Fashion News: ಜಪಾನ್‌ನ ಡಿಯೊರ್ ಫ್ಯಾಷನ್ ಶೋನಲ್ಲಿ ನಟಿ ಸೋನಂ ಕಪೂರ್
Fashion News: ಜಪಾನ್‌ನ ಕ್ಯೋಟೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡಿಯೊರ್ ಬ್ರಾಂಡ್‌ನ ಪ್ರೀ ಫಾಲ್ 2025 ಫ್ಯಾಷನ್ ಶೋನಲ್ಲಿ, ಬಾಲಿವುಡ್ ನಟಿ ಸೋನಂ ಕಪೂರ್ ನಾನಾ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡರು. ಅವರು ಯಾವ್ಯಾವ ಔಟ್‌ಫಿಟ್‌ಗಳಲ್ಲಿ ಹೇಗೆಲ್ಲಾ ಕಾಣಿಸಿಕೊಂಡರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಚಿತ್ರಗಳು: ಬಾಲಿವುಡ್ ನಟಿ ಸೋನಂ ಕಪೂರ್

- ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್ ನಟಿ ಸೋನಂ ಕಪೂರ್, ಜಪಾನ್‌ನ ಡಿಯೊರ್ ಫ್ಯಾಷನ್ ಶೋನಲ್ಲಿ (Fashion News) ನಾನಾ ಡಿಸೈನರ್‌ವೇರ್‌ಗಳಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಸದ್ಯ ಜಪಾನ್‌ನ ಕ್ಯೋಟೊದಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಡಿಯೊರ್ ಬ್ರಾಂಡ್‌ನ ಪ್ರೀ ಫಾಲ್ 2025 ಫ್ಯಾಷನ್ ಶೋನಲ್ಲಿ ಭಾಗವಹಿಸುತ್ತಿರುವ, ಬಾಲಿವುಡ್‌ನ ನಟಿ ಸೋನಂ ಕಪೂರ್‌ರ ಒಂದೊಂದು ಲುಕ್ಕು ಅಲ್ಲಿನ ಫ್ಯಾಷನ್ ಪ್ರಿಯರನ್ನು ಸೆಳೆದಿದೆ. ಸೆಲೆಬ್ರೆಟಿ ಸ್ಟೈಲಿಸ್ಟ್ ಮಾರಿಯಾ ಗ್ರಾಜಿಯಾ ಅವರ ಫ್ಯಾಷನ್‌ವೇರ್ ಸಕುರಾದಂತೆ ಕಾಣಿಸುವ ಡಿಸೈನರ್‌ವೇರ್‌ನಲ್ಲಿ ನಟಿ ಸೋನಂ ಕಪೂರ್ ಕಾಣಿಸಿಕೊಂಡಿದ್ದು, ಅಲ್ಲಿನ ಪ್ರಯೋಗಾತ್ಮಕ ಲುಕ್‌ಗಳನ್ನು ಕೂಡ ಟ್ರೈ ಮಾಡಿದ್ದಾರೆ. ಸಹೋದರಿ ರಿಯಾ ಕಪೂರ್ ಇವರಿಗೆ ಖುದ್ದು ಸ್ಟೈಲಿಂಗ್ ಮಾಡಿದ್ದಾರೆ.

ಡಿಯೊರ್ ಹೊಸ ಕ್ರಿಯೇಷನ್‌ನಲ್ಲಿ ಸೋನಂ
ಡಿಯೊರ್‌ನ ಹೊಸ ಕ್ರಿಯೇಷನ್ ಸಿದ್ಧಪಡಿಸಿರುವ, ಮಾರಿಯಾ ಅವರ ಈ ಡೆಲಿಕೇಟ್ ಫ್ಯಾಷನ್‌ವೇರ್, ಜಪಾನ್‌ನ ಸೀಸನ್‌ಗಳನ್ನು ಪ್ರತಿಬಿಂಬಿಸುತ್ತದಂತೆ. ಇದು ಡಿಯೊರ್‌ನ ಹೊಸ ಕ್ರಿಯೆಟಿವಿಟಿಗೆ ಸಾಕ್ಷಿಯಾಗಿದೆ ಎಂದಿದ್ದಾರೆ ಫ್ಯಾಷನ್ ಡಿಸೈನರ್ ಮಾರಿಯಾ.

ಎಲಿಗೆಂಟ್ ಲುಕ್ ನೀಡಿದ ಡಿಸೈನರ್‌ವೇರ್ಸ್
ಸೆಮಿ ಶೀರ್ ಸಿಲ್ಲೋಟ್ಸ್, ಮೈಕ್ರೋ ಫ್ರಿಲ್ ಹೊಂದಿರುವ ಸಕುರಾದಂತೆಯೇ ಕಾಣಿಸುವ ಈ ಡಿಸೈನರ್‌ವೇರ್ ನೋಡಲು ತಕ್ಷಣಕ್ಕೆ ಬಾಡಿಕಾನ್ ಗೌನ್‌ನಂತೆ ಕಂಡರೂ ಇದು ಅದಲ್ಲ! ಜಪಾನ್‌ನ ಸೌಂದರ್ಯ ಬಿಂಬಿಸುವ ಪಾಸ್ಟೆಲ್ ಶೇಡ್ ಈ ಡಿಸೈನರ್‌ವೇರನ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ. ಅದರ ಮೇಲೆ ಕೇಪ್‌ನಂತೆ ಧರಿಸಿರುವ ಬ್ಲ್ಯಾಕ್ ಮೇಲುಡುಗೆ ಮತ್ತೊಂದು ಇಮೇಜ್ ನೀಡಿದೆ ಎನ್ನುತ್ತಾರೆ ಡಿಯೊರ್ ಫ್ಯಾಷನ್ ವಿಮರ್ಶಕರು.
ಈ ಸುದ್ದಿಯನ್ನೂ ಓದಿ | Big Jumka Fashion: ಮಾನಿನಿಯರನ್ನು ಸೆಳೆಯುತ್ತಿವೆ ಕಿವಿಗಿಂತ ಅಗಲವಾದ ಬಿಗ್ ಜುಮುಕಿಗಳು
ಬ್ಲ್ಯಾಕ್ ಔಟ್‌ಫಿಟ್
ಇನ್ನೊಮ್ಮೆ ಟ್ರೆಂಚ್‌ಕೋಟ್ ಶೈಲಿಯ ಔಟ್‌ಫಿಟ್ ಧರಿಸಿರುವ ನಟಿ ಸೋನಂ, ಜಪಾನಿಗರ ಕಾರ್ಪೋರೇಟ್ ಲುಕ್ ಪ್ರೆಸೆಂಟ್ ಮಾಡಿದ್ದಾರೆ. ಇದು ಅಲ್ಲಿನ ಕಾರ್ಪೋರೇಟ್ ಲುಕ್ ಹೈಲೈಟ್ ಮಾಡಿದೆ. ಈ ಔಟ್‌ಫಿಟ್ ಜತೆ ಧರಿಸಿರುವ ಸ್ಟೇಟ್‌ಮೆಂಟ್ ಆಕ್ಸೆಸರೀಸ್, ಡಿಯೊರ್ ಬ್ಯಾಗ್ ಈ ಲುಕ್‌ಗೆ ಸಾಥ್ ನೀಡಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು. ಅಂದಹಾಗೆ, ನಟಿ ಸೋನಂ ಕಪೂರ್ ಡಿಯೊರ್‌ನ ಬ್ರಾಂಡ್ ಅಂಬಾಸಡರ್. ಈ ಬ್ರಾಂಡ್‌ನ ಗ್ಲೋಬಲ್ ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)