ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ATM Transaction Charges: ಗ್ರಾಹಕರೇ ಅಲರ್ಟ್‌...ಅಲರ್ಟ್‌! ಮೇ 1ರಿಂದ ATM ವಿತ್ ಡ್ರಾ ಶುಲ್ಕ ಹೆಚ್ಚಳ

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಮೇ 1ರಿಂದ ಜಾರಿಯಾಗುವಂತೆ ಪರಿಷ್ಕೃತ ಎಟಿಎಂ ವಹಿವಾಟಿನ ಉಚಿತ ಮಿತಿಗಳು (ATM transaction charges) ಮತ್ತು ಶುಲ್ಕಗಳನ್ನು ಪರಿಚಯಿಸಿದೆ. ಗ್ರಾಹಕರು ಮೆಟ್ರೋ ಪ್ರದೇಶಗಳಲ್ಲಿ ಮೂರು ಮತ್ತು ಇತರೆಡೆ ಐದು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯಬಹುದು. ಇವುಗಳನ್ನು ಮೀರಿ ಎಟಿಎಂ ಬಳಸಿದರೆ 23 ರೂ. ಶುಲ್ಕ ಅನ್ವಯವಾಗುತ್ತದೆ.

ಮೇ 1ರಿಂದ ATM ವಿತ್ ಡ್ರಾ ಶುಲ್ಕ ಹೆಚ್ಚಳ

ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ (digital banking) ನತ್ತ ಇನ್ನೂ ನೀವು ಹೋಗಿಲ್ಲವೇ? ಹೆಚ್ಚಾಗಿ ಎಟಿಎಂ ಬಳಸುತ್ತಿದ್ದೀರಾ ? ಹಾಗಿದ್ದರೆ ಭಾರತೀಯ ರಿಸರ್ವ್ ಬ್ಯಾಂಕ್ ( Reserve Bank of India ) ಹೊರಡಿಸಿರುವ ಈ ಆದೇಶ ನಿಮಗೆ ಶಾಕ್ ನೀಡಬಹುದು. ಮೇ 1ರಿಂದ ಜಾರಿಯಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ (ATM) ವಹಿವಾಟಿನ ( ATM transaction charges ) ಉಚಿತ ಮಿತಿ ಮತ್ತು ಶುಲ್ಕಗಳಲ್ಲಿ ಬದಲಾವಣೆ ಮಾಡಿ ಆದೇಶಿಸಿದೆ. ಈಗಲೂ ಹೆಚ್ಚಾಗಿ ನೀವು ಎಟಿಎಂ ಮೂಲಕ ವಹಿವಾಟು ನಡೆಸುತ್ತಿದ್ದರೆ ಇನ್ನು ಮುಂದೆ ದುಬಾರಿ ಶುಲ್ಕ ನಿಮ್ಮ ಖಾತೆಯಿಂದ ಕಡಿತಗೊಳ್ಳಬಹುದು.

ಭಾರತೀಯ ರಿಸರ್ವ್ ಬ್ಯಾಂಕ್ ಮೇ 1ರಿಂದ ಜಾರಿಯಾಗುವಂತೆ ಪರಿಷ್ಕೃತ ಎಟಿಎಂ ವಹಿವಾಟಿನ ಉಚಿತ ಮಿತಿಗಳು ಮತ್ತು ಶುಲ್ಕಗಳನ್ನು ಪರಿಚಯಿಸಿದೆ. ಗ್ರಾಹಕರು ಮೆಟ್ರೋ ಪ್ರದೇಶಗಳಲ್ಲಿ ಮೂರು ಮತ್ತು ಇತರೆಡೆ ಐದು ಉಚಿತ ಎಟಿಎಂ ವಹಿವಾಟುಗಳನ್ನು ಪಡೆಯಬಹುದು. ಇವುಗಳನ್ನು ಮೀರಿ ಎಟಿಎಂ ಬಳಸಿದರೆ 23 ರೂ. ಶುಲ್ಕ ಅನ್ವಯಾವಾಗುತ್ತದೆ. ಹೆಚ್ ಡಿಎಫ್ ಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗಳು ಗ್ರಾಹಕರಿಗೆ ಎಟಿಎಂ ಬಳಕೆಯನ್ನು ಕಡಿಮೆ ಮಾಡಲು ಪ್ರೇರೇಪಿಸುತ್ತಿವೆ. ಇದಕ್ಕಾಗಿ ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ನವೀಕರಿಸಿದ ಶುಲ್ಕಗಳ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುತ್ತಿವೆ.

ಮೇ 1 ರಿಂದ ಭಾರತೀಯ ರಿಸರ್ವ್ ಬ್ಯಾಂಕ್ ನ ಈ ಹೊಸ ಶುಲ್ಕ ನಿಯಮ ಜಾರಿಗೆ ಬರಲಿದೆ. ದೇಶಾದ್ಯಂತ ಉಚಿತ ವಹಿವಾಟು ಮಿತಿಗಳು, ಹೆಚ್ಚುವರಿ ವಹಿವಾಟುಗಳಿಗೆ ಶುಲ್ಕ ಮತ್ತು ಇಂಟರ್‌ಚೇಂಜ್ ಶುಲ್ಕಗಳಲ್ಲಿ ಈ ಬದಲಾವಣೆಗಳನ್ನು ತರಲಾಗಿದೆ. ಆರ್ ಬಿಐನ ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ಗ್ರಾಹಕರು ಪ್ರತಿ ತಿಂಗಳು ನಿಗದಿತ ಸಂಖ್ಯೆಯ ಉಚಿತ ಎಟಿಎಂ ವಹಿವಾಟು ನಡೆಸಬಹುದು. ಮಹಾನಗರ ಪ್ರದೇಶಗಳಲ್ಲಿ ಮೂರು ಮತ್ತು ಇತರ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟು ಸಾಧ್ಯ. ಇದು ಹಣಕಾಸು ಮತ್ತು ಹಣಕಾಸೇತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ.

ಮಾಸಿಕ ಉಚಿತ ವಹಿವಾಟು ಮೀರಿದ ಬಳಿಕ ಪ್ರತಿ ವಹಿವಾಟಿಗೆ 23 ರೂ. ಶುಲ್ಕ ವಿಧಿಸಲಾಗುತ್ತದೆ. ಇದು ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳಿಗೆ ಅನ್ವಯಿಸುತ್ತವೆ. ಹೆಚ್ ಡಿಎಫ್ ಸಿ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಹಲವಾರು ಪ್ರಮುಖ ಬ್ಯಾಂಕುಗಳು ಈ ಬಗ್ಗೆ ಈಗಾಗಲೇ ಗ್ರಾಹಕರಿಗೆ ತಿಳಿಸಲು ಪ್ರಾರಂಭಿಸಿವೆ.

ಹೆಚ್‌ಡಿಎಫ್‌ಸಿ ಬ್ಯಾಂಕ್ ಮೇ 1ರಿಂದ ಜಾರಿಗೆ ಬರುವಂತೆ ಉಚಿತ ಮಿತಿಗಳನ್ನು ಮೀರಿದ ಎಟಿಎಂ ವಹಿವಾಟು ಶುಲ್ಕ ದರವನ್ನು 21 ರೂ. ನಿಂದ 23 ರೂ. ಗೆ ಪರಿಷ್ಕರಿಸುವುದಾಗಿ ತಿಳಿಸಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಎಟಿಎಂಗಳಲ್ಲಿ, ಉಚಿತ ಮಿತಿಯನ್ನು ಮೀರಿದ ನಗದು ಹಿಂಪಡೆಯುವಿಕೆಗೆ ಮಾತ್ರ ಶುಲ್ಕ ವಿಧಿಸುತ್ತಿದ್ದು, ಹಣಕಾಸೇತರ ವಹಿವಾಟುಗಳು ಉಚಿತವಾಗಿರುತ್ತವೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗಳ ಎಟಿಎಂಗಳಲ್ಲಿ ಉಚಿತ ಮಿತಿಗಳನ್ನು ಮೀರಿದ ಪ್ರತಿ ವಹಿವಾಟುಗಳಿಗೆ 23 ರೂ. ಮತ್ತು ಹಣಕಾಸೇತರ ವಹಿವಾಟಿಗೆ ಜಿಎಸ್ಟಿ ಹೊರತು 11 ರೂ. ಶುಲ್ಕ ವಿಧಿಸುವುದಾಗಿ ಹೇಳಿದ್ದು, ಇದು ಮೇ 9ರಿಂದ ಜಾರಿಯಾಗುತ್ತದೆ ಎಂದು ತಿಳಿಸಿದೆ. ಇಂಡಸ್‌ಇಂಡ್ ಬ್ಯಾಂಕ್ ಮೇ 1ರಿಂದ ಜಾರಿಗೆ ಬರುವಂತೆ ಉಚಿತ ಮಿತಿ ಮೀರಿ ಬೇರೆ ಬ್ಯಾಂಕ್‌ಗಳ ಎಟಿಎಂ ಬಳಕೆಗೆ ಪ್ರತಿ ವಹಿವಾಟಿಗೆ 23 ರೂ. ಶುಲ್ಕ ವಿಧಿಸುವುದಾಗಿ ತಿಳಿಸಿದೆ. ಡಿಜಿಟಲ್ ಬ್ಯಾಂಕಿಂಗ್ ಅನ್ನು ಉತ್ತೇಜಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂ ಬಳಕೆಯ ಮೇಲಿನ ಶುಲ್ಕವನ್ನು ಹೆಚ್ಚಿಸಿದೆ.

ಇದನ್ನೂ ಓದಿ: UPSC Results 2024: ಮಹಾರಾಷ್ಟ್ರದ ಮೊದಲ ಮುಸ್ಲಿಂ ಮಹಿಳಾ IAS ಅಧಿಕಾರಿಯಾಗಲಿರುವ ಆಟೋ ಚಾಲಕನ ಮಗಳು

ಭಾರತೀಯ ರಿಸರ್ವ್ ಬ್ಯಾಂಕ್ಅಂಕಿಅಂಶಗಳ ಪ್ರಕಾರ ಎಟಿಎಂ ಬಳಕೆಯಲ್ಲಿ 2023ರ ಜನವರಿಯಲ್ಲಿ 57 ಕೋಟಿ ರೂ. ಗೂ ಹೆಚ್ಚಿದ್ದು, ಇದು 2024ರ ಜನವರಿಯಲ್ಲಿ 52.72 ಕೋಟಿ ರೂ. ಗೆ ಹಾಗೂ 2025ರ ಜನವರಿ ವೇಳೆಗೆ 48.83 ಕೋಟಿ ರೂ. ಗೆ ಇಳಿಕೆಯಾಗಿದೆ. 2024ರ ಹಣಕಾಸು ವರ್ಷದಲ್ಲಿ ಸರಾಸರಿ ಮಾಸಿಕ ನಗದು ಹಿಂಪಡೆಯುವಿಕೆ ಎಟಿಎಂಗಳಲ್ಲಿ 1.43 ಕೋಟಿ ರೂ. ಗಳಾಗಿವೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ

ಹಣಕಾಸು ಸಚಿವಾಲಯವು 11 ರಾಜ್ಯಗಳಲ್ಲಿ 'ಒಂದು ರಾಜ್ಯ ಒಂದು ಆರ್ ಆರ್ ಬಿ (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) ಅಭಿಯಾನವನ್ನು ಮೇ 1 ರಿಂದ ಪ್ರಾರಂಭಿಸಲಿದೆ. ಇದರ ಅಡಿಯಲ್ಲಿ 11 ರಾಜ್ಯಗಳಾದ್ಯಂತ 15 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳನ್ನು ಒಂದಾಗಿ ವಿಲೀನಗೊಳಿಸಲಾಗುತ್ತದೆ. ಈ ಯೋಜನೆ ಮೂಲಕ ಮೇ 1 ರಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ಉತ್ತಮವಾಗಿ ಕಾರ್ಯನಿರ್ವಹಿಸಲು ಮತ್ತು ವೆಚ್ಚ ಕಡಿಮೆ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ನಾಲ್ಕನೇ ಸುತ್ತಿನ ವಿಲೀನ ಕಾರ್ಯ ಪೂರ್ಣಗೊಂಡರೆ ಅಸ್ತಿತ್ವದಲ್ಲಿರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 43 ರಿಂದ 28 ಕ್ಕೆ ಇಳಿಕೆಯಾಗಲಿದೆ.

ಬಡ್ಡಿದರಗಳ ಪರಿಷ್ಕರಣೆ

ಮೇ 1 ರಿಂದ ಆರ್ ಬಿಎಲ್ ಬ್ಯಾಂಕಿನ ಗ್ರಾಹಕರು ಉಳಿತಾಯ ಖಾತೆಗೆ ತ್ರೈಮಾಸಿಕಕ್ಕೆ ಬದಲಾಗಿ ಮಾಸಿಕ ಬಡ್ಡಿಗಳನ್ನು ಪಡೆಯುತ್ತಾರೆ. ಬ್ಯಾಂಕಿನ ಮಾಹಿತಿ ಪ್ರಕಾರ ಉಳಿತಾಯ ಖಾತೆಯಲ್ಲಿ ಇರಿಸಲಾಗಿರುವ ಬ್ಯಾಲೆನ್ಸ್ ಅವಲಂಬಿಸಿ ಬಡ್ಡಿದರವು ಶೇಕಡಾ 7 ರಷ್ಟಿದೆ. ಶ್ರೀರಾಮ್ ಗ್ರೂಪ್‌ನ ಅಡಿಯಲ್ಲಿಕಾರ್ಯ ನಿರ್ವಹಿಸುವ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ (SFL) ತನ್ನ ಸ್ಥಿರ ಠೇವಣಿ ಬಡ್ಡಿದರಗಳನ್ನು ಪರಿಷ್ಕರಿಸಿದೆ. 60 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ವಾರ್ಷಿಕ ಶೇ. 0.50 ರಷ್ಟು ಹೆಚ್ಚುವರಿ ಬಡ್ಡಿಯನ್ನು ಪಡೆಯುತ್ತಾರೆ. ಮಹಿಳಾ ಠೇವಣಿದಾರರು ವಾರ್ಷಿಕ ಶೇ. 0.10 ಬಡ್ಡಿದರವನ್ನು ಪಡೆಯಲಿದ್ದಾರೆ.