Murder Case: ವೈದ್ಯ ವಿದ್ಯಾರ್ಥಿನಿಯನ್ನು ಪ್ರೀತಿಸಿದ ಡೆಲಿವರಿ ಬಾಯ್ ಅಪಹರಿಸಿ ಕೊಲೆ
ಕೊಲೆ (Murder Case) ಆಗಿರುವ ಪ್ರೀತಂ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಎಂಬಿಬಿಎಸ್ ಓದುತ್ತಿದ್ದಳು. ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದಲ್ಲಿ ಸರಣಿಯಂತೆ ಹಾಡಹಗಲೇ ನಡುರಸ್ತೆಯಲ್ಲೇ ಕೊಲೆಗಳಾಗುತ್ತಿವೆ. ಈ ವಾರದ ಆರಂಭದಲ್ಲಿ ಮಂಗಳೂರಿನಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿ ಕೊಲೆ ಆಗಿತ್ತು. ನಿನ್ನೆ ಗೋಕಾಕದಲ್ಲಿ ಯುವಕನೊಬ್ಬನನ್ನು ಕತ್ತರಿಸಿ ಕೊಂದು ಹಾಕಲಾಗಿತ್ತು. ನಿನ್ನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ವಕೀಲ ಜಗದೀಶ್ ಎಂಬವರ ಹತ್ಯೆಯಾಗಿದ್ದು, ರಸ್ತೆಯಲ್ಲಿ ಶವ ಪತ್ತೆಯಾಗಿತ್ತು. ಇದೀಗ ಬೆಂಗಳೂರಿನಲ್ಲಿ (bengaluru crime news) ಮತ್ತೊಂದು ಭೀಕರ ಹತ್ಯೆಯಾಗಿದ್ದು, ನೀರುಗುಂಟೆಪಾಳ್ಯದಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಕಿಡ್ನ್ಯಾಪ್ (kidnap) ಮಾಡಿ ಯುವಕನ ಬರ್ಬರ ಕೊಲೆ (Murder Case) ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನೀರುಗುಂಟೆಪಾಳ್ಯದಲ್ಲಿ ಯುವಕನನ್ನು ಕಾರಿನಲ್ಲಿ ಅಪಹರಣ ಮಾಡಿ ಹತ್ಯೆ ಮಾಡಲಾಗಿದೆ. ಯುವಕನನ್ನು ನೀರುಗುಂಟೆಪಾಳ್ಯದ ಪ್ರೀತಂ (19) ಎಂದು ಗುರುತಿಸಲಾಗಿದೆ. ಪ್ರೀತಂ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಯುವತಿ ಎಂಬಿಬಿಎಸ್ ಓದುತ್ತಿದ್ದಳು. ಪ್ರೀತಂ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹತ್ಯೆಯ ಹಿಂದೆ ವೈಯುಕ್ತಿಕ ದ್ವೇಷ ಇದೆಯೇ ಅಥವಾ ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆಸಲಾಗಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೂರನೇ ಮಹಡಿಯಿಂದ ಬಿದ್ದು ವೃದ್ಧೆ ಆತ್ಮಹತ್ಯೆ
ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಮನೆಯ ಮೂರನೇ ಮಹಡಿಯಿಂದ ಬಿದ್ದು ವೃದ್ಧೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನ ರಾಜೀವ್ ಗಾಂಧಿ ನಗರ ಚರ್ಚ್ ರೋಡ್‌ನಲ್ಲಿ ಮನೆಯ ಮೂರನೇ ಮಹಡಿಯಿಂದ ಬಿದ್ದು ವೃದ್ಧೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ವೃದ್ಧೆಯನ್ನು ವಿಜಯಲಕ್ಷ್ಮೀ (60) ಎಂದು ಗುರುತಿಸಲಾಗಿದೆ.
ಕೋವಿಡ್ ಸಮಯದಲ್ಲಿ ಓರ್ವ ಪುತ್ರನನ್ನು ಕಳೆದುಕೊಂಡಿದ್ದ ವೃದ್ಧೆ. ಸೊಸೆ ಹಾಗೂ ಮೊಮ್ಮಕ್ಕಳ ಜೊತೆಗೆ ವಾಸವಾಗಿದ್ದು, ಬೆಳಗಿನ ಜಾವ 4 ಗಂಟೆ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Suhas Shetty Murder Case: ಸುಹಾಸ್ ಶೆಟ್ಟಿ ಕೊಲೆಗೆ ಫಾಜಿಲ್ ತಮ್ಮನಿಂದಲೇ ಸುಪಾರಿ; 5 ಲಕ್ಷ ಫಡಿಂಗ್!