ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Namma Metro Yellow Line: ಆ.10ರಂದು ಪ್ರಧಾನಿ ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಡಿಕೆಶಿ

ಆ.10ರಂದು ಪ್ರಧಾನಿ ಮೋದಿಯಿಂದ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ: ಡಿಕೆಶಿ

DK Shivakumar: 7,610 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 19.15 ಕಿಲೋಮೀಟರ್ ಉದ್ದದ, 16 ನಿಲ್ದಾಣಗಳಿರುವ ಮೆಟ್ರೋ ಹಳದಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 10 ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಆ.10ರಂದು ಐಐಎಂಬಿಯಲ್ಲಿ ಇರುವ ಸಭಾಂಗಣದಲ್ಲಿ ಚಿಕ್ಕ, ಚೊಕ್ಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

Transport Strike: ಹೈಕೋರ್ಟ್‌ ತರಾಟೆ ಹಿನ್ನೆಲೆ ಸಾರಿಗೆ ಮುಷ್ಕರ ಮುಂದೂಡಿಕೆ; ರಸ್ತೆಗಿಳಿದ ಬಸ್‌ಗಳು

ಹೈಕೋರ್ಟ್‌ ತರಾಟೆ ಹಿನ್ನೆಲೆ ಸಾರಿಗೆ ನೌಕರರ ಮುಷ್ಕರ ಮುಂದೂಡಿಕೆ

Transport Strike: ರಾಜ್ಯಾದ್ಯಂತ ಈ ಕ್ಷಣದಿಂದಲೇ ಹೈಕೋರ್ಟ್ ಸೂಚನೆಯ ಮೇರೆಗೆ ನಾವು ಸಾರಿಗೆ ನೌಕರರ ಮುಷ್ಕರವನ್ನು ಮುಂದೂಡಿಕೆ ಮಾಡಿದ್ದೇವೆ, ಮುಷ್ಕರ ಕೈಬಿಟ್ಟಿಲ್ಲ, ಮುಂದಿನ ದಿನಾಂಕ ಘೋಷಿಸುತ್ತೇವೆ ಎಂದು ಅನಂತ ಸುಬ್ಬಾರಾವ್ ತಿಳಿಸಿದ್ದಾರೆ. ಇದರಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಸಾರಿಗೆ ಬಸ್‌ಗಳು ರಸ್ತೆಗಿಳಿದಿವೆ.

Vande Bharat Express: ಬೆಂಗಳೂರು-ಬೆಳಗಾವಿ ನೂತನ ʼವಂದೇ ಭಾರತ್‌ʼ ರೈಲು; ಆ.10ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ

ಆ.10ಕ್ಕೆ ಬೆಂಗಳೂರು-ಬೆಳಗಾವಿ ನೂತನ ʼವಂದೇ ಭಾರತ್‌ʼ ರೈಲು ಚಾಲನೆ

Vande Bharat Express: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ರಾಜ್ಯದಲ್ಲಿ 3 ವಂದೇ ಭಾರತ್‌ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪೂನಾ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೋದೇವಿ ಕಾರ್ತ ಮಧ್ಯೆ ನೂತನ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ.

Actress Ramya: ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ 48 ಕಿಡಿಗೇಡಿಗಳ ಐಪಿ ಅಡ್ರೆಸ್ ಪತ್ತೆ, ಮುಂದಿದೆ ಮಾರಿಹಬ್ಬ!

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿದ 48 ಕಿಡಿಗೇಡಿಗಳ ಐಪಿ ಅಡ್ರೆಸ್ ಪತ್ತೆ

Actor Darshan: ಮಾಜಿ ಸಂಸದೆ, ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಮಾಡಿ ನಿಂದನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಒಟ್ಟು 48 ಜನರ ಐಪಿ ಅಡ್ರೆಸ್ ಅನ್ನು ಸಿಸಿಬಿ ತಂಡ ಪತ್ತೆ ಹಚ್ಚಿದೆ. ಇವರಲ್ಲಿ ನಾಲ್ವರನ್ನು ಸಿಸಿಬಿ ಪೊಲೀಸರು ಆರೆಸ್ಟ್ ಮಾಡಿದ್ದಾರೆ.

Transport Strike: ಸಾರಿಗೆ ಮುಷ್ಕರ; ರಾಯಚೂರಿನಲ್ಲಿ ಆಂಧ್ರ, ತೆಲಂಗಾಣ ಬಸ್‌ಗಳ ಮೊರೆ ಹೋದ ಪ್ರಯಾಣಿಕರು

ರಾಯಚೂರಿನಲ್ಲಿ ಆಂಧ್ರ, ತೆಲಂಗಾಣ ಬಸ್‌ಗಳ ಮೊರೆ ಹೋದ ಪ್ರಯಾಣಿಕರು

Raichur News: ಸಾರಿಗೆ ನೌಕರರು ಕರ್ತವ್ಯಕ್ಕೆ ಹೋಗದೆ ಬಸ್ ನಿಲ್ದಾಣದಲ್ಲೇ ಉಳಿದಿದ್ದಾರೆ. ನಮ್ಮ ಕಷ್ಟಗಳಿಗೆ ಸರ್ಕಾರ ಸ್ಪಂದಿಸಿದರೆ ನಾವ್ಯಾಕೆ ಮುಷ್ಕರ ಮಾಡಬೇಕು, ನಮ್ಮ ಕಷ್ಟ ಕೇಳುವವರು ಯಾರು ಎಂದು ನೌಕರರು ಅಳಲು ತೋಡಿಕೊಂಡಿದ್ದಾರೆ. ಇದರಿಂದ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

DK Shivakumar: ಹಠ ಹಿಡಿಯದೇ ಸಹಕರಿಸಿ: ಸಾರಿಗೆ ನೌಕರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ

ಹಠ ಹಿಡಿಯದೇ ಸಹಕರಿಸಿ: ಸಾರಿಗೆ ನೌಕರರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮನವಿ

KSRTC Strike: ಸಾರಿಗೆ ನೌಕರರ ಬೇಡಿಕೆ ತಪ್ಪು ಎಂದು ಸರ್ಕಾರ ಹೇಳುತ್ತಿಲ್ಲ. ಅವರು ಕೂಡ ಸರ್ಕಾರದ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಅವರಿಗೆ ನೆರವಾಗಲು ಪ್ರಯತ್ನಿಸುತ್ತಿದ್ದಾರೆ. ನಾಗರೀಕರನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಹೇಳಿದ್ದಾರೆ.

BY Vijayendra: ಇಂದು ಭಾರತದ ಮೊದಲ ಬೀದಿ ದೀಪ ಬೆಂಗಳೂರಿನಲ್ಲಿ ಬೆಳಗಿದ ದಿನ: ಬಿವೈ ವಿಜಯೇಂದ್ರ ಸ್ಮರಣೆ

ಇಂದು ಭಾರತದ ಮೊದಲ ಬೀದಿ ದೀಪ ಬೆಂಗಳೂರಿನಲ್ಲಿ ಬೆಳಗಿದ ದಿನ: ಬಿವೈ ವಿಜಯೇಂದ್ರ

Bengaluru: ಈ ವರ್ಷದ ಆಗಸ್ಟ್‌ಗೆ ಭಾರತದ ಮೊದಲ ವಿದ್ಯುತ್‌ ಬೀದಿ ದೀಪ ಅಳವಡಿಸಿ 120 ವರ್ಷಗಳಾಗುತ್ತವೆ. ಅದನ್ನು ಅಳವಡಿಸಿದ್ದು ಆಗಸ್ಟ್ 5, 1905ರಂದು. ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ ಸುತ್ತಲೂ ಮೊದಲ ವಿದ್ಯುತ್‌ ಬೀದಿ ದೀಪಗಳು ಬೆಳಗಿದ್ದವು. ವಿದ್ಯುತ್ ದೀಪ ಬರುವ ಮೊದಲು ಬೆಂಗಳೂರಿನ ರಸ್ತೆಗಳಲ್ಲಿ ಸೀಮೆಎಣ್ಣೆ ದೀಪಗಳನ್ನು ಬಳಸಲಾಗುತ್ತಿತ್ತು.

Road Accident: ಬಸ್ಸು- ಕ್ಯಾಂಟರ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

ಬಸ್ಸು- ಕ್ಯಾಂಟರ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

ಹುಬ್ಬಳ್ಳಿಯಿಂದ ಕ್ಯಾಂಟರ್ ವಾಹನ ಮೈಸೂರಿಗೆ ತೆರಳುತ್ತಿತ್ತು. ಕೆಎಸ್ಆರ್ಟಿಸಿ ಬಸ್ಸು ಕಡೂರಿನಿಂದ ಹೂವಿನಹಡಗಲಿಗೆ ತೆರಳುತ್ತಿತ್ತು. ಮೃತಪಟ್ಟ ಇಬ್ಬರೂ ಹುಬ್ಬಳ್ಳಿ ಮೂಲದ ಚಾಲಕ ಹಾಗೂ ಕ್ಲೀನರ್ ಎಂದು ತಿಳಿದುಬಂದಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಅಪಘಾತ ಕುರಿತು ಪ್ರಕರಣ ದಾಖಲಾಗಿದೆ.

Jewel Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್ ಆಭರಣಗಳು

ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಟ್ರೆಡಿಷನಲ್ ಆಭರಣಗಳು

Jewel Trend 2025: ವರಮಹಾಲಕ್ಷ್ಮಿ ಹಬ್ಬದಂದು ಟ್ರೆಡಿಷನಲ್ ಉಡುಪಿನೊಂದಿಗೆ ಟ್ರೆಡಿಷನಲ್ ಆಭರಣಗಳನ್ನು ಧರಿಸುವ ಟ್ರೆಂಡ್ ಮರಳಿದೆ. ಈ ಫೆಸ್ಟೀವ್ ಸೀಸನ್‌ನಲ್ಲಿ ಯಾವ್ಯಾವ ಬಗೆಯ ಜ್ಯುವೆಲರಿಗಳು ಚಾಲ್ತಿಯಲ್ಲಿವೆ? ಸ್ಟೈಲಿಂಗ್ ಹೇಗೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

Gold Price Today: ಚಿನ್ನದ ದರದಲ್ಲಿ ಭಾರೀ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 5th Aug 2025: ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 75 ರೂ. ಹೆಚ್ಚಾಗಿದ್ದು, 9,370 ರೂ. ಗೆ ಬಂದು ತಲುಪಿದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆ 82ರೂ. ಅಧಿಕವಾಗಿದ್ದು, 10,222 ರೂ.ಗೆ ಮುಟ್ಟಿದೆ. ಆ ಮೂಲಕ 22 ಕ್ಯಾರಟ್‌ನ 8 ಗ್ರಾಂ ಚಿನ್ನ 74,960 ರೂ. ಬಾಳಿದರೆ, 10 ಗ್ರಾಂಗೆ ನೀವು 93,700 ರೂ. ಹಾಗೂ 100 ಗ್ರಾಂಗೆ 9,37,000 ರೂ. ನೀಡಬೇಕಾಗುತ್ತದೆ.

Santhosh Balaraj: ಜಾಂಡೀಸ್‌ನಿಂದ ಬಳಲುತ್ತಿದ್ದ ಕನ್ನಡ ನಟ ಸಂತೋಷ್‌ ಬಾಲರಾಜ್‌ ನಿಧನ

ಜಾಂಡೀಸ್‌ನಿಂದ ಬಳಲುತ್ತಿದ್ದ ಕನ್ನಡ ನಟ ಸಂತೋಷ್‌ ಬಾಲರಾಜ್‌ ನಿಧನ

Actor Santosh Balaraj: ಜಾಂಡೀಸ್​ನಿಂದಾಗಿ ನಟ ಸಂತೋಷ್ ಕೋಮಾಗೆ ಹೋಗಿದ್ದರು. 2 ದಿನಗಳ ಹಿಂದೆ ಸಂತೋಷ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಸಂತೋಷ್ ಬೇಗ ಚೇತರಿಸಿಕೊಳ್ಳಲಿ ಎಂದು ಆಪ್ತರು, ಕುಟುಂಬ ವರ್ಗ ಪ್ರಾರ್ಥಿಸುತ್ತಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಸಂತೋಷ್ ಬಾಲರಾಜ್ ಸಾವನಪ್ಪಿದ್ದಾರೆ.

KSRTC Strike: ಸಾರಿಗೆ ಮುಷ್ಕರ: ಕಲಬುರಗಿಯಲ್ಲಿ ಜನರಿಗೆ ತಟ್ಟಿದ ಬಿಸಿ; ವಿದ್ಯಾರ್ಥಿಗಳು, ನೌಕರರ ಪರದಾಟ

ಸಾರಿಗೆ ಮುಷ್ಕರ: ಕಲಬುರಗಿಯಲ್ಲಿ ಜನರಿಗೆ ತಟ್ಟಿದ ಬಿಸಿ; ಪ್ರಯಾಣಿಕರ ಪರದಾಟ

Kalaburagi: ಕೇಂದ್ರ ಬಸ್ ನಿಲ್ದಾಣದಲ್ಲಿ ಬೆಳಗಿನ ಜಾವದಿಂದಲೇ ಎಂದಿನಂತೆ ಪ್ರಯಾಣಿಕರು ಆಗಮಿಸಿದರು. ಆದರೆ, ನಮ್ಮ ಬೇಡಿಕೆ ಈಡೇರುವವರೆಗೂ ನಾವು ಬಸ್ ಹತ್ತುವುದಿಲ್ಲ ಎಂದು ನೌಕರರು ಪಟ್ಟು ಹಿಡಿದರು. ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಮನವೊಲಿಸಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

Murder Case: ಬೆಂಗಳೂರಿನಲ್ಲಿ ದರೋಡೆ ಯತ್ನ, ಹಣ ಕೊಡದ ಯುವಕನ ಇರಿದು ಕೊಲೆ

ಬೆಂಗಳೂರಿನಲ್ಲಿ ದರೋಡೆ ಯತ್ನ, ಹಣ ಕೊಡದ ಯುವಕನ ಇರಿದು ಕೊಲೆ

Robbery: ಹಣ ನೀಡಲು ನಿರಾಕರಿಸಿದ ಪ್ರೇಮ್‌ಗೆ ಗ್ಯಾಂಗ್‌ ಚಾಕುವಿನಿಂದ ಇರಿದಿದೆ. ಚಾಕು ಇರಿತಕ್ಕೆ ಒಳಗಾದ ಪ್ರೇಮ್ ಕುಸಿದು ಬಿದ್ದಿದ್ದಾರೆ. ಆತನನ್ನು ಆಸ್ಪತ್ರೆಗೆ ಸೇರಿಸಲು ಗ್ಯಾಂಗ್ ಯತ್ನಿಸಿದೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಪ್ರೇಮ್ ಮೃತಪಟ್ಟಿದ್ದಾರೆ. ಹೀಗಾಗಿ ಪ್ರೇಮ್ ಶವವನ್ನು ಅಲ್ಲೇ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

Neha Hiremath murder case: ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್‌ಗೆ ಜಾಮೀನು ಇಲ್ಲ

ನೇಹಾ ಹಿರೇಮಠ್ ಕೊಲೆ ಆರೋಪಿ ಫಯಾಜ್‌ಗೆ ಜಾಮೀನು ಇಲ್ಲ

Hubballi: ಕಳೆದ 1 ವರ್ಷ 4 ತಿಂಗಳಿಂದ ಧಾರವಾಡ ಕಾರಾಗೃಹದಲ್ಲಿರುವ ಫಯಾಜ್‌ಗೆ ಜಾಮೀನಿನ ಮೇಲೆ ಹೊರಬರುವ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಜಾಮೀನು ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆ ನೇಹಾ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ. ಫಯಾಜ್‌ ಪರ ವಕೀಲರು ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

kSRTC Strike: ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ

ಮುಷ್ಕರದಲ್ಲಿ ಪಾಲ್ಗೊಂಡ ನೌಕರರ ಸಂಬಳ ಕಟ್, ರಜೆ ರದ್ದು, ಎಸ್ಮಾ ಜಾರಿ

Karnataka: ಸಾರಿಗೆ ನೌಕರರಿಗೆ ಯಾವುದೇ ರಜೆ ಮಂಜೂರು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೀಗಾಗಿ ಮುಷ್ಕರದಲ್ಲಿ ಭಾಗಿಯಾಗಲು ಬಹುಮಂದಿಗೆ ಆತಂಕ ಶುರುವಾಗಿದೆ. 2021ರ ಪ್ರತಿಭಟನೆಯ ವೇಳೆ ಆದಂತಹ ಅನುಭವದ ಆತಂಕ ಎದುರಾಗಿದ್ದು, ಎಸ್ಮಾ ಜಾರಿ, ಕೋರ್ಟ್ ಆದೇಶ ಮತ್ತು ಅಮಾನತಿನ ಆತಂಕ ಎದುರಾಗಿದೆ.

‌Narendra Modi: ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋ, 40 ಸಾವಿರ ಜನ ಸೇರಿಸಲು ಬಿಜೆಪಿ ‌ಪ್ಲಾನ್

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್‌ ಶೋಗೆ ಬಿಜೆಪಿ ಪ್ಲಾನ್

Namma Metro: ಜಯನಗರದ ರಾಗಿಗುಡ್ಡ ಪ್ರಸನ್ನ ಆಂಜನೇಯ ದೇವಸ್ಥಾನದಿಂದ ಜಯನಗರದ ಶಾಲಿನಿ ಗ್ರೌಂಡ್‌ವರೆಗೆ ಮೋದಿ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಮೆಟ್ರೋ ಹಳದಿ ಮಾರ್ಗಕ್ಕೆ ಮೋದಿ ಚಾಲನೆ ನೀಡಲಿದ್ದಾರೆ. ಬಳಿಕ ಅಲ್ಲಿಂದ ಮೆಟ್ರೋದಲ್ಲೇ ರಾಗಿ ಗುಡ್ಡದ ಬಳಿ ಮೋದಿ ಆಗಮಿಸಲಿದ್ದಾರೆ.

KSRTC Strike: ಸಾರಿಗೆ ನೌಕರರ ಮುಷ್ಕರ ಆರಂಭ, ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ

ಸಾರಿಗೆ ನೌಕರರ ಮುಷ್ಕರ ಆರಂಭ, ರಾಜ್ಯಾದ್ಯಂತ ಪ್ರಯಾಣಿಕರ ಪರದಾಟ

ಬೆಂಗಳೂರು, ಮೈಸೂರು, ಹುಬ್ಬಳ್ಳಿ ಬೆಳಗಾವಿ, ಮಂಡ್ಯ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಹುತೇಕ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ಆದರೆ ಇನ್ನೂ ಕೆಲವು ನೌಕರರು ಎಸ್ಮ ಜಾರಿ ಆತಂಕ ಇರುವುದರ ಹಿನ್ನೆಲೆಯಲ್ಲಿ ಮುಷ್ಕರದಲ್ಲಿ ಭಾಗಿಯಾಗದೆ ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದ್ದಾರೆ.

Karnataka weather: ಆರೆಂಜ್‌ ಅಲರ್ಟ್‌; ಇಂದು ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

ಇಂದು ಬೆಂಗಳೂರು, ಮಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಾಧ್ಯತೆ!

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳು ಸಾಮಾನ್ಯವಾಗಿ ಮೋಡ ಕವಿದ ಆಕಾಶ ಇರಲಿದ್ದು, ಬಿರುಗಾಳಿ ಸಹಿತ ಹಗುರದಿಂದ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ ಸುಮಾರು 28°C ಮತ್ತು 20°C ಇರಬಹುದೆಂದು ನಿರೀಕ್ಷಿಸಲಾಗಿದೆ.

Jewel Blouse Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಜ್ಯುವೆಲ್ ಬ್ಲೌಸ್

ವರಮಹಾಲಕ್ಷ್ಮಿ ಹಬ್ಬಕ್ಕೆ ಟ್ರೆಂಡಿಯಾದ ಜ್ಯುವೆಲ್ ಬ್ಲೌಸ್

Jewel Blouse Trend 2025: ವರಮಹಾಲಕ್ಷ್ಮಿ ಹಬ್ಬಕ್ಕೆ ಗ್ರ್ಯಾಂಡ್ ಲುಕ್ ನೀಡುವಂತಹ ಜ್ಯುವೆಲ್ ಸೀರೆ ಬ್ಲೌಸ್‌ಗಳು ಟ್ರೆಂಡಿಯಾಗಿವೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ದುಬಾರಿ ವೆಚ್ಚದ ಈ ಬ್ಲೌಸ್‌ಗಳು ಹೇಗೆಲ್ಲಾ ವಿನ್ಯಾಸ ಒಳಗೊಂಡಿರುತ್ತವೆ? ಎಂಬುದರ ಬಗ್ಗೆ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮಿ ಕೃಷ್ಣ ಇಲ್ಲಿ ವಿವರಿಸಿದ್ದಾರೆ.

M L A T B Jayachandra: ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು

ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯಬಾರದು

ಸೆಪ್ಟಂಬರ್ ತಿಂಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿರಾ ಕ್ಷೇತ್ರಕ್ಕೆ ಭೇಟಿ ಕೊಡುವು ದರಿಂದ ನಾವು ಕನಿಷ್ಠ 10 ರಿಂದ 15 ಸಾವಿರ ನಿವೇಶನಗಳನ್ನು ಬಡವರಿಗೆ ಹಂಚುವ ಕಾರ್ಯ ಕೈಗೊಳ್ಳಬೇಕಾಗಿದೆ. ನಿವೇಶನ ಹಂಚಿಕೆಯಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆಯಬಾರದು, ಅರ್ಹ ಫಲಾನುಭವಿ ಗಳಿಗೆ ಮಾತ್ರ ನಿವೇಶನ ಸಿಗಬೇಕು

Chikkanayakanahalli News: ಗ್ರಾಮೀಣ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕ ಸುರೇಶ್‌ ಬಾಬುರಿಂದ ಚರ್ಚೆ ​

ತಾಂತ್ರಿಕ ಶಿಕ್ಷಣ ಮತ್ತು ಜಾಗತಿಕ ಪರಿಸರದ ಕುರಿತು ಶಾಸಕರಿಂದ ಚರ್ಚೆ ​

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಶಿಕ್ಷಣ ಒದಗಿಸು ವುದು ಹಾಗೂ ಜಾಗತಿಕ ಪರಿಸರದಲ್ಲಿ ನಮ್ಮ ಪಾತ್ರದ ಬಗ್ಗೆ ಜೆ.ಡಿ.ಎಲ್.ಪಿ. ನಾಯಕ ಮತ್ತು ಶಾಸಕರಾದ ಸಿ.ಬಿ. ಸುರೇಶ್‌ಬಾಬು ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಮಹತ್ವದ ಚರ್ಚೆ ನಡೆಸಿದ್ದಾರೆ.

Chikkaballapur News: ನಾಮನಿರ್ದೇಶನ ಸದಸ್ಯರಾಗಿ ಅನುರಾಧ ಆನಂದ್ ಆಯ್ಕೆ, ತವರ ಸಮ್ಮಾನ

ನಾಮನಿರ್ದೇಶನ ಸದಸ್ಯರಾಗಿ ಅನುರಾಧ ಆನಂದ್ ಆಯ್ಕೆ, ತವರ ಸಮ್ಮಾನ

ಅನುರಾಧ ಆನಂದ್ ಅವರು ಅಧ್ಯಕ್ಷರಾಗಿ ೫ ವರ್ಷಗಳ ಕಾಲ ಕನ್ನಡ ಸೇವೆ ಮಾಡಿದ್ದಾರೆ. ತಾಲ್ಲೂಕು ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳು, ವಿವಿಧ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಾಮನಿರ್ದೇಶಿತ ಸದಸ್ಯರಿರಾಗಿರುವುದು ಗುಡಿಬಂಡೆ ತಾಲ್ಲೂಕಿಗೆ ಹೆಮ್ಮೆಯ ವಿಷಯ.

Chikkaballapur News: ಭಾಗ್ಯನಗರ: ನಾಮಕಾವಸ್ತೆಗೆ ಫುಟ್ ಪಾತ್, ನಡುರಸ್ತೆಯಲ್ಲೇ ಜನರ ಓಡಾಟ

ನಾಮಕಾವಸ್ತೆಗೆ ಫುಟ್ ಪಾತ್, ನಡುರಸ್ತೆಯಲ್ಲೇ ಜನರ ಓಡಾಟ

ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿಯವರ ಅವಧಿಯಲ್ಲಿ ಪಟ್ಟಣದಲ್ಲಿ ವಾಹನ ದಟ್ಟಣೆ ಮತ್ತು ಜನದಟ್ಟಣೆಯಿಂದ ಎದುರಾಗಿ ವಾಹನ ಸವಾರರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸುಮಾರು ಎರಡು ದಶಕಗಳ ಹಿಂದೆಯೇ ಸುಮಾರು 90 ಅಡಿಗಳಷ್ಟು ‌ಷ‌ಷಅಗಲೀಕರಣ ಮಾಡಿ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಜನದಟ್ಟಣೆ ಮತ್ತಷ್ಟು ಹೆಚ್ಚಾಗಿದ್ದು, ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.

ವಯೋ ನಿವೃತ್ತಿ ಹೊಂದಿದ ದೈಹಿಕ ಶಿಕ್ಷಣಾಧಿಕಾರಿಗಳಾದ ಬಿ.ಎನ್.ನಟರಾಜ್ ಗೆ ಅಭೂತಪೂರ್ವ ಬೀಳ್ಕೊಡುಗೆ

ಬಿ.ಎನ್.ನಟರಾಜ್ ಗೆ ಅಭೂತಪೂರ್ವ ಬೀಳ್ಕೊಡುಗೆ

ತಮ್ಮ ದೈಹಿಕ ಶಿಕ್ಷಣ ಕೌಶಲ್ಯದಿಂದ ಜಿಲ್ಲಾ ಮಟ್ಟದ ರಾಜ್ಯ ಮಟ್ಟದ ಹಾಗೂ ರಾಷ್ಟ್ರ ಮಟ್ಟದ ಕ್ರೀಡಾ ಪಟುಗಳನ್ನಾಗಿ ಮಾಡಿ ಹೆಸರು ಗಳಿಸಿದ ಶಿಕ್ಷಣ ರಂಗದಲ್ಲಿ ಸುದೀರ್ಘ‌ ಸೇವೆ ಸಲ್ಲಿಸಿ ಸರ್ವರೊಂದಿಗೆ ಉತ್ತಮ ಬಾಂಧವ್ಯದೊಂದಿಗೆ ಸಾರ್ಥಕ ಸೇವೆ ಸಲ್ಲಿಸಿದ ಇವರ ಸೇವೆ ಇಲಾಖೆಗೆ ತೃಪ್ತಿ ತಂದಿದೆ. ಅವರ ಮುಂದಿನ ನಿವೃತ್ತಿ ಜೀವನವನ್ನು ಬಯಸಿ ಬಂದ ವಿದ್ಯಾರ್ಥಿಗಳಿಗೆ ಹಾಗೂ ಕಿರಿಯ ಶಿಕ್ಷಕರಿಗೆ ಮಾರ್ಗ ದರ್ಶನ ನೀಡುವ ಮೂಲಕ ಶಿಕ್ಷಣ ರಂಗದಲ್ಲಿ ಮಾರ್ಗದರ್ಶಕರಾಗಿ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುತ್ತೇನೆ

Loading...