Shah Rukh Khan: 5 ಹೀರೋಗಳು, ಮೂವರು ನಟಿಯರು ರಿಜೆಕ್ಟ್ ಮಾಡಿದ್ದ ಈ ಸೂಪರ್ ಹಿಟ್ ಸಿನಿಮಾ ಬಗ್ಗೆ ನಿಮಗೆಷ್ಟು ಗೊತ್ತು?
ಬಾಲಿವುಡ್ ನಲ್ಲಿ ಶಾರುಖ್ ಖಾನ್ ಅಭಿನಯದ ಅನೇಕ ಸಿನಿಮಾಗಳು ಹಿಟ್ ಆಗಿ ಸಾಕಷ್ಟು ಅಭಿಮಾನಿಗಳ ಮನಗೆದ್ದಿದೆ. ಆದರೆ ಇವರ ಅಭಿನಯದ ರೋಮ್ಯಾಂಟಿಕ್ ಥ್ರಿಲ್ಲರ್ ಡರ್ ಸಿನಿಮಾವು ಬಿಡುಗಡೆಗೆ ಮುನ್ನವೇ ಸಾಕಷ್ಟು ಅಡೆ ತಡೆಗಳನ್ನು ಎದುರಿಸಿ ಬಳಿಕ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ಗೆ ಸೇರಿತು. 1993 ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ್ದ ಡರ್ ಸಿನಿಮಾಕ್ಕೆ ಅಭಿನಯ ಮಾಡಲು ಅನೇಕ ನಟ ನಟಿಯರು ನಟಿಸಲು ನಿರಾಕರಿಸಿದ್ದಾರೆ. ಹಾಗಾದರೆ ಆ ಸೆಲೆಬ್ರಿಟಿಗಳು ಯಾರು, ಡರ್ ಸಿನಿಮಾ ಚಿತ್ರೀಕರಣಕ್ಕೆ ಉಂಟಾದ ಅಡೆತಡೆಗಳು ಏನು?

Darr movie


ಬಾಲಿವುಡ್ನ ಸೈಕಲಾಜಿಕಲ್ ಥ್ರಿಲ್ಲರ್ ಡರ್ ಸಿನಿಮಾವು ಬಿಡುಗಡೆಯಾದಾಗ ಅದು ದೊಡ್ಡ ಮಟ್ಟಿನ ಸಕ್ಸಸ್ ಸಿಗುತ್ತದೆ ಎಂಬ ಯಾವ ಸಣ್ಣ ಯೋಚನೆ ಕೂಡ ಚಿತ್ರತಂಡಕ್ಕೆ ಇರಲಿಲ್ಲ. ರೋಮ್ಯಾಂಟಿಕ್ ಹಾಗೂ ಸೈಕಾಲಾಜಿಕಲ್ ಥ್ರಿಲ್ಲರ್ ಅನುಭವ ಎರಡನ್ನು ತೆರೆ ಮೇಲೆ ತರುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಡರ್ ಸಿನಿಮಾ ಡಿಸೆಂಬರ್ 24, 1993 ರಂದು ತೆರೆಕಂಡು ಆ ವರ್ಷದ ಮೂರನೇ ಅತಿ ಹೆಚ್ಚು ಗಳಿಕೆಯ ಹಿಂದಿ ಚಿತ್ರವೆಂಬ ಹೆಗ್ಗಳಿಕೆ ಪಡೆದಿದೆ. ಅದರ ಜೊತೆ 39ನೇ ಫಿಲ್ಮ್ ಫೇರ್ ಪ್ರಶಸ್ತಿ ಸಹ ದೊರೆತಿದ್ದು 41ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಗಿಟ್ಟಿಸಿಕೊಂಡಿದೆ. ಇದೇ ಸಿನಿಮಾ ಶಾರುಖ್ ಖಾನ್ ಅವರ ಅಭಿನಯಕ್ಕೆ ಬೆಂಬಲ ದೊರೆತು ಸಾಕಷ್ಟು ಅವಕಾಶಗಳನ್ನು ಸಹ ಗಿಟ್ಟಿಸಿಕೊಟ್ಟಿದೆ.

ಡರ್ ಸಿನಿಮಾ ಅಭಿನಯಿಸಲು ಕಲಾವಿದರ ಹುಡುಕಾಟ ನಡೆಸುತ್ತಿದ್ದಾಗ ನಿರ್ದೆಶಕ ಯಶ್ ಚೋಪ್ರಾ ಅವರು ಈ ಸಿನಿಮಾಕ್ಕೆ ನಾಯಕಿಯಾಗಿ ನಟಿಸಲು ಖ್ಯಾತ ನಟಿ ಶ್ರೀದೇವಿ ಅವರಲ್ಲಿ ಕೇಳಿದ್ದರು. ಆದರೆ ಶ್ರೀದೇವಿ ಅವರು ಚಿತ್ರಕಥೆಯಲ್ಲಿ ಬದಲಾವಣೆ ಮಾಡುವಂತೆ ಒತ್ತಾಯಿಸಿದ್ದರು. ಇದಕ್ಕೆ ನಿರ್ದೇಶಕ ಚೋಪ್ರಾ ಒಪ್ಪದ ಕಾರಣ ನಟಿ ಶ್ರೀದೇವಿ ಈ ಸಿನಿಮಾದಿಂದ ಹೊರಗುಳಿದರು.

ಬಳಿಕ ಯಶ್ ಚೋಪ್ರಾ ಅವರು ಆ ಕಾಲದಲ್ಲಿ ಟ್ರೆಂಡ್ ನಲ್ಲಿದ್ದ ನಟಿ ಮಾಧುರಿ ದೀಕ್ಷಿತ್ಗೆ ನಾಯಕಿಯಾಗಿ ನಟಿಸುವಂತೆ ಆಫರ್ ನೀಡಿದರು. ಆದರೆ ಅವರಿಗೆ ಕಥಾವಸ್ತು ಇಷ್ಟವಾಗಲಿಲ್ಲ ಎಂದು ಆ ಸಿನಿಮಾದಲ್ಲಿ ಅಭಿನಯಿಸಲಿಲ್ಲ. ನಂತರ ನಟಿ ಐಶ್ವರ್ಯಾ ರೈ ಅವರನ್ನು ಸಂಪರ್ಕಿಸಲಾಯಿತು ಆದರೆ ಅವರು ವಿಶ್ವ ಸುಂದರಿ ಸ್ಪರ್ಧೆಯ ಕೆಲಸ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.

ಬಳಿಕ ದಿವ್ಯ ಭಾರತಿಯನ್ನು ಸಿನಿಮಾ ನಾಯಕಿಯಾಗಿ ಆಯ್ಕೆ ಮಾಡಲಾಯಿತು, ಹಾಗಿದ್ದರು ಅಂತಿಮವಾಗಿ ಆ ಪಾತ್ರವು ಜೂಹಿ ಚಾವ್ಲಾ ಅವರು ಒಪ್ಪಿಕೊಂಡರು. ಸಹ ನಟನಾಗಿ ರಿಷಿ ಕಪೂರ್, ಮಿಥುನ್ ಚಕ್ರವರ್ತಿ ಮತ್ತು ಜಾಕಿ ಶ್ರಾಫ್ ಅಭಿನಯಿಸಲು ಕೇಳಲಾಗಿದ್ದು ಎಲ್ಲರೂ ಈ ಆಫರ್ ನಿರಾಕರಿಸಿದರು. ಬಳಿಕ ನಟ ಸನ್ನಿ ಡಿಯೋಲ್ ಈ ಪಾತ್ರವನ್ನು ಒಪ್ಪಿಕೊಂಡು ನಟಿಸಿದ್ದಾರೆ.

ಡರ್ ಸಿನಿಮಾದಲ್ಲಿ ಮುಖ್ಯಪಾತ್ರವಾದ ರಾಹುಲ್ ಮೆಹ್ರಾ ಪಾತ್ರ ಅಭಿನಯಿಸಲು ಸಂಜಯ್ ದತ್ ಅವರನ್ನು ಕೇಳಲಾಗಿತ್ತು. ಆದರೆ 1993ರ ಮುಂಬೈ ಬಾಂಬ್ ಸ್ಫೋಟಗಳಿಗೆ ಸಂಬಂಧಿಸಿದಂತೆ ಸಂಜಯ್ ದತ್ ಬಂಧನಕ್ಕೆ ಒಳಗಾಗಿದ್ದ ಕಾರಣ ಅಭಿನಯಿಸಲು ಸಾಧ್ಯವಾಗಲಿಲ್ಲ. ಬಳಿಕ ಅಜಯ್ ದೇವಗನ್ ಕೂಡ ಈ ಪಾತ್ರ ನಿರಾಕರಿಸಿದರು, ಆದರೆ ಆಮಿರ್ ಖಾನ್ ಆರಂಭದಲ್ಲಿ ಈ ಪಾತ್ರ ಒಪ್ಪಿದ್ದರು. ಆದಾಗ್ಯೂ, ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ ಸಂಬಂಧಿಸಿದಂತೆ ನಿರ್ದೇಶಕ ಚೋಪ್ರಾ ಅವ ರೊಂದಿಗಿನ ಭಿನ್ನಾಭಿಪ್ರಾಯಗಳು ಏರ್ಪಟ್ಟು ನಟ ಆಮಿರ್ ಈ ಯೋಜನೆಯಿಂದ ಹೊರಬಂದರು. ಕೊನೆಗೆ ಶಾರುಖ್ ಖಾನ್ ಈ ಪಾತ್ರವನ್ನು ಒಪ್ಪಿದರು. ಈ ಮೂಲಕ ನಟ ಶಾರುಖ್ ವಿಭಿನ್ನ ಪಾತ್ರದಲ್ಲಿ ಪ್ರೇಕ್ಷಕರ ಮನ ಸೆಳೆಯುವಂತೆ ಮಾಡಿದರು.