ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KMC Hospital: ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

KMC Hospital: ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್ ಸಮಸ್ಯೆಯನ್ನು ನುರಿತ ತಜ್ಞರಾದ ಕನ್ಸಲ್ಟೆಂಟ್ ಸರ್ಜಿಕಲ್ ಆನ್ಕೋಲಾಜಿಸ್ಟ್ ಕಾರ್ತಿಕ್ ಕೆ ಎಸ್ ಅವರ ತಂಡ ನಿರ್ವಹಿಸುವಲ್ಲಿ ಯಶಸ್ವಿ ಯಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ!

Profile Pushpa Kumari Apr 11, 2025 5:17 PM

ಮಂಗಳೂರು: ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆ ಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು (KMC Hospital Mangalore) ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್ ಸಮಸ್ಯೆ ಯನ್ನು ನುರಿತ ತಜ್ಞರಾದ ಕನ್ಸಲ್ಟೆಂಟ್ ಸರ್ಜಿಕಲ್ ಆನ್ಕೋಲಾಜಿಸ್ಟ್ ಕಾರ್ತಿಕ್ ಕೆ ಎಸ್ ಅವರ ತಂಡ ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಏನಿದು ಸಮಸ್ಯೆ?

ಕುಮಾರಿ ನೇಹಾ ಎಂಬ 26 ವರ್ಷದ ರೋಗಿ ಹೈಪೊಗ್ಲಿಸಿಮಿಯಾ (ಕಡಿಮೆ ರಕ್ತದಲ್ಲಿನ ಸಕ್ಕರೆ) ಎಂಬ ಮಾರಣಾಂತಿಕ ಕಾಯಿಲೆಯೊಂದಿಗೆ ಕಳೆದ 6 ವರ್ಷಗಳಿಂದ ಹೋರಾಡುತ್ತಿದ್ದರು.ಈ ಕಾಯಿಲೆ ಅಪರೂಪದ್ದಾಗಿದ್ದು ಪ್ರತಿ ಮಿಲಿಯನ್ ಜನರಲ್ಲಿ 0.3ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುವಂತದ್ದು. ಈ ಸಮಸ್ಯೆ ಮಾರಣಾಂತಿಕವೂ ಆಗಿದೆ. ಈ ಕಾಯಿಲೆ ಹೊಂದಿದವರಲ್ಲಿ ಮೇದೋಜೀರಕ ಗ್ರಂಥಿ (ಪಾನ್ಕ್ರಿಯಾಸ್) ಯಲ್ಲಿ ಇನ್ಸುಲಿನ್ ಪ್ರಮಾಣ ಅತಿಯಾಗಿ ಉತ್ಪಾದನೆಯಾಗುತ್ತದೆ, ಇದರಿಂದ ಪದೇ ಪದೇ ಹಾಗೂ ತೀವ್ರವಾಗಿ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಕುಸಿತ ಉಂಟಾಗುತ್ತದೆ. ಆರಂಭದಲ್ಲಿ ರೋಗಿಯು ಕೆಎಂ ಸಿ ಆಸ್ಪತ್ರೆಯ ಕನ್ಸಲ್ಟೆಂಟ್ ಎಂಡೋಕ್ರಿನಾಲಾಜಿಸ್ಟ್ ಅವರ ಬಳಿ ಚಿಕಿತ್ಸೆ ಆರಂಭಿಸಿದ್ದು , ಚಿಕಿತ್ಸೆಗೆ ಉತ್ತಮವಾಗಿಯೇ ಸ್ಪಂದಿ ಸಿದ್ದಾರೆ. ಆದರೆ ಕಳೆದ ವರ್ಷ ಅವರ ಸ್ಥಿತಿ ಮತ್ತೆ ಹದಗೆಟ್ಟಿದ್ದು ತೀವ್ರವಾದ ಹೈಪೊಗ್ಲಿಸೆಮಿಕ್ ಸಮಸ್ಯೆಗೆ ಒಳಗಾಗಿದ್ದಾರೆ. ಕೆಲವು ಸಂದರ್ಭಗಳಲ್ಲಿ ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಸುಮಾರು 20mg/dL ಗೆ ಕುಸಿತಕಂಡಿತ್ತು.

ಹಲವು ತಜ್ಞರ ಜೊತೆ ಚರ್ಚಿಸಿ ಚಿಕಿತ್ಸೆಯ ಪರಿಣಾಮವನ್ನು ಅರ್ಥೈಸಿಕೊಂಡು, ನೇಹಾ ಎಂಬುವವರು ಶಸ್ತ್ರಚಿಕಿತ್ಸೆ ಆಯ್ಕೆ ಮಾಡಿಕೊಂಡಿದ್ದಾರೆ.ಡಾ. ಕಾರ್ತಿಕ್ ಕೆ.ಎಸ್., ಕನ್ಸಲ್ಟೆಂಟ್ ಜಿಐ ಸರ್ಜನ್ ಡಾ. ಸತ್ಯನಾರಾಯಣ್ ಭಟ್ ಮತ್ತು ಅರಿವಳಿಕೆ ತಜ್ಞ ಡಾ. ಕಾರ್ತಿಕ್ ಪ್ರಭು ಜೊತೆಗೂಡಿ ನಡೆಸಿದ ಸಂಕೀರ್ಣ ಶಸ್ತ್ರಚಿಕಿತ್ಸೆಯು ಯಾವುದೇ ತೊಡಕುಗಳಿಲ್ಲದೆ ಪೂರ್ಣ ಗೊಂಡಿದ್ದು ನೇಹಾ ಅವರು ಶಸ್ತ್ರಚಿಕಿತ್ಸೆ ನಂತರದ ಎಲ್ಲಾ ರೀತಿಯ ತಪಾಸಣೆಯನ್ನು ಪೂರ್ಣಗೊಳಿಸಿದ್ದು ಚೇತರಿಸಿ ಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಡಾ. ಶ್ರೀನಾಥ್ ಶೆಟ್ಟಿ ನೆಸಿಡಿಯೊಬ್ಲಾಸ್ಟೊಸಿಸ್ ಎಂಬುದು ಅಪರೂಪದ ಸಮಸ್ಯೆ ಹಾಗೂ ಪದೇ ಪದೇ ಬದಲಾಗುವ ಇನ್ಸುಲಿನ್ ಪ್ರಮಾಣವನ್ನು ನಿರ್ವಹಿಸುವ ಕ್ಲಿಷ್ಟತೆಯ ಕಾರಣ ಈ ಕಾಯಿಲೆ ಸವಾಲಿನದ್ದಾಗಿದೆ. ಮೆಡಿಕಲ್ ಮ್ಯಾನೆಜ್ಮೆಂಟ್ ವಿಫಲವಾದಾಗ ಜೀವ ರಕ್ಷಣೆಗೆ, ಪ್ರಾಣಕ್ಕೆ ಹಾನಿ ಉಂಟಾಗುವ ಸಂದರ್ಭಗಳನ್ನು ತಡೆಯಲು ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ” ಎಂದು ಹೇಳಿದ್ದಾರೆ.

ಇದನ್ನು ಓದಿ: Health Tips: ಬೇಸಿಗೆ ರಜೆಯಲ್ಲಿ ಮಕ್ಕಳ ಆರೋಗ್ಯದ ಆರೈಕೆ ಹೇಗೆ?

ಇನ್ನು ಚಿಕಿತ್ಸೆ ಬಗ್ಗೆ ಮಾತನಾಡಿದ ಡಾ. ಕಾರ್ತಿಕ್ ಕೆ ಎಸ್ “ ನಾವು ನೇಹಾ ಅವರ ಬಳಿ ಭಾಗಶಃ ಹಾಗೂ ಸಂಪೂರ್ಣ ಪಾನ್ಕ್ರಿಯಾಟೆಕ್ಟೊಮಿ (ಮೇದೋಜೀರಕ ಗ್ರಂಥಿಯ ಶಸ್ತ್ರಚಿಕಿತ್ಸೆ) ಮತ್ತು ಜೀವಿತಾವಧಿಯ ಅಂತಃ ಸ್ರಾವಕ ಮತ್ತು ಎಕ್ಸೋ ಕ್ರೈನ್ ಪ್ಯಾಂಕ್ರಿಯಾಟಿಕ್ ಕಾರ್ಯ ಬದಲಿ ಪರಿಣಾಮಗಳನ್ನು ಕೂಡ ಚರ್ಚಿಸಲಾಗಿದ್ದು ರೋಗಿಯ ಆರೋಗ್ಯ ಸ್ಥಿತಿ ಗಮನ ದಲ್ಲಿರಿಸಿ ಸಂಪೂರ್ಣ ಪಾನ್ಕ್ರಿಯಾಟೆಕ್ಟೊಮಿ ಯನ್ನು ಆಯ್ಕೆ ಮಾಡಿಕೊಳ್ಳಲಾಯಿತು” ಎಂದರು.

ಶಸ್ತ್ರಚಿಕಿತ್ಸೆಯ ನಂತರ, ಇನ್ಸುಲಿನ್ ಉತ್ಪಾದನೆಯ ಅನುಪಸ್ಥಿತಿಯಿಂದಾಗಿ ರೋಗಿಯು ಮಧುಮೇಹದ ಸವಾಲನ್ನು ಎದುರಿಸಿದರು, ಇದನ್ನು ಡಾ. ಶ್ರೀನಾಥ್ ಶೆಟ್ಟಿ ಅವರು ಸೂಕ್ಷ್ಮವಾಗಿ ನಿರ್ವಹಿಸಿದರು.ಇದಲ್ಲದೆ, ಜೀರ್ಣಕಾರಿ ಕಿಣ್ವ ಬದಲಿ ನಿರ್ವಹಣೆ ನಿರ್ಣಾಯಕವಾಗಿತ್ತು, ಕನ್ಸಲ್ಟೆಂಟ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಅನುರಾಗ್ ಶೆಟ್ಟಿ ಮತ್ತು ಮುಖ್ಯ ಆಹಾರ ತಜ್ಞರಾದ ಅರುಣಾ ಮಲ್ಯ ಅವರ ಪರಿಣತಿಯ ಅಗತ್ಯವಿದ್ದು ಅವರು ಅತ್ಯುತ್ತಮ ಪೌಷ್ಠಿಕಾಂಶದ ಬೆಂಬಲವನ್ನು ಖಚಿತಪಡಿಸಿದರು.