LSG vs SRH: ಲಕ್ನೋ ತಂಡಕ್ಕೆ 'ಮಾಡು ಇಲ್ಲವೇ ಮಡಿ' ಪಂದ್ಯ; ಹೈದರಾಬಾದ್ ಎದುರಾಳಿ
ಲಕ್ನೋ ತಂಡವು ತನ್ನ ಪಾಲಿನ ಎಲ್ಲ 3 ಪಂದ್ಯಗಳನ್ನೂ ಗೆದ್ದುಬಿಟ್ಟರೆ ಒಟ್ಟು 16 ಅಂಕ ಗಳಿಸಬಹುದು. ಆದರೂ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗುವುದಿಲ್ಲ. ಪಂಜಾಬ್, ಮುಂಬೈ ಮತ್ತು ಡೆಲ್ಲಿ ತಂಡಗಳು ತಮ್ಮ ಪಾಲಿನ ಎಲ್ಲ ಪಂದ್ಯಗಳನ್ನೂ ಸೋಲಬೇಕು. ಆಗ ಪಂತ್ ಪಡೆಗೆ ಅದೃಷ್ಟ ಒಲಿಯಬಹುದು. ಮಳೆಯಿಂದಾಗಿ ಪಂದ್ಯಗಳ ಫಲಿತಾಂಶದಲ್ಲಿ ವ್ಯತ್ಯಾಸಗೊಂಡರೆ ಲಕ್ನೋ ಹೊರಬೀಳಲಿದೆ.


ಲಕ್ನೋ: ಸತತ ಸೋಲಿನಿಂದ ಕಂಗೆಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್(LSG vs SRH) ಮತ್ತು ಒಂದಿಷ್ಟು ಸುಧಾರಣೆ ಬಳಿಕ ಗೆಲುವಿನ ಹಳಿ ಏರಿದ ಲಕ್ನೋ ಸೂಪರ್ ಜೈಂಟ್ ಸೋಮವಾರದ ಐಪಿಎಲ್ (IPL 2025) ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಎಲ್ಲ ಪಂದ್ಯಗಳನ್ನು ಅತ್ಯಧಿಕ ರನ್‌ರೇಟ್‌ನಲ್ಲಿ ಗೆದ್ದರೆ ಎಲ್ಲೊ ಒಂದು ನಾಕೌಟ್ ಅವಕಾಶ ಸಿಗುವ ಸಾಧ್ಯತೆ ಇರುವುದರಿಂದ ರಿಷಭ್ ಪಂತ್(rishabh pant) ಪಡೆಗೆ ಈ ಪಂದ್ಯ ಮಹತ್ವದ್ದಾಗಿದೆ. ಆದರೆ ಹೈದರಾಬಾದ್‌ಗೆ ಗೆದ್ದರೂ, ಸೋತರೂ ಯಾವುದೇ ಚಿಂತೆಯಿಲ್ಲ. ಕಾರಣ ಅದು ಈಗಾಗಲೇ ಹೊರಬಿದ್ದಿದೆ.
ಲಕ್ನೋ ತಂಡದ ಪ್ಲೇ ಆಫ್ ಲೆಕ್ಕಾಚಾರ
ಲಕ್ನೋ ತಂಡವು ತನ್ನ ಪಾಲಿನ ಎಲ್ಲ 3 ಪಂದ್ಯಗಳನ್ನೂ ಗೆದ್ದುಬಿಟ್ಟರೆ ಒಟ್ಟು 16 ಅಂಕ ಗಳಿಸಬಹುದು. ಆದರೂ ತಂಡದ ಪ್ಲೇ ಆಫ್ ಸ್ಥಾನ ಖಚಿತವಾಗುವುದಿಲ್ಲ. ಪಂಜಾಬ್, ಮುಂಬೈ ಮತ್ತು ಡೆಲ್ಲಿ ತಂಡಗಳು ತಮ್ಮ ಪಾಲಿನ ಎಲ್ಲ ಪಂದ್ಯಗಳನ್ನೂ ಸೋಲಬೇಕು. ಆಗ ಪಂತ್ ಪಡೆಗೆ ಅದೃಷ್ಟ ಒಲಿಯಬಹುದು. ಮಳೆಯಿಂದಾಗಿ ಪಂದ್ಯಗಳ ಫಲಿತಾಂಶದಲ್ಲಿ ವ್ಯತ್ಯಾಸಗೊಂಡರೆ ಲಕ್ನೋ ಹೊರಬೀಳಲಿದೆ.
ಸಿಡಿಯಬೇಕಿದೆ ಪಂತ್
ಮೆಗಾ ಹರಾಜಿನಲ್ಲಿ ದಾಖಲೆ ಮೊತ್ತ ಪಡೆದ ನಾಯಕ ರಿಷಭ್ ಪಂತ್ ಅವರು ಈ ಮೊತ್ತಕ್ಕೆ ಇದುವರೆಗೂ ನ್ಯಾಯವನ್ನೇ ಒದಗಿಸಿಲ್ಲ. ಲೀಗ್ ಅಂತಿಮ ಹಂತದತ್ತ ಕಾಲಿಟ್ಟರೂ, ಅವರು ವಿಫಲರಾಗುತ್ತಿರುವ ಪರಿಣಾಮ, ತಂಡವೂ ಸಂಕಷ್ಟದಲ್ಲಿದೆ. ಹೀಗಾಗಿ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಅವರು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಅನಿವಾರ್ಯತೆ ಇದೆ.
They’re here. And they mean business 🔥 pic.twitter.com/cd21EIvbXb
— Lucknow Super Giants (@LucknowIPL) May 17, 2025
ಲಕ್ನೋ ತಂಡ ಮೂವರು ಆಟಗಾರರ ಕೊಡುಗೆಯನ್ನೇ ಬಹುವಾಗಿ ನೆಚ್ಚಿಕೊಂಡಿದೆ. ಮಿಚೆಲ್ ಮಾರ್ಷ್, ಏಡನ್ ಮರ್ಕರಂ ಮತ್ತು ನಿಕೋಲಸ್ ಪೂರನ್ ಮಾತ್ರ ಈ ತಂಡದಲ್ಲಿ ಯಶಸ್ಸು ಕಂಡಿದ್ದಾರೆ. ಪೂರನ್ ಮೊದಲ ಕೆಲವು ಪಂದ್ಯಗಳಲ್ಲಿ ಅಮೋಘ ಆಟವಾಡಿದ್ದರು. ನಂತರ ಅದೇ ಲಯದಲ್ಲಿ ಮುಂದುವರಿದಿಲ್ಲ. ಬೌಲಿಂಗ್ ವಿಭಾಗದಲ್ಲೂ ತಂಡ ಸುಧಾರಿತ ಪ್ರದರ್ಶನ ನೀಡಬೇಕಾಗಿದೆ.
ಇದನ್ನೂ ಓದಿ IPL 2025 Final: ಫೈನಲ್ ಕೋಲ್ಕತಾದಿಂದ ಸ್ಥಳಾಂತರಿಸುವುದು ಸುಲಭವಿಲ್ಲ; ಗಂಗೂಲಿ
ಹೈದರಾಬಾದ್‌ಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ
ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಇದೊಂದು ಔಪಚಾರಿಕ ಆಗಿರಲಿದೆ. ಇನ್ನೇನಿನ್ನದರೂ ಉಳಿದ ಪಂದ್ಯದಲ್ಲಿ ಜಯದೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳುವುದಷ್ಟೇ ತಂಡದ ಗುರಿ. ಬಲಿಷ್ಠ ಆಟಗಾರರನ್ನು ಹೊಂದಿಯೂ ತಂಡ ಪ್ಲೇ ಆಫ್ ಪ್ರವೇಶ ಪಡೆಯುವಲ್ಲಿ ವಿಫಲವಾದದ್ದು ನಿಜಕ್ಕೂ ವಿಪರ್ಯಾಸವೇ ಸರಿ.