Tourist Attractions In Kashmir: ಸದಾ ಹೈಅಲರ್ಟ್ ಘೋಷಿಸಿರುವ ಕಾಶ್ಮೀರದ ಐದು ಪ್ರವಾಸಿ ತಾಣಗಳ ಬಗ್ಗೆ ನಿಮಗೆಷ್ಟು ಗೊತ್ತು?
ಉತ್ತರ ಭಾರತದ ಅತ್ಯಂತ ಸುಂದರವಾದ ಪ್ರದೇಶದಲ್ಲಿ ಕಾಶ್ಮೀರ ಕೂಡ ಒಂದಾಗಿದೆ. ಭೂದೃಶ್ಯಗಳು, ಹಚ್ಚ ಹಸಿರಿನ ಕಣಿವೆಗಳು, ಕಣ್ಮನ ಸೆಳೆಯುವ ಸರೋವರದಿಂದ ಕಾಶ್ಮೀರದ ಸುತ್ತ ಮುತ್ತಲಿನ ಪ್ರದೇಶವನ್ನು ಭೂಮಿಯ ಮೇಲಿನ ಸ್ವರ್ಗ ಎಂದು ಕರೆಯಲಾಗುತ್ತದೆ. ಆದರೆ ಇತ್ತೀಚಿನ ಭಯೋತ್ಪಾದಕ ದಾಳಿಯಿಂದ ಭಯಭೀತಿಯ ವಾತಾವರಣ ಸೃಷ್ಟಿಯಾಗಿದೆ. ಇದರ ಹೊರತಾಗಿಯೂ ಕಾಶ್ಮೀರದ 5 ಪ್ರವಾಸಿ ಸ್ಥಳದಲ್ಲಿ ಸದಾ ಕಟ್ಟೆಚ್ಚರ ಕ್ರಮ ಕೈಗೊಳ್ಳಲಾಗುತ್ತದೆ.



ಗುಲ್ಮಾರ್ಗ್: ಇದು ಕಾಶ್ಮೀರದ ಗಡಿ ರೇಖೆಗೆ ಬಹಳ ಹತ್ತಿರವಾಗಿದೆ. ಗುಲ್ಮಾರ್ಗ್ ಭಾರತದ ಅತ್ಯಂತ ಪ್ರಸಿದ್ಧ ತಾಣಗಳಲ್ಲಿ ಒಂದಾಗಿದೆ. ನಿತ್ಯಹರಿದ್ವರ್ಣ ಕಾಡುಗಳು, ಕಣಿವೆಗಳಿಂದ ಆವೃತವಾಗಿದ್ದ ಗುಲ್ಮಾರ್ಗ್ ಸ್ಥಳವು ಸಮುದ್ರ ಮಟ್ಟದಿಂದ 2,730 ಮೀಟರ್ ಎತ್ತರದಲ್ಲಿದೆ. ಕಣಿವೆಯ ಸಹಜ ಸೌಂದರ್ಯ ಹೊಂದಿರುವ ಗುಲ್ಮಾರ್ಗ್ನಲ್ಲಿ ಸದಾ ಕಟ್ಟೆಚ್ಚರ ವಹಿಸಲಾಗುತ್ತದೆ.

ಸೋನಾಮಾರ್ಗ್: ಶ್ರೀನಗರದ ಲೇಹ್ ಹೆದ್ದಾರಿಯಲ್ಲಿ ಸೋನಾಮಾರ್ಗ್ ಸ್ಥಳವಿದೆ. ಹಿಮದಿಂದ ಆವೃತವಾದ ಪ್ರದೇಶ, ಭವ್ಯವಾದ ಹಿಮನದಿ ಮತ್ತು ಸರೋವರ ಸೋನಾಮಾರ್ಗ್ ಸೌಂದರ್ಯಕ್ಕೆ ಸಾಕ್ಷಿಯಾಗಿದೆ ಎನ್ನಬಹುದು. ಸೋನಾ ಮಾರ್ಗ್ ಸ್ಥಳವು ಸಮುದ್ರ ಮಟ್ಟದಿಂದ 9,186 ಅಡಿ ಎತ್ತರದಲ್ಲಿ ನೆಲೆಗೊಂಡಿರುವ ಥಾಜಿವಾಸ್ ಹಿಮನದಿ, ಪ್ರವಾಸಿಗರನ್ನು ಆಕರ್ಷಿಸುವಂತಿದೆ. ಇಲ್ಲಿಗೆ ಪ್ರವಾಸಕ್ಕೆ ಬರುವವರ ಸಂಖ್ಯೆ ಹೆಚ್ಚಾದ ಕಾರಣ ಬೇಕಾದ ಭದ್ರತಾ ವ್ಯವಸ್ಥೆ ಸಹ ಮಾಡಲಾಗಿದೆ. ಇಲ್ಲಿ ಭದ್ರತಾ ತಪಾಸಣೆ ಹಾಗೂ ಸೇನಾ ಬೆಂಗಾವಲಿನ ಪಡೆಯ ವಿಶೇಷ ನಿಯೋಜನೆ ಈ ಭಾಗವನ್ನು ರಕ್ಷಣೆ ಮಾಡುತ್ತಲೇ ಇದೆ.

ಕುಪ್ವಾರ: ಕಾಶ್ಮೀರದ ಗಡಿ ಭಾಗದಲ್ಲಿ ಕುಪ್ವಾರ ಸ್ಥಳವಿದೆ. ಗಿರಿಶಿಖರಗಳು ಈ ಭಾಗದಲ್ಲಿ ಹೇರಳವಾಗಿದೆ. ಇಲ್ಲಿ ಪಾಕಿ ಸ್ತಾನದವರು ಆಗಾಗ ಕಳ್ಳ ಮಾರ್ಗದ ಮೂಲಕ ಭಾರತಕ್ಕೆ ನುಸುಳುವ ಪ್ರಮಾಣ ಅಧಿಕ ಇದೆ. ಹೀಗಾಗಿ ಇದನ್ನು ಹೆಚ್ಚಿನ ಅಪಾಯದ ಸ್ಥಳವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಪ್ರವಾಸಿ ಸ್ಥಳದಲ್ಲಿ ಸಾಕಷ್ಟು ಭದ್ರತೆ ಕೈಗೊಳ್ಳಲಾಗಿದೆ.

ಪುಲ್ವಾಮ: ಅಹರ್ಬಲ್ ಜಲಪಾತ, ಶಿಕರ್ಗಢ, ಪೇಯರ್ ದೇವಾಲಯ, ಅವಂತೀಶ್ವರ ದೇವಾಲಯ, ಟಾರ್ಸರ್ ಮತ್ತು ಮಾರ್ಸರ್ ಸರೋವರಗಳು ಪುಲ್ವಾಮದ ಪ್ರಮುಖ ಪ್ರವಾಸಿ ಸ್ಥಳವಾಗಿದೆ. ಪುಲ್ವಾಮದಲ್ಲಿ ಪ್ರಮುಖ ಭಯೋತ್ಪಾದಕ ದಾಳಿ ಆದ ಬಳಿಕ ಪುಲ್ವಾಮವನ್ನು ಉಗ್ರಗಾಮಿ ಚಟುವಟಿಕೆ ತಾಣವೆಂದೇ ಹೇಳಲಾಗುತ್ತದೆ. ಈ ಸ್ಥಳದಲ್ಲಿ ಭದ್ರತೆ ಬಿಗುವಾಗಿದ್ದು ಇಲ್ಲಿ ಪ್ರವಾಸಿಗರ ಪ್ರವೇಶವನ್ನು ಹೆಚ್ಚಾಗಿ ನಿರ್ಬಂಧಿಸಲಾಗಿದೆ.

ಪಹಲ್ಗಾಮ್: ಇದು ಅಮರನಾಥ ಯಾತ್ರೆಗೆ ಮೂಲ ಕೇಂದ್ರ ಬಿಂದು ಸ್ಥಳವಾಗಿದೆ. ಇಲ್ಲಿಂದ ಅಮರನಾಥ ಯಾತ್ರೆ ಕೈಗೊಳ್ಳುವವರು ಇದ್ದಾರೆ. ಇಲ್ಲಿ ಭದ್ರತೆ ಹೆಚ್ಚಾಗಿದ್ದರೂ ಇತ್ತೀಚೆಗಷ್ಟೇ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆದಿದೆ. ಈ ದಾಳಿ ಬಳಿಕ ಭದ್ರತಾ ನಿಯಮ ತೀವ್ರಗೊಳಿಸಲಾಗುತ್ತಿದೆ. ಇಲ್ಲಿ ಭದ್ರತೆ ಪಡೆಯನ್ನು ನೇಮಿಸಲಾಗಿದೆ.