ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ನ್ಯೂಯಾರ್ಕ್‍ನ ವಾಲ್‍ಸ್ಟ್ರೀಟ್‌ನಲ್ಲಿ ಕುಣಿದು ಕುಪ್ಪಳಿಸಿದ ಭಾರತೀಯರು; ವೈರಲ್‌ ವಿಡಿಯೊ ಇಲ್ಲಿದೆ

ನ್ಯೂಯಾರ್ಕ್ ನಗರದ ವಾಲ್‍ಸ್ಟ್ರೀಟ್‌ನಲ್ಲಿ ಭಾರತೀಯರು ಸಾಂಪ್ರದಾಯಿಕ ಉಡುಪನ್ನು ತೊಟ್ಟು ನೃತ್ಯ ಮಾಡುತ್ತಾ ಸಾಗುತ್ತಿದ್ದ ವಿಡಿಯೊ ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್ ಆಗಿದ್ದು, ಇದು ಉದ್ಯಮಿ ಹರ್ಷ ಗೋಯೆಂಕಾ ಸೇರಿದಂತೆ ಹಲವರ ಗಮನ ಸೆಳೆದಿದೆ. ಗೋಯೆಂಕಾ ಆ ವಿಡಿಯೊವನ್ನು ತಮ್ಮ ಅಧಿಕೃತ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ.

ವಾಲ್‍ಸ್ಟ್ರೀಟ್‌ನಲ್ಲಿ ಭಾರತೀಯರ ಬ್ಯಾಂಡ್‌ ಬಾರಾತ್‌; ವಿಡಿಯೊ ನೋಡಿ

Profile pavithra May 31, 2025 5:39 PM

ವಾಷಿಂಗ್ಟನ್‌: ಅಮೆರಿಕದ ನ್ಯೂಯಾರ್ಕ್‌ನ ವಾಲ್‌ಸ್ಟ್ರೀಟ್‌ನಲ್ಲಿ 400 ಮಂದಿ ಭಾರತೀಯರು ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಮಾಡುತ್ತಾ ಸಾಗುತ್ತಿರುವ ಮೆರವಣಿಗೆಯ ವಿಡಿಯೊವೊಂದು ಸೋಶಿಯಲ್ ಮಿಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದು ಉದ್ಯಮಿ ಹರ್ಷ ಗೋಯೆಂಕಾ ಸೇರಿದಂತೆ ಹಲವರ ಗಮನ ಸೆಳೆದಿದೆ. ಗೋಯೆಂಕಾ ಆ ವಿಡಿಯೊವನ್ನು ತಮ್ಮ ಅಧಿಕೃತ ಸೋಶಿಯಲ್ ಮಿಡಿಯಾ ಖಾತೆಯಲ್ಲಿ ಮರು ಹಂಚಿಕೊಂಡಿದ್ದಾರೆ. ಏನಿದು ವಿಡಿಯೊ ಎಂದು ನೀವು ಕೂಡ ಆಶ್ಚರ್ಯಪಡುತ್ತಿದ್ದೀರಾ? ಇದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ವೃತ್ತಿಪರ ಡಿಜೆ ಕಲಾವಿದರೊಬ್ಬರು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಈ ವಿಡಿಯೊದಲ್ಲಿ, ಲೋವರ್ ಮ್ಯಾನ್‌ಹಟನ್‌ನ ಹೃದಯಭಾಗದಲ್ಲಿ ಸುಮಾರು 400 ಮಂದಿ ಭಾರತೀಯರು ಮೆರವಣಿಯೊಂದರಲ್ಲಿ ನೃತ್ಯ ಮಾಡುತ್ತಾ ಸಂಭ್ರಮಪಟ್ಟಿದ್ದಾರೆ.

ಈ ವಿಡಿಯೊ ನೋಡಿ ಒಬ್ಬರು, “ಡೊನಾಲ್ಡ್ ಟ್ರಂಪ್ ಅದನ್ನು ಇಷ್ಟಪಡುವುದಿಲ್ಲ” ಎಂದು ಹೇಳಿದ್ದಾರೆ. "ಭಾರತದ ಚೈತನ್ಯವು ಅದರ ಗಡಿಗಳಿಗೆ ಸೀಮಿತವಾಗಿಲ್ಲ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದರೆ, "ಭಾರತೀಯರು ಎಲ್ಲರಿಗೂ ಸಂತೋಷವನ್ನು ನೀಡುತ್ತಾರೆ" ಎಂದು ಇನ್ನೊಬ್ಬರು ಹೇಳಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಮತ್ತೊಬ್ಬರು ಈ ವಿಡಿಯೊಗೆ ಪ್ರತಿಕ್ರಿಯಿಸುತ್ತ, "ವಿದೇಶಿ ದೇಶದಲ್ಲಿ ಈ ರೀತಿ ಏಕೆ ಮಾಡಬೇಕು? ನಿಮ್ಮ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ನೀವು ತುಂಬಾ ಪ್ರೀತಿಸುತ್ತಿದ್ದರೆ, ನಿಮ್ಮ ದೇಶವನ್ನು ಬಿಟ್ಟು ಹೋಗಬೇಡಿ ಅಥವಾ ಅದನ್ನು ಆಚರಿಸಲು ಇಲ್ಲಿಗೆ ಬನ್ನಿ. ಇತರ ಜನರಿಗೆ ಏಕೆ ತೊಂದರೆ ಕೊಡುತ್ತೀರಿ?" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಮದುಮಗ ಧರಿಸಿದ್ದ ದಿರಿಸನ್ನು ಕಂಡು ಈ ಅಜ್ಜಿಯ ರಿಯಾಕ್ಷನ್‌ ನೋಡಿ- ವಿಡಿಯೊ ಇದೆ

ನ್ಯೂಯಾರ್ಕ್ ನಗರದ ಲೋವರ್ ಮ್ಯಾನ್‌ಹಟನ್‌ನ ಫೈನಾನ್ಷಿಯಲ್ ಡಿಸ್ಟ್ರಿಕ್ಟ್‌ನಲ್ಲಿರುವ ವಾಲ್‌ಸ್ಟ್ರೀಟ್ ಪ್ರಸಿದ್ಧ ಬೀದಿಯಾಗಿದ್ದು, ಇದನ್ನು ಅಮೆರಿಕದಲ್ಲಿ ಹಣಕಾಸಿನ ಕೇಂದ್ರವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಇದು ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ (NYSE) ಮತ್ತು ಇತರ ಪ್ರಮುಖ ಹಣಕಾಸು ಸಂಸ್ಥೆಗಳಿಗೆ ನೆಲೆಯಾಗಿದೆ. ಇದು ಸ್ಟಾಕ್‌ಗಳು ಮತ್ತು ಬಾಂಡ್‌ಗಳನ್ನು ವ್ಯಾಪಾರ ಮಾಡುವ ಕೇಂದ್ರವಾಗಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.