Jacqueliene Fernandez: ಎಲಾನ್ ಮಸ್ಕ್ ತಾಯಿಯೊಂದಿಗೆ ಮುಂಬೈ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟಿ ಜಾಕ್ವೆಲಿನ್; ಫೋಟೋಸ್ ಇಲ್ಲಿವೆ
ಸ್ಪೇಸ್ಎಕ್ಸ್ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ತಾಯಿ ಮಾಯೆ ಮಸ್ಕ್ ಜೊತೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದಾರೆ. ತಾಯಿಯ ನಿಧನದ ಬಳಿಕ ಮೊದಲ ಬಾರಿಗೆ ನಟಿ ಕಾಣಿಸಿಕೊಂಡಿದ್ದಾರೆ.



ಬಾಲಿವುಡ್ ನಟಿ ಜಾಕ್ವಿಲಿನ್ ಫರ್ನಾಂಡಿಸ್ ಅವರು ಟೆಸ್ಲಾ ಮತ್ತು ಸ್ಪೇಸ್ಎಕ್ಸ್ನ ಮುಖ್ಯ ಕಾರ್ಯನಿರ್ವಾಹಕ ಎಲಾನ್ ಮಸ್ಕ್ (Elon Musk) ತಾಯಿ ಮಾಯೆ ಮಸ್ಕ್ (Maye Musk) ಜೊತೆ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿದ್ದರು. ನಟಿ ತಮ್ಮ ತಾಯಿಯ ನಿಧನವಾದ ಬಳಿಕ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗೋಲ್ಡ್ ಕಲರ್ ಸೂಟ್ ಧರಿಸಿ, ತಲೆಗೆ ದುಪಟ್ಟಾ ಹಾಕಿಕೊಂಡಿದ್ದರು ಜಾಕ್ವೆಲಿನ್. ಹಳದಿ ಬಣ್ಣದ ಉಡುಗೆಯನ್ನು ಎಲಾನ್ ಮಸ್ಕ್ ತಾಯಿ ಧರಿಸಿದ್ದಾರೆ. ತಮ್ಮ ಬರವಣಿಗೆಯ ʻಎ ವುಮೆನ್ ಮೇಕ್ಸ್ ಎ ಪ್ಲ್ಯಾನ್ʼ ಎಂಬ ಪುಸ್ತಕವನ್ನು ಮುಂಬೈನಲ್ಲಿ ಬಿಡುಗಡೆ ಮಾಡಲಿದ್ದಾರೆ. ಹೀಗಾಗಿ ಪುಸ್ತಕ ಲಾಂಚ್ ಮಾಡುವ ಮುನ್ನ ಮಾಯೆ ಮಸ್ಕ್ ಅವರು ಸಿದ್ಧಿ ವಿನಾಯಕನ ದೇಗುಲದಲ್ಲಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ, ಜಾಕ್ವೆಲಿನ್ ಕೂಡ ಸಾಥ್ ನೀಡಿದ್ದಾರೆ.

ಭೇಟಿಯ ಬಗ್ಗೆ ಮಾತನಾಡುತ್ತಾ, ಜಾಕ್ವೆಲೀನ್, "ನನ್ನ ಆತ್ಮೀಯ ಸ್ನೇಹಿತೆ ಮಾಯೆ ಜೊತೆ ದೇವಾಲಯದಲ್ಲಿ ಆಶೀರ್ವಾದ ಪಡೆಯುವುದು ತುಂಬಾ ಸುಂದರವಾದ ಅನುಭವವಾಗಿತ್ತು, ಅವರು ಪುಸ್ತಕ ಬಿಡುಗಡೆಗಾಗಿ ಭಾರತಕ್ಕೆ ಬಂದಿದ್ದಾರೆ. ಮಾಯೆ ಅವರ ಪುಸ್ತಕವು ಮಹಿಳೆಯ ಸ್ಥಿತಿಸ್ಥಾಪಕತ್ವದ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಟೆಸ್ಲಾ ಮತ್ತು ಸ್ಪೇಸ್ಎಕ್ಸ್ ಸಿಇಒ ಎಲಾನ್ ಮಸ್ಕ್ ಅವರ ತಾಯಿ ಮಾಯೆ ಮಸ್ಕ್ ಇತ್ತೀಚೆಗೆ ಮುಂಬೈನಲ್ಲಿ ತಮ್ಮ 77 ನೇ ಹುಟ್ಟುಹಬ್ಬವನ್ನು ಮುಂಬೈನಲ್ಲಿ ಆಚರಿಸಿಕೊಂಡಿದ್ದಾರೆ. ಮಾಯೆ ಅವರು ಮಾಜಿ ಸೂಪರ್ ಮಾಡೆಲ್ ಮತ್ತು ಆಹಾರ ತಜ್ಞೆ ಹಾಗೂ ಲೇಖಕಿಯಾಗಿದ್ದಾರೆ. ಅವರು ಆಹಾರ ಪದ್ಧತಿ ಮತ್ತು ಪೌಷ್ಟಿಕ ವಿಜ್ಞಾನದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ ಮತ್ತು ಟೊರೊಂಟೊ ವಿಶ್ವವಿದ್ಯಾಲಯದಿಂದ ಆಹಾರ ಪದ್ಧತಿಯಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.

ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಾಕ್ವೆಲಿನ್ ಅವರ ತಾಯಿ ಕಿಮ್ ಫರ್ನಾಂಡಿಸ್ ಏ.6ರಂದು ನಿಧನರಾದರು. ಅಮ್ಮನ ಅಗಲಿಕೆಯ ನೋವಿನ ನಡುವೆ ಮತ್ತೆ ಸಿನಿಮಾ ಕೆಲಸದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.