Shah Rukh Khan: ಬಾಲಿವುಡ್ ಪ್ರವೇಶ ಮಾಡುವ ಮುನ್ನ ಶಾರುಖ್ ಹೇಗಿದ್ರು ಗೊತ್ತಾ? ಇಲ್ಲಿವೆ ಹಳೆಯ ಫೋಟೋಸ್!..
ಬಾಲಿವುಡ್ನ ಸೂಪರ್ ಸ್ಟಾರ್ ಶಾರುಖ್ ಖಾನ್ ಮುಖ ಎಲ್ಲರಿಗೂ ಚಿರಪರಿಚಿತ. ಸಿನಿ ಜರ್ನಿಯಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇದೀಗ ಬಾಲಿವುಡ್ ಸ್ಟಾರ್ ನಟನ ಕೆಲವು ಹಳೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ



ನಟ ಅಮರ್ ತಲ್ವಾರ್ 1990ರ ದಶಕದ ಅಪರೂಪದ ಶಾರುಖ್ ಖಾನ್ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಾರುಖ್ ಬಾಲಿವುಡ್ಗೆ ಪ್ರವೇಶಿಸುವ ಮೊದಲು ತೆಗೆದ ಈ ಚಿತ್ರಗಳಲ್ಲಿ, ಗುರುತೇ ಸಿಗದಂತೆ ಕಾಣಿಸಿದ್ದಾರೆ. ಫೋಟೋದಲ್ಲಿ ಶಾರುಖ್ ಯಂಗ್ ಆ್ಯಂಡ್ ಎನರ್ಜಿಟಿಕ್ ಬಾಯ್ನಂತೆ ಕಾಣಿಸಿದ್ದಾರೆ.

ಅಮರ್ ತಲ್ವಾರ್ ತನ್ನ ಪೋಸ್ಟಿನಲ್ಲಿ ನನ್ನ ಹಳೆಯ ಫೋಟೋಗಳಿಗೆ ಕಣ್ಣು ಹಾಯಿಸಿದಾಗ ಈ ಚಿತ್ರಗಳು ಸೆರೆಯಾಗಿವೆ. 1990 ರ ಸುಮಾರಿಗೆ, ಶಾರುಖ್ ಖಾನ್ ನನ್ನ ಮಗ ಟ್ಯಾಲಿಯೊಂದಿಗೆ ಕ್ಲಿಕ್ ಮಾಡಿದ್ದ ಫೋಟೋ ನೋಡಿದೆ" ಎಂದು ಅಮರ್ ತಲ್ವಾರ್ ಬರೆದು ಕೊಂಡಿದ್ದಾರೆ.

ಫೋಟೋದಲ್ಲಿ ಶಾರುಖ್ ಕ್ಯಾಮೆರಾ ಹಿಡಿದುಕೊಂಡು ಪೋಸ್ ನೀಡಿದ್ದಾರೆ ಇನ್ನೊಂದು ಫೋಟೋದಲ್ಲಿ ತಲ್ವಾರ್ ಅವರ ಮಗನೊಂದಿಗೆ ಶಾರುಖ್ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ಅಭಿಮಾನಿಗಳು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು ಬಾಲಿವುಡ್ ಕಿಂಗ್ ಲುಕ್ ಇನ್ನೂ ಹಾಗೆಯೇ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

1994 ರ ಟಿವಿ ಶೋ ಶಾಂತಿ ಮತ್ತು ಮಂದಿರಾ ಬೇಡಿಯಲ್ಲಿ ರಾಜ್ 'ಜಿಜೆ' ಸಿಂಗ್ ಪಾತ್ರಕ್ಕಾಗಿ ಅಮರ್ ತಲ್ವಾರ್ ಪ್ರಸಿದ್ಧ ರಾಗಿದ್ದಾರೆ. ಶಾರೂಖ್ ಖಾನ್ ಜೊತೆಯಾಗಿ ನಾಟಕಗಳಲ್ಲಿಯು ಅಭಿನಯಿಸಿದ್ದಾರೆ. ರಫ್ ಕ್ರಾಸಿಂಗ್, ಹೂಸ್ ಲೈಫ್ ಇಟ್ ಎನಿವೇ ಮತ್ತು ಲೆಂಡ್ ಮೀ ಎ ಟೆನರ್ ಇತ್ಯಾದಿ ನಾಟಕಗಳಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದಾರೆ. ಕೊನೆಯ ನಾಟಕ ದಲ್ಲಿ ಶಾರುಖ್ ಖಾನ್ ಪಾತ್ರವಹಿಸಬೇಕಾಗಿದ್ದರೂ ಮುಂಬೈಗೆ ತೆರಳಿದ ಕಾರಣ ತಲ್ವಾರ್ ಅವರೇ ಆ ಪಾತ್ರವನ್ನು ಮಾಡಬೇಕಾಯಿತು ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ..

ಅಂದಹಾಗೆ, ಬಾಲಿವುಡ್ ನಟ ಶಾರುಖ್ ಖಾನ್ ಅವರು ಕಿರುತೆರೆ ಸೀರಿಯಲ್ಗಳಲ್ಲಿ ನಟಿಸಿ ಬಾಲಿವುಡ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿರುವ ನಟ. ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಸರ್ಕಸ್ ಸೀರಿಯಲ್ ಮೂಲಕ ನಟನೆಗೆ ಕಾಲಿಟ್ಟ ಶಾರುಖ್ ಖಾನ್ ಬಾಲಿವುಡ್ಗೆ ಪಾದಾರ್ಪಣೆ ಮಾಡುವ ಮೊದಲು ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ನಂತರ ಅವರು ಕೆಲವು ಟಿವಿ ಧಾರಾವಾಹಿಗಳಲ್ಲಿ ಸಹ ಕೆಲಸ ಮಾಡಿದ್ದಾರೆ. ಶಾರುಖ್ ಬಾಲಿವುಡ್ಗೆ ಎಂಟ್ರಿಕೊಟ್ಟಿದ್ದು ತಮ್ಮ 28ನೇ ವಯಸ್ಸಿನಲ್ಲಿ. ತಮ್ಮ ವೃತ್ತಿಜೀವನವನ್ನು 1988ರ ಫೌಜಿ ಧಾರಾವಾಹಿಯಿಂದ ಆರಂಭಿಸಿದರು. 1992ರಲ್ಲಿ ದಿವಾನಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿ, 1993ರಲ್ಲಿ ಬಾಜಿಗರ್ ಮತ್ತು ಡರ್ ಚಿತ್ರಗಳೊಂದಿಗೆ ಸೂಪರ್ ಸ್ಟಾರ್ ಪಟ್ಟವನ್ನು ಗಳಿಸಿದರು.