ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಪ್ರತಾಪ್ ಸಿಂಹ ಹೇಳಿಕೆಗೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಖಡಕ್ ತಿರುಗೇಟಿನ ಮೂಲಕ ಆಗ್ರಹ

ದಲಿತರ ಹಕ್ಕು, ಗೌರವ ಮತ್ತು ಅಸ್ತಿತ್ವದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ

ಡಿಎಸ್‌ಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ನೀಲಿ ಶಾಲು ಧರಿಸುವುದನ್ನು ಉಲ್ಲೇಖಿಸಿ ಪ್ರತಾಪ್ ಸಿಂಹ ಪ್ರಶ್ನಿಸಿದ್ದರು. “ಏನೇ ಮಾಡಿದರೂ ಡಿಎಸ್‌ಎಸ್‌ನವರು ನೀಲಿ ಶಾಲು ಹಾಕಿಕೊಂಡು ಬರುತ್ತೀರಿ, ಮೊದಲು ಅಂಬೇಡ್ಕರ್ ಅವರನ್ನು ಓದಿಕೊಳ್ಳಿ ಎನ್ನುತ್ತಾ ದಲಿತ ಸಮುದಾಯವನ್ನು ಕೆಣಕಿ  ಮಾತನಾಡಿರುವುದು ವಿವಾದಕ್ಕೆ ಕಾರಣವಾಗಿದೆ.

Chinthamani News: ರೈತರ ನಂಬಿಕೆ ಎಂದಿಗೂ ಹುಸಿಗೊಳಿಸುವುದಿಲ್ಲ: ಆವಲಪ್ಪ

ರೈತರ ನಂಬಿಕೆ ಎಂದಿಗೂ ಹುಸಿಗೊಳಿಸುವುದಿಲ್ಲ: ಆವಲಪ್ಪ

ರೈತರ ಹಿತ ಕಾಯುವುದು ಹಾಗೂ ಹಾಲು ಒಕ್ಕೂಟವನ್ನು ಮತ್ತಷ್ಟು ಬಲಪಡಿಸು ವುದು ನಮ್ಮ ಪ್ರಮುಖ ಆದ್ಯತೆಯಾಗಿದ್ದು, ರೈತರು ನಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಎಂದಿಗೂ ಹುಸಿ ಗೊಳಿಸುವುದಿಲ್ಲ ಎಂದು ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ಕೆ.ಎನ್.ಆವಲಪ್ಪ ಹೇಳಿದರು.

Mahakumbhabhisheka: ನಾಲ್ಕು ನೂರು ವರ್ಷಗಳ ಇತಿಹಾಸದ ಗಂಗಾಧರೇಶ್ವರ ದೇವಾಲಯದಲ್ಲಿ ಮಹಾ ಕುಂಭಾಭಿಷೇಕ

ಮಳೆ-ಬೆಳೆ ಸಮೃದ್ಧಿಗಾಗಿ ಗ್ರಾಮಸ್ಥರಿಂದ ವಿಶೇಷ ಪ್ರಾರ್ಥನೆ

ಪುರಾತನ ದೇವಾಲಯದಲ್ಲಿ ಹಲವು ದಶಕಗಳ ಬಳಿಕ ನಡೆದ ಕುಂಭಾಭಿಷೇಕ ಮಹೋತ್ಸವಕ್ಕೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯವನ್ನು ದೀಪಾಲಂಕಾರ, ಬಾಳೆಕಂಬ ಹಾಗೂ ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿದ್ದು, ಭಕ್ತರ ಗಮನ ಸೆಳೆಯಿತು.

Law college started first time: ಹಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಲಾ ಕಾಲೇಜ್ ಆರಂಭ

ಹಾವೇರಿಯಲ್ಲಿ ಪ್ರಪ್ರಥಮ ಬಾರಿಗೆ ಲಾ ಕಾಲೇಜ್ ಆರಂಭ

ನಗರದ ತುಳಸಿ ಐಕಾಲ್ ಲೇಔಟಿನ ನೆಹರು ಪಾಪ್ಯುಲರ್ ಸ್ಕೂಲ್ ಕಟ್ಟಡದಲ್ಲಿ ದೇವಿಕಾ ಕಾನೂನು ಮಹಾವಿದ್ಯಾಲಯವನ್ನು ಹಾವೇರಿ ನಗರದ ಜಿಲ್ಲಾ ಕೇಂದ್ರದಲ್ಲಿ ಪ್ರಪ್ರಥಮ ಬಾರಿಗೆ ಆರಂಭ ಮಾಡಲಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದೇ ಮ್ಯಾನೇಜಮೆಂಟಿನ ಇನ್ನೊಂದು ಕಾಲೇಜ್ ರಾಣೆಬೆನ್ನೂರಿನಲ್ಲಿ ಆರಂಭಿಸಿದ್ದೇವೆ.

ಮಿಶ್ರತಳಿ ಹಾಲಿನ ಉತ್ಪನ್ನಗಳಿಗೂ ದೇಸಿ ಗೋವಿನ ಉತ್ಪನ್ನಗಳಿಗೂ ವ್ಯತ್ಯಾಸವಿದೆ: ರಾಘವೇಶ್ವರ ಭಾರತೀ ಶ್ರೀ

ಮಿಶ್ರತಳಿ-ದೇಸಿ ಗೋವಿನ ಹಾಲು ಉತ್ಪನ್ನಕ್ಕೆ ವ್ಯತ್ಯಾಸವಿದೆ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಅನ್ನವನ್ನೋ, ಸಾರನ್ನೋ ಎರಡನೇ ಬಾರಿ ಬಿಸಿ ಮಾಡಿದರೆ ಅದು ತನ್ನ ತನವನ್ನು ಕಳೆದುಕೊಳ್ಳುತ್ತದೆ. ಆದರೆ ತುಪ್ಪದ ಸಾಮರ್ಥ್ಯ ಅಪರಿಮಿತವಾಗಿದ್ದು, ತುಪ್ಪವನ್ನು ಸಾವಿರ ಬಾರಿ ಬಿಸಿ ಮಾಡಿದರೂ ಅದು ಕೆಡುವುದಿಲ್ಲ. ಸಾವಿರ ಬಾರಿ ಪಾಕ ಮಾಡಿದಾಗ ತುಪ್ಪ ಅಪರಿಮಿತವಾದ ಶಕ್ತಿಯನ್ನು ಹೊಂದುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದ್ದಾರೆ.

ಕಿಡಿಗೇಡಿಗಳ ಅಟ್ಟಹಾಸ; ಹೊಳವನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಕಿಟಕಿ ಗಾಜುಗಳು ಪುಡಿಪುಡಿ!

ಕಿಡಿಗೇಡಿಗಳ ಅಟ್ಟಹಾಸ; ಹೊಳವನಹಳ್ಳಿ ಸರ್ಕಾರಿ ಶಾಲೆ ಕಿಟಕಿ ಗಾಜು ಪುಡಿಪುಡಿ

Koratagere News: ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯ ಕೊಠಡಿಯ ಕಿಟಕಿ ಗ್ಲಾಸ್‌ಗಳಿಗೆ ಯಾರೋ ದುಷ್ಕರ್ಮಿಗಳು ತಡರಾತ್ರಿ ಕಲ್ಲು ತೂರಾಟ ಮಾಡಿದ್ದು, ನಾಲ್ಕು ಸಿಸಿ ಕ್ಯಾಮೆರಾಗಳು ಹಾಗೂ ಕೊಠಡಿಯ ಕಿಟಕಿಯ ಗಾಜುಗಳು ಪುಡಿಪುಡಿಯಾಗಿರುವ ಘಟನೆ ಜರುಗಿದೆ.

ದೇಶದ 6,000 ತಾಲೂಕುಗಳಲ್ಲಿ ಸಾಯಿ ಸ್ವಾಸ್ಥ್ಯ ಆರೋಗ್ಯ ಕೇಂದ್ರ ಆರಂಭಿಸುವ ಉದ್ದೇಶವಿದೆ: ಸದ್ಗುರು ಶ್ರೀ ಮಧುಸೂದನ ಸಾಯಿ

ದೇಶದ 6,000 ತಾಲೂಕುಗಳಲ್ಲಿ ಆರೋಗ್ಯ ಕೇಂದ್ರ ಆರಂಭಿಸುವ ಉದ್ದೇಶ: ಸದ್ಗುರು

Sadguru Sri Madhusudan Sai: ಆರೋಗ್ಯ ಕ್ಷೇತ್ರದಲ್ಲಿ ಸೂಕ್ತ ಮೂಲಸೌಕರ್ಯ ನಿರ್ಮಾಣ ಈ ಕ್ಷಣದ ತುರ್ತು. ಇದಕ್ಕೆ ನಾವು ಆದ್ಯತೆ ನೀಡಬೇಕಿದೆ. ವೈದ್ಯಕೀಯ ರಂಗದ ವಿಪರೀತ ವಾಣಿಜ್ಯೀಕರಣ ಸದಾ ಅಪಾಯಕಾರಿ. ವಾಣಿಜ್ಯದ ಹಿಡಿತದಿಂದ ಆರೋಗ್ಯ ಕ್ಷೇತ್ರವನ್ನು ಮುಕ್ತಗೊಳಿಸಬೇಕು ಎನ್ನುವ ಉದ್ದೇಶದಿಂದ ನಾವು ಉಚಿತ ವೈದ್ಯಕೀಯ ಶಿಕ್ಷಣ ಕಾಲೇಜು ಆರಂಭಿಸಿದೆವು ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.

Bengaluru Rains: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಮಳೆ ಅಬ್ಬರ; ಹಲವೆಡೆ ರಸ್ತೆಗಳು ಜಲಾವೃತ!

ರಾಜಧಾನಿಯಲ್ಲಿ ಮತ್ತೆ ಮಳೆ ಅಬ್ಬರ; ಹಲವೆಡೆ ರಸ್ತೆಗಳು ಜಲಾವೃತ!

ರಾಜಧಾನಿ ಬೆಂಗಳೂರಿನಲ್ಲಿ ಮುಂಜಾನೆಯಿಂದ ಬಿಸಿಲಿನ ಬೇಗೆಗೆ ತತ್ತರಿಸಿದ್ದ ಜನರಿಗೆ ಸಂಜೆ ವೇಳೆ ಮಳೆರಾಯ ತಂಪೆರೆದಿದ್ದಾನೆ. ಮುಂದಿನ 24 ಗಂಟೆಗಳು ಕಾಲ ಬೆಂಗಳೂರು ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಪ್ರದೇಶಗಳಲ್ಲಿ ಭಾರಿ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Chetan Ahimsa: ಯುವಜನರೇ ಬದಲಾವಣೆಯ ಶಕ್ತಿ: ಚೇತನ್ ಅಹಿಂಸಾ

ಯುವಜನರೇ ಬದಲಾವಣೆಯ ಶಕ್ತಿ: ಚೇತನ್ ಅಹಿಂಸಾ

ಇಂದಿನ ರಾಜಕೀಯದಲ್ಲಿ ಜನರ ಮೂಲಭೂತ ಸಮಸ್ಯೆಗಳಿಗಿಂತ ವೈಯಕ್ತಿಕ ಹಾಗೂ ಪಕ್ಷದ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದೆ ಎಂಬುದು ತಮ್ಮ ಅಭಿಪ್ರಾಯವಾಗಿದೆ. ಅಂಬೇಡ್ಕರ್ ಅವರ ಹೆಸರನ್ನು ಬಳಸಿಕೊಳ್ಳುವುದಕ್ಕಿಂತ ಅವರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಅನುಷ್ಠಾನಗೊಳಿಸುವ ಅಗತ್ಯವಿದೆ

ಕಸಾಪ ಚುನಾವಣೆಯಲ್ಲಿ ಜಾಣಗೆರೆ ವೆಂಕಟರಾಮಯ್ಯಗೆ ಬೆಂಬಲ ನೀಡಿ: ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಕರೆ

ಕಸಾಪ ಚುನಾವಣೆಗೆಯಲ್ಲಿ ಜಾಣಗೆರೆ ವೆಂಕಟರಾಮಯ್ಯಗೆ ಬೆಂಬಲ ನೀಡಿ

Tumkur News: ಕಸಾಪ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಪ್ರಭಾವಿ ಅಧಿಕಾರಿಗಳ ಅವಶ್ಯಕತೆಯಿಲ್ಲ. ಬದಲಿಗೆ ಸೇವಾ ಮನೋಭಾವ, ನೈತಿಕ ಶುದ್ಧತೆ ಮತ್ತು ಪಾರದರ್ಶಕತೆ ಹೊಂದಿರುವ ಜಾಣಗೆರೆ ವೆಂಕಟರಾಮಯ್ಯ ಅವರಂತಹ ಪ್ರಾಮಾಣಿಕ ವ್ಯಕ್ತಿಯ ಆಯ್ಕೆ ಅನಿವಾರ್ಯ ಎಂದು ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ತಿಳಿಸಿದ್ದಾರೆ.

Soujanya Case: ಸೌಜನ್ಯ ಪ್ರಕರಣದ ಮರುತನಿಖೆ ಆದೇಶವನ್ನು ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

ಸೌಜನ್ಯ ಪ್ರಕರಣದ ಮರುತನಿಖೆ ಆದೇಶ ಸ್ವಾಗತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ

ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶದ ಪ್ರತಿಕ್ರಿಯಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಆಡಳಿತ ಮಂಡಳಿ, ಕುಮಾರಿ ಸೌಜನ್ಯಾಳಿಗೆ ನ್ಯಾಯ ದೊರೆಯಬೇಕು ಎಂಬುದು ಶ್ರೀ ಕ್ಷೇತ್ರದ ದೃಢವಾದ ಆಶಯವಾಗಿದೆ. ಈಗ ಆದೇಶಿಸಲಾಗಿರುವ ಮರು ತನಿಖೆಯು ಸಂಪೂರ್ಣ ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಯಲಿ ಎಂದು ತಿಳಿಸಿದೆ.

'ವಂದೇ ಮಾತರಂ'ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ ಮೊಳಗಲಿದೆ ಎಂದ ಪ್ರಲ್ಹಾದ್‌ ಜೋಶಿ

'ವಂದೇ ಮಾತರಂ'ಗೆ ಕತ್ತರಿ; ಕಾಂಗ್ರೆಸ್ ವಿರುದ್ಧ ಸಂಸತ್ತಿನಲ್ಲಿ ರಣಕಹಳೆ

Pralhad Joshi: ವಿಧಾನಸೌಧದಲ್ಲಿ 'ವಂದೇ ಮಾತರಂ' ಗೀತೆಯನ್ನು ಕಾನೂನು ಬಾಹಿರವಾಗಿ ಕತ್ತರಿಸಿ, ಕೇವಲ ಎರಡೇ ಚರಣವನ್ನು ಹಾಡಿ ದೇಶವಿರೋಧಿ ನೀತಿ ಪ್ರದರ್ಶಿಸಿದ್ದು, ಇದರ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಲಿದ್ದೇವೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

Chikkaballapur News: ದೊರಣಾಲಪಲ್ಲಿ ಗ್ರಾಮಕ್ಕೆ ಭೇಟಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಸೂಚನೆ

ದೊರಣಾಲಪಲ್ಲಿ ಗ್ರಾಮಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ

ಜಿಲ್ಲಾಧಿಕಾರಿಗಳ ಮನವಿಗೆ ಸ್ಪಂದಿಸಿದ ಬೀರಪ್ಪ ಅವರು, ತಮ್ಮ ಪ್ರಸ್ತುತ ಚಾಲ್ತಿಯಲ್ಲಿರುವ ಕೊಳವೆಬಾವಿಯಿಂದ ಗ್ರಾಮದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಪೂರೈಸಲು ಒಪ್ಪಿಗೆ ನೀಡಿದರು. ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಲು ಸಹಕರಿಸುವುದಾಗಿ ಜಿಲ್ಲಾಧಿಕಾರಿಗಳಿಗೆ ಭರವಸೆ ನೀಡಿದರು.

ಸಮಸ್ಯೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲ್ಲ; ರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ ಎಂದ ಸಿಎಂ

ರಾಜ್ಯದ ರೈತರು, ಜನರ ರಕ್ಷಣೆಗೆ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

Karnataka special assembly session 2026: ಕಳೆದ ಅಧಿವೇಶನದಲ್ಲಿ 10 ದಿನ ಸಮಯ ಇತ್ತು. ವಿರೋಧ ಪಕ್ಷಗಳು ಅದನ್ನು ಸರಿಯಾಗಿ ಬಳಸಿಕೊಳ್ಳದೆ ವ್ಯರ್ಥ ಮಾಡಿದವು. ಇಂದು ಕಸ್ತೂರಿ ರಂಗನ್ ವರದಿ ಪರಿಣಾಮ ಹಾಗೂ ನಾಡಿನ ರೈತರ, ಬರದ ಬಗ್ಗೆ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳಲು 3 ದಿನಗಳ ಅಧಿವೇಶನವನ್ನು ಕರೆದಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಹಿರಿಯರಿಗೆ ಆಸರೆಯಾಗಬೇಕಾದ ಕೇಂದ್ರಕ್ಕೇ ಆಸರೆಯಿಲ್ಲ!: ಜಿಲ್ಲಾ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದಲ್ಲಿ ಮೂಲಸೌಕರ್ಯಗಳ ಕೊರತೆ

ಹಿರಿಯರಿಗೆ ಆಸರೆಯಾಗಬೇಕಾದ ಕೇಂದ್ರಕ್ಕೇ ಆಸರೆಯಿಲ್ಲ!

ಕೇಂದ್ರದ ಎದುರು ಇರುವ ನೀರಿನ ಸಂಪಿಗೆ ಮುಚ್ಚಳವೇ ಇಲ್ಲದ ಸ್ಥಿತಿಯಲ್ಲಿದೆ. ಸಾರ್ವಜನಿಕರು ಹಾಗೂ ಹಿರಿಯ ನಾಗರಿಕರು ಓಡಾಡುವ ಪ್ರದೇಶದಲ್ಲಿರುವ ಈ ತೆರೆದ ಸಂಪಿಗೆ ಆಯತಪ್ಪಿ ಯಾರಾ ದರೂ ಬಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹೀಗಿದ್ದರೂ ಸುರಕ್ಷತಾ ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

Kasturirangan report: ಕಸ್ತೂರಿರಂಗನ್‌ ವರದಿ ಬಗ್ಗೆ ನಿರ್ಣಯ ಮಾಡಿ ಕೈತೊಳೆದುಕೊಳ್ಳಬೇಡಿ; ಭೌತಿಕ ಸಮೀಕ್ಷೆಗೆ ವಿಜಯೇಂದ್ರ ಆಗ್ರಹ

ಕಸ್ತೂರಿರಂಗನ್‌ ವರದಿ; ಭೌತಿಕ ಸಮೀಕ್ಷೆ ನಡೆಸಲು ವಿಜಯೇಂದ್ರ ಆಗ್ರಹ

ರಾಜ್ಯ ಸರಕಾರ ಒಂದೆಡೆ ಕಸ್ತೂರಿರಂಗನ್‌ ವರದಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎನ್ನುತ್ತದೆ. ಮತ್ತೊಂದೆಡೆ ಆಡಳಿತ ಪಕ್ಷದ ಶಾಸಕರು, ಸಚಿವರು ಜನರೊಂದಿಗೆ ಪಾದಯಾತ್ರೆ ನಡೆಸುತ್ತಿರುವುದು ಯಾವ ಸಂದೇಶ ನೀಡುತ್ತದೆ ಎಂದು ಸದನದಲ್ಲಿ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಪ್ರಶ್ನಿಸಿದ್ದಾರೆ.

Karnataka Recruitment Scam: ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್ ಆದೇಶ

ಕೆಪಿಎಸ್‌ಸಿ ನೇಮಕಾತಿ ಹಗರಣದ ತನಿಖೆಗೆ ಎಸ್‌ಐಟಿ ರಚಿಸಲು ಹೈಕೋರ್ಟ್ ಆದೇಶ

KPSC Veterinary Officers recruitment: ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧಿಸಿ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರ ನೇತೃತ್ವದಲ್ಲಿ ಎಸ್‌ಐಟಿ ರಚನೆಗೆ ಹೈಕೋರ್ಟ್‌ ಆದೇಶ ನೀಡಿದೆ. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೂ ಅಗತ್ಯ ಸಹಕಾರ ಹಾಗೂ ಮಾಹಿತಿ ನೀಡುವಂತೆ ಎಸ್‌ಐಟಿಗೆ ನಿರ್ದೇಶನ ನೀಡಲಾಗಿದೆ.

Urdu language: ತುಳು ಬಳಿಕ ಉರ್ದುಗೆ ಅಧಿಕೃತ ಭಾಷೆ ಮಾನ್ಯತೆ ನೀಡಲು ಎಸ್‌ಡಿಪಿಐ ಒತ್ತಾಯ; ಸಿಎಂಗೆ ಪತ್ರ

ತುಳು ಬಳಿಕ ಉರ್ದು ಭಾಷೆಗೆ ಮಾನ್ಯತೆ ನೀಡಲು ಎಸ್‌ಡಿಪಿಐ ಒತ್ತಾಯ

Official language status for Urdu: ತುಳು ಭಾಷೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹೆಚ್ಚುವರಿ ಅಧಿಕೃತ ಭಾಷೆಯ ಸ್ಥಾನಮಾನ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸ್ವಾಗತಿಸುತ್ತದೆ. ಅದೇ ರೀತಿ ಲಕ್ಷಾಂತರ ಜನರ ದೈನಂದಿನ ಜೀವನದ ಭಾಗವಾಗಿರುವ ಉರ್ದು ಭಾಷೆಯ ಬಗ್ಗೆ ರಾಜ್ಯ ಸರ್ಕಾರವು ಸಮಾನ ದೃಷ್ಟಿಕೋನವನ್ನು ಅನುಸರಿಸಬೇಕು SDPI ಆಗ್ರಹಿಸಿದೆ.

Kasturirangan Report: ಕಸ್ತೂರಿ ರಂಗನ್ ವರದಿಯ ಸರ್ಕಾರದ ಟಿಪ್ಪಣಿ ಮಂಡಿಸಿದ ಡಿಸಿಎಂ; ವಸ್ತುನಿಷ್ಠ ನಿಲುವು ತಾಳಲು ಸದನಕ್ಕೆ ಮನವಿ

ಕಸ್ತೂರಿ ರಂಗನ್ ವರದಿ; ವಸ್ತುನಿಷ್ಠ ನಿಲುವು ತಾಳಲು ಸದನಕ್ಕೆ ಡಿಸಿಎಂ ಮನವಿ

DCM Dr G Parameshwara: ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಇಂದು ವಿಧಾನ ಪರಿಷತ್‌ನ ಕಾರ್ಯಕಲಾಪಗಳಲ್ಲಿ ಪಾಲ್ಗೊಂಡು, ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳನ್ನು ಸದನದಲ್ಲಿ ಚರ್ಚಿಸುವ ಕುರಿತು ಸರ್ಕಾರದ ಟಿಪ್ಪಣಿಯನ್ನು ಮಂಡಿಸಿದರು.

Tumkur News: ತೋಟದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದು ಸಿಕ್ಕಿಬಿದ್ದ ಪೊಲೀಸ್ ಸಿಬ್ಬಂದಿಯ ಪುತ್ರ!

ಅಕ್ರಮ ಗಾಂಜಾ ಬೆಳೆದು ಸಿಕ್ಕಿಬಿದ್ದ ಪೊಲೀಸ್ ಸಿಬ್ಬಂದಿಯ ಪುತ್ರ!

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ​ದಾಳಿ ವೇಳೆ ಬರೋಬ್ಬರಿ 950 ಗ್ರಾಂಗಳಷ್ಟು ತೂಕವಿದ್ದ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸಪ್ಪನ ಮಗನೇ ಇಂತಹ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವುದನ್ನು ಕಂಡು ಸ್ಥಳೀಯ ಗ್ರಾಮಸ್ಥರು ಮತ್ತು ಸಾರ್ವಜನಿಕರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿದ್ದು, ತನಿಖೆ ಪೂರ್ಣಗೊಳಿಸಲು ಮೂರು ತಿಂಗಳ ಗಡುವು ವಿಧಿಸಿದೆ. ಪ್ರಕರಣದ ತನಿಖೆ ನಡೆಸಿದ್ದ ಕೇಂದ್ರ ತನಿಖಾ ದಳ (ಸಿಬಿಐ) ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಸೌಜನ್ಯಾ ತಾಯಿ ಕುಸುಮಾವತಿ ಗೌಡ ಅವರು ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Ayyappa devotee suffers heart attack: ಶಬರಿಮಲೆಯಿಂದ ಮರಳುವಾಗ ಅಯ್ಯಪ್ಪ ಮಾಲಾಧಾರಿ ಹೃದಯಾಘಾತದಿಂದ ಸಾವು

ಶಬರಿಮಲೆಯಿಂದ ಮರಳುವಾಗ ಅಯ್ಯಪ್ಪ ಮಾಲಾಧಾರಿಗೆ ಹೃದಯಾಘಾತ

ಮೃತರನ್ನು ಕಲಬುರಗಿ ಜಿಲ್ಲೆಯ ಮಹಾದೇವ ಅಟ್ಟೂರು (56) ಎಂದು ಗುರುತಿಸಲಾಗಿದೆ. ಬಸಯ್ಯ ಸಾಲಿಮಠ ಗುರುಸ್ವಾಮಿ ಸನ್ನಿಧಾನದ ವತಿಯಿಂದ ಶಬರಿಮಲೆ ಯಾತ್ರೆಗೆ ತೆರಳಿದ್ದ ಭಕ್ತರ ತಂಡವು ಸೆ.20ರಂದು ಯಶವಂತಪುರದಿಂದ ಕಲಬುರಗಿಗೆ ವಾಪಸಾಗುತ್ತಿತ್ತು. ಈ ವೇಳೆ ಬಸವ ಎಕ್ಸ್‌ಪ್ರೆಸ್‌ (17307) ರೈಲಿನಲ್ಲಿ ಘಟನೆ ಸಂಭವಿಸಿದೆ.

ಜನಪ್ರತಿನಿಧಿಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾತ್ರ ಕಾಮಗಾರಿ: ಸಣ್ಣ ಗುತ್ತಿಗೆದಾರರ ಸಂಕಷ್ಟ ಆಲಿಸದ ‘ಕೈ’ ಸರ್ಕಾರ

ಸಣ್ಣ ಗುತ್ತಿಗೆದಾರರ ಸಂಕಷ್ಟ ಆಲಿಸದ ‘ಕೈ’ ಸರ್ಕಾರ

ಸಣ್ಣ ಮತ್ತು ಸ್ಥಳೀಯ ಗುತ್ತಿಗೆದಾರರು ಬಿಲ್ ಬಾಕಿ ಪಾವತಿ ವಿಳಂಬ, ಕಮಿಷನ್ ಹಾವಳಿ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ತೀವ್ರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನೂ ಲೋಕಪಯೋಗಿ, ಪಿಡಬ್ಲೂಡಿ ಇಲಾಖೆಗಳಡಿ ಮಾಡಿದ ಕಾಮಗಾರಿ ಸಂಬಂಧ ಬಿಲ್ ಕೇಳಲು ಹೋದರೆ ಮೊದಲು ಲಂಚ ಕೊಡುವಂತೆ ಎಲ್ಲಾ ಹಂತದ ಅಧಿಕಾರಿಗಳು ಕೇಳುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

16 ಔಷಧ ಅಂಗಡಿಗಳ ಪರವಾನಗಿ ರದ್ದು

16 ಔಷಧ ಅಂಗಡಿಗಳ ಪರವಾನಗಿ ರದ್ದು

ನಕಲಿ ಔಷಧಗಳು ಯಾವ ಆಸ್ಪತ್ರೆಗಳು ಹಾಗೂ ಫಾರ್ಮಸಿಗಳಿಗೆ ಪೂರೈಕೆಯಾಗಿದ್ದವು ಎಂಬ ಕುರಿತು ತನಿಖೆ ಮುಂದುವರಿದಿರುವ ಬೆನ್ನ, ಇಲಾಖೆಯು ಹಲವು ಸಗಟು ಮತ್ತು ಚಿಲ್ಲರೆ ಔಷಧ ಮಾರಾಟ ಮಳಿಗೆಗಳ ಪರವಾನಗಿಯನ್ನು ರದ್ದುಪಡಿಸಿದ್ದು, ಇನ್ನೂ ಕೆಲವು ಸಂಸ್ಥೆಗಳ ಲೈಸೆನ್ಸ್‌ಗಳನ್ನು ಅಮಾನತು ಗೊಳಿಸಿದೆ.

Loading...