ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಬಸ್‌, ಕಾರ್‌, ಬೈಕ್‌ ಅಲ್ಲ... ಕಾಲೇಜಿಗೆ ಓಡಾಡೋಕೆ ದಿನಾ ಫ್ಲೈಟ್‌ ಬೇಕು; ಈಕೆಯ ದಿನ ಖರ್ಚು ಕೇಳಿದ್ರೆ ಶಾಕ್‌ ಆಗುತ್ತೆ!

22 ವರ್ಷದ ವಿದ್ಯಾರ್ಥಿನಿ ಯುಜುಕಿ ನಕಾಶಿಮಾ ತನ್ನ ಪದವಿಗಾಗಿ ಫುಕುವೊಕಾದಲ್ಲಿನ ಯೂನಿವರ್ಸಿಟಿಗೆ ಹೋಗಲು ಟೋಕಿಯೊ ಮತ್ತು ಫುಕುವೊಕಾ ನಡುವೆ ಪ್ರತಿದಿನ ವಿಮಾನ ಪ್ರಯಾಣ ಮಾಡುತ್ತಾಳಂತೆ. ಇದಕ್ಕಾಗಿ ಆಕೆ ಪ್ರತಿದಿನ ಸುಮಾರು 20,000 ರೂ.ಗಳನ್ನು ಖರ್ಚು ಮಾಡುತ್ತಾಳಂತೆ. ಈ ವಿಚಾರವನ್ನುಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದು ಈಗ ವೈರಲ್(Viral Video) ಆಗಿದೆ.

ಕಾಲೇಜಿಗೆ ಫ್ಲೈಟ್‌ನಲ್ಲಿಯೇ ಓಡಾಡುವ ವಿದ್ಯಾರ್ಥಿನಿ; ಖರ್ಚೆಷ್ಟು ಗೊತ್ತೇ?

Profile pavithra Apr 22, 2025 3:38 PM

ನವದೆಹಲಿ: ಅನೇಕ ವಿದ್ಯಾರ್ಥಿಗಳು ತಮ್ಮ ಶಾಲೆ, ಕಾಲೇಜುಗಳಿಗೆ ಹೋಗಲು ಬಸ್‌, ರೈಲು, ಸ್ಕೂಟರ್‌ ಮೂಲಕ ಹೋಗುತ್ತಾರೆ. ಆದರೆ ಜಪಾನಿನ ವಿದ್ಯಾರ್ಥಿನಿಯೊಬ್ಬಳು ತನ್ನ ಪದವಿಯನ್ನು ಮುಗಿಸಲು ಪ್ರತಿದಿನ ಒಂದು ನಗರದಿಂದ ಇನ್ನೊಂದು ನಗರಕ್ಕೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದಾಳಂತೆ. ಅದೂ ಅಲ್ಲದೇ ಆಕೆ ಪ್ರತಿದಿನ ತನ್ನ ಪ್ರಯಾಣಕ್ಕಾಗಿ 20,000ರೂಪಾಯಿ ಖರ್ಚು ಮಾಡುತ್ತಾಳಂತೆ. ಈ ವಿಚಾರವನ್ನು ಆಕೆ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಇದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

22 ವರ್ಷದ ವಿದ್ಯಾರ್ಥಿನಿ ಯುಜುಕಿ ನಕಾಶಿಮಾ ಟೋಕಿಯೊ ಮತ್ತು ಫುಕುವೊಕಾ ನಡುವೆ ಪ್ರತಿದಿನ ವಿಮಾನ ಪ್ರಯಾಣ ಮಾಡುವುದರಿಂದ ಸುದ್ದಿಯಾಗಿದ್ದಾಳೆ. ತನ್ನ ಇತ್ತೀಚಿನ ಯೂಟ್ಯೂಬ್ ವ್ಲಾಗ್‍ನಲ್ಲಿ, ಯುಜುಕಿ ತನ್ನ ತರಗತಿಗಳಿಗೆ ಹಾಜರಾಗಲು ಮತ್ತು ಅದೇ ದಿನ ಮನೆಗೆ ಮರಳಲು ರೌಂಡ್-ಟ್ರಿಪ್ ವಿಮಾನ ಪ್ರಯಾಣ ಮಾಡುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕಾಗಿ ಆಕೆ ಪ್ರತಿದಿನ ಸುಮಾರು 20,000 ರೂ.ಗಳನ್ನು ಖರ್ಚು ಮಾಡುತ್ತಾಳಂತೆ. ಎರಡು ಗಂಟೆಗಳ ಅವಧಿಯ ಪ್ರಯಾಣಕ್ಕೆ 15,000 ಯೆನ್ (ಅಂದಾಜು 9,000 ರೂ.) ವೆಚ್ಚವಾಗಲಿದೆ ಎಂದು ಅವಳು ತಿಳಿಸಿದ್ದಾಳೆ.

ವಿಡಿಯೊ ಇಲ್ಲಿದೆ ನೋಡಿ...



ವಿದ್ಯಾರ್ಥಿಯು ಪಾಪ್ ಗುಂಪು ಸಕುರಾಜಾಕಾ 46ನ ಸದಸ್ಯನಾಗಿದ್ದಾಳೆ. ಆಕೆ ಟೋಕಿಯೊದಲ್ಲಿ ವಾಸಿಸುತ್ತಿದ್ದಾಳಂತೆ. ಹಾಗಾಗಿ ಅವಳು ಸರಿಸುಮಾರು 1,000 ಕಿಲೋಮೀಟರ್ ದೂರದಲ್ಲಿರುವ ಫುಕುವೊಕಾದಲ್ಲಿನ ಯೂನಿವರ್ಸಿಟಿಯಲ್ಲಿ ತನ್ನ ಪದವಿ ಪಡೆಯುವ ನಿರ್ಧಾರ ಮಾಡಿದ್ದಾಳೆ.

ಬೆಳಿಗ್ಗೆ ವಿಮಾನಕ್ಕಾಗಿ ವಿಮಾನ ನಿಲ್ದಾಣಕ್ಕೆ ಹೋಗಬೇಕಾಗಿದ್ದರಿಂದ ಬೆಳಗ್ಗೆ ಬೇಗ ಎದ್ದೇಳುತ್ತಾಳೆ. ಅವಳು ಬೆಳಿಗ್ಗೆ 6 ಗಂಟೆ ಸುಮಾರಿಗೆ ಹನೆಡಾ ವಿಮಾನ ನಿಲ್ದಾಣದಿಂದ ಮೊದಲ ವಿಮಾನವನ್ನು ಹತ್ತುತ್ತಾಳೆ ಮತ್ತು ಬೆಳಿಗ್ಗೆ 9: 30 ಕ್ಕೆ ಕಿಟಾಕ್ಯುಶು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಾಳೆ. ತರಗತಿಗಳಿಗೆ ಹಾಜರಾದ ನಂತರ, ಅವಳು ಸಂಜೆ ನೃತ್ಯ ಮತ್ತು ಮ್ಯೂಸಿಕ್ ಕ್ಲಾಸ್‍ಗಾಗಿ ಟೋಕಿಯೊಗೆ ಮರಳುತ್ತಾಳಂತೆ. ಈ ಬಗ್ಗೆ ಅವಳು ಸೋಶಿಯಲ್ ಮೀಡಿಯಾ ವಿಡಿಯೊದಲ್ಲಿ ತಿಳಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ:‌Viral Video: ಬರೋಬ್ಬರಿ 7 ವರ್ಷಗಳ ನಂತರ ಹಳೆಯ ದೋಸ್ತ್‌ಗಳ ಭೇಟಿ? ಹೃದಯಸ್ಪರ್ಶಿ ವಿಡಿಯೊ ಫುಲ್‌ ವೈರಲ್

ಇದೇ ರೀತಿಯ ಘಟನೆಯಲ್ಲಿ, ಭಾರತೀಯ ಮೂಲದ ಮಹಿಳೆಯೊಬ್ಬರು ವಾರದಲ್ಲಿ ಐದು ದಿನ ತನ್ನ ಕೆಲಸದ ಸ್ಥಳಕ್ಕೆ ಹೋಗಲು ವಿಮಾನದಲ್ಲಿ ಪ್ರಯಾಣಿಸಿದ್ದು ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇಬ್ಬರು ಮಕ್ಕಳ ತಾಯಿಯಾಗಿರುವ ರಚೆಲ್ ಕೌರ್ ಪೆನಾಂಗ್‍ನಿಂದ ಕೌಲಾಲಂಪುರಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳಂತೆ. ಅವಳು ಬೆಳಿಗ್ಗೆ ವಿಮಾನವನ್ನು ಹತ್ತಿ ನಂತರ ಕೆಲಸದ ಸ್ಥಳಕ್ಕೆ ಬಂದು ಮತ್ತು ಅದೇ ದಿನ ಸಂಜೆ ಮನೆಗೆ ಹಿಂದಿರುಗುತ್ತಿದ್ದಳು ಎನ್ನಲಾಗಿದೆ.