Bhumi Pednekar: ಭೂಮಿ ಪಡ್ನೇಕರ್ ಬೋಲ್ಡ್ ಫೋಟೋಶೂಟ್; ಸಮಂತಾ ಸೇರಿ ಹಲವು ನಟಿಯರು ಫುಲ್ ಫಿದಾ
ಪ್ರಿಯಾಂಕಾ ಘೋಷ್ ಮತ್ತು ನೂಪುರ್ ಅಸ್ಥಾನಾ ನಿರ್ದೇಶನದ ರೊಮ್ಯಾಂಟಿಕ್-ಕಾಮಿಡಿ ಡ್ರಾಮಾ ಟಿವಿ ಸೀರೀಸ್ ‘ದಿ ರಾಯಲ್ಸ್’ ನಲ್ಲಿ ಅಭಿನಯಿಸಿ ಮಿಶ್ರ ಪ್ರತಿಕ್ರಿಯೆ ಗಳಿಸಿರುವ ನಟಿ ಭೂಮಿ ಪಡ್ನೇಕರ್, ತಮ್ಮ ಫ್ಯಾಷನ್ ಸೆನ್ಸ್ನಿಂದ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾರೆ.



ಪ್ರಿಯಾಂಕಾ ಘೋಷ್ (Priyanka Ghose) ಮತ್ತು ನೂಪುರ್ ಅಸ್ಥಾನಾ(Nupur Asthana) ನಿರ್ದೇಶನದ ರೊಮ್ಯಾಂಟಿಕ್-ಕಾಮಿಡಿ ಡ್ರಾಮಾ ಟಿವಿ ಸೀರೀಸ್ ‘ದಿ ರಾಯಲ್ಸ್’(The Royals)ನಲ್ಲಿ ಅಭಿನಯಿಸಿ ಮಿಶ್ರ ಪ್ರತಿಕ್ರಿಯೆ ಗಳಿಸಿರುವ ನಟಿ ಭೂಮಿ ಪಡ್ನೇಕರ್(Bhumi Pednekar), ತಮ್ಮ ಫ್ಯಾಷನ್ ಸೆನ್ಸ್ ನಿಂದ ನೋಡುಗರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಷ್ಟೇಅಲ್ಲದೆ ತಮ್ಮ ಬಿಡುವಿನ ದಿನಗಳಲ್ಲಿ ಸ್ಟೈಲಿಶ್ ಲುಕ್ಗಳಿಂದ ಮಿಂಚುವುದರ ಜೊತೆಗೆ ತೆರೆಯ ಮೇಲೆ ಆಕರ್ಷಕವಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿಪ್ರಿಯರ ಗಮನ ಸೆಳೆಯುತ್ತಾರೆ. ಇನ್ನೂ ಇತ್ತೀಚೆಗಷ್ಟೆ ತನ್ನ ಬೋಲ್ಡ್ ಫೋಟೋಶೂಟ್ನ ಕೆಲವು ಚಿತ್ರಗಳನ್ನು ಈಕೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವು ತೆಲುಗು ಸ್ಟಾರ್ ನಟಿ ಸಮಂತಾ ಸೇರಿದಂತೆ ಚಿತ್ರರಂಗದ ದಿಗ್ಗಜರ ಗಮನ ಸೆಳೆದಿದೆ.

ಬ್ರೈಡಲ್ ಏಷಿಯಾಗಾಗಿ ನಡೆದ ಫೋಟೋಶೂಟ್ನ ಕೆಲವು ಚಿತ್ರಗಳನ್ನು ಭೂಮಿ ಪಡ್ನೇಕರ್ ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ ಭೂಮಿ, ಗೋಲ್ಡನ್ ಕಲರ್ನ ಶಿಮ್ಮರಿಂಗ್ ಮಿನಿ ಡ್ರೆಸ್ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಆಕರ್ಷಕ ಉಡುಗೆಯ ಕೆಳಭಾಗದಲ್ಲಿ ಮುತ್ತಿನ ಒಡವೆಗಳು ಮತ್ತು ಹಿಂದೆ ತೆಳುವಾದ ಟ್ರೇಲ್ ಜೋಡಿಸಲಾಗಿದ್ದು ಇನ್ನಷ್ಟು ಚಂದಕಾಣಿಸಿದೆ.

ಆನಂತರ, ಭೂಮಿ ವಿಂಟೇಜ್ ಶೈಲಿಯ ಲೆಹೆಂಗಾ ಚೋಲಿ ಹಾಗೂ ಅದಕ್ಕೆ ಕಾಂಬಿನೇಷನ್ ಆಗಿ ಕೆಂಪು ಬಣ್ಣದ ವಿಶಿಷ್ಟವಾದ ನೆಕ್ಲೈನ್, ಬೆಲ್ ಸ್ಲೀವ್ಗಳನ್ನು ಹೊಂದಿದ ಟಾಪ್ ಧರಿಸಿದ್ದಾರೆ. ಚಾಕೊಲೇಟ್ ಬ್ರೌನ್ ಬಣ್ಣದ ವಿಶಾಲವಾದ ಸ್ಕರ್ಟ್, ಆಕರ್ಷಕ ಎಂಬ್ರಾಯ್ಡಿಂಗ್ನಿಂದ ಕೂಡಿದೆ. ಇನ್ನೂ ಇದಕ್ಕೆ ಸ್ಟೇಟ್ಮೆಂಟ್ ನೆಕ್ಪೀಸ್, ಚಿಕ್ಕ ಬಿಂದಿ ಮತ್ತು ಮೆಸ್ಸಿ ಹೇರ್ ಸ್ಟೈಲ್ ಮಾಡಿಕೊಳ್ಳುವುದರ ಮೂಲಕ ತಮ್ಮ ಲುಕ್ ಗೆ ಇನ್ನಷ್ಟು ವಿಂಟೇಜ್ ಮೋಡ್ ಕೊಟ್ಟಿದ್ದಾರೆ.

ಇಷ್ಟೇ ಅಲ್ಲದೆ, ಎರಡು ಆಕರ್ಷಕ ಲೆಹೆಂಗಾಗಳನ್ನು ಧರಿಸಿ ಕ್ಯಾಮೆರಾಗೆ ಖಡಕ್ ಲುಕ್ ನೀಡುವ ಮೂಲಕ ಭೂಮಿ ತಮ್ಮ ಫ್ಯಾಷನ್ ಸೆನ್ಸ್ ಮೆರೆದಿದ್ದಾರೆ. ಇನ್ನೂ ಈ ಪೋಸ್ಟ್ ನ ಕ್ಯಾಪ್ಷನ್ನಲ್ಲಿ ಕ್ರೌನ್, ಸ್ಟಾರ್ ಮತ್ತು ಇತರ ಎಮೋಜಿಗಳೊಂದಿಗೆ ‘ದಿ ರಾಯಲ್ಸ್’ ಎಂಬ ಹ್ಯಾಷ್ಟ್ಯಾಗ್ ಬಳಸಿದ್ದಾರೆ.

ಇನ್ನೂ, ಈ ಚಿತ್ರಗಳು ಚಿತ್ರರಂಗದ ಹಲವು ದಿಗ್ಗಜರ ಗಮನವನ್ನು ಸೆಳೆದಿದ್ದು, ಭೂಮಿಯ ಆಕರ್ಷಕ ಲುಕ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮನ್ನಾ ಭಾಟಿಯಾ, “ಉಫ್ಫ್” ಎಂದು ಬರೆದು ಬೆಂಕಿಯ ಎಮೋಜಿಗಳನ್ನು ಹಾಕಿದ್ದಾರೆ. ನಟಿ ಸಮಂತಾ ರೂತ್ ಪ್ರಭು, “ಅದ್ಭುತ” ಎಂದು ಕಾಮೆಂಟ್ ಮಾಡಿ ರೆಡ್ ಹಾರ್ಟ್ ಎಮೋಜಿಯನ್ನು ಬಳಸಿದ್ದಾರೆ. ರಕುಲ್ ಪ್ರೀತ್ ಸಿಂಗ್ ‘ಬೆಂಕಿ’ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ‘ದಿ ರಾಯಲ್ಸ್ ನಲ್ಲಿ ನಿಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಲೀಸಾ ಮಿಶ್ರಾ, “ಕೆಂಪು ಘಾಗ್ರ” ಎಂದು ಬರೆದು ಹಾರ್ಟ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಇಷ್ಟೇ ಅಲ್ಲದೆ ಅಭಿಮಾನಿಯೊಬ್ಬ, “ವಾಹ್! ವಾಟ್ ಎ ಗೊಂಬೆ” ಎಂದು ಬರೆದರೆ, ಇನ್ನೊಬ್ಬರು “ಸ್ಲೇಯಿಂಗ್” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಇವುಗಳ ಮಧ್ಯೆ ಕೆಲವರು ಭೂಮಿಯ ತುಟಿಗಳಿಗೆ ಫಿಲ್ಲರ್ಗಳನ್ನು ಬಳಸಿದ್ದಾರೆ ಎಂದು ಟೀಕಿಸಿದ್ದಾರೆ.

ಭೂಮಿ ಪಡ್ನೇಕರ್ ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ದಿ ರಾಯಲ್ಸ್ ಸೀರಿಸ್ ನಲ್ಲಿ ಕಾಣಿಸಿಕೊಂಡಾಗಿನಿಂದ ಈ ಟೀಕೆಗಳು ಹೆಚ್ಚಾಗಿವೆ. ತಮ್ಮ ವೃತ್ತಿಜೀವನದ ಆರಂಭದಿಂದಲೂ ಭೂಮಿ ಈ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. ದಿ ರಾಯಲ್ಸ್ ಟ್ರೆಂಡಿಂಗ್ ಆದ ನಂತರ, ಭೂಮಿಯ 2017ರ ಸಂದರ್ಶನವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ಸಂದರ್ಶನದಲ್ಲಿ ಭೂಮಿ, “ಯಾರೋ ನನಗೆ ‘ನಿನ್ನ ತುಟಿಗಳು ತುಂಬಾ ದೊಡ್ಡವು’ ಎಂದು ಹೇಳಿದ್ದರು. ಆದ್ರೆ ಇದು ಯಾವಾಗಿನಿಂದ ಸಮಸ್ಯೆಯಾಯಿತು? ಆಸಕ್ತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಇಂತಹ ತುಟಿಗಳನ್ನು ಪಡೆಯುತ್ತಾರೆ. ಜನರು ವಿಚಿತ್ರವಾದ ಕಾಮೆಂಟ್ ಗಳನ್ನ ಮಾಡ್ತಾ ಇರ್ತಾರೆ. ನಾವು ಯಾರೆಂಬುದನ್ನು ತಿಳಿದುಕೊಂಡರೆ ಸಾಕು, ಇತರರ ಮಾತಿಗೆ ಕಿವಿಕೊಡುವುದು ಬೇಡ” ಎಂದು ಹೇಳಿದ್ದರು.