ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Priyanka Chopra: ಮೆಟ್‌ಗಾಲ ಪಾರ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾ-ನಿಕ್‌ ಫುಲ್‌ ಮಿಂಚಿಂಗ್‌! ವಿಡಿಯೊ ‌ಇಲ್ಲಿದೆ

ಮೆಟ್ ಗಾಲಾ 2025ನ ಆಫ್ಟರ್ ಪಾರ್ಟಿಯಲ್ಲೂ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಸ್ ತಮ್ಮ ಅದ್ಬುತ ಲುಕ್ ಮೂಲಕ‌ ಮೋಡಿ ಮಾಡಿದ್ದಾರೆ.ಪ್ರಿಯಾಂಕಾ ಡೈಮಂಡ್ ಮಿನಿ-ಡ್ರೆಸ್ ಧರಿಸಿ ಕಂಗೊಳಿಸಿದರೆ, ನಿಕ್ ಗ್ರೇ ಸೂಟ್‌ನಲ್ಲಿ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಇವರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ...

ನಟಿ ಪ್ರಿಯಾಂಕಾ ಡೈಮಂಡ್ ಮಿನಿ ಡ್ರೆಸ್ ಲುಕ್ ಗೆ ನೆಟ್ಟಿಗರು ಫಿದಾ!

Profile Pushpa Kumari May 7, 2025 4:28 PM

ನವದೆಹಲಿ: ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ‘ಮೆಟ್ ಗಾಲಾ 2025’ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದ್ದು ಹಲವು ಬಾಲಿವುಡ್‌ ,ಹಾಲಿವುಡ್ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಮಿಂಚಿದ್ದಾರೆ‌. ಮೆಟ್‌ಗಾಲಾ 2025ರಲ್ಲಿ ಕಿಯಾರಾ ಅಡ್ವಾಣಿ , ದಿಲ್ಜಿತ್ ದೋಸಾಂಜ್ ಮತ್ತು ಶಾರುಖ್ ಖಾನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಮೋಡಿ ಮಾಡಿದ್ದಾರೆ.‌ಅದರಲ್ಲೂ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಮ್ಮ ಪತಿ ನಿಕ್ ಜೋನಸ್‌ ಕೈ ಹಿಡಿದು ರೆಡ್‌ ಕಾರ್ಪೆಟ್‌ಗೆ ಎಂಟ್ರಿ ನೀಡಿದರು. ಕಪ್ಪು-ಬಿಳುಪು ಬಣ್ಣದ ಉಡುಪುಗಳನ್ನು ಧರಿಸಿದ್ದ ಈ ಜೋಡಿ ಹಳೆಯ ಹಾಲಿವುಡ್ ಶೈಲಿಯನ್ನು ಮರುಸೃಷ್ಠಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಮೆಟ್ ಗಾಲಾ 2025ನ ಆಫ್ಟರ್ ಪಾರ್ಟಿಯಲ್ಲೂ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೊನಸ್ ತಮ್ಮ ಅದ್ಬುತ ಲುಕ್ ಮೂಲಕ‌ ಮೋಡಿ ಮಾಡಿ ದ್ದಾರೆ. ಪ್ರಿಯಾಂಕಾ ಡೈಮಂಡ್ ಮಿನಿ-ಡ್ರೆಸ್ ಧರಿಸಿ ಕಂಗೊಳಿಸಿದರೆ, ನಿಕ್ ಗ್ರೇ ಸೂಟ್‌ನಲ್ಲಿ ಕ್ಲಾಸಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು ಇವರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

ಪತಿ ನಿಕ್ ಜೋನಾಸ್ ಅವರೊಂದಿಗೆ ಪ್ರಿಯಾಂಕಾ ಈವೆಂಟ್​ಗೆ ಸಖತ್ ಸ್ಟೈಲಿಶ್ ಆಗಿ ಎಂಟ್ರಿ ನೀಡಿದ್ದು ಮೆಟ್ ಗಾಲಾ 2025 ಗಾಗಿ ಬ್ಲ್ಯಾಕ್ ಅಂಡ್ ವೈಟ್ ಕಾಂಬಿನೇಷನ್​ನಲ್ಲಿ ಕಾಣಿಸಿ ಕೊಂಡರು. ಪ್ರಿಯಾಂಕಾ ರೆಟ್ರೋ ನಾಯರ್ ಡ್ರಾಮಾ ಲುಕ್ ಸೃಷ್ಟಿಸುವ ಡಾಟ್ ಸೂಟ್ ಸೆಟ್ ತೊಟ್ಟಿದ್ದರೆ, ನಿಕ್ ಬಿಳಿ ಶರ್ಟ್ ಮತ್ತು ಕಪ್ಪು ಡ್ರೆಸ್ ಧರಿಸಿದ್ದರು .ಇನ್ನು‌ ಮೆಟ್ ಗಾಲ ಆಪ್ಟರ್ ಪಾರ್ಟಿ ಬಳಿಕ ನಟಿ ಆಕರ್ಷಕವಾದ ಡೈಮಂಡ್ ಹರಳಿನ ಮಿನಿ ಡ್ರೆಸ್ ಧರಿಸಿದ್ದರು. ಅವರ ಲುಕ್ ಮಸ್ತ್ ಆಗಿ ಮೂಡಿ‌ ಬಂದಿದ್ದು ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಮೆಟ್ ಗಾಲ ಆಫ್ಟರ್ ಪಾರ್ಟಿಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದ್ದು ನಟಿ ಪ್ರಿಯಾಂಕ ವಜ್ರ ಮತ್ತು ಸ್ಫಟಿಕಗಳಿಂದ ವಿನ್ಯಾಸ ಗೊಳಿಸಿದ ಮಿನಿ ಡ್ರೆಸ್‌ನಲ್ಲಿ ಮಿಂಚಿದ್ದಾರೆ. ಈ ಉಡುಗೆಗೆ ಹೊಂದುವಂತೆ ಅವರು ಡೈಮಂಡ್‌ ಓಲೆ ಧರಿಸಿದ್ದು ಬೋಲ್ಡ್‌ ಐ ಮೇಕಪ್‌ ಮತ್ತು ಲಿಪ್‌ ಕಲರ್‌ ಮೂಲಕ ಅದ್ಭುತವಾಗಿ ಕಾಣುತ್ತಿದ್ದರು ಮೆಟ್ ಗಾಲ ಪಾರ್ಟಿ ಬಳಿಕ ಪ್ರಿಯಾಂಕ ಧರಿಸಿದ್ದ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು. ನಿಕ್ ಗ್ರೆ ಸೂಟ್ ಕ್ಲಾಸಿಕ್ ಲುಕ್ ಮೂಲಕ ಕಾಣಿಸಿ ಕೊಂಡಿದ್ದಾರೆ.

ಇದನ್ನು ಓದಿ: Amruthamathi Movie: ಅಮೇಜಾನ್ ಪ್ರೈಮ್ ಓ.ಟಿ.ಟಿ.ಯಲ್ಲಿ `ಅಮೃತ ಮತಿ'

ವೈರಲ್ ಆಗಿರುವ ವಿಡಿಯೊದಲ್ಲಿ, ನಿಕ್ ಪ್ರಿಯಾಂಕ ಅವರ ಕೈ ಹಿಡಿದು ಕಾರಿನ ವರೆಗೆ ಕರೆದೊಯ್ಯುತ್ತಿರುವ ದೃಶ್ಯವಿದೆ, ಜೊತೆಗೆ ಅಭಿಮಾನಿಗಳು ಅವರ ಹೆಸರನ್ನು ಹರ್ಷದಿಂದ ಕೂಗುತ್ತಿರುವ ಕ್ಲಿಪ್ ಕೂಡ ಇದೆ. ಪ್ರಿಯಾಂಕಾ ಸಂಯಮದಿಂದಲೇ ಅಭಿಮಾನಿಗಳಿಗೆ ಪ್ರೀತಿಯಿಂದ ಪ್ರತಿಸ್ಪಂದಿಸಿದ್ದಾರೆ.ಈ ವಿಡಿಯೊ ಗೆ‌ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದು ನೆಟ್ಟಿಗರೊಬ್ಬರು ಕ್ಯೂಟ್ ಜೋಡಿ ಎಂದು ಕಮೆಂಟ್ ಮಾಡಿದ್ದಾರೆ.

ಹೆಡ್ಸ್ ಆಫ್ ಸ್ಟೇಟ್’ ಸಿನಿಮಾ ಸೇರಿದಂತೆ ಪ್ರಿಯಾಂಕಾ ಚೋಪ್ರಾ ಕೈಯಲ್ಲಿ ಹಲವಾರು ಸಿನಿಮಾಗಳಿವೆ. ಹಾಲಿವುಡ್ ಸಿನಿಮಾ ಗಳಾದ ‘ದಿ ಬ್ಲಫ್’, ‘ಜಡ್ಜ್​ಮೆಂಟ್ ಡೇ’ ಸಿನಿಮಾಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆ ರಾಜಮೌಳಿ ನಿರ್ದೇಶನದ ಸಿನಿಮಾ, ಹೃತಿಕ್ ನಟಿಸಿರುವ ‘ಕ್ರಿಶ್ 4’ ಮತ್ತು ಅಲ್ಲು ಅರ್ಜುನ್ ನಟಿಸಿ ಅಟ್ಲಿ ನಿರ್ದೇಶನದ ಸೈ-ಫೈ ಸಿನಿಮಾದಲ್ಲಿಯೂ ಕಾಣಿಸಲಿದ್ದಾರೆ..