ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LA 2028 Olympics: 2028ರ ಒಲಿಂಪಿಕ್ಸ್‌ ಕ್ರಿಕೆಟ್‌ ಪಂದ್ಯಗಳ ದಿನಾಂಕ ನಿಗದಿ

Cricket at LA Olympics: ಟಿ20 ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ 6 ತಂಡಗಳಿಗಷ್ಟೇ ಸ್ಪರ್ಧಿಸುವ ಅವಕಾಶವಿದೆ. ಆದರೆ ಅರ್ಹತೆ ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಲಾಗುವುದು. ಅಮೆರಿಕ ಆತಿಥೇಯ ರಾಷ್ಟ್ರವಾದ ಕಾರಣ ನೇರ ಪ್ರವೇಶ ಪಡೆಯಬಹುದು. ಆದ್ದರಿಂದ ಅರ್ಹತೆ ಪಡೆಯಲು 5 ರಾಷ್ಟ್ರಗಳಷ್ಟೇ ಉಳಿದಂತಾಗುತ್ತದೆ.

2028ರ ಒಲಿಂಪಿಕ್ಸ್‌ ಕ್ರಿಕೆಟ್‌ ಪಂದ್ಯಗಳ ದಿನಾಂಕ ನಿಗದಿ

Profile Abhilash BC Jul 15, 2025 1:29 PM

ನವದೆಹಲಿ: ಲಾಸ್‌ ಏಂಜಲೀಸ್‌ನಲ್ಲಿ(LA28 Games) ನಡೆಯಲಿರುವ 2028ರ ಒಲಿಂಪಿಕ್ಸ್‌(LA 2028 Olympics) ಪಂದ್ಯಾವಳಿಯಲ್ಲಿ ಕ್ರಿಕೆಟಿಗೂ ಬಾಗಿಲು(Cricket at LA Olympics) ತೆರೆದಿರುವುದು ಈಗಾಗಲೇ ಸುದ್ದಿಯಾಗಿದೆ. ಈ ಪಂದ್ಯಗಳನ್ನು ಸೌತ್‌ ಕ್ಯಾಲಿಫೋರ್ನಿಯಾದ ಪೊಮೋನಾ ನಗರದಲ್ಲಿ ಆಡಲಾಗುವುದು ಎಂದು ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ (ಐಒಸಿ) ದೃಢಪಡಿಸಿದೆ. ಇದೀಗ ಪಂದ್ಯಗಳ ದಿನಾಂಕ ಪ್ರಕಟಗೊಂಡಿದೆ.

ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ ನಡೆಯುತ್ತಿರುವ ಈ ಕ್ರಿಕೆಟ್‌ ಪಂದ್ಯಾವಳಿ 2028 ರ ಜುಲೈ 12 ರಂದು ಪ್ರಾರಂಭವಾಗಲಿದ್ದು, ಪದಕ ಪಂದ್ಯಗಳು ತಿಂಗಳ 20 ಮತ್ತು 29 ರಂದು ನಡೆಯಲಿವೆ ಎಂದು ತಿಳಿದುಬಂದಿದೆ. ಲಾಸ್‌ ಏಂಜಲೀಸ್‌ನಿಂದ 48 ಕಿ.ಮೀ. ದೂರದಲ್ಲಿದೆ. ಇಲ್ಲಿನ ಫೈರ್‌ಗ್ರೌಂಡ್ಸ್‌ ಅಥವಾ ಫೈರ್‌ಪ್ಲೆಕ್ಸ್‌ ಎಂದು ಕರೆಯಲ್ಪಡುವ ಮೈದಾನದಲ್ಲಿ ಸ್ಪರ್ಧೆ ಏರ್ಪಡಲಿದೆ.

ಒಲಿಂಪಿಕ್ಸ್‌ ಸಂಘಟನಾ ಸಮಿತಿಯು ಬಿಡುಗಡೆ ಮಾಡಿದ ವೇಳಾಪಟ್ಟಿಯ ಪ್ರಕಾರ, ಹೆಚ್ಚಿನ ಪಂದ್ಯಗಳು ಡಬಲ್ ಹೆಡರ್‌ಗಳು ಇರುತ್ತವೆ, ಆದರೂ ಜುಲೈ 14 ಮತ್ತು 21 ಕ್ಕೆ ಯಾವುದೇ ಪಂದ್ಯಗಳನ್ನು ನಿಗದಿಪಡಿಸಲಾಗಿಲ್ಲ. ಪದಕ ಪಂದ್ಯಗಳನ್ನು ಜುಲೈ 20 (ಮಹಿಳಾ) ಮತ್ತು ಜುಲೈ 29 (ಪುರುಷ) ರಂದು ನಿಗದಿಪಡಿಸಲಾಗಿದೆ. ಪ್ರತಿಯೊಂದು ತಂಡವು 15 ಸದಸ್ಯರ ತಂಡವನ್ನು ಒಳಗೊಂಡಿರುತ್ತದೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಪಾಲಿನ ಖುಷಿಯ ಸಂಗತಿ. ಕ್ರಿಕೆಟ್‌ ಒಳಗೊಂಡಂತೆ 5 ನೂತನ ಕ್ರೀಡೆಗಳನ್ನು ಲಾಸ್‌ ಏಂಜಲೀಸ್‌ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ. ಕ್ರಿಕೆಟ್‌ ಟಿ20 ಮಾದರಿಯಲ್ಲಿ ನಡೆಯಲಿದೆ.

ಟಿ20 ಮಾದರಿಯಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ 6 ತಂಡಗಳಿಗಷ್ಟೇ ಸ್ಪರ್ಧಿಸುವ ಅವಕಾಶವಿದೆ. ಆದರೆ ಅರ್ಹತೆ ಪಡೆಯುವುದು ಹೇಗೆ ಎಂಬುದನ್ನು ಇನ್ನಷ್ಟೇ ನಿರ್ಧರಿಸಲಾಗುವುದು. ಅಮೆರಿಕ ಆತಿಥೇಯ ರಾಷ್ಟ್ರವಾದ ಕಾರಣ ನೇರ ಪ್ರವೇಶ ಪಡೆಯಬಹುದು. ಆದ್ದರಿಂದ ಅರ್ಹತೆ ಪಡೆಯಲು 5 ರಾಷ್ಟ್ರಗಳಷ್ಟೇ ಉಳಿದಂತಾಗುತ್ತದೆ.

ಒಲಿಂಪಿಕ್ಸ್‌ನಲ್ಲಿ ಮೊದಲ ಸಲ ಕ್ರಿಕೆಟ್‌ ಆಡಿದ್ದು 1900ರಲ್ಲಿ. ಅಂದಿನ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 4 ತಂಡಗಳು ಆಡಬೇಕಿತ್ತು. ಗ್ರೇಟ್‌ ಬ್ರಿಟನ್‌, ಫ್ರಾನ್ಸ್‌, ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌. ಆದರೆ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ ಹಿಂದೆ ಸರಿದ ಕಾರಣ ಕೊನೆಗೆ ಗ್ರೇಟ್‌ ಬ್ರಿಟನ್‌ ಮತ್ತು ಫ್ರಾನ್ಸ್‌ ನಡುವೆ ಟೆಸ್ಟ್‌ ಮಾದರಿಯಲ್ಲಿ 2 ದಿನಗಳ ಒಂದು ಪಂದ್ಯವನ್ನು ಆಡಲಾಯಿತು. ಇದನ್ನು ಗ್ರೇಟ್‌ ಬ್ರಿಟನ್‌ 158 ರನ್ನುಗಳಿಂದ ಗೆದ್ದು ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿತ್ತು.