Viral Video: ಚಲಿಸುತ್ತಿದ್ದ ಬೈಕ್‌ನಲ್ಲಿ ಯುವಕನ ಅಪಾಯಕಾರಿ ಸ್ಟಂಟ್! ಇಲ್ಲಿದೆ ಭಯಾನಕ ವಿಡಿಯೊ!..
ಇಂದು ಬೈಕ್ ಸ್ಟಂಟ್ ಎನ್ನುವುದು ಯುವಕರಿಗೆ ಕ್ರೇಜ್ ಆಗಿದೆ. ಬೈಕ್‌ನಲ್ಲಿ ವಿವಿಧ ರೀತಿಯ ಸಾಹಸ ಪ್ರದರ್ಶಿಸಬೇಕು ಎಂದು ಅಪಾಯಕಾರಿ ಸಾಹಸವನ್ನು ಮಾಡಲು ಯುವ ಸಮೂಹ ಮುಂದಾಗುತ್ತಿದೆ. ಅದೇ ರೀತಿ ಇಲ್ಲೊಬ್ಬಯುವಕ ಕೂಡ ಬೈಕ್ ಓಡಿಸುವಾಗಲೇ ಬೈಕ್ ಮೇಲೆ ನಿಂತುಕೊಂಡು ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಸುಮಾರು ದೂರ ಯುವಕ ಬೈಕ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸಿದ್ದಾನೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಂತು ಕ್ಯಾಮರಾದಲ್ಲಿ ಸೆರೆ(Viral Video) ಹಿಡಿದಿದ್ದಾರೆ


ನವದೆಹಲಿ: ಇತ್ತೀಚೆಗೆ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ವೀಲಿಂಗ್ ಸ್ಟಂಟ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಬೇಕೆಂಬ ಕಾರಣಕ್ಕೆ ಇಂತಹ ಅಪಾಯಕಾರಿ ಸಾಹಸ ಪ್ರದರ್ಶನಗಳನ್ನು ಮಾಡುವ ಯುವಕರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಇದೀಗ ಯುವಕನೊಬ್ಬ ಇಂತಹುದೇ ಅಪಾಯಕಾರಿ ಸಾಹಸವನ್ನು ಮಾಡಲು ಮುಂದಾಗಿದ್ದು ಈ ವಿಡಿಯೊ ಇದೀಗ ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ. ವೈರಲ್ ವಿಡಿಯೊ (Viral Video) ನೋಡಿ ನೆಟ್ಟಿಗರು ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯುವಕನೋರ್ವ ಚಲಿಸುತ್ತಿದ್ದ ಬೈಕ್ ಮೇಲೆ ನಿಂತುಕೊಂಡು ಸ್ಟಂಟ್ ಮಾಡುತ್ತಿದ್ದ ಘಟನೆಯು ಗುರುಗ್ರಾಮದ ದೆಹಲಿ-ಜೈಪುರ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ಯುವಕನ ಈ ಸಾಹಸಮಯ ಸ್ಟಂಟ್ ಕಂಡರೆ ಎದೆ ಝಲ್ ಎನಿಸುವಂತಿದ್ದು ಅಪಾಯಕಾರಿ ಸಾಹಸಕ್ಕೆ ಮುಂದಾಗಿದ್ದಾನೆ.
ಇಂದು ಬೈಕ್ ಸ್ಟಂಟ್ ಎನ್ನುವುದು ಯುವಕರಿಗೆ ಕ್ರೇಜ್ ಆಗಿದೆ. ಬೈಕ್ ನಲ್ಲಿ ವಿವಿಧ ರೀತಿಯ ಸಾಹಸ ಪ್ರದರ್ಶಿಸಬೇಕು ಎಂದು ಅಪಾಯಕಾರಿ ಸಾಹಸವನ್ನು ಮಾಡಲು ಯುವ ಸಮೂಹ ಮುಂದಾಗುತ್ತಿದೆ. ಅದೇ ರೀತಿ ಇಲ್ಲೊಬ್ಬ ಯುವಕ ಕೂಡ ಬೈಕ್ ಓಡಿಸುವಾಗಲೇ ಬೈಕ್ ಮೇಲೆ ನಿಂತುಕೊಂಡು ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಸುಮಾರು ದೂರ ಯುವಕ ಬೈಕ್‌ನಲ್ಲಿ ನಿಂತುಕೊಂಡೇ ಪ್ರಯಾಣಿಸಿದ್ದಾನೆ. ಈ ದೃಶ್ಯವನ್ನು ವ್ಯಕ್ತಿಯೊಬ್ಬ ರಸ್ತೆ ಬದಿಯಲ್ಲಿ ನಿಂತು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಯುವಕ ಬೈಕ್ ಮೇಲೆ ನಿಂತು ಸ್ಟಂಟ್ ಮಾಡಲು ಮುಂದಾಗಿದ್ದಾನೆ. ಆದರೆ ಬೈಕ್ ಮೇಲೆ ಹತ್ತಿ ನಿಂತಿದ್ದಾಗಲೇ ಬ್ಯಾಲೆನ್ಸ್ ತಪ್ಪಿದೆ. ಮುಂದೇನಾಯ್ತು ಎಂಬುದೆ ಬಹಳ ಕುತೂಹಲ ಕೆರಳಿಸುವಂತಿದೆ.ವೈರಲ್ ಆದ ವಿಡಿಯೊದಲ್ಲಿ ಸವಾರ ಬೈಕ್ ಮೇಲೆ ನಿಂತಿದ್ದು ಕೆಲಕ್ಷಣ ಮಾತ್ರ ಇದಾದ ಬಳಿಕ ಈತನಿಗೆ ಬೈಕ್ ನಿಯಂತ್ರಿಸಲು ಕಷ್ಟವಾಗಿದೆ. ಅನಂತರ ಸವಾರನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾನೆ. ಬೈಕ್ ಮಾತ್ರ ವೇಗವಾಗಿ ಮುಂದೆ ಸಾಗಿದ್ದು ದೂರದ ಡಿವೈಡರ್ ಗೆ ಹೋಗಿ ಢಿಕ್ಕಿ ಹೊಡೆದಿದೆ. ಆದರೆ ಕೆಳಗೆ ಬಿದ್ದ ಬೈಕ್ ಸವಾರ ರಸ್ತೆ ಮಧ್ಯೆಯೇ ಬಿದ್ದಿದ್ದು ಅದೃಷ್ಟವಶಾತ್ ಆಗ ಯಾವುದೇ ವಾಹನ ಬರದೆ ಅಪಾಯ ಸಂಭವಿಸಿಲ್ಲ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ನೆಟ್ಟಿಗರು ಯುವಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ.
ಇದನ್ನು ಓದಿ: Viral Video: ಟಿಕೆಟ್ ವಿಚಾರಕ್ಕೆ ಮಹಿಳೆ-ಟಿಟಿಇ ನಡುವೆ ಭಾರಿ ಜಗಳ; ಕೊನೆಗೆ ಆಗಿದ್ದೇನು?
ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ದೃಶ್ಯ ಕಂಡು ಒಂದಷ್ಟು ಮಂದಿ ಆಘಾತ ವ್ಯಕ್ತಪಡಿಸಿದ್ದಾರೆ. ಕೆಲವೊಂದಿಷ್ಟು ಮಂದಿ ಬೈಕ್ ಸ್ಟಂಟ್ ಕಂಡು ಯುವಕನ ವಿರುದ್ಧ ಕಿಡಿ ಕಾರಿದ್ದಾರೆ. ಬಳಕೆದಾರರೊಬ್ಬರು ಜೀವ ತುಂಬಾ ಅಮೂಲ್ಯವಾದದ್ದು, ಜೀವ ಹಾನಿಯಾಗುವ ಇಂತಹ ಅಪಾಯಕಾರಿ ಸ್ಟಂಟ್ಗಳನ್ನು ಎಂದಿಗೂ ಮಾಡಬೇಡಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಬೈಕ್ ಸವಾರ ಯಾರೆಂದು ಇನ್ನೂ ತಿಳಿದುಬಂದಿಲ್ಲ. ಅಜಾಗರೂಕ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಸೋಶಿಯಲ್ ಮಿಡಿಯಾದಲ್ಲಿ ಮಾತ್ರ ಈ ಯುವಕನ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಂತೆ ಮನವಿ ಕೇಳಿ ಬಂದಿದೆ.