Disha Patani: ಮಾಡರ್ನ್ ಮಿನಿ-ಸಿಲ್ವರ್ ಡ್ರೆಸ್ನಲ್ಲಿ ನಟಿ ದಿಶಾ ಪಟಾನಿ ಫುಲ್ ಮಿಂಚಿಂಗ್; ಫೋಟೋಸ್ ಇಲ್ಲಿವೆ
ಇತ್ತೀಚೆಗಷ್ಟೇ ನೆಟ್ಟೆಡ್ ಡ್ರೆಸ್ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ಬಾಲಿವುಡ್ ಬೆಡಗಿ ದಿಶಾ ಪಟಾನಿ(Disha Patani) ಇದೀಗ ಸಿಲ್ವರ್ ಮಿನಿ ಮಾಡರ್ನ್ ಡ್ರೆಸ್ ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇವರ ಗ್ಲಾಮರ್ ಲುಕ್ ಗೆ ನೆಟ್ಟಿಗರು ಫಿಧಾ ಆಗಿದ್ದು ಈ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿವೆ.

Disha Patani Shines In A Dazzling Silver Mini Dress,


ನಟಿ ದಿಶಾ ಪಟಾನಿ ಬಾಲಿವುಡ್ನ ಹಾಟ್ ಬೆಡಗಿ. ದಿಶಾ ಪಟಾನಿ ನಟನೆಗಿಂತ ಗ್ಲಾಮರ್ ಹಾಗೂ ಲವ್ ಲೈಫ್ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಮಾಡಲಿಂಗ್ ಮೂಲಕ ವೃತ್ತಿ ಬದುಕು ಆರಂಭಿಸಿದ್ದ ದಿಶಾ ಪಟಾನಿ ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿ ಮಿಂಚಿದ್ದಾರೆ. ಸಿನಿಮಾ ಮಾತ್ರ ಅಲ್ಲದೆ, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಗ್ಲಾಮರಸ್ ಫೋಟೊಗಳನ್ನು ಆಗಾಗ ಶೇರ್ ಮಾಡುತ್ತಾ ತನ್ನ ಅಭಿಮಾನಿಗಳನ್ನು ಮೋಡಿ ಮಾಡುತ್ತಲೇ ಇರುತ್ತಾರೆ. ಈಗ ಶೈನಿಂಗ್ ಸಿಲ್ವರ್ ಕಲರ್ ಮಿನಿ ಡ್ರೆಸ್ನಲ್ಲಿ ಸಖತ್ ಆಗಿಯೇ ಮಿಂಚಿದ್ದಾರೆ.

ಸಿನಿಮಾಗಳಲ್ಲಿ ಅಲ್ಲದೇ ತನ್ನ ಹಾಟ್ ಬ್ಯೂಟಿ ಮೂಲಕ ಹೆಚ್ಚು ಸುದ್ದಿ ಮಾಡುವ ದಿಶಾ ಆಗಾಗ ಬಿಕಿನಿಯಲ್ಲಿ ಕಾಣಿಸಿ ಕೊಳ್ಳು ತ್ತಾರೆ. ನಟಿ ಈಗ ಸಿಲ್ವರ್ ಮಿನಿ ಮಾಡರ್ನ್ ಡ್ರೆಸ್ ನಲ್ಲಿ ಡಿಫರೆಂಟ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ದಿಶಾ ಈ ಭಾರಿಯ ಮಿನಿ ಡ್ರೆಸ್ ನಲ್ಲಿ ಶೈನಿಂಗ್ ಸ್ವಿಕಿನ್ಸ್ ಗಳಿಂದ ಅಲಂಕರಿಸಲಾದ ಸಿಲ್ವರ್ ಡ್ರೆಸ್ ಮೂಲಕ ಸಖತ್ ಹಾಟ್ ಆಗಿಯೆ ಕಾಣಿಸಿದ್ದಾರೆ. ಈ ಮಿನಿ ಡ್ರೆಸ್ ರಾತ್ರಿ ಪಾರ್ಟಿ ಲುಕ್ ಅಥವಾ ಸ್ನೇಹಿತರೊಂದಿಗೆ ವಾರಾಂತ್ಯದ ಟ್ರಿಪ್ ಹೋಗಲು ಹೆಚ್ಚು ಸೂಕ್ತವಾಗಿದೆ.

ದಿಶಾ ಯಾವುದೇ ಆಭರಣ ಧರಿಸದೇ ಅದಕ್ಕೆ ಮ್ಯಾಚ್ ಆಗುವಂತೆ ಕ್ರೀಮ್ ಕಲರ್ ಶೂ ಧರಿಸಿದ್ದಾರೆ. ಸಿಂಪಲ್ ಮೇಕಪ್ ಜೊತೆಗೆ ಸಿಂಪಲ್ ಹೇರ್ ಸ್ಟೈಲ್, ಪಿಂಕ್ ನ್ಯೂಡ್ ಕಲರ್ಸ್ ಲಿಪ್ಸ್ಟಿಕ್ ಹಾಕಿ ಹೆಚ್ಚು ಹೈಲೆಟ್ ಆಗಿ ಕಾಣಿಸಿದ್ದಾರೆ. ಅಷ್ಟೇ ಅಲ್ಲದೆ ಇವರ ಲುಕ್ ನೋಡುಗರನ್ನು ಮೋಡಿ ಮಾಡುವಂತಿತ್ತು. ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ನಟಿ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ.

ದಿಶಾ ಪಟಾನಿ ಸಿಲ್ವರ್ ಬಣ್ಣದ ಉಡುಗೆ ತೊಟ್ಟು ಆಕರ್ಷಕವಾಗಿ ಕಾಣಿಸುತ್ತಿದ್ದಾರೆ. ಇವರ ಫೋಟೋಸ್ ಇದೀಗ ಸಖತ್ ವೈರಲ್ ಆಗಿವೆ. ನಟಿ ದಿಶಾ ಪಟಾಣಿ ಹೊಸ ಲುಕ್ ನೋಡಿ ಅಭಿಮಾನಿಗಳು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಹಾಗೆಯೇ ನೆಟ್ಟಿಗರೊಬ್ಬರು ಸೋ ಕ್ಯೂಟ್ , ಹಾಟ್ ಬ್ಯೂಟಿ ಎಂದು ಕಮೆಂಟ್ ಮಾಡಿದ್ದಾರೆ.

ದಿಶಾ ಪಟಾಣಿ ತೆಲುಗಿನ ಲೋಫರ್ ಸಿನಿಮಾದ ಮೂಲಕ ಸಿನಿ ಪ್ರಯಣಕ್ಕೆ ಕಾಲಿಟ್ಟರು.ಆ ಬಳಿಕ ಯೋಧಾ, ಏಕ್ ವಿಲನ್ ರಿಟರ್ನ್ಸ್, ರಾಧೆ, ಭಾಗಿ 3, ಮಲಾಂಗ್, ಭಾರತ್, ವೆಲ್ಕಂ ಟು ನ್ಯೂಯಾರ್ಕ್, ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಪ್ರಭಾಸ್ ನಟನೆಯ ಕಲ್ಕಿ 2898 AD' ಸಿನಿಮಾದಲ್ಲೂ ನಟಿಸಿ ಖ್ಯಾತಿ ಪಡೆ ದಿದ್ದಾರೆ. ದಿಶಾ ಪಟಾನಿ ಮುಂದಿನ ವರ್ಷ ಬಿಡುಗಡೆಯಾಗಲಿರುವ ವೆಲ್ಕಮ್ ಟು ದಿ ಜಂಗಲ್ ಮೂಲಕ ಕಾಣಿಸಿ ಕೊಳ್ಳ ಲಿದ್ದಾರೆ.