Operation Sindoor: ಭಾರತದ ದಾಳಿಗೆ ಪಾಕ್ ವಾಯುನೆಲೆಗಳು ಛಿದ್ರ ಛಿದ್ರ; ಇಲ್ಲಿವೆ ನೋಡಿ ಫೋಟೋಸ್
ಆಪರೇಷನ್ ಸಿಂದೂರದ ಸಮಯದಲ್ಲಿ ಭಾರತವು ಪಾಕಿಸ್ತಾನದ 10 ವಾಯುನೆಲೆಗಳ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಇದೀಗ ಅದರ ಸ್ಯಾಟ್ಲೈಟ್ ಚಿತ್ರಗಳು ಬಿಡುಗಡೆಯಾಗಿವೆ. ಮೇ 10 ಮತ್ತು 11 ರಂದು ಮ್ಯಾಕ್ಸರ್ ಸಂಗ್ರಹಿಸಿದ ಉಪಗ್ರಹ ಚಿತ್ರಗಳು ಲಭ್ಯವಾಗಿದೆ.



ಸುಕ್ಕೂರ್ ವಾಯುನೆಲೆ:
ಸಿಂಧ್ನ ಜಮ್ಶೋರೊ ಜಿಲ್ಲೆಯಲ್ಲಿ ನೆಲೆಗೊಂಡಿರುವ ಇದು ಪಾಕಿಸ್ತಾನಿ ವಾಯುಪಡೆಯ (PAF) ಮುಂಚೂಣಿ ಕಾರ್ಯಾಚರಣೆಯ ನೆಲೆಯಾಗಿದ್ದು, F-16 ಮತ್ತು J-17 ನಂತಹ ಫೈಟರ್ ಜೆಟ್ಗಳನ್ನು ಹೊಂದಿದೆ. ಕರಾಚಿಯ ಕರಾವಳಿಯುದ್ದಕ್ಕೂ ಪಾಕಿಸ್ತಾನಿ ರಕ್ಷಣಾ ಪಡೆಗಳನ್ನು ಬಲಪಡಿಸುವುದು ವಾಯುನೆಲೆಯ ಉದ್ದೇಶವಾಗಿದೆ. ಈ ವಾಯುನೆಲೆಗೆ ಹಾನಿಯಾದ ಚಿತ್ರಗಳನ್ನು ಕಾಣಬಹುದು.

ಭೋಲಾರಿ ವಾಯುನೆಲೆ
ಪಾಕಿಸ್ತಾನದ ಅತ್ಯಂತ ಆಧುನಿಕ ವಾಯುನೆಲೆಗಳಲ್ಲಿ ಒಂದಾದ ಇದು 2017 ರಲ್ಲಿ ನಿರ್ಮಿಸಲಾಗಿದೆ. ಜಮ್ಶೋರೊದಲ್ಲಿರುವ ಭೋಲಾರಿ ವಾಯುನೆಲೆಯು JF-17 ಥಂಡರ್ ಮತ್ತು ಅಮೆರಿಕದ F-16 ಎರಡರ ಸ್ಕ್ವಾಡ್ರನ್ಗಳನ್ನು ಹೊಂದಿದೆ. ಸಾಬ್ 2000 AEWAC ಗಳು (ವಾಯುಗಾಮಿ ಮುಂಚಿನ ಎಚ್ಚರಿಕೆ ಮತ್ತು ನಿಯಂತ್ರಣ ವಿಮಾನ) ವಿಮಾನಗಳನ್ನು ಸಹ ಈ ನೆಲೆಯಲ್ಲಿ ಇರಿಸಲಾಗಿದೆ.

ನೂರ್ ಖಾನ್ ವಾಯುನೆಲೆ
ಪಾಕಿಸ್ತಾನದ ಅತ್ಯಂತ ಪ್ರಮುಖ ವಾಯುನೆಲೆಗಳಲ್ಲಿ ಒಂದಾದ ಇದು, ಅಧ್ಯಕ್ಷರು ಮತ್ತು ಪ್ರಧಾನಿ ಸೇರಿದಂತೆ ಪಾಕಿಸ್ತಾನದ ಉನ್ನತ ನಾಯಕತ್ವವನ್ನು ಸಾಗಿಸುವ ಜವಾಬ್ದಾರಿಯುತ ವಿಐಪಿ ವಿಮಾನಗಳನ್ನು ಹೊಂದಿದೆ. ಇಸ್ಲಾಮಾಬಾದ್ನಿಂದ ಕೇವಲ 10 ಕಿ.ಮೀ ದೂರದಲ್ಲಿದೆ.

ರಹೀಂ ಖಾನ್ ವಾಯುನೆಲೆ
ರಹೀಂ ಖಾನ್ ವಾಯುನೆಲೆಯ ರನ್ವೇಗೆ ಭಾರತ ನಡೆಸಿದ ದಾಳಿಯಿಂದ ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಸ್ಯಾಟ್ಲೈಟ್ ಫೋಟೋದಲ್ಲಿ ಕಾಣಿಸುವಂತೆ ರನ್ವೇ ನಲ್ಲಿ ಕುಳಿಗಳು ಬಿದ್ದಿವೆ. ಇದರಿಂದಾಗಿ ಪಾಕಿಸ್ತಾನವು ಒಂದು ವಾರದವರೆಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. ರಾಜಸ್ಥಾನ ಗಡಿಯ ಬಳಿ ಇರುವ ವಾಯುನೆಲೆಯ ಏಕೈಕ ರನ್ವೇಯನ್ನು ಶೇಖ್ ಜಾಯೆದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸಹ ಬಳಸುತ್ತದೆ.

ಜಕೋಬಾಬಾದ್ ವಾಯುನೆಲೆ
ಪಾಕಿಸ್ತಾನಿ ವಾಯುಪಡೆಯ ಕೆಲವು ಅತ್ಯಾಧುನಿಕ ವಿಮಾನಗಳು ಮತ್ತು ಸಲಕರಣೆಗಳಿಗೆ ನೆಲೆಯಾಗಿರುವ ಜಾಕೋಬಾಬಾದ್ ವಾಯುನೆಲೆಯನ್ನು 9/11 ದಾಳಿಯ ನಂತರ ಅಮೆರಿಕದ ಭಯೋತ್ಪಾದನೆಯ ವಿರುದ್ಧದ ಯುದ್ಧದ ಸಮಯದಲ್ಲಿ ಅಮೆರಿಕ ಮತ್ತು ನ್ಯಾಟೋ ಪಡೆಗಳು ಬಳಸಿಕೊಂಡಿದ್ದವು.