ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಉತ್ತಮ ಆರ್ಥಿಕ ಅಭ್ಯಾಸ ರೂಢಿಸಿಕೊಳ್ಳಿ, ಅಭಿವೃದ್ಧಿ ಸಾಧಿಸಿ: ವೀಸಾ ನೀಡಿದ 8 ಸಲಹೆಗಳು

ನಿರ್ದಿಷ್ಟವಾದ, ಅಳೆಯಬಹುದಾದ, ಸಾಧಿಸಬಹುದಾದ, ಪ್ರಸ್ತುತವಾದ ಮತ್ತು ಸಮಯ ಮಿತಿಯುಳ್ಳ ಆರ್ಥಿಕ ಗುರಿಗಳನ್ನು ಇಟ್ಟು ಕೊಳ್ಳಿ. ಪ್ರವಾಸ ಹೋಗಲು ಉಳಿತಾಯ ಮಾಡುವುದು ಅಥವಾ ಸಾಲವನ್ನು ತೀರಿಸಲು ಹಣ ಕ್ರೋಢೀಕರಿಸುವುದು ಮುಂತಾದ ಗುರಿ ಇಟ್ಟುಕೊಳ್ಳಬಹುದು. ವಾರಕ್ಕೆ ಅಥವಾ ತಿಂಗಳಿಗೆ ಅಂತ ಗುರಿಗಳನ್ನು ಇಟ್ಟುಕೊಳ್ಳಿ. ಆಗ ನಿಮ್ಮ ಪ್ರಗತಿಯನ್ನು ತಿಳಿಯಲು ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.

ಉತ್ತಮ ಆರ್ಥಿಕ ಅಭ್ಯಾಸ ರೂಢಿಸಿಕೊಳ್ಳಿ, ಅಭಿವೃದ್ಧಿ ಸಾಧಿಸಿ

Profile Ashok Nayak Apr 21, 2025 11:54 PM

ಆರ್ಥಿಕತೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಹಳ ದೊಡ್ಡ ಬದಲಾವಣೆಗಳನ್ನು ಮಾಡ ಬೇಕಾದ ಅಗತ್ಯವಿಲ್ಲ. ಬದಲಿಗೆ ಸ್ಥಿರವಾದ, ಪ್ರಾಯೋಗಿಕ ಆರ್ಥಿಕ ಅಭ್ಯಾಸಗಳನ್ನು ರೂಢಿಸಿ ಕೊಳ್ಳಬೇಕು. ವೀಸಾ ಸಂಸ್ಥೆಯು ನಿಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಬಳಸಲು ಮತ್ತು ಭವಿಷ್ಯ ಕ್ಕಾಗಿ ಸುರಕ್ಷಿತವಾಗಿ ಸಂಪತ್ತನ್ನು ಕ್ರೋಢೀಕರಿಸಲು ಪಾಲಿಸಬೇಕಾದ ಕೆಲವು ಸಲಹೆಗಳನ್ನು ಈ ಕೆಳಗೆ ನೀಡುತ್ತಿದೆ:

ಇದನ್ನೂ ಓದಿ: ‌M J Akbar Column: ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಅತಿದೊಡ್ಡ ಗಿಫ್ಟ್‌ ಇದು !

  1. ಸ್ಮಾರ್ಟ್ ಆದ ಆರ್ಥಿಕ ಗುರಿಗಳನ್ನು ಇಟ್ಟುಕೊಳ್ಳಿ: ನಿರ್ದಿಷ್ಟವಾದ, ಅಳೆಯಬಹುದಾದ, ಸಾಧಿಸಬಹುದಾದ, ಪ್ರಸ್ತುತವಾದ ಮತ್ತು ಸಮಯ ಮಿತಿಯುಳ್ಳ ಆರ್ಥಿಕ ಗುರಿಗಳನ್ನು ಇಟ್ಟು ಕೊಳ್ಳಿ. ಪ್ರವಾಸ ಹೋಗಲು ಉಳಿತಾಯ ಮಾಡುವುದು ಅಥವಾ ಸಾಲವನ್ನು ತೀರಿಸಲು ಹಣ ಕ್ರೋಢೀಕರಿಸುವುದು ಮುಂತಾದ ಗುರಿ ಇಟ್ಟುಕೊಳ್ಳಬಹುದು. ವಾರಕ್ಕೆ ಅಥವಾ ತಿಂಗಳಿಗೆ ಅಂತ ಗುರಿಗಳನ್ನು ಇಟ್ಟುಕೊಳ್ಳಿ. ಆಗ ನಿಮ್ಮ ಪ್ರಗತಿಯನ್ನು ತಿಳಿಯಲು ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
  2. ಆರ್ಥಿಕ ಶಿಕ್ಷಣ ಪಡೆಯಲು ಸಮಯ ಮೀಸಲಿಡಿ: ಪ್ರತೀ ವಾರ ನಿಮ್ಮ 30 ನಿಮಿಷಗಳನ್ನು ವೈಯಕ್ತಿಕ ಹಣಕಾಸಿನ ಯಾವುದೋ ಒಂದು ವಿಚಾರವನ್ನು ಕಲಿಯಲು ಮೀಸಲಿಡಿ. ಸಣ್ಣ ದಾದ, ಸುಲಭವಾಗಿ ಗ್ರಹಿಸಬಹುದಾದ ಪಾಠಗಳನ್ನು ಕಲಿತರೆ ಉಳಿತಾಯ, ಹೂಡಿಕೆ, ಮತ್ತು ಸಾಲ ನಿರ್ವಹಣೆಯ ಕುರಿತು ಉತ್ತಮ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
  3. ಆರ್ಥಿಕತೆ ಕುರಿತ ತಪ್ಪು ಅಭಿಪ್ರಾಯಗಳನ್ನು ಅರಿತುಕೊಳ್ಳಿ: “ಡಿಜಿಟಲ್ ವಾಲೆಟ್‌ ಗಳು ಬ್ಯಾಂಕ್ ವಹಿವಾಟುಗಳಿಗಿಂತ ಕಡಿಮೆ ಸುರಕ್ಷಿತವಾಗಿವೆ” ಎಂಬಂತಹ ತಪ್ಪು ಕಲ್ಪನೆಗಳ ಕುರಿತು ಅರಿತುಕೊಳ್ಳಲು ಸಮಯ ಮೀಸಲಿಡಿ. ಇದರಿಂದ ದುಬಾರಿ ತಪ್ಪು ಮಾಡುವುದನ್ನು ತಪ್ಪಿಸಲು ಮತ್ತು ತಿಳುವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ.
  4. ಬಜೆಟ್ ತಂತ್ರಗಳನ್ನು ಕಲಿಯಿರಿ: 50/30/20 ನಿಯಮ ಮತ್ತು ಎನ್ವಲಪ್ ಸಿಸ್ಟಮ್ ನಂತಹ ವಿಭಿನ್ನ ಬಜೆಟ್ ತಂತ್ರಗಳನ್ನು ತಿಳಿದುಕೊಳ್ಳಿ, ನಿಮ್ಮ ಜೀವನಶೈಲಿಗೆ ಯಾವುದು ಸೂಕ್ತವೋ ಅದನ್ನು ಅಳವಡಿಸಿಕೊಳ್ಳಿ. ಈ ವಿಚಾರಗಳನ್ನು ಅರ್ಥಮಾಡಿಕೊಳ್ಳುವುದರಿಂದ ನಿಮ್ಮ ಖರ್ಚು ಮತ್ತು ಉಳಿತಾಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಜೊತೆಗೆ, ನಿಮ್ಮ ಬ್ಯಾಂಕಿಂಗ್ ಆಪ್‌ ನಲ್ಲಿ ಖರ್ಚಿನ ಮಿತಿಗಳನ್ನು ಸೆಟ್ ಮಾಡಲು ಕೂಡ ಸಾಧನಗಳನ್ನು ಬಳಸಿಕೊಳ್ಳಿ.
  5. ಸುರಕ್ಷಿತ ಡಿಜಿಟಲ್ ಪಾವತಿ ವ್ಯವಸ್ಥೆಗಳನ್ನು ಬಳಸಿ: ಆನ್‌ ಲೈನ್ ಶಾಪಿಂಗ್ ಮಾಡುವಾಗ ನಿಮ್ಮ ಆರ್ಥಿಕ ಸುರಕ್ಷತೆ ಬಹಳ ಮುಖ್ಯ. ಅಪರಿಚಿತ ವೆಬ್‌ ಸೈಟ್‌ ಗಳು ಅಥವಾ ಸುರಕ್ಷಿತವಲ್ಲದ ಆಪ್‌ ಗಳಲ್ಲಿ ನಿಮ್ಮ ಕಾರ್ಡ್ ವಿವರಗಳನ್ನು ನೀಡಬೇಡಿ. ನಿಮ್ಮ ಕಾರ್ಡ್‌ ಗಳಲ್ಲಿ ಟ್ರಾನ್ಸಾಕ್ಷನ್ ಅಲರ್ಟ್ ಗಳನ್ನು ಸಕ್ರಿಯಗೊಳಿಸಿ ಹೆಚ್ಚಿನ ಸುರಕ್ಷತೆ ಪಡೆಯಿರಿ.
  6. ಎಮರ್ಜೆನ್ಸಿ ಫಂಡ್ ಇರಲಿ: ಅನಿರೀಕ್ಷಿತ ವೆಚ್ಚಗಳನ್ನು ಭರಿಸಲು ಎಮರ್ಜೆನ್ ಫಂಡ್ ರೆಡಿ ಮಾಡಿಡಿ. ಇದರಿಂದ ಅನಿಶ್ಚಿತ ಆರ್ಥಿಕ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಅನಿಶ್ಚಿತ ಸಮಯದಲ್ಲಿ ಮಾನಸಿಕ ಶಾಂತಿ ಕಾಪಾಡಿಕೊಳ್ಳಬಹುದು.
  7. ಸಾಲವನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ: ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಕಾಪಾಡಿ ಕೊಳ್ಳಲು ಪ್ರಯತ್ನಿಸಿ ಮತ್ತು ಜವಾಬ್ದಾರಿಯುತವಾಗಿ ನಿಮ್ಮ ಸಾಲನ್ನು ನಿರ್ವಹಿಸಿ. ಉತ್ತಮ ಕ್ರೆಡಿಟ್ ಇತಿಹಾಸ ಇದ್ದರೆ ಸಾಲವನ್ನು ಪಡೆಯಲು, ಉತ್ತಮ ಬಡ್ಡಿದರ ಹೊಂದಲು, ಮತ್ತು ಉತ್ತಮ ಆರ್ಥಿಕ ಆರೋಗ್ಯ ಪಡೆಯಲು ನೆರವಾಗುತ್ತದೆ.
  8. ಹೂಡಿಕೆಯ ಮೂಲಭೂತ ಅಂಶಗಳು: ಸ್ಟಾಕ್‌ ಗಳು, ಬಾಂಡ್‌ ಗಳು, ಮತ್ತು ಮ್ಯೂಚುವಲ್ ಫಂಡ್‌ ಗಳಂತಹ ಮೂಲಭೂತ ಹೂಡಿಕೆ ಆಯ್ಕೆಗಳನ್ನು ಕಲಿಯಿರಿ. ಆರಂಭಿಕ ಮತ್ತು ತಿಳು ವಳಿಕೆಯಿಂದ ಮಾಡುವ ಹೂಡಿಕೆಯು ದೀರ್ಘಕಾಲೀನ ಸಂಪತ್ತು ಕ್ರೋಢೀಕರಣಕ್ಕೆ ಕಾರಣ ವಾಗಬಹುದು.

ತಿಳುವಳಿಕೆ ಮತ್ತು ಕ್ರಿಯೆಯಿಂದ ನಿಜವಾದ ಆರ್ಥಿಕ ಆತ್ಮವಿಶ್ವಾಸ ಬರುತ್ತದೆ. ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಿ ಮತ್ತು ಉತ್ತಮ ಆರ್ಥಿಕ ಅಭ್ಯಾಸ ರೂಢಿಸಿಕೊಳ್ಳಿ. ಇತರರಿಗೂ ಸಹಾಯ ಮಾಡಿ, ಎಲ್ಲರೂ ಸುರಕ್ಷಿತ ಆರ್ಥಿಕ ಭವಿಷ್ಯ ಹೊಂದುವಂತಾಗಲಿ.