ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Priyank Kharge: ಲಷ್ಕರ್-ಇ-ತಯ್ಯಬಾ ಸಂಪರ್ಕದ ವ್ಯಕ್ತಿಯ ಬಂಧನ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಲಷ್ಕರ್-ಇ-ತಯ್ಯಬಾ ಸಂಪರ್ಕದ ವ್ಯಕ್ತಿಯ ಬಂಧನ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

ಲಷ್ಕರ್-ಇ-ತಯ್ಯಬಾ(LET) ಉಗ್ರ ಸಂಘಟನೆ ಜತೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಒಬ್ಬನನ್ನು ಶಂಕಿತನಾಗಿ ವಶಕ್ಕೆ ಪಡೆಯಲಾಗಿದೆ. ಕೇಂದ್ರ ಗುಪ್ತಚರ(Intelligence Bureau) ಇಲಾಖೆ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ

ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ : ಕಾನೂನು ವಿದ್ಯಾರ್ಥಿಗಳಿಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಸಲಹೆ

ನ್ಯಾಯಕ್ಕಾಗಿ ಹೋರಾಡುವ ಧೈರ್ಯವಿರಲಿ

ಕಾನೂನು ಶಿಕ್ಷಣದ ಉದ್ದೇಶವು ಅಪರಾಧ ಕಾನೂನು ಅಥವಾ ಸಂವಿಧಾನಾತ್ಮಕ ಕಾನೂನಿನ ತತ್ವಗಳನ್ನು ಕಲಿಯು ವುದಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿ ರುವ ಜನರನ್ನು ಅರ್ಥಮಾಡಿಕೊಳ್ಳುವುದು, ವಿಚಾರಗಳ ವಿನಿಮಯ ನಡೆಸುವುದು ಹಾಗೂ ತಮ್ಮ ನಿಲುವು ಗಳನ್ನು ಮರುಪರಿಶೀಲಿಸುವುದೂ ಶಿಕ್ಷಣದ ಭಾಗವಾಗಿದೆ.

One detained linked to LeT: ಲಷ್ಕರ್-ಇ-ತಯ್ಯಬಾ ಸಂಪರ್ಕದ ಆರೋಪ; ಐಬಿ–ನಗರ ಪೊಲೀಸರ ಜಂಟಿ ಕಾರ್ಯಾಚರಣೆ: ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ವಶಕ್ಕೆ

ಚಿನ್ನಾಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ವಶಕ್ಕೆ

ನಗರದ ಸರ್‌ಫರಾಜ್ ಬಜಾರ್‌ನ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಉಗ್ರ ಸಂಘಟನೆ(Terrorism Organization) ಲಷ್ಕರ್-ಇ-ತಯ್ಯಬಾ (ಎಲ್‌ಇಟಿ) ಜತೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಗುಪ್ತಚರ ಸಂಸ್ಥೆ (ಐಬಿ) ಹಾಗೂ ಕಲಬುರಗಿ ನಗರ ಪೊಲೀಸರು(Kalaburagi Police) ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ವಶಕ್ಕೆ ಪಡೆದಿದ್ದಾರೆ.

ಮುಂದಿನ ವಾರ ಏಕರೂಪದ ದರ ನಿಗದಿ ಸಾಧ್ಯತೆ: ಚಿಕಿತ್ಸಾ ದರ ನಿಯಂತ್ರಣ?

ಮುಂದಿನ ವಾರ ಏಕರೂಪದ ದರ ನಿಗದಿ ಸಾಧ್ಯತೆ: ಚಿಕಿತ್ಸಾ ದರ ನಿಯಂತ್ರಣ?

ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದೇ ಕಾಯಿಲೆ ಅಥವಾ ಸರ್ಜರಿಗೆ ಒಂದು ಆಸ್ಪತ್ರೆಯಲ್ಲಿ 10 ಸಾವಿರ ರು. ಇದ್ದರೆ, ಮತ್ತೊಂದು ಆಸ್ಪತ್ರೆಯಲ್ಲಿ 50 ಸಾವಿರ ರು. ಹಾಗೂ ಕಾರ್ಪೊರೇಟ್ ಆಸ್ಪತ್ರೆಗಳಲ್ಲಿ ಬರೋಬ್ಬರಿ ಒಂದು ಲಕ್ಷ ರು.ವರೆಗೆ ಬಿಲ್ ಮಾಡಲಾಗುತ್ತಿದೆ. ಅಲ್ಲದೆ, ಬೆಂಗಳೂರು, ಹುಬ್ಬಳ್ಳಿ, ಮಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಆಸ್ಪತ್ರೆಗಳ ದರಗಳಲ್ಲಿ ಭಾರೀ ವ್ಯತ್ಯಾಸವಿರುತ್ತದೆ.

ಕಬ್ಬಿಗರಿಗೆ ಸಿಎಂ ಸಾಥ್‌

ಕಬ್ಬಿಗರಿಗೆ ಸಿಎಂ ಸಾಥ್‌

ರೈತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಕಬ್ಬು ಬೆಳೆಗಾರ(Sugarcane farmer)ರ ಸಮಸ್ಯೆ ಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಶೀಘ್ರದ ಸುವರ್ಣಸೌಧದಲ್ಲಿ ಸಭೆ ನಡೆಸಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡುತ್ತೇನೆ. ರೈತರು ತಮ್ಮ ಪ್ರತಿ ಭಟನೆ ಕೈಬಿಡುವಂತೆ ಮನವಿ ಮಾಡಿದರು. ಆದರೆ ಸಿಎಂ ಭರವಸೆಗೂ ಜಗ್ಗದ ರೈತರು ಪಾದ ಯಾತ್ರೆ ಮುಂದುವರಿಸುವುದಾಗಿ ಘೋಷಿಸಿದ್ದಾರೆ.

ರಾಜಕಾರಣದಲ್ಲಿ ಧರ್ಮ ಉಳಿಯಲು ಧಾರ್ಮಿಕ ಗುರುಗಳು ಆಶೀರ್ವದಿಸಬೇಕು: ನೊಣವಿನಕೆರೆ ಶ್ರೀ

ಸತ್ಯ ಸಾಯಿ ಗ್ರಾಮದ ನವರಾತ್ರಿ ಉತ್ಸವದಲ್ಲಿ ನೊಣವಿನಕೆರೆ ಶ್ರೀಗಳು ಭಾಗಿ

ರಾಜಕೀಯದಲ್ಲಿ ಧರ್ಮ ಉಳಿಯಬೇಕು ಎಂಬುದು ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಆಶಯವಾಗಿತ್ತು. ಅದೇ ಮಾರ್ಗದಲ್ಲಿ ಸದ್ಗುರು ಶ್ರೀ ಮಧುಸೂದನ ಸಾಯಿ ಮುನ್ನಡೆಯುತ್ತಿದ್ದಾರೆ ಎಂದು ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ತಿಳಿಸಿದ್ದಾರೆ.

Gauribidanur News: ಕೆಲಸದ ಒತ್ತಡದ ನಡುವೆಯೂ ಶರನ್ನವರಾತ್ರಿಯಲ್ಲಿ ಹೂವಿನ ರಂಗೋಲಿ ರಚನೆ; ಉಚಿತವಾಗಿ ಕಲಿಸುವ ಆಸಕ್ತಿ

ಹೂವಿನ ದಳಗಳಲ್ಲಿ ಅರಳುವ ಕಲಾಕೃತಿ: ಸುಪ್ರಿಯ ನಾಯಕ ಕೈಚಳಕಕ್ಕೆ ಮೆಚ್ಚುಗೆ

ಹೂವಿನ ದಳಿಗಳಿಂದ  ಕಲಾಕೃತಿ ರಚಿಸುವುದು ಸುಲಭದ ಕೆಲಸವಲ್ಲ. ಮೊದಲು ಮನಸ್ಸಿನಲ್ಲಿಯೇ ಚಿತ್ರವನ್ನು ಕಲ್ಪಿಸಿಕೊಂಡು, ನಂತರ ಅದಕ್ಕೆ ತಕ್ಕ ಬಣ್ಣ ಮತ್ತು ವಿನ್ಯಾಸದ ಹೂವುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯಾವುದೇ ಹೊರರೇಖೆ ಬಿಡಿಸದೆ, ಮನಸ್ಸಿನಲ್ಲಿ ಮೂಡಿದ ಚಿತ್ರಕ್ಕೆ ಹೂವಿನ ರೆಕ್ಕೆಗಳ ಮೂಲಕ ರೂಪ ನೀಡುವುದು ಇವರ ಕಲೆಯ ವಿಶೇಷತೆ.

Gauribidanur News: ನವರಾತ್ರಿ ಅಂಗವಾಗಿ ಶೃಂಗೇರಿ ಶಾರದಾ ಮಂದಿರದಲ್ಲಿ ವಿಶೇಷ ಪೂಜೆ; ನೂರಾರು ಭಕ್ತರು ಭಾಗಿ

ನಾಡಿನ ಪ್ರಕೃತಿ ವಿಕೋಪಗಳ ನಿವಾರಣೆಗೆ ಸಹಸ್ರ ಮೋದಕ ಗಣಹೋಮ

ಸಂಘದ ಉಪಾಧ್ಯಕ್ಷ ವೆಂಕಟಕೃಷ್ಣಮೂರ್ತಿ ಅವರ ಕುಟುಂಬದ ನೇತೃತ್ವದಲ್ಲಿ ನಡೆದ ಗಣ ಹೋಮದಲ್ಲಿ ಸಂಘದ ಗೌರವಾಧ್ಯಕ್ಷ ಡಾ.ಎಚ್.ಎಸ್.ಶಶಿಧರ್ ಕುಮಾರ್, ಅಧ್ಯಕ್ಷ ರಘುಬಾಬು, ಕಾರ್ಯದರ್ಶಿ ಉಪೇಂದ್ರ ರಾವ್, ಖಜಾಂಚಿ ಟಿ.ಎಸ್. ಶಶಿಧರ್ ಸೇರಿದಂತೆ ಪದಾಧಿಕಾರಿಗಳು ಧಾರ್ಮಿಕ ಕಾರ್ಯದ ಜವಾಬ್ದಾರಿ ವಹಿಸಿದ್ದರು.

ದಸರಾ ಹಬ್ಬದ ಹಿನ್ನೆಲೆಯಲ್ಲಿ ಹತ್ತು ಸಾಮಾನ್ಯ ಡಿಜಿಟಲ್ ವಂಚನೆಗಳ ಬಗ್ಗೆ ಜಾಗೃತಿ ಮೂಡಿಸಿ, ಸುರಕ್ಷಿತ ಆನ್‌ಲೈನ್ ವಹಿವಾಟಿಗೆ ಸಲಹೆ ನೀಡುವ ಅಭಿಯಾನ

ಹಬ್ಬದ ಸಂಭ್ರಮ, ಸೈಬರ್ ಸುರಕ್ಷತೆಗೆ ನವಿ ಅಭಿಯಾನ

ದಸರಾ ಹಬ್ಬದ ಸಂದರ್ಭದಲ್ಲಿ ಆರಂಭವಾಗುವ ಈ ಅಭಿಯಾನವು ರಾವಣನ ಹತ್ತು ತಲೆಗಳಿಂದ ಪ್ರೇರಣೆ ಪಡೆದಿದೆ. ಇದರ ಮೂಲಕ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವ ಹತ್ತು ಬಗೆಯ ಡಿಜಿಟಲ್ ವಂಚನೆಗಳು ಮತ್ತು ಅವುಗಳಿಂದ ದೂರವಿರಲು ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಪರಿಚಯಿಸಲಾಗುತ್ತದೆ. ಸೈಬರ್ ಸುರಕ್ಷತಾ ಜಾಗೃತಿ ಮೂಡಿಸುವ ಅಂಗವಾಗಿ, ನವಿಯ ಸಾಮಾಜಿಕ ಜಾಲತಾಣಗಳಲ್ಲಿ ಕಿರು ವಿಡಿಯೊಗಳ ಮೂಲಕ ಈ ಅಭಿಯಾನ ಜನರನ್ನು ತಲುಪಲಿದೆ.

N H Shivashankar Reddy: ಕೆರೆ ನೀರನ್ನು ನಗರಕ್ಕೆ ಕೊಂಡೊಯ್ಯುವ ಪ್ರಯತ್ನಕ್ಕೆ ವಿರೋಧ; ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಮಾಜಿ ಶಾಸಕ ಕರೆ

ಕಾಂಗ್ರೆಸ್ ಸೋತರೆ ತಿಂಗಳಲ್ಲೇ ವಾಟದಹೊಸಹಳ್ಳಿ ಕೆರೆ ಖಾಲಿ: ಶಿವಶಂಕರರೆಡ್ಡಿ

ಈ ಯೋಜನೆ ವಿರೋಧಿಸಿ ರಾಜಕೀಯ ಪಕ್ಷಗಳು, ವಿವಿಧ ಸಂಘಟನೆಗಳು ಹಾಗೂ ಅಚ್ಚುಕಟ್ಟು ದಾರರು ಪ್ರತಿಭಟನೆ ನಡೆಸಿದ್ದಾರೆ. ಕೆರೆಗೆ ಪೈಪ್‌ಲೈನ್ ಅಳವಡಿಸಲು ಮುಂದಾದರೆ ಜೆಸಿಬಿಗೆ ಅಡ್ಡಲಾಗಿ ನಿಲ್ಲುವುದಾಗಿ ಶಾಸಕರಿಗೆ ಸವಾಲು ಹಾಕಿದ್ದೆ. ದೊಡ್ಡ ಪೈಪ್‌ಗಳ ಮೂಲಕ ನಗರಕ್ಕೆ ನೀರು ಹರಿಸಿದರೆ ಒಂದೇ ತಿಂಗಳಲ್ಲಿ ಕೆರೆಯ ನೀರು ಖಾಲಿಯಾಗುವ ಆತಂಕವಿದೆ ಎಂದರು.

ರಾಜ್ಯದಲ್ಲಿ ಹೆಚ್ಚಾಯ್ತು ಸ್ಟಿಂಗ್ ಆಪರೇಷನ್ ಕಾವು; ಕಿಂಗ್ ಪಿನ್‌ಗಳ ಬಂಧನಕ್ಕೆ ಆಗ್ರಹಿಸಿ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ

ಸ್ಟಿಂಗ್ ಆಪರೇಷನ್ ಕಿಂಗ್‌ಪಿನ್‌ಗಳ ಬಂಧನಕ್ಕೆ ಆಗ್ರಹ; ಎಚ್‌ಡಿಕೆ ಪಾದಯಾತ್ರೆ

HD Kumaraswamy: ರಾಜ್ಯದ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಬ್ಲಾಕ್‌ಮೇಲ್ ಪತ್ರಕರ್ತ ರಾಕೇಶ್ ಶೆಟ್ಟಿ ಇಬ್ಬರು ಸಂಘಟಿತ ಸಂಚು ನಡೆಸಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಸಿ ಮುಖ್ಯಮಂತ್ರಿ ಹುದ್ದೆಯಿಂದ ಅವರನ್ನು ಕೆಳಗಿಳಿಯುವಂತೆ ಮಾಡಿದರು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

Chikkaballapur News: ಸರ್ಕಾರದ ಯೋಜನೆಗಳನ್ನು ಮತದಾರರಿಗೆ ತಿಳಿಸಿ: ಪದವೀಧರ ಮತದಾರರಿಗೆ ಸರ್ಕಾರದ ಜನಪರ ಯೋಜನೆಗಳ ಅರಿವು ಮೂಡಿಸಲು ಕರೆ

ಶಶಿ ಹುಲಿಕುಂಟೆಮಠ್ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸಿ: ಯಲುವಳ್ಳಿ ರಮೇಶ್

ಕಾಂಗ್ರೆಸ್ ಪಕ್ಷ ಸೂಕ್ತ ಹಾಗೂ ಅರ್ಹ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ನಗರ ಪ್ರದೇಶದ ಪ್ರತಿಯೊಂದು ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಪ್ರಚಾರ ನಡೆಸಬೇಕು. ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಮತದಾರರಿಗೆ ಮನವರಿಕೆ ಮಾಡಿ ಕೊಟ್ಟು ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು. ಚುನಾವಣೆಯನ್ನು ಹಗುರವಾಗಿ ಪರಿಗಣಿಸದೆ ಗಂಭೀರವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಸಿದ್ದರಾಮಯ್ಯ ವರ್ಚಸ್ಸು ಹಾಳು ಮಾಡಲು ಸ್ಟಿಂಗ್‌ ಆಪರೇಷನ್‌; ಮಾಜಿ ಮುಖ್ಯಮಂತ್ರಿ ಪರ ಎಚ್‌.ಡಿ. ಕುಮಾರಸ್ವಾಮಿ ಬ್ಯಾಟಿಂಗ್‌

ಸಿದ್ದರಾಮಯ್ಯ ನಿಮ್ಮ ರಕ್ತ ಕುದಿಯುತ್ತಿಲ್ವಾ? ಪ್ರಶ್ನಿಸಿದ ಎಚ್‌ಡಿಕೆ

HD Kumaraswamy: ನನಗೆ ಬಹಳ ಆಶ್ಚರ್ಯವಾಗುತ್ತಿದೆ. ಸಿದ್ದರಾಮಯ್ಯ ಮೌನದಿಂದ ಇರುವ ವ್ಯಕ್ತಿಯಲ್ಲ. ತಮ್ಮ ವಿರುದ್ಧ ಅನ್ಯಾಯ ನಡೆದರೆ ಸಹಿಸುವ ಜಾಯಮಾನದವರಲ್ಲ. ತಮ್ಮ ವಿರುದ್ಧ ರಾಜ್ಯದ ಈಗಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಕಿಡಿಗೇಡಿ ರಾಕೇಶ್ ಶೆಟ್ಟಿ ಸೇರಿ ನಡೆಸಿದ ಸಂಚಿನ ಕುರಿತು ಅವರು ಮೌನ ವಹಿಸಿರುವುದು ನನಗೆ ನೋವು ತಂದಿದೆ ಎಂದು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

Chikkaballapur News: ಎಸ್.ಎಸ್. ಸೂಪರ್ ಫುಡ್ಸ್ ಘಟಕದ ನಿರ್ವಹಣೆ ವಾಪಸ್ ಪಡೆಯಲು ಆಗ್ರಹ; ಒಂದು ತಿಂಗಳಲ್ಲಿ ಬೇಡಿಕೆ ಈಡೇರಿಸುವುದಾಗಿ ಕೆಎಂಎಫ್ ಎಂಡಿ ಭರವಸೆ

ಕಳಪೆ ಪಶು ಆಹಾರ ಆರೋಪ: ಕೆಎಂಎಫ್‌ಗೆ ಚಿಮುಲ್–ಕೋಮುಲ್ ಜಂಟಿ ಬಿಸಿ

ರೈತರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ಪಶು ಆಹಾರ ಘಟಕ ನಿರ್ವಹಣೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಎರಡೂ ಒಕ್ಕೂಟಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಹಾಲು ಉತ್ಪಾದಕರು ಘಟಕದ ನಿರ್ವಹಣೆಯನ್ನು ಖಾಸಗಿ ಸಂಸ್ಥೆಯಿಂದ ಹಿಂಪಡೆದು ಅವಳಿ ಜಿಲ್ಲೆಗಳ ಹಾಲು ಒಕ್ಕೂಟಗಳಿಗೆ ವಹಿಸಬೇಕು ಎಂದು ಆಗ್ರಹಿಸಿದರು.

ನವರಾತ್ರಿ ಸಂಭ್ರಮದ ನಡುವೆ ತಲಕಾವೇರಿಯಲ್ಲಿ ತೀರ್ಥೋದ್ಭವ; ಸಾವಿರಾರು ಭಕ್ತರು ಸಾಕ್ಷಿ

ತಲಕಾವೇರಿಯಲ್ಲಿ ತೀರ್ಥೋದ್ಭವ; ಸಾವಿರಾರು ಭಕ್ತರು ಭಾಗಿ

Cauvery Theerthodbhava: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವವಾಗಿದೆ. ಸಂಜೆ 7.50ರ ಸುಮಾರಿಗೆ ಈ ತೀರ್ಥೋದ್ಭವ ಸಂಭವಿಸಿದ್ದು ಸಹಸ್ರಾರು ಭಕ್ತರು ಈ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಗುರುರಾಜ್ ಆಚಾರ್ ಹಾಗೂ ಪ್ರಶಾಂತ್ ಆಚಾರ್ ನೇತೃತ್ವದ ಅರ್ಚಕರ ತಂಡ ತೀರ್ಥೋದ್ಭವದ ವಿಶೇಷ ಪೂಜೆ ನಡೆಸಿತು.

Dasara Sanjeevini Santhe: ಅ.18, 19ರಂದು ಜಿಲ್ಲೆಯಾದ್ಯಂತ ದಸರಾ ಸಂಜೀವಿನಿ ಸಂತೆ

ಅ.18, 19ರಂದು ಜಿಲ್ಲೆಯಾದ್ಯಂತ ದಸರಾ ಸಂಜೀವಿನಿ ಸಂತೆ

ಗ್ರಾಮೀಣ ಮಹಿಳೆಯರ ಉದ್ಯಮಶೀಲತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಪಂಚಾ ಯಿತಿ ಹಾಗೂ ಸಂಜೀವಿನಿ–ಡೇ-ಎನ್‌ಆರ್‌ಎಲ್‌ಎಂ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕದ ಸಂಯುಕ್ತಾ ಶ್ರಯದಲ್ಲಿ ಅ.18 ಮತ್ತು 19ರಂದು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ದಸರಾ ಸಂಜೀವಿನಿ ಮಾಸಿಕ ಸಂತೆಗಳನ್ನು ಆಯೋಜಿಸಲಾಗಿದೆ.

ಕಬ್ಬು ಬೆಳೆಗಾರರ ಪರವಾಗಿ ಕಾಂಗ್ರೆಸ್‌ ಸರ್ಕಾರ ಏನೂ ಮಾಡಿಲ್ಲ: ಆರ್‌. ಅಶೋಕ ವಾಗ್ದಾಳಿ

ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಪರವಾಗಿದೆ: ಆರ್‌. ಅಶೋಕ

R Ashok: ಮುಖ್ಯಮಂತ್ರಿ ಕೇಂದ್ರದ ಮಟ್ಟದಲ್ಲಿ ಮಾತುಕತೆ ನಡೆಸಬೇಕು. ಇದು ಕೇವಲ ಕೇಂದ್ರದ ಹೊಣೆಯಲ್ಲ. ಕೇಂದ್ರ ಉತ್ತಮ ಪರಿಹಾರ ನೀಡಲು ಮುಂದಾಗಿದೆ. ರಾಜ್ಯ ಸರ್ಕಾರ ಕೂಡ ಸಮನ್ವಯದಿಂದ ಕೆಲಸ ಮಾಡಬೇಕು. ಆರ್ಥಿಕ ಇಲಾಖೆ ಪಾಪರ್‌ ಎಂದು ಗೊತ್ತಾದ ನಂತರ ಪರಿಸ್ಥಿತಿ ಕಷ್ಟವಾಗಿದೆ. ರಾಜ್ಯ ಸರ್ಕಾರದಿಂದ ಪಾಲು ನೀಡಬೇಕೆಂಬ ಕಾರಣಕ್ಕೆ ಇವರು ಮಾತುಕತೆ ನಡೆಸುತ್ತಿಲ್ಲ. ಬರಗಾಲಕ್ಕೂ ಹಣ ನೀಡುತ್ತಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌. ಅಶೋಕ್‌ ಟೀಕಿಸಿದ್ದಾರೆ.

ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಅಕ್ಟೋಬರ್‌ 18ರಿಂದ 21ರವರೆಗೆ ಮಹಾರುದ್ರ ಯಾಗ; ವಿಶ್ವಶಾಂತಿ, ಸಮೃದ್ಧಿಗಾಗಿ ಧಾರ್ಮಿಕ ವಿಧಿವಿಧಾನ

ಸತ್ಯ ಸಾಯಿ ಗ್ರಾಮದಲ್ಲಿ ಅ. 18ರಿಂದ 21ರವರೆಗೆ ಮಹಾರುದ್ರ ಯಾಗ

Sathya Sai Grama: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಅಕ್ಟೋಬರ್ 18ರಿಂದ 21ರವರೆಗೆ ವಿಶ್ವಶಾಂತಿ ಮತ್ತು ಸಮೃದ್ಧಿಯನ್ನು ಸಂಕಲ್ಪವಾಗಿಸಿಕೊಂಡು ನಾಲ್ಕು ದಿನಗಳ ಮಹಾರುದ್ರ ಯಾಗ ನಡೆಯಲಿದೆ. ಸತ್ಯ ಸಾಯಿ ಹೃದಯ ಮಂದಿರದ ಆವರಣದಲ್ಲಿರುವ ಯಾಗಶಾಲೆಯಲ್ಲಿ ನಡೆಯಲಿರುವ ಯಾಗವು ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಾನ್ನಿಧ್ಯದಲ್ಲಿ ಜರುಗಲಿದೆ.

Lokayukta Raid: ಲಂಚ ಸ್ವೀಕರಿಸುತ್ತಿದ್ದ ತುಮಕೂರು ವಿಶೇಷ ಉಪವಿಭಾಗಾಧಿಕಾರಿ ನ್ಯಾಯಾಲಯದ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಬಲೆಗೆ

ನ್ಯಾಯಾಲಯದ ಇಬ್ಬರು ಸಿಬ್ಬಂದಿ ಲೋಕಾ ಬಲೆಗೆ

Tumkur News: ಮೇಲ್ಮನವಿ ಪ್ರಕರಣದಲ್ಲಿ ಅರ್ಜಿದಾರರ ಪರ ಆದೇಶ ಮಾಡಲು 50,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವಿಶೇಷ ಉಪವಿಭಾಗಾಧಿಕಾರಿಗಳ ನ್ಯಾಯಾಲಯ, ತುಮಕೂರು-1 ಉಪವಿಭಾಗ ಕಚೇರಿಯ ಇಬ್ಬರು ಸಿಬ್ಬಂದಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೊರಟಗೆರೆಯ ವೀರಣ್ಣ ಎಂಬವವರ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು.

ಸಿಜೆಪಿಗೆ ಕಾಂಗ್ರೆಸ್‌ನಿಂದ ಹಣಕಾಸು ನೆರವು: ಬಿ.ವೈ. ವಿಜಯೇಂದ್ರ ವಾಗ್ದಾಳಿ

ಕಾಕ್ರೋಚ್ ಜನತಾ ಪಕ್ಷಕ್ಕೆ ಕಾಂಗ್ರೆಸ್‌ನಿಂದ ಹಣಕಾಸು ನೆರವು: ಬಿವೈವಿ

BY Vijayendra: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಸಮ್ಮತ ಹೋರಾಟ ಯಾರಾದರೂ ಮಾಡಬಹುದು. ಆದರೆ ಚುನಾವಣಾ ಸೋಲಿನಿಂದ ಹತಾಶರಾಗಿರುವ ರಾಹುಲ್ ಗಾಂಧಿ, ವಿವಿಧ ಸಂಘಟನೆಗಳನ್ನು ದುರ್ಬಳಕೆ ಮಾಡಿಕೊಂಡು ರಾಜ್ಯ ಮತ್ತು ದೇಶದಲ್ಲಿ ಗೊಂದಲಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ; ಮುಂದಿನ ಯೋಜನೆ ಬಗ್ಗೆ ಹೇಳಿದ್ದೇನು?

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯಾ ರೆಡ್ಡಿ ರಾಜೀನಾಮೆ

Sowmya Reddy: ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ರಾಜೀನಾಮೆ ಸಲ್ಲಿಸಿದ್ದಾರೆ. ರಾಜ್ಯದ ಸಚಿವ ಸಂಪುಟದಲ್ಲಿ ಒಬ್ಬರೂ ಮಹಿಳಾ ಸಚಿವರು ಇಲ್ಲ ಎಂದು ಆರೋಪಿಸಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜೀನಾಮೆ ಪತ್ರವನ್ನೂ ರವಾನಿಸಿದ್ದಾರೆ.

ಲಾಡ್ಜ್‌ನಲ್ಲಿ ವ್ಯಕ್ತಿಯನ್ನು ಕೂಡಿ ಹಾಕಿ ಹಲ್ಲೆ: ವಿಡಿಯೋ ವೈರಲ್

ಲಾಡ್ಜ್‌ನಲ್ಲಿ ವ್ಯಕ್ತಿಯನ್ನು ಕೂಡಿ ಹಾಕಿ ಹಲ್ಲೆ: ವಿಡಿಯೋ ವೈರಲ್

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ಆನಂದ ಲಾಡ್ಜ್‌ನಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು, ಕಾಂಗ್ರೆಸ್ ಮುಖಂಡ ಶೇಖರ ಕಾಶಿ ಹಾಗೂ ಅವರ ಪುತ್ರ ಸಂತೋಷ್ ಕಾಶಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತುಮಕೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಕ್ರಮ: ಶಾಸಕ ಜಿ.ಬಿ. ಜ್ಯೋತಿಗಣೇಶ್

ತುಮಕೂರು ನಗರದಲ್ಲಿ ಕುಡಿಯುವ ನೀರು ಸರಬರಾಜು ವ್ಯತ್ಯಯವಾಗದಂತೆ ಕ್ರಮ

Tumkur News: ತುಮಕೂರು ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ. ಈಗ ಬುಗುಡನಹಳ್ಳಿ ಕೆರೆಯಲ್ಲಿ ಲಭ್ಯವಿರುವ ನೀರು ಜನವರಿವರೆಗೆ ಸಾಕಾಗಬಹುದು, ನಾಗರೀಕರಿಗೆ ತೊಂದರೆ ಆಗದಂತೆ ನೀರು ಪೂರೈಕೆ ಮಾಡಬೇಕು. ನೀರು ಶುದ್ಧೀಕರಣ ಘಟಕಗಳು ಹಾಗೂ ನೀರು ಪೂರೈಕೆ ಸಂಬಂಧಿಸಿದ ಯಂತ್ರಗಳು ಕೆಟ್ಟು ಹೋಗಿ ತೊಂದರೆ ಆಗದಂತೆ ಮುನ್ನೆಚ್ಚರವಹಿಸಬೇಕು, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ನಗರಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಗಂಭೀರ ಸೂಚನೆ ನೀಡಿರುವುದಾಗಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದ್ದಾರೆ.

ಸ್ಟಿಂಗ್‌ ಆಪರೇಷನ್‌ ವಿರುದ್ಧ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ; ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

ಸ್ಟಿಂಗ್‌ ಆಪರೇಷನ್‌ ವಿರುದ್ಧ ಬೀದಿಗಿಳಿದ ಎಚ್‌.ಡಿ. ಕುಮಾರಸ್ವಾಮಿ

Sting Operation: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಕಾವು ಹೆಚ್ಚಾಗುತ್ತಿದೆ. ಕುಟುಕು ಕಾರ್ಯಾಚರಣೆಯನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಸರ್ಕಾರವನ್ನು ಕುಟುಕುತ್ತಿದ್ದಾರೆ. ಅಲ್ಲದೆ ಡಿಜಿ-ಐಜಿಪಿ ಎಂ.ಎ. ಸಲೀಂ ಅವರನ್ನು ಭೇಟಿಯಾಗಿ ಸ್ಟಿಂಗ್‌ ಆಪರೇಷನ್‌ ಮಾಡಿದವರನ್ನು ಬಂಧಿಸಬೇಕು ಎಂದು ಎಚ್‌ಡಿಕೆ ಆಗ್ರಹಿಸಿದ್ದಾರೆ.

Loading...