ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Urvashi Rautela: ಕಾನ್ಸ್‌ ಚಲನಚಿತ್ರೋತ್ಸವದಲ್ಲೂ ನಟಿ ಊರ್ವಶಿ ರೌಟೇಲಾ ವಿವಾದ- ಭಾರೀ ವೈರಲಾಗ್ತಿದೆ ಈ ವಿಡಿಯೊ

78ನೇ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ನಟಿ ಊರ್ವಶಿ ರೌಟೇಲಾ (Urvashi Rautela) ಈ ಬಾರಿ ಅವರ ರೆಡ್ ಕಾರ್ಪೆಟ್ ಪ್ರದರ್ಶನಗಳಿಂದ ಅಲ್ಲ ಬದಲಾಗಿ ಫೋಟೋಶೂಟ್ ವೇಳೆ ಹೊಟೇಲ್ ಮೆಟ್ಟಿಲುಗಳ ಮೇಲೆ ನಿಂತು ಎಲ್ಲರ ಸಂಚಾರಕ್ಕೆ ಅಡ್ಡಿಪಡಿಸಿ ಸುದ್ದಿಯಾಗಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

ಮತ್ತೆ ಟೀಕೆಗೆ ಗುರಿಯಾದ ನಟಿ ಊರ್ವಶಿ ರೌಟೇಲಾ- ವಿಡಿಯೊ ನೋಡಿ

ನವದೆಹಲಿ: ನಟಿ (actress) ಊರ್ವಶಿ ರೌಟೇಲಾ (Urvashi Rautela) ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. 78ನೇ ಕಾನ್ಸ್‌ ಚಲನಚಿತ್ರೋತ್ಸವದಲ್ಲಿ (78th Cannes Film Festival) ಭಾಗಿಯಾಗಿರುವ ಅವರು ತಮ್ಮ ಉಡುಗೆಯಿಂದ ಅಲ್ಲ ವರ್ತನೆಯಿಂದ ಸಾಮಾಜಿಕ ಜಾಲತಾಣದಲ್ಲಿ (Viral Video) ನೆಟ್ಟಿಗರ ಟೀಕೆಗೆ ಗುರಿಯಾಗಿದ್ದಾರೆ. ಫೋಟೋಗೆ ಪೋಸ್ ನೀಡಲು ಅವರು ಮೆಟ್ಟಿಲುಗಳನ್ನು ನಿರ್ಬಂಧಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೆ ಕಾರಣವಾಗಿದೆ. ಚಿನ್ನದ ಬಣ್ಣದ ಡ್ರೆಸ್ ನಲ್ಲಿ ನಟಿ ಮುದ್ದಾಗಿ ಕಂಡರೂ ಆಕೆಯ ವರ್ತನೆ ಹಲವರನ್ನು ಕೆರಳಿಸಿದೆ. ಆಕೆಯಿಂದ ಸಾಕಷ್ಟು ಮಂದಿ ತೊಂದರೆ ಅನುಭವಿಸಿದರು ಎಂದು ಹಲವರು ನಟಿಯನ್ನು ದೂಷಿಸಿದ್ದಾರೆ.

78ನೇ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪಾಲ್ಗೊಂಡಿರುವ ನಟಿ ಊರ್ವಶಿ ರೌಟೇಲಾ ಈ ಬಾರಿ ಅವರ ರೆಡ್ ಕಾರ್ಪೆಟ್ ಪ್ರದರ್ಶನಗಳಿಂದ ಅಲ್ಲ ಬದಲಾಗಿ ಫೋಟೋಶೂಟ್ ವೇಳೆ ಹೊಟೇಲ್ ಮೆಟ್ಟಿಲುಗಳ ಮೇಲೆ ನಿಂತು ಎಲ್ಲರ ಸಂಚಾರಕ್ಕೆ ಅಡ್ಡಿ ಪಡಿಸಿ ಸುದ್ದಿಯಾಗಿದ್ದಾರೆ. ಊರ್ವಶಿ ಅವರು ಕೇಪ್ ತೋಳುಗಳನ್ನು ಹೊಂದಿರುವ ಹೆಚ್ಚು ಅಲಂಕರಿಸಿದ ಚಿನ್ನದ ಗೌನ್‌ನಲ್ಲಿ ಕಂಗೊಳಿಸಿದ್ದು, ಹೊಟೇಲ್ ನ ಭವ್ಯವಾದ ಮೆಟ್ಟಿಲಿನ ಮೇಲೆ ನಿಂತು ಫೋಟೋ ಶೂಟ್ ಮಾಡಿಕೊಳ್ಳುತ್ತಿದ್ದರು. ಇದು ಅಲ್ಲಿ ಹೋಗಿ ಬರುವವರನ್ನು ಸಂಪೂರ್ಣವಾಗಿ ನಿರ್ಬಂಧಿಸುವಂತಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿಪಾಲ್ಗೊಳ್ಳಲು ಬಂದಿದ್ದ ಸಾಕಷ್ಟು ಮಂದಿ ಇದರಿಂದ ಗೊಂದಲಕ್ಕೊಳಗಾಗಿದ್ದರು. ಹೆಚ್ಚಿನವರು ಮುಂದೆ ಹೆಜ್ಜೆ ಹಾಕಲಾಗದೆ ಹಿಂದೆ ಸರಿದರು. ಇನ್ನು ಕೆಲವರು ಹಿಂದೆ ಸಾಲುಗಟ್ಟಿ ನಿಂತರು. ಆದರೂ ಊರ್ವಶಿ ಅವರಿಗೆಲ್ಲ ದಾರಿ ಬಿಟ್ಟುಕೊಡುವ ಬದಲು ಛಾಯಾಗ್ರಾಹಕ ಹೇಳುತ್ತಿದ್ದ ಪೋಸ್ ಗಳನ್ನು ನೀಡುತ್ತಾ ನಿಂತರು. ಇದನ್ನು ಒಬ್ಬ ಅತಿಥಿಯು ತಮ್ಮ ಕೆಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದು ತ್ವರಿತವಾಗಿ ವೈರಲ್ ಆಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ನಟಿಗೆ ಸೌಜನ್ಯವಿಲ್ಲ ಎಂದು ಹೇಳಿದರು. ಒಬ್ಬರು ಪ್ರತಿಕ್ರಿಯಿಸಿ ಇದನ್ನು ಮೂಲಭೂತ ಶಿಷ್ಟಾಚಾರ ಎಂದು ಕರೆಯಲಾಗುತ್ತದೆ. ಸ್ಪಷ್ಟವಾಗಿ ಅವರಿಗೆ ಯಾವುದೇ ಶಿಷ್ಟಾಚಾರವಿಲ್ಲ ಎಂದು ಹೇಳಿದರೆ ಇನ್ನೊಬ್ಬರು ಅಲ್ಲಿ ನಿಂತಿದ್ದವರಿಗೆ ಆಕೆ ದಾರಿ ಬಿಟ್ಟು ಕೊಡಬಹುದಿತ್ತು. ಅವರು ಹೋದ ಮೇಲೆ ಫೋಟೋ ತೆಗೆಸಿಕೊಳ್ಳಬಹುದಿತ್ತು ಎಂದಿದ್ದಾರೆ.

ಮತ್ತೊಬ್ಬರು, ಇದು ಮುಜುಗರ ಉಂಟು ಮಾಡುವಂತಿದೆ ಎಂದಿದ್ದಾರೆ. ಇನ್ನು ಹಲವರು ಈ ರೀತಿ ಬೇರೆಯವರನ್ನು ಕಾಯಿಸುವುದು ಮುಜುಗರ ತರುವಂತದ್ದು. ಅದೂ ಅಂತಾರಾಷ್ಟ್ರೀಯ ಕಾರ್ಯಕ್ರಮವೊಂದರಲ್ಲಿ ಭಾರತವನ್ನು ಪ್ರತಿನಿಧಿಸುವಾಗ ಅವರ ನಡವಳಿಕೆ ದೇಶಕ್ಕೆ ಅಗೌರವ ಕೊಡುವಂತದ್ದು ಎಂದಿದ್ದಾರೆ.

ಇನ್ನೊಬ್ಬರು ದುರದೃಷ್ಟವಶಾತ್ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗೆ ವರ್ತಿಸುವವರನ್ನು ಎಲ್ಲಿಗೂ ಕರೆದೊಯ್ಯಬಾರದು ಎಂದು ಹೇಳಿದ್ದರೆ ಮತ್ತೊಬ್ಬರು ಇದು ತುಂಬಾ ಮುಜುಗರದ ಸಂಗತಿಯಾಗಿದೆ,. ಭಾರತವನ್ನು ಮುಜುಗರಕ್ಕೀಡು ಮಾಡಿದ ಮೊದಲ ಮಹಿಳೆ ಎಂದು ತಿಳಿಸಿದ್ದಾರೆ.