Boys vs Girls: ದಿಢೀರ್ ಮುಕ್ತಾಯಗೊಂಡ ಬಾಯ್ಸ್ vs ಗರ್ಲ್ಸ್ ಶೋ: ಗೆದ್ದವರಿಗೆ ಎಷ್ಟು ಹಣ ಸಿಕ್ಕಿತು?
Boys Vs Girls Reality Show: ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದ್ದು, ಮೊದಲ ಸೀಸನ್‌ನಲ್ಲಿ ಬಾಯ್ಸ್ ತಂಡ ಜಯಭೇರಿ ಬಾರಿಸಿದೆ. ಬಾಯ್ಸ್ ತಂಡ, 5,88,732 ಲಕ್ಷ ವೋಟ್ ಪಡೆದುಕೊಂಡರೆ ಗರ್ಲ್ಸ್ ತಂಡ 4,73,991 ವೋಟ್ ಪಡೆಯಿತು.

Boys vs Girls

ಕಲರ್ಸ್ ಕನ್ನಡದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಶುರುವಾದ ಬಾಯ್ಸ್ vs ಗರ್ಲ್ಸ್ ಶೋ (Boys Vs Girls Reality Show) ಕೆಲವೇ ತಿಂಗಳಲ್ಲಿ ಕೊನೆಗೊಂಡಿದೆ. ವಾರಾಂತ್ಯದಲ್ಲಿ ಪ್ರಸಾರವಾಗುತ್ತಿದ್ದ ಈ ಕಾರ್ಯಕ್ರಮ ಕೆಲವೇ ಕೆಲವು ಸಂಚಿಕೆಗಳು ಪ್ರಸಾರಗೊಂಡು ಈಗ ದಿಢೀರ್ ಎಂದು ಮುಕ್ತಾಯವಾಗಿದೆ. ಅನುಪಮಾ ಗೌಡ ಅವರ ನಿರೂಪಣೆಯ ಸಾರಥ್ಯದಲ್ಲಿ ಶುರುವಾಗಿದ್ದ ಬಾಯ್ಸ್ vs ಗರ್ಲ್ಸ್ ಶೋನಲ್ಲಿ ಬಾಯ್ಸ್ ತಂಡದ ನಾಯಕ ವಿನಯ್ ಗೌಡ ಆಗಿದ್ದರೇ, ಗರ್ಲ್ಸ್ ತಂಡದ ನಾಯಕಿ ಶುಭಾ ಪೂಂಜಾ ಆಗಿದ್ದರು. ಈ ಇಬ್ಬರು ತಮ್ಮ ತಮ್ಮ ತಂಡವನ್ನು ಹ್ಯಾಂಡಲ್ ಮಾಡುತ್ತಿದ್ದರು.
ವಿನಯ್ ಗೌಡ, ಮಂಜು ಪಾವಗಡ, ಧನರಾಜ್ ಆಚಾರ್ಯ, ರಜತ್ ಸೇರಿದಂತೆ ಅನೇಕ ಕಿರುತೆರೆ ನಟರು ಬಾಯ್ಸ್ ಟೀಂನಲ್ಲಿದ್ದರೆ, ಶುಭಾ ಪೂಂಜಾ, ಐಶ್ವರ್ಯಾ ಸಿಂಧೋಗಿ, ನಿವೇದಿತಾ ಗೌಡ, ಶೋಭಾ ಶೆಟ್ಟಿ, ರಮ್ಯಾ, ಸ್ಪಂದನಾ ಮೊದಲಾದವರು ಗರ್ಲ್ಸ್ ತಂಡದಲ್ಲಿದ್ದರು. ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ಗ್ರ್ಯಾಂಡ್ ಫಿನಾಲೆ ಅದ್ಧೂರಿಯಾಗಿ ನೆರವೇರಿದ್ದು, ಮೊದಲ ಸೀಸನ್‌ನಲ್ಲಿ ಬಾಯ್ಸ್ ತಂಡ ಜಯಭೇರಿ ಬಾರಿಸಿದೆ. ಬಾಯ್ಸ್ ತಂಡ, 5,88,732 ಲಕ್ಷ ವೋಟ್ ಪಡೆದುಕೊಂಡರೆ ಗರ್ಲ್ಸ್ ತಂಡ 4,73,991 ವೋಟ್ ಪಡೆಯಿತು.
ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋ 12 ವಾರಗಳ ಕಾಲ ಪ್ರಸಾರ ಕಂಡಿದೆ. ಈ ಪೈಕಿ 9 ವಾರಗಳಲ್ಲಿ ಬಾಯ್ಸ್ ಹಾಗೂ ಗರ್ಲ್ಸ್ ಮಧ್ಯೆ ಟಾಸ್ಕ್ ನಡೆದಿತ್ತು. ಆ 9 ವಾರಗಳಲ್ಲಿ 3 ವಾರಗಳು ಗರ್ಲ್ಸ್ ತಂಡ ಗೆದ್ದಿದ್ದರೆ, 6 ವಾರಗಳು ಬಾಯ್ಸ್ ತಂಡ ಗೆಲುವು ಸಾಧಿಸಿತ್ತು. ವಾರಗಳ ಕಾಲ ಗೆದ್ದಿರುವ ಟಾಸ್ಕ್‌ಗಳನ್ನ 50% ಎಂದು ಕನ್ಸಿಡರ್ ಮಾಡಿ, ಜನ ನೀಡಿರುವ ವೋಟ್‌ಗಳನ್ನ ಮಿಕ್ಕ 50% ಎಂದು ಕನ್ಸಿಡರ್ ಮಾಡಿ ಒಟ್ಟಾರೆ ಫಲಿತಾಂಶವನ್ನ ಘೋಷಿಸಲಾಗಿದೆ.
ಲೂಸ್ ಮಾದ ಯೋಗಿ ಹಾಗೂ ನಟಿ ಮೇಘನಾ ರಾಜ್ ಅವರು ಬಾಯ್ಸ್ ತಂಡಕ್ಕೆ ಟ್ರೋಫಿ ಜೊತೆಗೆ 10 ಲಕ್ಷ ಕ್ಯಾಶ್ ಪ್ರೈಸ್ ನೀಡಿದ್ದಾರೆ. ಸೋತ ಹುಡುಗಿಯರಿಗೂ ಮೆಡಲ್ಸ್ ಸಿಕ್ಕಿವೆ. ಮೊದಮೊದಲು ಬಹಳ ಇಂಟ್ರಸ್ಟಿಂಗ್ ಆಗಿದ್ದ ಬಾಯ್ಸ್ vs ಗರ್ಲ್ಸ್ ಕಾರ್ಯಕ್ರಮದಲ್ಲಿ ಬರಬರುತ್ತಾ ಹುಡುಗರು ಹಾಗೂ ಹುಡುಗಿಯರ ಮಾತಿನ ಜಟಾಪಟಿಯಲ್ಲೇ ಮುಗಿದು ಹೋಗುತ್ತಿತ್ತು. ಹೀಗಾಗಿ ಇದಕ್ಕೆ ದೊಡ್ಡ ಮಟ್ಟ ವೀಕ್ಷಕರು ಕೂಡ ಇರಲಿಲ್ಲ, ಟಿಆರ್ಪಿ ಕೂಡ ಬರುತ್ತಿರಲಿಲ್ಲ. ಇದೀಗ ಈ ಕಾರ್ಯಕ್ರಮ ಮುಗಿದ ಪರಿಣಾಮ ಮುಂದಿನ ವೀಕೆಂಡ್ ಯಾವ ಹೊಸ ಕಾರ್ಯಕ್ರಮ ಇರಲಿದೆ ಎಂಬುದು ನೋಡಬೇಕಿದೆ.
Bhagya Lakshmi Serial: ಹೊಸ ಟ್ವಿಸ್ಟ್: ತಾಂಡವ್ನನ್ನು ಹೀಯಾಳಿಸಿದ ತಂಗಿಗೇ ಬೈದ ಭಾಗ್ಯ