ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Travel Fashion: ಹೀಗಿತ್ತು ನಟಿ ಪ್ರಥಮಾ ಪ್ರಸಾದ್‌ರ ಟ್ರಾವೆಲ್‌ ಫ್ಯಾಷನ್‌

Travel Fashion: ಟ್ರಾವೆಲ್‌ ಫ್ಯಾಷನ್‌ ಆಯಾ ಸ್ಥಳಕ್ಕೆ ತಕ್ಕಂತೆ ಹೊಂದುವಂತಿರಬೇಕು! ಎನ್ನುತ್ತಾರೆ ನಟಿ ಪ್ರಥಮಾ ಪ್ರಸಾದ್‌. ಅವರು ತಮ್ಮ ಫ್ರಾನ್ಸ್‌ ಟ್ರಾವೆಲ್‌ ಫ್ಯಾಷನ್‌ ಬಗ್ಗೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿರುವುದರೊಂದಿಗೆ ತಮ್ಮ ಫಾಲೋವರ್ಸ್‌ಗೆ ಒಂದಿಷ್ಟು ಸಿಂಪಲ್‌ ಟಿಪ್ಸ್‌ ಕೂಡ ನೀಡಿದ್ದಾರೆ.

ಹೀಗಿತ್ತು ನಟಿ ಪ್ರಥಮಾ ಪ್ರಸಾದ್‌ರ ಟ್ರಾವೆಲ್‌ ಫ್ಯಾಷನ್‌

ಚಿತ್ರಗಳು: ಪ್ರಥಮಾ ಪ್ರಸಾದ್‌, ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಟ್ರಾವೆಲ್‌ ಫ್ಯಾಷನ್‌ ಕಂಫರ್ಟಬಲ್‌ ಆಗಿರುವುದರೊಂದಿಗೆ ಅಲ್ಲಿಯ ವಾತಾವರಣಕ್ಕೂ ಹೊಂದುವಂತಿರಬೇಕು! ಎನ್ನುತ್ತಾರೆ ನಟಿ ಪ್ರಥಮಾ ಪ್ರಸಾದ್‌ (Prathama Prasad). ಅಂದಹಾಗೆ, ಇವರು ಹಿರಿಯ ನಟಿ ವಿನಯಪ್ರಸಾದ್‌ ಅವರ ಪುತ್ರಿ. ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಸೀರಿಯಲ್‌ಗಳಲ್ಲಿ ನಟಿಸಿರುವ ಅವರು ತಮ್ಮ ಇತ್ತೀಚಿನ ಫ್ರಾನ್ಸ್‌ ಟ್ರಾವೆಲ್‌ ಫ್ಯಾಷನ್‌ (Travel Fashion) ಕುರಿತಂತೆ ವಿಶ್ವವಾಣಿ ನ್ಯೂಸ್‌ನೊಂದಿಗೆ ಮಾತನಾಡಿದರು. ಅಲ್ಲದೇ, ಟ್ರಾವೆಲ್‌ ಪ್ರೇಮಿಗಳಿಗೆ ಒಂದಿಷ್ಟು ಟಿಪ್ಸ್‌ ಕೂಡ ನೀಡಿದರು.

Travel Fashion_ 1

ವಿಶ್ವವಾಣಿ ನ್ಯೂಸ್‌: ನಿಮ್ಮ ಟ್ರಾವೆಲ್‌ ಫ್ಯಾಷನ್‌ ಹೇಗಿತ್ತು?

ಪ್ರಥಮಾ ಪ್ರಸಾದ್‌: ಆಯಾ ರಾಷ್ಟ್ರಕ್ಕೆ ಹೊಂದುವಂತಹ ಫ್ಯಾಷನ್‌ವೇರ್‌ಗಳನ್ನು ಧರಿಸಿದ್ದೆ. ಶೀತರಾಷ್ಟ್ರಗಳಲ್ಲಿ ಲೇಯರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದೇನೆ.

ವಿಶ್ವವಾಣಿ ನ್ಯೂಸ್‌: ಪ್ಯಾರೀಸ್‌ನಲ್ಲಿ ನಿಮ್ಮ ಫ್ಯಾಷನ್‌ ಸ್ಟೇಟ್‌ಮೆಂಟ್‌ ಏನಿತ್ತು?

ಪ್ರಥಮಾ ಪ್ರಸಾದ್‌: ಅಲ್ಲಿನ ಶೀತ ವಾತಾವರಣಕ್ಕೆ ಹೊಂದುವಂತಹ ಥರ್ಮಲ್‌ವೇರ್‌ ಜತೆಗೆ ದಪ್ಪನೆಯ ಬೆಚ್ಚನೆಯ ಉಡುಗೆಗಳನ್ನು ಧರಿಸಿದ್ದೆ. ಮಿನಿಮಲ್‌ ಮೇಕ̧ಪ್‌ ಜತೆಗೆ ಬ್ರೈಟ್‌ ಲಿಪ್‌ಸ್ಟಿಕ್‌ ನನ್ನನ್ನು ಅತ್ಯಾಕರ್ಷಕವಾಗಿಸಿತ್ತು.

ವಿಶ್ವವಾಣಿ ನ್ಯೂಸ್‌: ನಿಮ್ಮ ಟ್ರಾವೆಲ್‌ ಕಿಟ್‌ನಲ್ಲಿದ್ದ ಅತ್ಯಗತ್ಯ ವಸ್ತುಗಳ್ಯಾವುವು?

ಪ್ರಥಮಾ ಪ್ರಸಾದ್‌: ಕಾಜೋಲ್‌, ಐ ಲೈನರ್‌, ಲಿಪ್‌ಸ್ಟಿಕ್‌ ಸೇರಿದಂತೆ ಬೇಸಿಕ್‌ ಮೇಕಪ್‌ ಕಿಟ್‌. ನೀರಿನ ಬಾಟಲ್‌, ಎನರ್ಜಿ ಬಾರ್‌ ಚಾಕೋಲೇಟ್ಸ್ & ಅಂಬ್ರೆಲ್ಲಾ.

Travel Fashion 2

ವಿಶ್ವವಾಣಿ ನ್ಯೂಸ್‌:‌ ನಿಮ್ಮ ಟ್ರಾವೆಲ್‌ ಟೈಮ್‌ನಲ್ಲಿದ್ದ ಸ್ಟೈಲ್‌ ಸ್ಟೈಟ್‌ಮೆಂಟ್‌?

ಪ್ರಥಮಾ ಪ್ರಸಾದ್‌: ಮಿನಿಮಲ್‌ ಕ್ಲಾತಿಂಗ್‌ ನನ್ನ ಸ್ಟೈಲ್‌ಸ್ಟೇಟ್‌ಮೆಂಟ್‌ನಲ್ಲಿತ್ತು. ನೋಡಲು ಫ್ಯಾಷೆನಬಲ್‌ ಜತೆಗೆ ಆಕರ್ಷಕವಾಗಿ ಕಾಣಿಸುವುದು.

ವಿಶ್ವವಾಣಿ ನ್ಯೂಸ್‌: ನೀವು ನೀಡುವ ಬ್ಯೂಟಿ ಟಿಪ್ಸ್‌?

ಪ್ರಥಮಾ ಪ್ರಸಾದ್‌: ಟ್ರಾವೆಲ್‌ ಮಾಡುವಾಗ ಯಾವತ್ತೂ ಮರೆಯದೇ, ರೆಗ್ಯುಲರ್‌ ಆಗಿ ಬಳಸುವ ಬ್ಯೂಟಿ ಪ್ರಾಡಕ್ಟ್‌ಗಳನ್ನು ಕ್ಯಾರಿ ಮಾಡಬೇಕು. ಯಾಕೆಂದರೆ, ಅಲ್ಲಿನ ಕಾಸ್ಮೆಟಿಕ್ಸ್‌ ಮುಖಕ್ಕೆ ಹೊಂದದಿರಬಹುದು. ಇನ್ನು, ಸನ್‌ಸ್ಕ್ರೀನ್‌ & ಮಾಯಿಶ್ಚರೈಸರ್‌ ಬಳಸುವುದು ಅತ್ಯಗತ್ಯ ಎಂಬುದನ್ನು ಮರೆಯಬಾರದು.

ವಿಶ್ವವಾಣಿ ನ್ಯೂಸ್‌: ಫಾಲೋವರ್ಸ್‌ಗೆ ಯಾವ ಬಗೆಯ ಟ್ರಾವೆಲ್‌ ಟಿಪ್ಸ್‌ ನೀಡಲು ಬಯಸುತ್ತೀರಾ?

ಪ್ರಥಮಾ ಪ್ರಸಾದ್‌: ಟ್ರಾವೆಲ್‌ ಮಾಡುವಾಗ ಆದಷ್ಟೂ ಹೈ ಹೀಲ್ಸ್, ವೆಡ್ಜೆಸ್‌ನಂತವನ್ನು ಆವಾಯ್ಡ್‌ ಮಾಡಿ. ಹೆಚ್ಚು ವಾಕ್‌ ಮಾಡುವುದರಿಂದ ಆದಷ್ಟೂ ಕಂಫರ್ಟಬಲ್‌ ಎಂದೆನಿಸುವ ಶೂ, ಕ್ರಾಕ್ಸ್‌ನಂತವನ್ನು ಧರಿಸಿ. ಹೋಟೆಲ್‌ನಲ್ಲಿರುವ ಸ್ವಿಮ್ಮಿಂಗ್‌ ಪೂಲ್‌ ಬಳಸುವುದು ಸಾಮಾನ್ಯ. ಹಾಗಾಗಿ ಸ್ವಿಮ್‌ ಸೂಟ್‌ ಕ್ಯಾರಿ ಮಾಡಿ. ಸನ್‌ಗ್ಲಾಸ್‌ ಹಾಗೂ ಸ್ಕಾರ್ಫ್‌ ಜತೆಯಲ್ಲಿರಲಿ. ಸ್ಕಾರ್ಫ್‌ ಕೂಡ ಇರಲಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Oxidised Jewel Fashion: ಡಿಫರೆಂಟ್‌ ಲುಕ್‌ ನೀಡುವ ಆಕ್ಸಿಡೈಸ್ಡ್‌ ಜ್ಯುವೆಲರಿಗಳಿವು