Ekka Movie Teaser: ಎಕ್ಕ ಟೀಸರ್ ರಿಲೀಸ್- ಡಿಫರೆಂಟ್ ಅವತಾರದಲ್ಲಿ ಯುವರಾಜ್ ಕುಮಾರ್ ಎಂಟ್ರಿ
ಯುವರಾಜ್ ಕುಮಾರ್ ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರದ ಯುವ ಟೀಸರ್(Ekka Movie teaser release) ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್ ಆಗಿಯೇ ಟೀಸರ್ ರಿಲೀಸ್ ಆಗಿದೆ.


ಬೆಂಗಳೂರು: ಕನ್ನಡ ಚಿತ್ರರಂಗದ ಭರವಸೆ ನಾಯಕ ಯುವರಾಜ್ ಕುಮಾರ್ (Yuva Rajkumar) ಹುಟ್ಟುಹಬ್ಬದ ಅಂಗವಾಗಿ ನಿನ್ನೆ ಬಿಡುಗಡೆಯಾಗಬೇಕಿದ್ದ ಎಕ್ಕ ಚಿತ್ರದ ಯುವ ಟೀಸರ್ ಇಂದು ಅನಾವರಣ ಮಾಡಲಾಗಿದೆ. ಪಹಲ್ಗಾಮ್ ಉಗ್ರರ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡವರಿಗೆ ಗೌರವ ಸೂಚಿಸುವ ಸಲುವಾಗಿ ಚಿತ್ರತಂಡ ಟೀಸರ್ ಬಿಡುಗಡೆ ಮುಂದೂಡಿತ್ತು. ಇಂದು ಅಣ್ಣಾವ್ರ ಜನ್ಮದಿನದ ಜೊತೆಗೆ ಯುವ ಬರ್ತಡೇ ಸ್ಪೆಷಲ್ ಆಗಿಯೇ ಟೀಸರ್ ರಿಲೀಸ್ ಆಗಿದೆ.1 ನಿಮಿಷ 9 ಸೆಕೆಂಡ್ ಇರುವ ಯುವ ಟೀಸರ್ ಸೈಕ್ ಆಗಿದೆ. ಹೊಸ ಅವತಾರದಲ್ಲಿ ಯುವರಾಜ್ ಕುಮಾರ್ ಎಂಟ್ರಿ ಕೊಟ್ಟಿದ್ದು ಅಭಿಮಾನಿಗಳು ಸಿನಿಮಾ ನೋಡಲು ಕಾತುರರಾಗಿದ್ದಾರೆ.
ಎಕ್ಕ ಚಿತ್ರತಂಡ ರಿಯಲಿಸ್ಟಿಕ್ ಜಾಗದಲ್ಲಿ ತಮ್ಮ ಚಿತ್ರದ ಫಸ್ಟ್ ಲುಕ್ನ ಶೂಟಿಂಗ್ ಮಾಡಿರೋದು ವಿಶೇಷವಾಗಿದ್ದು ಯುವ ಎಂಟ್ರಿ ಸಖತ್ ಕಿಕ್ ನೀಡಿದೆ. ಟೀಸರ್ ನಲ್ಲಿ ಮಗು-ಮೃಗ ಅಂತಾ ಮಸ್ತ್ ಡೈಲಾಗ್ ಹೊಡೆಯುತ್ತಾ ಕೈಯಲ್ಲಿ ಪೊರಕೆ ಹಿಡಿದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೊಂದ್ ವಿಷ್ಯ ಇದು ಇಲ್ಲಿಗೆ ನಿಲ್ಲೋದಿಲ್ಲ ಅಂತಾ ದೊಡ್ಡದಾಗಿ ಏನೋ ಸೂಚನೆ ಕೊಟ್ಟಿದ್ದಾರೆ.ಯುವ ಆ್ಯಕ್ಟಿಂಗ್, ರೋಹಿತ್ ಪದಕಿ ಟೇಕಿಂಗ್, ಚರಣ್ ರಾಜ್ ಮ್ಯೂಸಿಕ್ ಕಿಕ್ ಟೀಸರ್ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಈಗಾಗಲೇ ಯುವ ಟೈಟಲ್ ಟ್ರ್ಯಾಕ್ ಚಿಂದಿ ಉಡಾಯಿಸಿದ್ದು, ಈಗ ಟೀಸರ್ ಸರದಿ ಅಂತಾ ಫ್ಯಾನ್ಸ್ ಖುಷಿಪಡುತ್ತಿದ್ದಾರೆ.
ಇದನ್ನು ಓದಿ: AI Movie: ಕನ್ನಡದಲ್ಲೇ ಸಿದ್ಧವಾಯ್ತು ಮೊದಲ ಎಐ ಸಿನಿಮಾ; ಬಿಡುಗಡೆ ಯಾವಾಗ?.
ಎಕ್ಕ ಒಬ್ಬ ಯುವಕನ ಕಥೆ ಯಾಗಿದ್ದು ಭೂಗತ ಲೋಕದವರ ದೌರ್ಜನ್ಯಕ್ಕೊಳಗಾದ ಹುಡುಗ ಹೇಗೆ ಮಾಫಿಯಾವನ್ನು ಮಟ್ಟ ಹಾಕುತ್ತಾನೆ ಅನ್ನೋದು ಕಥೆಯಾಗಿದೆ.ರೋಹಿತ್ ಪದಕಿ ನಿರ್ದೇಶನದ ಈ ಚಿತ್ರದಲ್ಲಿ ಯುವರಾಜ್‌ಕುಮಾರ್ ನಾಯಕನಾಗಿ, ಸಂಪದ ಹಾಗೂ ಸಂಜನಾ ಆನಂದ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ ಇದೆ. ಚರಣ್ ರಾಜ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ದೀಪು ಎಸ್ ಕುಮಾರ್ ಸಂಕಲನ ಒದಗಿಸಿದ್ದಾರೆ.
ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾವ್ ಅವರ ಕೆಆರ್‌ಜಿ ಸ್ಟುಡಿಯೋಸ್, ಜಯಣ್ಣ ಹಾಗೂ ಭೋಗೇಂದ್ರ ಅವರ ಜಯಣ್ಣ ಫಿಲ್ಮ್ಸ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಈ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಜೂನ್-6 ರಂದು ಎಕ್ಕ ಸಿನಿಮಾ ತೆರೆಗೆ ಎಂಟ್ರಿ ಕೊಡುತ್ತಿದ್ದು ಸಿನಿ ಪ್ರಿಯರು ಕಾತುರ ರಾಗಿದ್ದಾರೆ.