ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರಣರಂಗಕ್ಕಿಳಿದ ನೌಕಾಪಡೆಯ INS ವಿಕ್ರಾಂತ್‌; ಪಾಕ್‌ ವಿರುದ್ಧದ ಹೋರಾಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಭಾರತ

ಭಾರತವನ್ನು ಕೆಣಕಲು ಹೋಗಿ ಪಾಕಿಸ್ತಾನ ಇದೀಗ ಪತರುಗುಟ್ಟಿ ಹೋಗಿದೆ. ಈ ದಾಳಿಯನ್ನು ಶಕ್ತವಾಗಿ ಎದುರಿಸಿದ ಭಾರತ ಇದೀಗ ಪಾಕ್‌ಗೆ ಪ್ರತ್ಯಾಘಾತ ನೀಡುತ್ತಿದೆ. ಮೂರೂ ಸೇನೆಗಳು ಸೇರಿ ಪಾಕ್‌ ಮೇಲೆ ಮುಗಿ ಬಿದ್ದಿವೆ. ಇದೀಗ ನೌಕಾಪಡೆಯ INS ವಿಕ್ರಾಂತ್‌ ಕಣಕ್ಕಿಳಿದಿದ್ದು, ಕರಾಚಿ ಬಂದರಿನತ್ತ ಕ್ಷಿಪಣಿ ದಾಳಿ ನಡೆಸಿದೆ.

ರಣರಂಗಕ್ಕಿಳಿದ INS ವಿಕ್ರಾಂತ್‌

Profile Ramesh B May 9, 2025 12:40 AM

ಹೊಸದಿಲ್ಲಿ: ಭಾರತವನ್ನು ಕೆಣಕಲು ಹೋಗಿ ಪಾಕಿಸ್ತಾನ ಇದೀಗ ಪತರುಗುಟ್ಟಿ ಹೋಗಿದೆ. ಮೇ 7ರಂದು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿದ್ದ ಭಾರತ ಉಗ್ರರ ನೆಲೆಯನ್ನು ನಾಶಪಡಿಸಿತ್ತು. ಮಿಲಿಟರಿ ನೆಲೆಯನನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಪಾಕ್‌ ಅಂದು ಸಂಜೆ ಜಮ್ಮು ಮತ್ತು ಕಾಶ್ಮೀರದ ವೇಳೆ ದಾಳಿ ನಡೆಸಿ ಮಕ್ಕಳು, ಮಹಿಳೆಯರು ಸೇರಿ 16 ಮಂದಿ ಅಮಾಯಕರನ್ನು ಹತ್ಯೆಗೈದಿತ್ತು. ಈ ವೇಳೆ ಭಾರತ ಪಾಕ್‌ನ ಕ್ಷಿಪಣಿ, ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಗುರುವಾರ ಸಂಜೆ ಮತ್ತೆ ಭಾರತದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಈ ದಾಳಿಯನ್ನು ಶಕ್ತವಾಗಿ ಎದುರಿಸಿದ ಭಾರತ ಇದೀಗ ಪಾಕ್‌ಗೆ ಪ್ರತ್ಯಾಘಾತ ನೀಡುತ್ತಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ಸೇರಿದಂತೆ ವಿವಿಧ ನಗರಗಳ ಮೇಲೆ ಭಾರತ ದಾಳಿ ನಡೆಸುತ್ತಿದೆ. ಸೇನೆಯ ಮೂರೂ ಪಡೆಗಳು ಈ ಕಾರ್ಯಾಚರಣೆಗೆ ಕೈಜೋಡಿಸಿವೆ. ಇದೀಗ ನೌಕಾಪಡೆಯ INS ವಿಕ್ರಾಂತ್‌ ಕಣಕ್ಕಿಳಿದಿದ್ದು, ಕರಾಚಿ ಬಂದರಿನತ್ತ ಕ್ಷಿಪಣಿ ದಾಳಿ ನಡೆಸಿದೆ.



ನೌಕಾಸೇನೆಯ ದಾಳಿಯಿಂದ ಕರಾಚಿಯಲ್ಲಿ ಅತಿ ಹೆಚ್ಚಿನ ನಾಶ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. 1971ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಕರಾಚಿ ಬಂದರ್‌ನತ್ತ ದಾಳಿ ನಡೆಸಿದೆ. ಭಾರದತದ ದಾಳಿಗೆ ಬೆಚ್ಚಿ ಬಿದ್ದ ಪಾಕ್‌ ಪ್ರಧಾನಿ ಶೆಹಬಾಜ್ ಷರೀಫ್ ಅಡಗು ತಾಣಕ್ಕೆ ಶಿಫ್ಟ್‌ ಆಗಿದ್ದಾರೆ.