IPL 2025: ಐಪಿಎಲ್‌ನಿಂದ ಹೊರಬೀಳುವ ಆತಂಕದಲ್ಲಿ ಫರ್ಗ್ಯುಸನ್
Lockie Ferguson: ಗಾಯದ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್, ‘ಫರ್ಗ್ಯುಸನ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟ. ಈ ಬಾರಿ ಅವರು ಆಡುವ ಸಾಧ್ಯತೆ ಕಡಿಮೆ’ ಎಂದು ಹೇಳಿದ್ದಾರೆ. ಹೀಗಾಗಿ ಫರ್ಗ್ಯುಸನ್ ಐಪಿಎಲ್‌ನಿಂದ ಹೊರಬೀಳುವುದು ಖಚಿತವಾಗಿದೆ. ಫರ್ಗ್ಯುಸನ್ ಈ ಬಾರಿಯ ಐಪಿಎಲ್‌ನಲ್ಲಿ 5 ಪಂದ್ಯಗಳನ್ನಾಡಿ 5 ವಿಕೆಟ್ ಕಿತ್ತಿದ್ದರು.


ಮುಂಬಯಿ: ಪಂಜಾಬ್ ಕಿಂಗ್ಸ್(Punjab Kings) ತಂಡದ, ನ್ಯೂಜಿಲ್ಯಾಂಡ್ ಆಲ್‌ರೌಂಡರ್ ಲಾಕಿ ಫರ್ಗ್ಯುಸನ್(Lockie Ferguson) ಗಾಯಗೊಂಡು ಐಪಿಎಲ್(IPL 2025) ಟೂರ್ನಿಯಿಂದ ಬಹುತೇಕ ಹೊರಬಿದ್ದಿದ್ದಾರೆ. ಕಳೆದ ವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಫರ್ಗ್ಯುಸನ್ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಎರಡು ಎಸೆತ ಬೌಲಿಂಗ್ ಮಾಡಿದ ನಂತರ ಮೈದಾನ ತೊರೆದಿದ್ದರು. ಅವರಿಗೆ ಗಂಭೀರ ಸ್ವರೂಪದ ಗಾಯವಾಗಿದ್ದು ವಿಶ್ರಾಂತಿ ಅಗತ್ಯವಿರುವ ಕಾರಣ ಈ ಆವೃತ್ತಿಯಿಂದ ಹೊರಗುಳಿಯಲಿದ್ದಾರೆ.
ಗಾಯದ ಬಗ್ಗೆ ಮಾಹಿತಿ ನೀಡಿರುವ ಪಂಜಾಬ್ ಬೌಲಿಂಗ್ ಕೋಚ್ ಜೇಮ್ಸ್ ಹೋಪ್ಸ್, ‘ಫರ್ಗ್ಯುಸನ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂದು ಹೇಳುವುದು ಕಷ್ಟ. ಈ ಬಾರಿ ಅವರು ಆಡುವ ಸಾಧ್ಯತೆ ಕಡಿಮೆ’ ಎಂದು ಹೇಳಿದ್ದಾರೆ. ಹೀಗಾಗಿ ಫರ್ಗ್ಯುಸನ್ ಐಪಿಎಲ್‌ನಿಂದ ಹೊರಬೀಳುವುದು ಖಚಿತವಾಗಿದೆ. ಫರ್ಗ್ಯುಸನ್ ಈ ಬಾರಿಯ ಐಪಿಎಲ್‌ನಲ್ಲಿ 5 ಪಂದ್ಯಗಳನ್ನಾಡಿ 5 ವಿಕೆಟ್ ಕಿತ್ತಿದ್ದರು. ಇದಕ್ಕೂ ಮುನ್ನ ನ್ಯೂಜಿಲ್ಯಾಂಡ್‌ನವರೇ ಆದ, ಗುಜರಾತ್ ತಂಡದ ಗ್ಲೆನ್ ಫಿಲಿಫ್ಸ್ ತಡೆ ಸಂದು ಗಾಯದಿಂದ ಟೂರ್ನಿಯಿಂದ ಹೊರಬಿದ್ದರು.
ಇದನ್ನೂ ಓದಿ IPL 2025: ಐಪಿಎಲ್‌ನಲ್ಲಿ ವಿಶೇಷ ದಾಖಲೆ ಬರೆದ ಧೋನಿ-ಜಡೇಜಾ ಜೋಡಿ
ಹೈದರಾಬಾದ್‌ನ ಸ್ಪಿನ್ನರ್ ಆಡಂ ಜಂಪಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಗಾಯಕ್ಕೆ ತುತ್ತಾಗಿ ಅರ್ಧದಲ್ಲೇ ಐಪಿಎಲ್ ಮೊಟಕುಗೊಳಿಸಿದ್ದಾರೆ. ಇವರ ಸ್ಥಾನಕ್ಕೆ ಬಲದಿ ಆಟಗಾರರ ಆಯ್ಕೆ ಕೂಡ ಮಾಡಲಾಗಿದೆ. ಆಡಂ ಜಂಪಾ ಬದಲಿಗೆ ಕರ್ನಾಟಕದ ಬ್ಯಾಟರ್ ಆರ್. ಸ್ಮರಣ್ ಸನ್‌ರೈಸರ್ಸ್ ತಂಡಕ್ಕೆ ಸೇರ್ಪಡೆಯಾದರೆ, ಋತುರಾಜ್ ಗಾಯಕ್ವಾಡ್ ಸ್ಥಾನಕ್ಕೆ ಮುಂಬೈನ 17 ವರ್ಷದ ಬ್ಯಾಟರ್ ಆಯುಷ್ ಮಹಾತ್ರೆ ಸಿಎಸ್ಕೆ ತಂಡ ಸೇರಿದ್ದಾರೆ.
ಇಂದು ಪಂಜಾಬ್‌ಗೆ ಕೆಕೆಆರ್ ಸವಾಲು
ಮಂಗಳವಾರ(ಎ.15)ದಂದು ನಡೆಯುವ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡ ಕೆಕೆಆರ್ ತಂಡದ ಸವಾಲು ಎದುರಿಸಲಿದೆ. ಅಂಕಪಟ್ಟಿಯಲ್ಲಿ ಕೋಲ್ಕತಾ ನೈಟ್ ರೇಡರ್ಸ್ 5ನೇ ಸ್ಥಾನದಲ್ಲಿದ್ದರೆ, ಪಂಜಾಬ್ ಕಿಂಗ್ಸ್ 6ನೇ ಸ್ಥಾನಿಯಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಪಂಜಾಬ್ ಬಲಿಷ್ಠವಾಗಿದ್ದರೂ ಬೌಲಿಂಗ್‌ನಲ್ಲಿ ಅಷ್ಟಾಗಿ ಬಲಿಷ್ಠವಾಗಿಲ್ಲ. ಕೆಕೆಆರ್ ಎಲ್ಲ ವಿಭಾಗದಲ್ಲಿಯೂ ಸಮರ್ಥವಾಗಿದೆ.