Archana Kottige: ಸ್ಯಾಂಡಲ್ವುಡ್ ನಟಿ ಅರ್ಚನಾ ಜೊತೆ ಸ್ಟಾರ್ ಕ್ರಿಕೆಟರ್ ನಿಶ್ಚಿತಾರ್ಥ; ಇಲ್ಲಿವೆ ನೋಡಿ ಫೋಟೋಸ್
ಸ್ಯಾಂಡಲ್ವುಡ್ ನಟಿ ಅರ್ಚನಾ ಕೊಟ್ಟಿಗೆ ಸ್ಟಾರ್ ಕ್ರಿಕೆಟರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅರ್ಚನಾ ಕೊಟ್ಟಿಗೆ ಅವರು ಕ್ರಿಕೆಟರ್ ಶರತ್ ಬಿ.ಆರ್ ಅವರನ್ನು ವರಿಸಲಿದ್ದಾರೆ. ಶರತ್ ಬಿ.ಆರ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಕರ್ನಾಟಕದ ರಣಜಿ ತಂಡದಲ್ಲಿ ಮಿಂಚಿರುವ ಶರತ್ ಐಪಿಎಲ್ನಲ್ಲಿ ಕೂಡ ಆಡಿದ್ದಾರೆ.



ಸ್ಯಾಂಡಲ್ವುಡ್ ನಟಿ ಅರ್ಚನಾ ಕೊಟ್ಟಿಗೆ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದಲ್ಲಿ ಚಿಕ್ಕ ಪಾತ್ರದ ಮೂಲಕ ಅರ್ಚನಾ ಕೊಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದ್ದರು. ಇದೀಗ ಇವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹೌದು ಸ್ಟಾರ್ ಕ್ರಿಕೆಟರ್ ಜೊತೆಗೆ ನಟಿ ಅರ್ಚನಾ ಕೊಟ್ಟಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಅರ್ಚನಾ ಕೊಟ್ಟಿಗೆ ಅವರು ಕ್ರಿಕೆಟರ್ ಶರತ್ ಬಿ.ಆರ್ ಅವರನ್ನು ವರಿಸಲಿದ್ದಾರೆ. ಶರತ್ ಬಿ.ಆರ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಕರ್ನಾಟಕದ ರಣಜಿ ತಂಡದಲ್ಲಿ ಮಿಂಚಿರುವ ಶರತ್ ಐಪಿಎಲ್ನಲ್ಲಿ ಕೂಡ ಆಡಿದ್ದಾರೆ.

ಶರತ್ ಅವರು ಗುಜರಾತ್ ಟೈಟನ್ಸ್ ತಂಡದ ಪರವಾಗಿ ಕಣಕ್ಕಿಳಿದಿದ್ದಾರೆ. 2018 ರಲ್ಲಿ ಪದಾರ್ಪಣೆ ಮಾಡಿದ ನಂತರ ಶರತ್ ಬಿ.ಆರ್ ಕರ್ನಾಟಕದ ತಂಡದಲ್ಲಿ ಆಡುತ್ತಿದ್ದಾರೆ. ಶರತ್ ಬಲಗೈ ಬ್ಯಾಟ್ಸ್ಮನ್ ಆಗಿದ್ದು, ಭಾರತೀಯ ದೇಶೀಯ ಕ್ರಿಕೆಟ್ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.

ಅರ್ಚನಾ ಹಾಗೂ ಶರತ್ ಅವರದ್ದು ಬಹುಕಾಲದ ಪ್ರೀತಿ ಎಂದು ಹೇಳಲಾಗಿದೆ. ಶರತ್ ಹಾಗೂ ಅರ್ಚನಾ ಕೊಟ್ಟಿಗೆ ಇಬ್ಬರು ಓದಿದ್ದು ಒಂದೇ ಕಾಲೇಜಿನಲ್ಲಿ. ಅರ್ಚನಾ ಅವರ ಸೀನಿಯರ್ ಶರತ್ ಆಗಿದ್ದರು. ಎಂಟು ವರ್ಷಗಳ ಕಾಲ ಪ್ರೀತಿಸುತ್ತಿದ್ದ ಈ ಜೋಡಿ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಏಪ್ರಿಲ್ 23 ರಂದು ಇವರ ವಿವಾಹ ಸಮಾರಂಭ ನಡೆಯಲಿದೆ ಎಂದು ತಿಳಿದು ಬಂದಿದೆ.

ಅರ್ಚನಾ ಕೂಡಾ ಚಿತ್ರರಂಗದಲ್ಲಿ ಒಳ್ಳೆಯ ಬೆಳವಣಿಗೆ ಕಂಡಿದ್ದಾರೆ. ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳಿಯತ್ತೆ ಕಾಲ” ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆಗೆ ನಾಯಕಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಒಂದು ಅಲಂಕಾರ ವಿದ್ಯಾರ್ಥಿ ಹಾಗೂ ಶಬರಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಬಿಡುಗಡೆಗೊಂಡ ಹೊಂದಿಸಿ ಬರೆಯಿರಿ ಚಿತ್ರದಲ್ಲಿಯೂ ನಟಿಸಿದ್ದಾರೆ. ಇದೀಗ ಕ್ರಿಕೆಟಿಗನ ಕೈ ಹಿಡಿಯಲಿದ್ದಾರೆ.