ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಯುಕೆ ಮಹಿಳೆ ಸೆರೆ ಹಿಡಿದ ತಾಜ್‌ಮಹಲ್‌ನ ಈ ಫೋಟೋ ಬಹಳ ವೈರಲಾಗ್ತಿದೆ! ಅಂತಹದ್ದೇನಿದೆ ಇದ್ರಲ್ಲಿ?

ಇತ್ತೀಚೆಗೆ ತಾಜ್‍ಮಹಲ್‍ಗೆ ಭೇಟಿ ನೀಡಿದ್ದ ಕ್ರಿಸ್ತಾ ಜಾರ್ಮನ್ ಎಂಬ ಬ್ರಿಟಿಷ್ ಪ್ರವಾಸಿಗಳೊಬ್ಬಳು ಬೆಳ್ಳಂಬೆಳಿಗ್ಗೆ ತಾಜ್‍ಮಹಲ್‍ನ ಸೌಂದರ್ಯವನ್ನು ಕಂಡು ಖುಷಿಯಾಗಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈಗ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಯುಕೆ ಮಹಿಳೆ ಸೆರೆ ಹಿಡಿದ ತಾಜ್‌ಮಹಲ್‌ನ ಈ ಫೋಟೋ ಬಹಳ ವೈರಲಾಗ್ತಿದೆ!

Profile pavithra May 10, 2025 2:50 PM

ದೆಹಲಿ: ತಾಜ್‌ಮಹಲ್‌ ಎಂದಾಕ್ಷಣ ಅದರ ಸೌಂದರ್ಯ ಕಣ್ಮುಂದೆ ಬರುತ್ತದೆ. ಜಗತ್ತಿನ ಏಳು ಅಚ್ಚರಿಗಳಲ್ಲಿ ಒಂದಾದ ತಾಜ್ ಮಹಲ್ ನೋಡಲು ದೇಶ ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಇದೀಗ ತಾಜ್‍ಮಹಲ್‍ಗೆ ಭೇಟಿ ನೀಡಿದ್ದ ಕ್ರಿಸ್ತಾ ಜಾರ್ಮನ್ ಎಂಬ ಬ್ರಿಟಿಷ್ ಪ್ರವಾಸಿಗಳೊಬ್ಬಳು ಮುಂಜಾನೆಯ ವೇಳೆಯ ತಾಜ್‍ಮಹಲ್‍ನ ಸೊಬಗನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಭಾರತದ ಪ್ರವಾಸದಲ್ಲಿರುವ ಕ್ರಿಸ್ತಾ ಜಾರ್ಮನ್ ನಾನಾ ಸ್ಥಳಗಳಿಗೆ ಭೇಟಿ ನೀಡಿ ಅಲ್ಲಿನ ವೈಶಿಷ್ಟ್ಯದ ಬಗ್ಗೆ ತಿಳಿದುಕೊಂಡಿದ್ದಾಳೆ. ಇದರ ಜೊತೆಗೆ ಆಕೆ ಐತಿಹಾಸಿಕ ಸ್ಥಳವಾದ ತಾಜ್‌ಮಹಲ್ ಮುಂಜಾನೆ ವೇಳೆ ಹೇಗೆ ಕಾಣುತ್ತದೆ ಎಂದು ನೋಡಲು ಆ ಸಮಯದಲ್ಲಿ ಭೇಟಿ ನೀಡಿದ್ದಾಳೆ. ಕ್ರಿಸ್ಟಾ ಈಸ್ಟ್ ಗೇಟ್‌ಗೆ 4:45 ಕ್ಕೆ ಆಗಮಿಸಿದ್ದು, 5 ಗಂಟೆ ವೇಳೆ ತಾಜ್‌ಮಹಲ್‌ ಮುಂದೆ ನಿಂತು ಅದರ ಸೌಂದರ್ಯವನ್ನು ಕಣ್ತುಂಬಿಕೊಂಡಿದ್ದಾಳಂತೆ.

ವಿಡಿಯೊ ಇಲ್ಲಿದೆ ನೋಡಿ...

ಕ್ರಿಸ್ತಾ ಮುಂಜಾನೆ ವೇಳೆ ತಾಜ್ ಮಹಲ್‍ನ ಸೌಂದರ್ಯ ಕಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದಾಳಂತೆ. ಸೂರ್ಯನ ಹೊಂಬಣ್ಣದ ಕಿರಣದಿಂದ ತಾಜ್‌ಮಹಲ್‌ ಮತ್ತಷ್ಟೂ ಆಕರ್ಷಕವಾಗಿ ಕಾಣುತ್ತದೆಯಂತೆ. ಆಕೆ ತಾಜ್‌ಮಹಲ್‌ನ ಸಾಕಷ್ಟು ಫೋಟೊ ಹಾಗೂ ವಿಡಿಯೊ ತೆಗೆದುಕೊಂಡು ಖುಷಿಪಟ್ಟಿದ್ದಾಳಂತೆ.

ಈ ಸುದ್ದಿಯನ್ನೂ ಓದಿ:Viral Video: ಅಮೆಜಾನ್‌ ರೈನ್‌ ಫಾರೆಸ್ಟ್‌ನಲ್ಲಿ ಕಾಣಿಸಿಕೊಂಡ ದೈತ್ಯ ಅನಕೊಂಡ; ಏನಿದು ವೈರಲ್‌ ವಿಡಿಯೊ?

ಈ ವಿಡಿಯೊಗಳನ್ನು ಕ್ರಿಸ್ತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದನ್ನು ನೋಡಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.ಈಗಾಗಲೇ 2.3 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಹಲವರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.