Viral News: ಒಂದು ಹೆಣ್ಣುಮಗುವಿಗಾಗಿ ಆಸೆ ಪಟ್ಟ ಮನೆಯಲ್ಲೀಗ ಮಕ್ಕಳದ್ದೇ ಕಲರವ!
ನಾರ್ತ್ ಕ್ಯಾರೊಲೈನಾದ ಕುಟುಂಬದ ಕ್ಯಾರ್ಲೋಸ್ ಮತ್ತು ರೊಂಜಿರಾ ಅಬ್ರಹಾಮ್ಸ್ ದಂಪತಿಯ ಐದು ಮಂದಿ ಇದ್ದ ಕುಟುಂಬದಲ್ಲಿ ಒಂಬತ್ತು ಮಂದಿಯಾದ ಅನುಭವವನ್ನು ಹಂಚಿಕೊಂಡಿದ್ದು, ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.


ಜೀವನದಲ್ಲಿ ನಾವು ಅಂದುಕೊಳ್ಳುವುದೇ ಒಂದು, ಆಗುವುದೇ ಇನ್ನೊಂದು ಎಂಬ ಮಾತಿದೆ. ಇದೇ ಅನುಭವ ಇದೀಗ ನಾರ್ತ್ ಕ್ಯಾರೊಲೈನಾದ ಕುಟುಂಬದ ಕ್ಯಾರ್ಲೋಸ್ ಮತ್ತು ರೊಂಜಿರಾ ಅಬ್ರಹಾಮ್ಸ್ ದಂಪತಿಗಾಗಿದೆಯಂತೆ. ಅವರು ತಮಗಾದ ಈ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್(Viral News) ಆಗಿದೆ. ಈ ದಂಪತಿಗೆ ಈಗಾಗಲೇ ಮೂರು ಗಂಡು ಮಕ್ಕಳಿದ್ದು, ಒಂದು ಹೆಣ್ಣು ಮಗು ಬೇಕೆಂದು ಇಬ್ಬರು ಆಸೆ ಪಟ್ಟಿದ್ದರಂತೆ. ಒಂದು ಹೆಣ್ಣು ಮಗುವಿಗಾಗಿ ಆಸೆ ಪಟ್ಟ ರೊಂಜಿರಾ ಮತ್ತೆ ಗರ್ಭಿಣಿಯಾಗಿದ್ದಾಳೆ. ತನಗೆ ಹೆಣ್ಣು ಮಗು ಹುಟ್ಟುತ್ತದೆ ಎಂಬ ಕನಸು ಕಂಡ ಆಕೆ ಈಗ 4 ಮಕ್ಕಳಿಗೆ ಜನ್ಮ ನೀಡಿ ಸಖತ್ ಖುಷಿಯಾಗಿದ್ದಾಳಂತೆ.ಅದರಲ್ಲಿ ಎರಡು ಗಂಡು ಮಗು, 2 ಹೆಣ್ಣುಮಗುವಂತೆ. ಚಿಕ್ಕ ಸಂಸಾರ ತಮ್ಮದಾಗಬೇಕು ಎಂದು ಆಸೆಪಟ್ಟ ದಂಪತಿಯ ಮನೆಯಲ್ಲಿಗ 7 ಮಕ್ಕಳ ಕಲರವ!
ಕಾರ್ಲೋಸ್ ಮತ್ತು ರೊಂಜಿರಾ 17 ನೇ ವಯಸ್ಸಿನಲ್ಲಿ ಒಬ್ಬರನೊಬ್ಬರು ಭೇಟಿಯಾಗಿ 18 ನೇ ವಯಸ್ಸಿನಲ್ಲಿ ವಿವಾಹವಾದರಂತೆ. ರೊಂಜಿರಾ ಮೊದಲ ಬಾರಿ ಗರ್ಭಧರಿಸಿದಾಗ ತ್ರಿವಳಿ ಗಂಡುಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೂರು ಗಂಡು ಮಕ್ಕಳು ಹುಟ್ಟಿದ ಬಳಿಕ ಹೆಣ್ಣು ಮಗುವಿಗಾಗಿ ಆಸೆ ಪಟ್ಟ ರೊಂಜಿರಾ ಈಗ ಮತ್ತೆ 4 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಅದರಲ್ಲಿ 2 ಗಂಡು ಮಗು, 2 ಹೆಣ್ಣು ಮಗುವಂತೆ.
She Wanted A #Girl, Got A Gang: Mom’s Wish Turns Into #Quadruplet Surprise#Buzz #viral #Trending #Lifestyle #Pregnant #Momhttps://t.co/DZwaNVdszD
— News18 (@CNNnews18) May 9, 2025
ಐದು ಮಂದಿ ಇದ್ದ ಕುಟುಂಬದಿಂದ ಈಗ ಒಂಬತ್ತು ಮಂದಿಯ ಕುಟುಂಬಕ್ಕೆ ಹೊಂದಿಸಿಕೊಳ್ಳುವಾಗ ಕೆಲವು ಸವಾಲುಗಳು ಎದುರಾಗುವುದು ಸಹಜ. ಆದರೆ ರೊಂಜಿರಾ ಖುಷಿಯಲ್ಲಿ ಇದ್ದಾಳಂತೆ. ತಮ್ಮ ಕುಟುಂಬ ದೊಡ್ಡದಾಗಿರುವ ಬಗ್ಗೆ ಕೆಲವರು ಕಾಮೆಂಟ್ ಮಾಡಿದರೂ, ಅವಳು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಖುಷಿಯಲ್ಲಿದ್ದಾಳಂತೆ.
ಈ ಸುದ್ದಿಯನ್ನೂ ಓದಿ:Viral Video: 'ಡಿಂಗ್ ಡಾಂಗ್ ಡಿಂಗ್' ಸಾಂಗ್‌ಗೆ ಸಖತ್ ಆಗಿ ಹೆಜ್ಜೆ ಹಾಕಿದ ಗರ್ಭಿಣಿ; ನೆಟ್ಟಿಗರು ಫುಲ್ ಶಾಕ್
ಬಹಳ ದೊಡ್ಡ ಕುಟುಂಬವನ್ನು ನಿರ್ವಹಿಸುವುದು ಸುಲಭದ ಮಾತಲ್ಲ! ಆದರೆ ರೊಂಜಿರಾ ಎಲ್ಲಾ ಮಕ್ಕಳಿಗೆ ಸಮಯವನ್ನು ನೀಡುತ್ತಾಳಂತೆ. ಅವಳು ತನ್ನ ಹೆಣ್ಣುಮಕ್ಕಳಿಗೆ ಒಂದೇ ರೀತಿಯ ಬಟ್ಟೆಗಳನ್ನು ಹಾಕುತ್ತಾಳಂತೆ.ಇದು ಅವಳಿಗೆ ಸಿಕ್ಕಾಪಟ್ಟೆ ಖುಷಿ ನೀಡುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.