ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

Gudibande News: ಗುಡಿಬಂಡೆಯಲ್ಲಿ ಸಡಗರದ ರಂಜಾನ್ ಆಚರಣೆ, ಸಸಿ ನೆಟ್ಟು ರಂಜಾನ್ ಆಚರಿಸಿದ ಪರಿಸರ ಪ್ರೇಮಿಗಳು

ಸಸಿ ನೆಟ್ಟು ರಂಜಾನ್ ಆಚರಿಸಿದ ಪರಿಸರ ಪ್ರೇಮಿಗಳು

ತಿಂಗಳ ಕಾಲ ಉಪವಾಸ ವ್ರತ ಕೈಗೊಂಡಿದ್ದ ಮುಸ್ಲಿಂ ಬಾಂಧವರು, ಇಂದು ಬೆಳಿಗ್ಗೆ ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ನಮಾಜ್ ಬಂಡೆಯ ಬಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲು ಬೃಹತ್ ಮೆರವಣಿಗೆಯ ಮೂಲಕ ತೆರಳಿದರು. ನಂತರ ಜಾಮಿಯಾ ಮಸೀದಿಯ ಮೌಲ್ವಿಗಳು ಹಬ್ಬದ ಮಹತ್ವದ ಬಗ್ಗೆ ಧಾರ್ಮಿಕ ಉಪದೇಶ ನೀಡಿದರು.

MLA S.R.Srinivas: ಸದನದಲ್ಲಿ ಚುಕ್ಕಿ ಪ್ರಶ್ನೆಗೆ ಶೀಘ್ರ ಉತ್ತರ ಬಯಸಿದ್ದು ಒಳ್ಳೆ ಬೆಳವಣಿಗೆ : ಎಸ್.ಆರ್.ಶ್ರೀನಿವಾಸ್

ಸದನದಲ್ಲಿ ಚುಕ್ಕಿ ಪ್ರಶ್ನೆಗೆ ಶೀಘ್ರ ಉತ್ತರ ಬಯಸಿದ್ದು ಒಳ್ಳೆ ಬೆಳವಣಿಗೆ

ತಾಲ್ಲೂಕಿನ ಕಸಬ ಹೋಬಳಿ ನಡುವಲಪಾಳ್ಯ, ಬ್ಯಾಡಿಗೆರೆ ಹಾಗೂ ಜವರೇಗೌಡನಪಾಳ್ಯ ಗ್ರಾಮ ದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ರಸ್ತೆ ಅಭಿವೃದ್ಧಿಯ ಅಂದಾಜು 5 ಕೋಟಿ ರೂಗಳ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾ, ಸಭಾಪತಿಗಳು ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದು ಮುಂದಿನ ದಿನದಲ್ಲಿ ಸದನದ ಶಾಸಕರ ಪ್ರಶ್ನೆಗೆ ಶೀಘ್ರ ಉತ್ತರ ಕೊಡುವ ಕೆಲಸ ಆಗಲಿದೆ

Gauribidanur News: ಕಾಚಮಾಚೇನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ನಂಜುಂಡಪ್ಪ ಆಯ್ಕೆ

ಅಧ್ಯಕ್ಷರಾಗಿ ಬೊಮ್ಮಣ್ಣ, ಉಪಾಧ್ಯಕ್ಷರಾಗಿ ನಂಜುಂಡಪ್ಪ ಆಯ್ಕೆ

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೊಮ್ಮಣ್ಣ ಮಾತನಾಡಿ, ಶಾಸಕರು ಹಾಗೂ ನಮ್ಮ ಮುಖಂಡರಾದ ಕೆಎಚ್ ಪುಟ್ಟಸ್ವಾಮಿಗೌಡರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮತದಾರರು ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಸೊಸೈಟಿಯಲ್ಲಿ ಉತ್ತಮ ಆಡಳಿತ ನೀಡುವ ಮೂಲಕ ಜನರ ಋಣ ತೀರಿಸುವುದಾಗಿ ತಿಳಿಸಿದರು.

ಬೆಂಗಳೂರಿನಲ್ಲಿ ಆತಂಕ ಮೂಡಿಸಿದ ಲ್ಯಾಂಬೋರ್ಗಿನಿ ಸ್ಟಂಟ್: ವಿಡಿಯೊ ವೈರಲ್

ಅಪಾಯಕಾರಿ ಸ್ಟಂಟ್: ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು ಎಂ.ಜಿ. ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಸಾರ್ವಜನಿಕರ ಸಂಚಾರ ಮಧ್ಯೆಯೇ ಅಪಾಯಕಾರಿ ಡ್ರಿಫ್ಟಿಂಗ್ ನಡೆಸಿದ ಘಟನೆ ದೊಡ್ಡ ಚರ್ಚೆಗೆ ಕಾರಣವಾಗಿದೆ. ವಿಡಿಯೊ ವೈರಲ್ ಆದ ಬಳಿಕ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ರಸ್ತೆ ಸುರಕ್ಷತೆ ಬಗ್ಗೆ ಮತ್ತೆ ಆತಂಕ ಹೆಚ್ಚಾಗಿದೆ.

MLA S.N. Subbareddy: ಮುಸ್ಲಿಮರ ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಭಾಗಿ

ಮುಸ್ಲಿಮರ ಪವಿತ್ರ ರಂಜಾನ್ ಪ್ರಾರ್ಥನೆಯಲ್ಲಿ ಶಾಸಕ ಸುಬ್ಬಾರೆಡ್ಡಿ ಭಾಗಿ

ಒಂದು ತಿಂಗಳ ಕಾಲ ಉಪವಾಸ ಆಚರಿಸಿದ ಮುಸ್ಲಿಂ ಸಮಾಜದವರು ಶನಿವಾರ ಬೆಳಿಗ್ಗೆ 9 ಗಂಟೆಗೆ ನಡೆದ ಈದ್ ಆಚರಣೆಯ ಸಾಮೂಹಿಕ ಪ್ರಾರ್ಥನೆಯಲ್ಲಿ ನಮಾಜ್ ಮಾಡಿ ರಂಜಾನ್ ಹಬ್ಬಕ್ಕೆ ತೆರೆ ಎಳೆದರು. ಮೌಲ್ವಿಗಳು ಕುರಾನ್ ಪಠಣ ಮಾಡಿದರು. ಸಾಮೂಹಿಕ ಪ್ರಾರ್ಥನೆ ನಂತರ ಪರಸ್ಪರ ಆಲಿಂಗಿಸಿಕೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.

Bus fare hike: ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಸಾರಿಗೆ ಬಸ್‌ ಟಿಕೆಟ್‌ ದರ ಹೆಚ್ಚಳವಾಗುತ್ತಾ?; ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?

ಡೀಸೆಲ್ ಬೆಲೆ ಏರಿಕೆ ಹಿನ್ನೆಲೆ ಸಾರಿಗೆ ಬಸ್‌ ಟಿಕೆಟ್‌ ದರ ಹೆಚ್ಚಳವಾಗುತ್ತಾ?

ಇಸ್ರೇಲ್‌-ಇರಾನ್‌ ಯುದ್ಧದ ಹಿನ್ನೆಲೆಯಲ್ಲಿ ತೈಲ ದರ ಭಾರಿ ಏರಿಕೆಯಾಗಿದೆ. ಇದರಿಂದ ದೇಶದಲ್ಲಿ ಪ್ರೀಮಿಯಂ ಪೆಟ್ರೋಲ್‌ ಮತ್ತು ಬಲ್ಕ್‌ ಡೀಸೆಲ್‌ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಹೀಗಾಗಿ ರಾಜ್ಯದಲ್ಲಿ ಸಾರಿಗೆ ಬಸ್‌ ಟಿಕೆಟ್‌ ಏರಿಕೆಯಾಗುತ್ತಾ? ಎಂಬ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಏನು ಹೇಳಿದರು ಎಂಬ ಮಾಹಿತಿ ಇಲ್ಲಿದೆ.

Zameer Ahmed Khan: ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಅಪ್ಪನ ಹಾಸ್ಯ ಪ್ರಸಂಗ ನೆನೆದ ಮಗ ಝೈದ್‌ ಖಾನ್‌

ಬುರ್ಖಾ ಧರಿಸಿ ಬಸ್​ ಹತ್ತಿದ್ದ ಸಚಿವ ಜಮೀರ್ ಅಹ್ಮದ್; ಯಾಕೆ ಗೊತ್ತಾ?

ಟ್ರಾವೆಲ್​ ಬಿಜಿನೆಸ್‌ನಲ್ಲಿ ನಡೆಯುತ್ತಿದ್ದ ಮೋಸವನ್ನು ಪತ್ತೆಹಚ್ಚಲು ಸಚಿವ ಜಮೀರ್‌ ಅಹ್ಮದ್‌ ಬುರ್ಖಾ ಹಾಕಿಕೊಂಡು ಬಸ್‌ ಏರಿದ್ದರಂತೆ. ಆಗ ಏನು ಮಾಡಿದ್ದರು ಎಂಬ ಬಗ್ಗೆ ಸಂದರ್ಶನವೊಂದರಲ್ಲಿ ಜಮೀರ್‌ ಅಹ್ಮದ್‌ ಅವರ ಪುತ್ರ ಝೈದ್‌ ಖಾನ್‌ ಮಾತನಾಡಿದ್ದಾರೆ.

New Shaadi Mahal: ಶಾಸಕ ಪ್ರದೀಪ್ ಈಶ್ವರ್ ವಾಗ್ದಾನ ರಂಜಾನ್ ಹಬ್ಬದ ಉಡುಗೊರೆಯಾಗಿ ಹುಟ್ಟೂರಿಗೆ ಒಂದು ಕೋಟಿ ವೆಚ್ಚದ ಶಾದಿ ಮಹಲ್ ನಿರ್ಮಾಣ

ಒಂದು ಕೋಟಿ ವೆಚ್ಚದ ಶಾದಿ ಮಹಲ್ ನಿರ್ಮಾಣ

ಶಾಸಕರ ಭರವಸೆಯಿಂದ ಸಂತೋಷಗೊಂಡ ಮುಸಲ್ಮಾನ್ ಬಂಧುಗಳು, ಮತ್ತು ಕಾಲೋನಿಯ ಜನತೆ ನಿಮ್ಮಂತಹ ಸರಳ ಸಜ್ಜನಿಕೆಯ ಶಾಸಕರನ್ನು ಪಡೆದಿರುವುದು ನಮ್ಮ ಪುಣ್ಯ. ಕಾಂಗ್ರೆಸ್ ಪಕ್ಷದ ವರಿಷ್ಠರು ನಿಮಗೆ ಇನ್ನೂ ಹೆಚ್ಚಿನ ರಾಜಕೀಯ ಶಕ್ತಿ ಕೊಟ್ಟು ಜನಸೇವೆ ಮಾಡುವ ಅವಕಾಶವನ್ನು ಒದಗಿಸಲಿ

ಗ್ಯಾಸ್ ಗೋಡೌನ್ ಮುಂದೆ ಜನರ ಪರದಾಟ: ಪೂರೈಕೆ ತಡಕ್ಕೆ ಏಜೆನ್ಸಿ ಸ್ಪಷ್ಟನೆ !

ಸಿಲಿಂಡರ್ ಸಿಗದೆ ಸಾಲಿನಲ್ಲಿ ನಿಂತ ಜನರು: ಗೋಡೌನ್ ಮುಂದೆ ಗೊಂದಲ

ಹಲವಾರು ದಿನಗಳಿಂದ ಬುಕ್ಕಿಂಗ್ ಮಾಡಿದ್ದರೂ ಗ್ಯಾಸ್ ಸಿಗದ ಕಾರಣ ಮಹಿಳೆಯರು ಹಾಗೂ ಹಿರಿಯರು ಗೋಡೌನ್ ಮುಂದೆ ಸಾಲಿನಲ್ಲಿ ನಿಂತು ಕಾದು ಕುಳಿತಿರುವ ದೃಶ್ಯ ಕಂಡುಬಂದಿದೆ. “ಬುಕ್ ಮಾಡಿದರೂ ಗ್ಯಾಸ್ ಸಿಗುತ್ತಿಲ್ಲ. ದಿನಗಳಿಂದ ಕಾದರೂ ಸಿಲಿಂಡರ್ ಮನೆಗೆ ತಲುಪಿಲ್ಲ” ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

Hotel Raid: ಚಿಕ್ಕಬಳ್ಳಾಪುರ ತಹಸಿಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ 22 ವಾಣಿಜ್ಯ 13 ಗೃಹ ಬಳಕೆ ಸಿಲಿಂಡರ್ ವಶ

ಚಿಕ್ಕಬಳ್ಳಾಪುರ ತಹಸಿಲ್ದಾರ್ ನೇತೃತ್ವದಲ್ಲಿ ಮಿಂಚಿನ ದಾಳಿ

ಇರಾನ್ ಮತ್ತು ಇಸ್ರೇಲ್ ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ವಿಶ್ವವನ್ನು ಕಾಡಿರು ವಂತೆ ಭಾರತವನ್ನು ತೀವ್ರವಾಗಿ ಬಾಧಿಸಿದೆ. ಪರಿಣಾಮ ಪೆಟ್ರೋಲಿಯಂ ಉತ್ಪನ್ನಗಳ ಆಮದಿ ನಲ್ಲಿ ಭಾರೀ ಏರುಪೇರಾಗಿದೆ. ಇದನ್ನು ಸರಿ ದೂಗಿಸಲು ಭಾರತ ಸರ್ಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ.

ದಾವಣಗೆರೆಯಲ್ಲಿ ರಂಜಾನ್‌ ನಮಾಜ್‌ ವೇಳೆ ಹೆಜ್ಜೇನು ದಾಳಿ; 25ಕ್ಕೂ ಹೆಚ್ಚು ಮಂದಿಗೆ ಗಾಯ

ರಂಜಾನ್ ನಮಾಜ್‌ ವೇಳೆ ಹೆಜ್ಜೇನು ದಾಳಿ; 25 ಮಂದಿಗೆ ಗಾಯ

Davangere Honey bee attack: ದಾವಣಗೆರೆ ತಾಲೂಕಿನ ಆನಗೋಡು ಬಳಿ ಘಟನೆ ನಡೆದಿದೆ. ರಂಜಾನ್‌ ಹಿನ್ನೆಲೆಯಲ್ಲಿ ರಂಜಾನ್ ಪ್ರಯುಕ್ತ 800ಕ್ಕೂ ಅಧಿಕ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಈ ವೇಳೆ ಹೆಜ್ಜೇನು ದಾಳಿ ನಡೆಸಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸದ್ಗುರು ಸನ್ನಿಧಿಯಲ್ಲಿ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ ನಡೆಸಿಕೊಟ್ಟ ಕಾಶಿ ವಿಶ್ವನಾಥ ದೇವಸ್ಥಾನದ ಅರ್ಚಕರು

ಸದ್ಗುರು ಸನ್ನಿಧಿಯಲ್ಲಿ ನೆರವೇರಿದ ‘ಸಪ್ತಋಷಿ ಆವಾಹನಂ’ ಪ್ರಕ್ರಿಯೆ

Saptarishi Avahanam ritual: ಕಾಶಿ ವಿಶ್ವನಾಥ ದೇವಾಲಯದಲ್ಲಿ ನಡೆಯುವ ಮಾದರಿಯಲ್ಲಿ ವಸಂತಕಾಲದ ವಿಷುವತ್ ಸಂಕ್ರಾಂತಿಯ ಸುಸಂದರ್ಭದಲ್ಲಿ ಸದ್ಗುರು ಸನ್ನಿಧಿ ಬೆಂಗಳೂರಿನಲ್ಲಿರುವ ಯೋಗೇಶ್ವರ ಲಿಂಗದ ಸಾನ್ನಿಧ್ಯದಲ್ಲಿ 'ಸಪ್ತಋಷಿ ಆವಾಹನಂ' ಪ್ರಕ್ರಿಯೆಯನ್ನು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರು ಶುಕ್ರವಾರ ನಡೆಸಿಕೊಟ್ಟಿದ್ದಾರೆ.

Karnataka bypolls: ಉಪಚುನಾವಣೆ ಟಿಕೆಟ್‌; ಮುಸಲ್ಮಾನ ಬಂಧುಗಳ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ ಎಂದ ಛಲವಾದಿ ನಾರಾಯಣಸ್ವಾಮಿ

ಮುಸಲ್ಮಾನರ ಬೇಡಿಕೆಗೆ ಕಾಂಗ್ರೆಸ್‌ ಸೊಪ್ಪು ಹಾಕಿಲ್ಲ: ಛಲವಾದಿ

Chalavadi Narayanaswamy: ಹಿಂದೆ ಕಾಂಗ್ರೆಸ್ಸಿನಲ್ಲಿ ಮಂಡ್ಯ ಹೊರತುಪಡಿಸಿ ಇತರ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮುಸಲ್ಮಾನ್ ಬಂಧುಗಳಿಗೇ ಟಿಕೆಟ್ ಕೊಡುತ್ತಿದ್ದರು. ಈಗ ಎಲ್ಲ ಕಡೆಯಲ್ಲಿ ಅವರಿಗೆ ಕಾಂಗ್ರೆಸ್ ಕೊಕ್ ಕೊಡುತ್ತ ಬಂದಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

Madhugiri News: ರಂಜಾನ್‌ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗಿ; ಪರಸ್ಪರ ಗೌರವ, ಐಕ್ಯತೆಯಿಂದ ಬಾಳಲು ಕರೆ

ರಂಜಾನ್‌ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಭಾಗಿ

Madhugiri News: ಮಧುಗಿರಿ ಪಟ್ಟಣದ ಶಿರಾ ಗೇಟ್ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಕೆ.ಎನ್. ರಾಜಣ್ಣ ಅವರು ಶನಿವಾರ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಈದ್ಗಾ ಮೈದಾನದಲ್ಲಿ ಶಾಶ್ವತವಾಗಿ ಶೆಡ್ ನಿರ್ಮಾಣ ಮಾಡಿಸಲಾಗುವುದು. ಇದರಿಂದ ಸಾಮೂಹಿಕ ಪ್ರಾರ್ಥನೆ ಹಾಗೂ ಇತರೆ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದ್ದಾರೆ.

Bengaluru Water Bill Relief: ಬೆಂಗಳೂರು ಜಲಮಂಡಳಿಯಿಂದ ಗುಡ್‌ನ್ಯೂಸ್‌; ನೀರಿನ ಬಿಲ್ ಬಾಕಿ ಪಾವತಿಗೆ OTS ಯೋಜನೆ ಜಾರಿ, ಶೇ.100 ಬಡ್ಡಿ ಮನ್ನಾ

ಬಿಡಬ್ಲ್ಯುಎಸ್‌ಎಸ್‌ಬಿ ನೀರಿನ ಬಿಲ್ ಬಾಕಿ ಪಾವತಿಗೆ ಶೇ.100 ಬಡ್ಡಿ ಮನ್ನಾ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ. ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು 3 ತಿಂಗಳ ಅವಧಿಯ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವ ಮಕ್ಕಳಿಗಾಗಿ “ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

“ಐರನ್‌ ಶಕ್ತಿ ಸಾಲ್ಟ್‌” ಬಿಡುಗಡೆ ಮಾಡಿದ ಐಟಿಸಿ

ಮಕ್ಕಳು ಮತ್ತು ವಯಸ್ಕರಿಗೆ ದೈನಂದಿನ ಕಬ್ಬಿಣದ ಅವಶ್ಯಕತೆ 11 ರಿಂದ 32 ಮಿಗ್ರಾಂ ವರೆಗೆ ಇರಲಿದೆ. ಇದು 2 ರಿಂದ 7 ಬಟ್ಟಲು ಪಾಲಕ್ ಅಥವಾ 7 ರಿಂದ 21 ಬೀಟ್‌ರೂಟ್‌ ತಿನ್ನುವುದಕ್ಕೆ ಸಮಾನ. ಆದರೆ, ಇಷ್ಟು ಪ್ರಮಾಣದಲ್ಲಿ ತಿನ್ನಲು ಸಾಧ್ಯವಿಲ್ಲ. ಪ್ರಸ್ತುತ ಐಟಿಸಿ ಪರಿಚಯಿಸಿರುವ ಐರನ್‌ ಶಕ್ತಿ ಸಾಲ್ಟ್‌ ನ ಒಂದು ಟೀ ಚಮಚದಲ್ಲಿ ಶೇ. 25ರಷ್ಟು ಕಬ್ಬಿಣಾಂಶ ಒದಗಿಸಲಿದೆ

ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತದ ಮೊದಲ DCGI-ಅನುಮೋದಿತ ಸೆಮಾಗ್ಲುಟೈಡ್ ಇಂಜೆಕ್ಷನ್ 'ಒಬೆಡಾ®' ಅನ್ನು ಟೈಪ್ 2 ಮಧುಮೇಹಕ್ಕೆ ಬಿಡುಗಡೆ

ಭಾರತದ ಮೊದಲ DCGI-ಅನುಮೋದಿತ ಟೈಪ್ 2 ಮಧುಮೇಹಕ್ಕೆ ಬಿಡುಗಡೆ

ಡಾ.ರೆಡ್ಡೀಸ್ ಜೆನೆರಿಕ್ ಸೆಮಾಗ್ಲುಟೈಡ್‌ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಅನುಮೋದನೆಯನ್ನು ಪಡೆದ ಮೊದಲ ಭಾರತೀಯ ಕಂಪನಿಯಾಗಿದೆ. ಈ ಬಿಡುಗಡೆ ಯು ಕಂಪನಿಯು ಪೇಟೆಂಟ್ ಅವಧಿ ಮುಗಿದ ನಂತರ ಈ ವಿಭಾಗಕ್ಕೆ ಮೊದಲ ದಿನ ಪ್ರವೇಶ ವನ್ನು ಒತ್ತಿ ಹೇಳುತ್ತದೆ, ಭಾರತದಲ್ಲಿ ಪೂರೈಸದ ರೋಗಿಗಳ ಅಗತ್ಯಗಳನ್ನು ಪೂರೈಸಲು ಅದರ ಸಿದ್ಧತೆಯನ್ನು ಪ್ರದರ್ಶಿಸುತ್ತದೆ.

ಭಾರತೀಯರ ಸುರಕ್ಷತೆಗೆ ಕತಾರ್‌ ಸರ್ಕಾರದಿಂದ ಸಂಪೂರ್ಣ ಸಹಕಾರ

ಕತಾರ್‌ನಲ್ಲಿ ಭಾರತೀಯರು ಸುರಕ್ಷಿತ

ಯುಎಸ್, ಇಸ್ರೇಲ್ ಸೇನಾಪಡೆಯು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಇದಕ್ಕೆ ಪ್ರತೀಕಾರವಾಗಿ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ದಾಳಿ ನಡೆಸುತ್ತಿದೆ. ಕತಾರ್ ನ ಹಲವು ಭಾಗಗಳ ಮೇಲೂ ದಾಳಿ ನಡೆಸಲಾಗಿತ್ತು. ಆದರೆ ಕತಾರ್ ಸರ್ಕಾರ ಜನತೆಯ ಸುರಕ್ಷತೆಗೆ ಸಂಪೂರ್ಣ ಒತ್ತು ನೀಡಿದ್ದು, ಭಾರತೀಯರು ಇಲ್ಲಿ ಸುರಕ್ಷಿತವಾಗಿದ್ದಾರೆ ಎಂದು ಕನ್ನಡಿಗರಾದ ಕತಾರ್ ಭಾರತೀಯ ಕ್ರೀಡಾ ಕೇಂದ್ರದ ಸಲಹಾ ಮಂಡಳಿ ಸದಸ್ಯರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ತಿಳಿಸಿದ್ದಾರೆ.

ಮೂಡುಬಿದಿರೆ ಇನ್‌ಸ್ಪೆಕ್ಟರ್‌ ಸಂದೇಶ್ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ ಎಂದ ಕಮಿಷನರ್

ಇನ್‌ಸ್ಪೆಕ್ಟರ್‌ ಸಂದೇಶ್ ಲೈಂಗಿಕ ಕಿರುಕುಳ ನೀಡಿಲ್ಲ ಎಂದ ಕಮಿಷನರ್

ಇಬ್ಬರು ಮಹಿಳೆಯರ ಆರೋಪ ಸುಳ್ಳು ಎಂದು ಪೊಲೀಸ್ ವರದಿಯಲ್ಲಿ ತಿಳಿದು ಬಂದಿದೆ. ಮಾಧ್ಯಮಗಳ ಮುಂದೆ ಬಂದಿದ್ದ ಆ ಮಹಿಳೆಯರಿಗೆ ಕಿರುಕುಳ ನೀಡಿಲ್ಲ. ಪ್ರಚೋದನೆಗೆ ಒಳಪಟ್ಟು ಇನ್‌ಸ್ಪೆಕ್ಟರ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಮಹಿಳೆಯರ ಆರೋಪ ಸುಳ್ಳು ಮತ್ತು ಪ್ರೇರಿತ ಎಂದು ಸಾಬೀತು ಆಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದರು.

Belagavi Digital Arrest: ಬೆಳಗಾವಿಯಲ್ಲಿ ವೃದ್ಧ ಉದ್ಯಮಿಯ ಡಿಜಿಟಲ್ ಅರೆಸ್ಟ್‌; ಬರೋಬ್ಬರಿ 15 ಕೋಟಿ ರೂ. ಪೀಕಿದ ಸೈಬರ್‌ ವಂಚಕರು!

ಬೆಳಗಾವಿಯಲ್ಲಿ ಡಿಜಿಟಲ್ ಅರೆಸ್ಟ್‌; ವೃದ್ಧ ಉದ್ಯಮಿಗೆ 15 ಕೋಟಿ ವಂಚನೆ

ನಿಮ್ಮ ಬ್ಯಾಂಕ್ ಖಾತೆಯಿಂದ ಅಕ್ರಮ ಹಣ ವರ್ಗಾವಣೆ ಆಗಿದೆ ಎಂದು ಬೆದರಿಕೆ ಹಾಕಿರುವ ಸೈಬರ್‌ ಕಳ್ಳರು, ಉದ್ಯಮಿಯಿಂದ ಹಂತ ಹಂತವಾಗಿ 15 ಕೋಟಿ ಹಣ ವಸೂಲಿ ಮಾಡಿದ್ದಾರೆ. ಈ ಸಂಬಂಧ ಬೆಳಗಾವಿ ನಗರ ಸಿಇಎನ್ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Zameer ahmed khan: ದಾವಣಗೆರೆ ದಂಗಲ್:‌ ಜಮೀರ್‌ ಅಹಮದ್‌ ರಾಜೀನಾಮೆ ಬಾಂಬ್

ದಾವಣಗೆರೆ ದಂಗಲ್:‌ ಜಮೀರ್‌ ಅಹಮದ್‌ ರಾಜೀನಾಮೆ ಬಾಂಬ್

ಕರ್ನಾಟಕದ ದಾವಣೆಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಕ್ಷೇತ್ರದ ವಿಧಾನಸಭಾ ಉಪಚುನಾವಣೆ ಕುರಿತು ಕಾಂಗ್ರೆಸ್ ಸತತ ಸಭೆ ನಡೆಸುತ್ತಿದೆ. ರಾಜ್ಯ ನಾಯಕರ ಜೊತೆ ಸಭೆ ನಡೆಸುತ್ತಿರುವ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದೆ ನಾಯಕರು ವಿವಿದ ಭೇಡಿಕೆ ಮುಂದಿಟ್ಟಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮುಸ್ಲಿಮ್ ನಾಯಕರಿಗೆ ನೀಡಬೇಕು ಎಂದು ಜಮೀರ್ ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಘೋರ ಘಟನೆ; ತಾಯಿಯೊಂದಿಗೆ ದೇವಸ್ಥಾನಕ್ಕೆ ತೆರಳುವ ವೇಳೆ ಲಾರಿ ಹರಿದು 4 ವರ್ಷದ ಬಾಲಕಿ ಸಾವು

ದೇವಸ್ಥಾನಕ್ಕೆ ತೆರಳುವ ವೇಳೆ ಲಾರಿ ಹರಿದು 4 ವರ್ಷದ ಬಾಲಕಿ ಸಾವು

ಬೆಂಗಳೂರಿನ ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತೇಗೌಡನ ಪಾಳ್ಯದಲ್ಲಿ ಅಪಘಾತ ನಡೆದಿದೆ. ತಾಯಿ ಜತೆ ದೇವಸ್ಥಾನಕ್ಕೆ ಹೋಗುತ್ತಿದ್ದ ಬಾಲಕಿ ಮೇಲೆ ಲಾರಿ ಹರಿದಿದ್ದರಿಂದ ದುರಂತ ಸಂಭವಿಸಿದೆ. ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Diesel Price: ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ತುಟ್ಟಿಯಾಯ್ತು ಬಲ್ಕ್‌ ಡೀಸೆಲ್‌, ಏರಲಿದೆಯಾ ಬಸ್‌ ಟಿಕೆಟ್‌ ದರ?

ಕೈಗಾರಿಕಾ ಉದ್ದೇಶಕ್ಕೆ ಬಳಸುವ ಬಲ್ಕ್ ಡಿಸೇಲ್ ದರ ಲೀಟರ್‌ಗೆ 22 ರೂ. ಏರಿಕೆಯಾಗಿದೆ. 87.67 ರೂಪಾಯಿ ಇದ್ದ ಬಲ್ಕ್ ಡಿಸೇಲ್ ದರ 109.59 ರೂಪಾಯಿಗೆ ಏರಿಕೆಯಾಗಿದೆ. ಸಾರಿಗೆ ನಿಗಮಗಳಿಂದಲೂ ಬಲ್ಕ್‌ನಲ್ಲೇ ಡೀಸೆಲ್ ಖರೀದಿ ಮಾಡಲಾಗುತ್ತದೆ. ಇದರಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಟಿಕೆಟ್ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

First Night: ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಫಸ್ಟ್‌ನೈಟ್‌ ಮಾಡಿಕೊಳ್ಳದ ಗಂಡ, ಪೊಲೀಸರಿಗೆ ದೂರು ನೀಡಿದ ಹೆಂಡತಿ

ಮದುವೆಯ ದಿನದಿಂದಲೂ ತನ್ನ ಪತಿ ಯಾವುದೇ ದೈಹಿಕ ಸಂಬಂಧವನ್ನು ತಪ್ಪಿಸಿದ್ದಾನೆ.‌ ಸಾಮಾನ್ಯ ವೈವಾಹಿಕ ಜೀವನದ ನಿರೀಕ್ಷೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರೂ, ತನ್ನ ಪತಿ ನಿರಂತರವಾಗಿ ದೂರ ಉಳಿದು 'ಮೊದಲ ರಾತ್ರಿ'ಗೆ ಒಪ್ಪಲಿಲ್ಲ. ಇದು ತನಗೆ ತೀವ್ರ ಮಾನಸಿಕ ಯಾತನೆಯನ್ನು ಉಂಟುಮಾಡಿತು ಎಂದು ಮಹಿಳೆ ತಮ್ಮ ನೋವು ತೋಡಿಕೊಂಡಿದ್ದಾರೆ.

Loading...