ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Jatin Suri: ಸೀರಿಯಲ್‌ ನಟನ ವಿರುದ್ಧ ಬ್ಲ್ಯಾಕ್‌ಮೇಲ್‌ ಆರೋಪ; ಶೂಟಿಂಗ್ ಸೆಟ್‌ಗೆ ಬಂದ ಪೊಲೀಸರು

ಅನುಪಮಾ ಧಾರವಾಹಿ ನಂಬರ್ ಒನ್ ಧಾರಾವಾಹಿಗಳಲ್ಲಿ ಒಂದಾಗಿದೆ. ಇದೀಗ ಧಾರಾವಾಹಿ ಸೆಟ್‌ಗೆ ಪೊಲೀಸರು ಬಂದಿರುವುದು ಹೆಚ್ಚು ಸುದ್ದಿಯಾಗಿದೆ. ನಟ ಜತಿನ್ ಸೂರಿ (Actor Jatin Suri) ವಿರುದ್ಧ ಆತನ ಗೆಳತಿ ಬ್ಲಾಕ್ ಮೇಲೆ (Blackmail case) ಆರೋಪ ಮಾಡಿದ್ದರಿಂದ ಪೊಲೀಸರು ಶೂಟಿಂಗ್ ಸೆಟ್ ಗೆ ಬಂದು ಜತಿನ್ ಸೂರಿ ಮತ್ತು ಆತನ ಗೆಳತಿಯನ್ನು ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ಹೋಗಿದ್ದಾರೆ.

ಸೀರಿಯಲ್‌ ನಟನ ವಿರುದ್ಧ ಗೆಳತಿಯಿಂದ ಬ್ಲ್ಯಾಕ್‌ಮೇಲ್‌ ಆರೋಪ

ಮುಂಬೈ: ಅನುಪಮಾ ಧಾರಾವಾಹಿ (anupama serial) ನಟ ಜತಿನ್ ಸೂರಿ (Actor Jatin Suri) ವಿರುದ್ಧ ಆತನ ಗೆಳತಿ ಬ್ಲ್ಯಾಕ್‌ಮೇಲ್‌ (blackmail case) ಆರೋಪ ಮಾಡಿದ್ದರಿಂದ ಪೊಲೀಸರು ಶೂಟಿಂಗ್ ಸೆಟ್ ಗೆ ಬಂದು ಜತಿನ್ ಸೂರಿ ಮತ್ತು ಆತನ ಗೆಳತಿಯನ್ನು ಠಾಣೆಗೆ ಕರೆದುಕೊಂಡು ಹೋಗಿರುವ ಘಟನೆ ನಡೆದಿದೆ. ಅನುಪಮಾ ಶೂಟಿಂಗ್ ವೇಳೆ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು ಕೆಲಕಾಲ ಆತಂಕದ ಸನ್ನಿವೇಶ ಸೃಷ್ಟಿಯಾಗಿತ್ತು. ಧಾರಾವಾಹಿಯಲ್ಲಿ ರಾಜಾ ಪಾತ್ರವನ್ನು ನಿರ್ವಹಿಸುವ ನಟ ಜತಿನ್ ಸೂರಿ ವಿರುದ್ಧ ಆತನ ಗೆಳತಿ ಬ್ಲ್ಯಾಕ್‌ಮೇಲ್ ಆರೋಪ ಮಾಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.

ಅನುಪಮಾ ಧಾರವಾಹಿ ನಂಬರ್ ಒನ್ ಧಾರಾವಾಹಿಗಳಲ್ಲಿ ಒಂದಾಗಿದೆ. ಇದೀಗ ಧಾರಾವಾಹಿ ಸೆಟ್‌ಗೆ ಪೊಲೀಸರು ಬಂದಿರುವುದು ಹೆಚ್ಚು ಸುದ್ದಿಯಾಗಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ರೂಪಾಲಿ ಗಂಗೂಲಿ ಅವರ ನಿರ್ದೇಶನದ ಅನುಪಮಾ ಧಾರವಾಹಿ ಶೂಟಿಂಗ್ ನಡೆಯುತ್ತಿತ್ತು. ಇದರಲ್ಲಿ ನಟ ಜತಿನ್ ಸೂರಿ ರಾಜಾ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಶೂಟಿಂಗ್ ಸ್ಥಳಕ್ಕೆ ಬಂದ ನಟನ ಗೆಳತಿ ಜತಿನ್ ತಮ್ಮನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರಿಂದ ಜಗಳ ಪ್ರಾರಂಭವಾಗಿದೆ. ಪರಿಸ್ಥಿತಿ ಕೈ ಮೀರಿದಾಗ ಜತಿನ್ ಸೆಟ್‌ನಲ್ಲಿರುವ ಪೊಲೀಸರಿಗೆ ಕರೆ ಮಾಡಿದರು. ಇದರ ಅನಂತರ, ಜತಿನ್ ಮತ್ತು ಅವರ ಗೆಳತಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಜತಿನ್ ಆರಂಭದಲ್ಲಿ ಇದು ನಕಲಿ ಸುದ್ದಿ ಎಂದು ತಳ್ಳಿಹಾಕಿದ್ದು, ಬಳಿಕ ಈ ವಿಷಯದ ಬಗ್ಗೆ ಮೌನ ವಹಿಸಿದರು.

ಏಕ್ ಥಾ ರಾಜಾ ಏಕ್ ಥಿ ರಾಣಿ, ಸೌಭಾಗ್ಯವತಿ ಭವ: ನಿಯಮ್ ಔರ್ ಶರ್ತೀನ್ ಲಾಗು ಸೇರಿಂದರೆ ಹಲವು ಧಾರಾವಾಹಿಗಳಲ್ಲಿ ಜತಿನ್ ಸೂರಿ ವಿವಿಧ ಪಾತ್ರವನ್ನು ನಿರ್ವಹಿಸಿ ಹೆಸರುವಾಸಿಯಾಗಿದ್ದಾರೆ. ಅವರು ಈ ವರ್ಷದ ಫೆಬ್ರವರಿಯಿಂದ ಅನುಪಮಾ ಧಾರಾವಾಹಿಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Operation Sindoor: ಮದುವೆಯಾದ ಎರಡೇ ದಿನಕ್ಕೆ ಯುದ್ಧಕ್ಕೆ ತೆರಳಿದ ಯೋಧ; ಹೆಮ್ಮೆಯಿಂದ ಕಳುಹಿಸಿಕೊಟ್ಟ ಪತ್ನಿ!

ಈ ಹಿಂದೆ ರೂಪಾಲಿ ಗಂಗೂಲಿ ಅವರ ಹಿಟ್ ಶೋನ ಭಾಗವಾಗಿದ್ದ ಜತಿನ್, ಅನುಪಮಾ ನಂಬರ್ ಒನ್ ಶೋ ಎಂದು ಎಲ್ಲರಿಗೂ ತಿಳಿದಿದೆ. ನನ್ನ ಮನೆಯಲ್ಲಿಯೂ ಸಹ ಎಲ್ಲರೂ ನೋಡುತ್ತಾರೆ. ನನ್ನ ತಾಯಿ ಯಾವಾಗಲೂ ನನಗೆ ಹೇಳುತ್ತಿದ್ದರು, ನೀನು ಇದರಲ್ಲಿ ಭಾಗವಹಿಸಬೇಕೆಂದು ಬಯಸುವುದಾಗಿ ಹೇಳಿದ್ದರು. ಅದು ನಿಜವಾಗಿಯೂ ಆಯಿತು. ಈಗ ನಾನು ಶೋನಲ್ಲಿದ್ದೇನೆ ಎಂದು ಹೇಳಿ ಅವರು ಸಂದರ್ಶನವೊಂದರಲ್ಲಿ ಸಂತಸ ವ್ಯಕ್ತಪಡಿಸಿದ್ದರು.