Pollachi Physical Assault Case: ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣ- 9 ಆರೋಪಿಗಳು ದೋಷಿ ಎಂದು ತೀರ್ಪು
ತಮಿಳುನಾಡಿನ ಪೊಲ್ಲಾಚಿಯಲ್ಲಿ (Pollachi) 2019 ರಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (Physically Assaulting) ಮತ್ತು ಬ್ಲಾಕ್‌ಮೇಲ್ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಕೊಯಮತ್ತೂರು (Coimbatore) ಸೆಷನ್ಸ್ ಕೋರ್ಟ್ ದೋಷಿಗಳೆಂದು (Convicted) ತೀರ್ಪು ನೀಡಿದೆ. ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಆರೋಪಿಗಳನ್ನು ಸಾಮೂಹಿಕ ಅತ್ಯಾಚಾರ ಮತ್ತು ಪದೇ ಪದೇ ಅತ್ಯಾಚಾರದ ಆರೋಪದಲ್ಲಿ ದೋಷಿಗಳೆಂದು ಘೋಷಿಸಿದ್ದಾರೆ.


ಚೆನ್ನೈ: ತಮಿಳುನಾಡಿನ (Tamil Nadu) ಪೊಲ್ಲಾಚಿಯಲ್ಲಿ (Pollachi) 2019 ರಲ್ಲಿ ನಡೆದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ (Sexually Assaulting) ಮತ್ತು ಬ್ಲಾಕ್‌ಮೇಲ್ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಕೊಯಮತ್ತೂರು (Coimbatore) ಸೆಷನ್ಸ್ ಕೋರ್ಟ್ ದೋಷಿಗಳೆಂದು (Convicted) ತೀರ್ಪು ನೀಡಿದೆ. ನ್ಯಾಯಾಧೀಶೆ ಆರ್. ನಂದಿನಿ ದೇವಿ ಅವರು ಆರೋಪಿಗಳನ್ನು ಸಾಮೂಹಿಕ ಅತ್ಯಾಚಾರ ಆರೋಪದಲ್ಲಿ ದೋಷಿಗಳೆಂದು ಘೋಷಿಸಿದ್ದಾರೆ. ಶಿಕ್ಷೆ ಪ್ರಮಾಣ ಘೋಷಣೆ ಆಗಬೇಕಿದೆ. ಸಬರಿರಾಜನ್ ಎಂಬ ರಿಷ್ವಂತ್ (32), ತಿರುನಾವುಕರಸು (34), ಟಿ ವಸಂತ ಕುಮಾರ್ (30), ಎಂ ಸತೀಶ್ (33), ಆರ್ ಮಣಿ ಅಲಿಯಾಸ್ ಮಣಿವನ್ನನ್, ಪಿ ಬಾಬು (33), ಹಾರನ್ ಪಾಲ್ (32), ಅರುಲಾನಂತಮ್ (39), ಮತ್ತು ಅರುಣ್ ಕುಮಾರ್ (33) ದೋಷಿಗಳೆಂದು ಘೋಷಿತರಾದವರು. ಈ ಆರೋಪಿಗಳು 2019 ರಲ್ಲಿ ಬಂಧನಕ್ಕೊಳಗಾದಾಗಿನಿಂದ ಸೇಲಂ ಕೇಂದ್ರ ಕಾರಾಗೃಹದಲ್ಲಿದ್ದಾರೆ.
ಇಂದು ಬೆಳಗ್ಗೆ, ಆರೋಪಿಗಳನ್ನು ಭಾರೀ ಪೊಲೀಸ್ ಭದ್ರತೆಯೊಂದಿಗೆ ಸೆಷನ್ಸ್ ಕೋರ್ಟ್‌ಗೆ ಕರೆತರಲಾಯಿತು. ವಿಚಾರಣೆಯ ವೇಳೆ, ಪಬ್ಲಿಕ್ ಪ್ರಾಸಿಕ್ಯೂಟರ್, 200 ಕ್ಕೂ ಹೆಚ್ಚು ದಾಖಲೆಗಳು ಮತ್ತು 400 ಎಲೆಕ್ಟ್ರಾನಿಕ್ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆ ನಡೆದಿದೆ ಎಂದು ತಿಳಿಸಿದರು. ಇದರಲ್ಲಿ ಫೊರೆನ್ಸಿಕ್‌ನಿಂದ ದೃಢೀಕರಿಸಲ್ಪಟ್ಟ ದೌರ್ಜನ್ಯದ ವಿಡಿಯೊಗಳು ಸೇರಿವೆ. ಎಂದು ಅವರು ಹೇಳಿದರು. ಕೇವಲ ಎಂಟು ಸಂತ್ರಸ್ತರು ಮಾತ್ರ ಅಪರಾಧಗಳ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ ಎಂದು ಅವರು ತಿಳಿಸಿದರು, ಇದು ಸಾಮಾಜಿಕ ಕಳಂಕ ಮತ್ತು ಪ್ರತೀಕಾರದ ಭಯವನ್ನು ಎತ್ತಿ ತೋರಿಸುತ್ತದೆ ಎಂದರು.
ಮಹಿಳಾ ಹಕ್ಕುಗಳ ಕಾರ್ಯಕರ್ತರು ಈ ತೀರ್ಪನ್ನು ಸ್ವಾಗತಿಸಿದ್ದಾರೆ, "ಈ ತೀರ್ಪು ಒಂದು ರೀತಿಯ ಆಶ್ವಾಸನೆಯಾದರೂ, ಬಲಿಪಶುಗಳಿಗೆ ಪರಿಹಾರ, ಕೌನ್ಸೆಲಿಂಗ್, ಮತ್ತು ಹೊಸ ಜೀವನಕ್ಕಾಗಿ ಸರ್ಕಾರಿ ಉದ್ಯೋಗದ ಭರವಸೆ ಅಗತ್ಯವಿದೆ," ಎಂದು ತಮಿಳುನಾಡು ಮಹಿಳಾ ಸಮಿತಿಯ ಸದಸ್ಯರೊಬ್ಬರು ಹೇಳಿದರು.
ಈ ಸುದ್ದಿಯನ್ನು ಓದಿ:Crime News: ಮತ್ತೊಮ್ಮೆ ಗೋವಿನ ಮೇಲೆ ವಿಕೃತಿ, ಹಸುವಿನ ಕೆಚ್ಚಲು ಕತ್ತರಿಸಿ ಕ್ರೌರ್ಯ
ಏನಿದು ಪ್ರಕರಣ?
ಪೊಲ್ಲಾಚಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಎಂಟು ಮಹಿಳೆಯರ ಮೇಲೆ ನಡೆದ ನಿರಂತರ ಲೈಂಗಿಕ ದೌರ್ಜನ್ಯ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣವೊಂದು 2019ರಲ್ಲಿ ಬೆಳಕಿಗೆ ಬಂದಿತ್ತು. 2016 ರಿಂದ 2018 ರವರೆಗೆ ಅವರ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಲಾಗಿತ್ತು, ಚಿತ್ರೀಕರಿಸಲಾಗಿತ್ತು, ಮತ್ತು ಹಣಕ್ಕಾಗಿ ಬ್ಲಾಕ್‌ಮೇಲ್ ಮಾಡಲಾಗಿತ್ತು. ಆರೋಪಿಗಳ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಕಠಿಣ ವಿಭಾಗಗಳಾದ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ, ಒಬ್ಬ ಸಂತ್ರಸ್ತೆ ಮೇಲೆ ಪದೇ ಪದೇ ಅತ್ಯಾಚಾರ, ಕ್ರಿಮಿನಲ್ ಸಂಚು, ಲೈಂಗಿಕ ಕಿರುಕುಳ, ಮತ್ತು ಬ್ಲಾಕ್‌ಮೇಲ್ ಪ್ರಕರಣ ದಾಖಲಿಸಲಾಗಿತ್ತು.
ಅಧಿಕಾರಿಗಳ ಪ್ರಕಾರ, ಈ ಅಪರಾಧಗಳು 2016 ರಿಂದ 2018 ರವರೆಗೆ ನಡೆದಿದ್ದು, ಆರೋಪಿಗಳು ತಮ್ಮ ಲೈಂಗಿಕ ದೌರ್ಜನ್ಯದ ಕೃತ್ಯಗಳನ್ನು ಚಿತ್ರೀಕರಿಸಿ, ಆ ದೃಶ್ಯಾವಳಿಗಳನ್ನು ಬಳಸಿಕೊಂಡು ಸಂತ್ರಸ್ತರನ್ನು ಮತ್ತಷ್ಟು ಶೋಷಣೆಗೆ ಒಳಪಡಿಸಿದ್ದರು. ಪ್ರಕರಣವನ್ನು ಆರಂಭದಲ್ಲಿ ಪೊಲ್ಲಾಚಿ ಪೊಲೀಸರು ತನಿಖೆ ಮಾಡಿದ್ದರು. ನಂತರ ಇದನ್ನು ತಮಿಳುನಾಡು ಕ್ರೈಂ ಬ್ರಾಂಚ್-ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಟ್‌ಗೆ (ಸಿಬಿ-ಸಿಐಡಿ) ವರ್ಗಾಯಿಸಲಾಯಿತು. ನಿಷ್ಪಕ್ಷಪಾತ ತನಿಖೆಯ ಒತ್ತಾಯದಿಂದ, ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಈ ಪ್ರಕರಣವನ್ನು ಹಸ್ತಾಂತರಿಸಲಾಯಿತು.
ಸಿಬಿಐ ತನಿಖೆಯಲ್ಲಿ, ವ್ಯವಸ್ಥಿತ ದೌರ್ಜನ್ಯದ ಒಂದು ಮಾದರಿಯನ್ನು ಬಯಲಿಗೆಳೆಯಲಾಯಿತು. ಸಂತ್ರಸ್ತರು, ತಮ್ಮ ವಿಡಿಯೊಗಳನ್ನು ಕುಟುಂಬ ಮತ್ತು ಸಮುದಾಯಕ್ಕೆ ಸೋರಿಕೆ ಮಾಡುವ ಬೆದರಿಕೆಯಿಂದಾಗಿ ಆರೋಪಿಗಳ ಒತ್ತಾಯಕ್ಕೆ ಒಳಗಾಗಿದ್ದರು ಎಂದು ಆರೋಪಿಸಿದ್ದರು. ಆಗಿನ ಆಡಳಿತಾರೂಢ ಎಐಎಡಿಎಂಕೆ, ಪ್ರಕರಣವನ್ನು ಮರೆಮಾಚಲು ಯತ್ನಿಸಿದ ಆರೋಪ ಮತ್ತು ಎಫ್‌ಐಆರ್ ತಡವಾಗಿ ದಾಖಲಿಸಿದ ಆರೋಪವನ್ನು ಎದುರಿಸಿತ್ತು. ಆದರೆ, ಎಐಎಡಿಎಂಕೆ ಈ ಆರೋಪಗಳನ್ನು ನಿರಾಕರಿಸಿತ್ತು.