ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾರತ ಟೆಸ್ಟ್‌ ತಂಡಕ್ಕೆ ಶುಭಮನ್‌ ಗಿಲ್‌ ನಾಯಕನಾಗುವ ಸಾಧ್ಯತೆ, ಪಂತ್‌ಗೆ ಉಪನಾಯಕತ್ವ!

ಇಂಗ್ಲೆಂಡ್ ಪ್ರವಾಸದ ಭಾರತ ತಂಡಕ್ಕೆ ಹೊಸ ನಾಯಕನನ್ನು ಬಿಸಿಸಿಐ ಬಹುತೇಕ ನಿರ್ಧರಿಸಿದೆ. ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ಟೀಮ್ ಇಂಡಿಯಾದ ಹೊಸ ನಾಯಕರನ್ನಾಗಿ ನೇಮಿಸುವ ಸಾಧ್ಯತೆ ಇದೆ. ಅಲ್ಲದೆ ವಿಕೆಟ್‌ ಕೀಪರ್‌ ರಿಷಭ್ ಪಂತ್‌ಗೆ ಉಪನಾಯಕನ ಜವಾಬ್ದಾರಿಯನ್ನು ನೀಡಬಹುದು.

ಭಾರತ ಟೆಸ್ಟ್‌ ತಂಡಕ್ಕೆ ಶುಭಮನ್‌ ಗಿಲ್‌ ನಾಯಕನಾಗುವ ಸಾಧ್ಯತೆ!

ಶುಭಮನ್‌ ಗಿಲ್‌ಗೆ ಟೆಸ್ಟ್‌ ನಾಯಕತ್ವ ಸಿಗುವ ಸಾಧ್ಯತೆ.

Profile Ramesh Kote May 10, 2025 11:14 PM

ನವದೆಹಲಿ: ಇಂಗ್ಲೆಂಡ್‌ ಪ್ರವಾಸದ (IND vs ENG) ನಿಮಿತ್ತ ಭಾರತ ಟೆಸ್ಟ್‌ ತಂಡಕ್ಕೆ ಶುಭಮನ್‌ ಗಿಲ್‌ (Shubman Gill) ನಾಯಕರಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇವರಿಗೆ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ (Rishabh Pant) ಉಪ ನಾಯಕನಾಗಿ ನೆರವು ನೀಡಲಿದ್ದಾರೆ. ವಿದೇಶದಲ್ಲಿ ಭಾರತದ ಅತ್ಯುತ್ತಮ ಟೆಸ್ಟ್ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ ಹಾಗೂ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಉಪನಾಯಕನ ರೇಸ್‌ನಲ್ಲಿದ್ದರು. ಆದರೆ, ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ಹಾಗೂ ಫಿಟ್‌ನೆಸ್‌ ಕಾರಣ ಅವರನ್ನು ಸರಣಿಯುದ್ದಕ್ಕೂ ಆಡಿಸುವುದು ಅನುಮಾನ. ಈ ಕಾರಣದಿಂದ ಉಪ ನಾಯಕನ ಜವಾಬ್ದಾರಿಯನ್ನು ಪಂತ್‌ಗೆ ನೀಡಲಾಗುವುದು.

ವಿದೇಶಿ ನೆಲದಲ್ಲಿ ರಿಷಭ್‌ ಪಂತ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕಗಳೊಂದಿಗೆ 42ಕ್ಕೂ ಹೆಚ್ಚಿನ ಸರಾಸರಿಯಲ್ಲಿ ರನ್‌ ಗಳಿಸಿದ್ದಾರೆ. ಅವರು ಈ ದೇಶಗಳಲ್ಲಿ ಏಳು ಬಾರಿ 90 ರಿಂದ 99 ರವರೆಗೆ ರನ್‌ಗಳನ್ನು ಸಿಡಿಸಿದ್ದಾರೆ.

ಶುಭಮನ್‌ ಗಿಲ್‌ ಅಲ್ಲ! ಭಾರತ ಟೆಸ್ಟ್‌ ತಂಡಕ್ಕೆ ಸೂಕ್ತ ನಾಯಕನನ್ನು ಆರಿಸಿದ ಅನಿಲ್‌ ಕುಂಬ್ಳೆ!

ಬುಮ್ರಾ ನಾಯಕನಲ್ಲದಿದ್ದರೆ ಅವರಿಗೆ ಉಪನಾಯಕತ್ವ ನೀಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಮೂಲವೊಂದು ತಿಳಿಸಿದೆ. ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ವಿರಾಟ್ ಕೊಹ್ಲಿ ಬಯಸಿದ್ದಾರೆ. ಗಿಲ್ ತನ್ನನ್ನು ತಾನು ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಸಿಗುವಂತೆ ಇಂಗ್ಲೆಂಡ್‌ನಲ್ಲಿ ನಾಯಕತ್ವವನ್ನು ಅವರಿಗೆ ಹಸ್ತಾಂತರಿಸುವ ಆಲೋಚನೆಯನ್ನು ಆಯ್ಕೆ ಸಮಿತಿ ಪರಿಗಣಿಸಿದೆ ಎಂದು ತಿಳಿದುಬಂದಿದೆ. ಕೊಹ್ಲಿ ಇನ್ನೂ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಮತ್ತು ರೋಹಿತ್ ಶರ್ಮಾ ಕೂಡ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಹಾಗಾಗಿ ಸವಾಲಿನ ಪರಿಸ್ಥಿತಿಗಳಲ್ಲಿ ಅವರ ಅನುಭವದ ಅಗತ್ಯವಿರುವುದರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐದು ಟೆಸ್ಟ್ ಸರಣಿಯಲ್ಲಿ ಆಡಲು ಕೊಹ್ಲಿಗೆ ಮನವಿ ಮಾಡುವ ಸಾಧ್ಯತೆ ಇದೆ.

ವಿರಾಟ್ ಕೊಹ್ಲಿ ನಿವೃತ್ತಿ ಬಗ್ಗೆ ಬಿಸಿಸಿಐ ಮೌನ

ವಿರಾಟ್‌ ಕೊಹ್ಲಿ ಅವರ ಟೆಸ್ಟ್ ವೃತ್ತಿಜೀವನಕ್ಕೆ ಸಂಬಂಧಿಸಿದಂತೆ ನಡೆದ ಮಾತುಕತೆಗಳ ಬಗ್ಗೆ ಬಿಸಿಸಿಐ ಮೌನವನ್ನು ಕಾಯ್ದುಕೊಂಡಿದೆ. ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಅವರನ್ನು ಸಂಪರ್ಕಿಸಲಾಯಿತು. ಆದರೆ ಅವರು ಇನ್ನೂ ಈ ಪ್ರಶ್ನೆಗೆ ಪ್ರತಿಕ್ರಿಯಿಸಿಲ್ಲ. "ಇಂಗ್ಲೆಂಡ್ ಸರಣಿಗೆ ಕೊಹ್ಲಿಯನ್ನು ಭಾರತದ ನಾಯಕನನ್ನಾಗಿ ಮಾಡುವ ಬಗ್ಗೆ ಆಯ್ಕೆದಾರರು ಯೋಚಿಸಿದ್ದರು ಎಂಬುದು ನಿಜ," ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಗಿಲ್‌ಗೆ ನಾಯಕತ್ವದ ಪಾತ್ರದಲ್ಲಿ ನೆಲೆಗೊಳ್ಳಲು ಸ್ವಲ್ಪ ಸಮಯ ಸಿಗುತ್ತಿತ್ತು.‌

IPL 2025: 43 ರನ್‌ ಗಳಿಸಿ ವಿರಾಟ್‌ ಕೊಹ್ಲಿ ಒಳಗೊಂಡ ಎಲೈಟ್‌‌ ಲಿಸ್ಟ್ ಸೇರಿದ ಶುಭಮನ್‌ ಗಿಲ್‌!

ಕೆಎಲ್ ರಾಹುಲ್ ಈಗಾಗಲೇ 33 ವರ್ಷ ದಾಟಿರುವುದರಿಂದ ಮತ್ತು ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದರೂ ಬೆಂಗಳೂರಿನ ಆಟಗಾರನಿಗೆ ಸ್ಥಿರತೆ ಸಮಸ್ಯೆಯಾಗಿರುವುದರಿಂದ ಅವರನ್ನು ಆಯ್ಕೆಯಾಗಿ ಪರಿಗಣಿಸಲಾಗುತ್ತಿಲ್ಲ. 11 ವರ್ಷಗಳ ಟೆಸ್ಟ್ ವೃತ್ತಿಜೀವನದ ನಂತರ 50 ಪಂದ್ಯಗಳಲ್ಲಿ ಅವರ ಸರಾಸರಿ 35 ಕ್ಕಿಂತ ಕಡಿಮೆ ಇರುವುದು ಇದಕ್ಕೆ ಕಾರಣ.

ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತ ತಂಡವನ್ನು ಮೇ ಮೂರನೇ ವಾರದ ಕೊನೆಯಲ್ಲಿ ಘೋಷಿಸಲಾಗುವುದು ಮತ್ತು ಭಾರತ ಎ ತಂಡವನ್ನು ಮುಂದಿನ ವಾರದ ಆರಂಭದಲ್ಲಿ ಪ್ರಕಟಿಸಲಾಗುವುದು. ಟೆಸ್ಟ್ ಪ್ರವಾಸಕ್ಕೆ ಹೊಸ ಆಟಗಾರರಲ್ಲಿ ಒಬ್ಬರು ಆಯ್ಕೆಯಾಗುವುದು ಖಚಿತವಾದರೆ, ಅದು ತಮಿಳುನಾಡು ಎಡಗೈ ಬೌಲರ್ ಸಾಯಿ ಸುದರ್ಶನ್ ಆಗಿರುತ್ತಾರೆ, ಅವರು ತಮ್ಮ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಅವರು ಇನಿಂಗ್ಸ್‌ ಆರಂಭಿಸಬಹುದು ಅಥವಾ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಹುದು.