಜ್ಞರ ಘೋಷಣೆ ಸಮಯ ಕಳೆದಂತೆ ಆಗಲಿದೆ’ ಎಂದು ಹೇಳಿದ್ದಾರೆ.

ಮಹಾಭಾರತ ಪ್ರಾಜೆಕ್ಟ್ ನನ್ನ ಅತ್ಯಂತ ದೊಡ್ಡ ಮತ್ತು ಮಹತ್ವಾಕಾಂಕ್ಷೆಯ ಯೋಜನೆ. ಈ ಬಗ್ಗೆ ನಾನು ಇದೇ ವರ್ಷ ಕೆಲಸ ಶುರು ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ. ಮಹಾಭಾರತ ಕತೆಯನ್ನು ಒಂದು ಭಾಗದಲ್ಲಿ ಹೇಳಲು ಸಾಧ್ಯವೇ ಇಲ್ಲ. ಆ ಬಗ್ಗೆ ಕೆಲಸ ಚಾಲ್ತಿಯಲ್ಲಿದ್ದು,. ಇದು ಸುಲಭದ ಕೆಲಸವಲ್ಲ, ಬರವಣಿಗೆ ಕೆಲಸವೇ ಕೆಲವು ವರ್ಷಗಳ ಕಾಲ ನಡೆಯಲಿದೆ’ ಎಂದಿದ್ದಾರೆ ನಟ ಆಮೀರ್ ಖಾನ್. ಸಿನಿಮಾಕ್ಕೆ ಹಲವು ನಿರ್ದೇಶಕರನ್ನು ಒಟ್ಟಿಗೆ ಕೆಲಸ ಮಾಡಿಸುವ ಯೋಜನೆಯೂ ಇದೆ. ಇಂಗ್ಲೀಷ್ನ ಲಾರ್ಡ್ ಆಫ್ ದಿ ರಿಂಗ್ಸ್ ರೀತಿ ಒಂದೇ ಬಾರಿಗೆ ಹಲವು ಪಾರ್ಟ್ಗಳ ಚಿತ್ರೀಕರಣ ಮಾಡಿ ಒಂದರ ಮೇಲೆ ಒಂದರಂತೆ ರಿಲೀಸ್ ಮಾಡುವ ಯೋಜನೆಯಿದೆ ಎಂದಿದ್ದಾರೆ.

ಆಮೀರ್ ಖಾನ್ ಈ ಮಹತ್ವಾಕಾಂಕ್ಷೆಯ ಸಿನಿಮಾವನ್ನು ನಿರ್ಮಿಸುತ್ತಿದ್ದರೂ, ಸಿನಿಮಾ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಾರೋ ಇಲ್ಲವೋ ಎಂಬುದನ್ನು ದೃಢಪಡಿಸಿಲ್ಲ. ಪಾತ್ರಕ್ಕೆ ಯಾರು ಉತ್ತಮವಾಗಿ ಹೊಂದಿಕೊಳ್ಳುತ್ತಾರೆ ಎಂಬುದರ ಮೇಲೆ ಪಾತ್ರ ವರ್ಗವನ್ನು ನಿರ್ಧರಿಸಬೇಕು ಎಂದು ತಿಳಿಸಿದ್ದಾರೆ. ಆಮಿರ್ ಖಾನ್ ಕೊನೆಯ ಬಾರಿಗೆ 'ಲಾಲ್ ಸಿಂಗ್ ಚಡ್ಡಾ' ಚಿತ್ರದಲ್ಲಿ ಕಾಣಿಸಿಕೊಂಡರು. ಸದ್ಯ ಈಗ ಅವರು ತಮ್ಮ ಹೊಸ ಚಿತ್ರ 'ಸಿತಾರ್ ಜಮೀನ್ ಪರ್' ನಲ್ಲಿ ನಟಿಸುತ್ತಿದ್ದು ಚಿತ್ರವನ್ನು ಆರ್.ಎಸ್. ಪ್ರಸನ್ನ ನಿರ್ದೇಶಿಸುತ್ತಿದ್ದಾರೆ. ಇದರಲ್ಲಿ ಆಮೀರ್ ಖಾನ್ ಮತ್ತೆ ದರ್ಶೀಲ್ ಸಫಾರಿ ಜೊತೆ ಕಾಣಿಸಿಕೊಳ್ಳಲಿದ್ದಾರೆ.