ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PBKS vs DC: ಪಂಜಾಬ್‌ಗೆ ಅಗ್ರಸ್ಥಾನಕ್ಕೇರುವ ತವಕ; ಡೆಲ್ಲಿಗೆ ಕೊನೆಯ ಪಂದ್ಯ

ಇತ್ತಂಡಗಳ ಈ ಪಂದ್ಯ ಮೇ 8 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ವಾಯು ದಾಳಿ ಭೀತಿ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 122 ರನ್‌ ಗಳಿಸಿತ್ತು.

ಪಂಜಾಬ್‌ಗೆ ಅಗ್ರಸ್ಥಾನಕ್ಕೇರುವ ತವಕ; ಡೆಲ್ಲಿಗೆ ಕೊನೆಯ ಪಂದ್ಯ

Profile Abhilash BC May 23, 2025 5:14 PM

ಜೈಪುರ: ಆರಂಭಿಕ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಆ ಬಳಿಕ ಸತತ ಸೋಲಿನ ಸುಳಿಗೆ ಸಿಲುಕಿದ ಡೆಲ್ಲಿ ಕ್ಯಾಪಿಟಲ್ಸ್‌(PBKS vs DC) ಪ್ಲೇ-ಆಫ್‌ನಿಂದ ಹೊರಬಿದ್ದಿತು. ಇದೀಗ ತನ್ನ ಪಾಲಿನ ಕೊನೆಯ ಪಂದ್ಯವನ್ನಾಡಲು ಸಜ್ಜಾಗಿದೆ. ನಾಳೆ(ಮೇ 24) ರಂದು ನಡೆಯುವ ಪಂದ್ಯದಲ್ಲಿ ಬಲಿಷ್ಠ ಪಂಜಾಬ್‌ ಕಿಂಗ್ಸ್‌(Punjab Kings) ವಿರುದ್ಧ ಸೆಣಸಲಿದೆ. ಡೆಲ್ಲಿಗೆ ಇದು ಔಪಚಾರಿಕ ಪಂದ್ಯವಾದರೂ ಪಂಜಾಬ್‌ಗೆ ಅಗ್ರ ಎರಡು ಸ್ಥಾನಕ್ಕೇರಲು ಗೆಲುವು ಅತ್ಯಗತ್ಯ.

ಇತ್ತಂಡಗಳ ಈ ಪಂದ್ಯ ಮೇ 8 ರಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ನಡುವೆ ವಾಯು ದಾಳಿ ಭೀತಿ ಹಿನ್ನೆಲೆಯಲ್ಲಿ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ್ದ 10.1 ಓವರ್‌ಗಳಲ್ಲಿ 1 ವಿಕೆಟ್‌ಗೆ 122 ರನ್‌ ಗಳಿಸಿತ್ತು.

ಡೆಲ್ಲಿ ತಂಡಕ್ಕೆ ಕಳೆದ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆಲುವು ಸಾಧಿಸುತ್ತಿದ್ದರೆ ಪ್ಲೇ ಆಫ್‌ ಪ್ರವೇಶಿಸುವ ಅವಕಾಶವಿತ್ತು. ಆದರೆ ತಂಡ ಸೋತು ಈ ಅವಕಾಶದಿಂದ ವಂಚಿತವಾಯಿತು. ಟೂರ್ನಿ ಮುಕ್ತಾಯದ ಹಂತಕ್ಕೆ ಬಂದರೂ ಡೆಲ್ಲಿ ತಂಡ ಸೂಕ್ತ ಆರಂಭಿಕ ಜೋಡಿ ಕಂಡುಕೊಳ್ಳವ ಪ್ರಯತ್ನದಲ್ಲಿ ಯಶಸ್ವಿ ಸಾಧಿಸಲೇ ಇಲ್ಲ. ಇದು ತಂಡಕ್ಕೆ ಹಿನ್ನಡೆಯಾಯಿತು. ಡೆಲ್ಲಿ ಪರ ಕನ್ನಡಿಗ ರಾಹುಲ್‌(504 ರನ್‌) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಟ್ರಿಸ್ಟಾನ್‌ ಸ್ಟಬ್ಸ್‌, ಅಶುತೋಷ್‌ ಶರ್ಮ, ಅಭಿಷೇಕ್‌ ಪೋರೆಲ್‌ ಇವರ ಬ್ಯಾಟಿಂಗ್‌ ಎಂದೆರಡು ಪಂದ್ಯಕ್ಕಷ್ಟೇ ಸೀಮಿತವಾಯಿತು.

ಬೌಲಿಂಗ್‌ ಕೂಡ ಅತ್ಯಂತ ಕಳಪೆ ಮಟ್ಟದಿಂದ ಕೂಡಿದೆ. ಮುಖೇಶ್‌ ಕುಮಾರ್‌, ಟಿ. ನಟರಾಜನ್‌, ಚಮೀರ ಪ್ರತಿ ಪಂದ್ಯದಲ್ಲೂ ದುಬಾರಿಯಾಗುತ್ತಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪ್ರಗತಿ ಸಾಧಿಸದೇ ಹೋದಲ್ಲಿ ಪಂಜಾಬ್‌ ವಿರುದ್ಧವೂ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ IPL 2025: ರಿಷಭ್‌ ಪಂತ್‌ ಎದುರಿಸುತ್ತಿರುವ ಸಮಸ್ಯೆಯನ್ನು ರಿವೀಲ್‌ ಮಾಡಿದ ಯೋಗರಾಜ್‌ ಸಿಂಗ್‌!

ಪಂಜಾಬ್‌ ತಂಡ ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಸಮರ್ಥವಾಗಿದೆ. ಪ್ರಿಯಾಂಶ್ ಆರ್ಯ ಮತ್ತು ಪ್ರಭ್‌ಶಿಮ್ರಾನ್‌ ಸಿಂಗ್‌ ಜೋಡಿ ಪ್ರತಿ ಪಂದ್ಯದಲ್ಲಿಯೂ ಉತ್ತಮ ಆರಂಭ ಒದಗಿಸುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದಾರೆ. ನಾಯಕ ಶ್ರೇಯಸ್‌ ಅಯ್ಯರ್‌, ನೆಹಾಲ್‌ ವದೇರಾ ಮತ್ತು ಶಶಾಂಕ್‌ ಸಿಂಗ್‌ ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್‌ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಲ್‌, ಅರ್ಶ್‌ದೀಪ್‌ ಸಿಂಗ್‌ ಎದುರಾಳಿಗಳನ್ನು ಕಟ್ಟು ಹಾಕುವಲ್ಲಿ ಸಮರ್ಥರಿದ್ದಾರೆ.