Serial TRP: ಮೊದಲ ಸ್ಥಾನದಲ್ಲಿ ಎರಡು ಧಾರಾವಾಹಿ: ಇಲ್ಲಿದೆ ಟಿಆರ್‌ಪಿ ಲೆಕ್ಕಾಚಾರ
ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ ಯಾವುದು ಎಂಬುದನ್ನು ನೋಡುವುದಾದರೆ, ಮೊದಲ ಸ್ಥಾನದಲ್ಲಿ ಝೀ ಕನ್ನಡದ ನಾ ನಿನ್ನ ಬಿಡಲಾರೆ ಧಾರಾವಾಹಿ ಇದೆ. ಈ ಧಾರಾವಾಹಿ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಇದರ ಜೊತೆಗೆ ಅಣ್ಣಯ್ಯ ಧಾರಾವಾಹಿ ಕೂಡ ಮೊದಲ ಸ್ಥಾನದಲ್ಲಿ ಇದೆ.

Kannada Serial TRP

ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್‌ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.
ಇದೀಗ 17ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್‌ಪಿ ಕುಸಿದಿದೆ. ಹೊಸ ಧಾರಾವಾಹಿಗೆ ಭರ್ಜರಿ ಟಿಆರ್‌ಪಿ ಸಿಕ್ಕಿದೆ. ಹೊಸ ಕಥೆ, ಹೊಸ ಧಾರಾವಾಹಿ ಆದ ಕಾರಣ ಆರಂಭದಲ್ಲಿ ಉತ್ತಮ ವೀಕ್ಷಕರಿರುತ್ತಾರೆ. ಆದರೆ, ಮುಂದಿನ ದಿನಗಳಲ್ಲಿ ಸೀರಿಯಲ್ ಹೇಗೆ ಸಾಗುತ್ತೆ ಎಂಬುದು ಮುಖ್ಯ. ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ.
ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ ಯಾವುದು ಎಂಬುದನ್ನು ನೋಡುವುದಾದರೆ, ಮೊದಲ ಸ್ಥಾನದಲ್ಲಿ ಝೀ ಕನ್ನಡದ ನಾ ನಿನ್ನ ಬಿಡಲಾರೆ ಧಾರಾವಾಹಿ ಇದೆ. ಈ ಧಾರಾವಾಹಿ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿದೆ. ಇದರ ಜೊತೆಗೆ ಅಣ್ಣಯ್ಯ ಧಾರಾವಾಹಿ ಕೂಡ ಮೊದಲ ಸ್ಥಾನದಲ್ಲಿ ಇದೆ. ರಾಜ್ಯದ ಟಿಆರ್ಪಿಯನ್ನು ಪರಿಗಣಿಸಿ ಎರಡೂ ಧಾರಾವಾಹಿಗಳು ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ನಿಂತುಕೊಂಡಿವೆ.
ಎರಡನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ ಇದೆ. ಇತ್ತೀಚಿನ ದಿನಗಳಲ್ಲಿ ಈ ಧಾರಾವಾಹಿ ಟ್ವಿಸ್ಟ್ ಪಡೆದು ವೀಕ್ಷಕರಿಗೆ ಹತ್ತಿರವಾಗುತ್ತಿದೆ. ಮೂರನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಇದೆ. ಈ ಮೊದಲು ಈ ಧಾರಾವಾಹಿ ಮೊದಲ ಸ್ಥಾನ ಅಲಂಕರಿಸಿಕೊಳ್ಳುತ್ತಿತ್ತು. ನಾಲ್ಕನೇ ಸ್ಥಾನದಲ್ಲಿ ಅಮೃತಧಾರೆ ಧಾರಾವಾಹಿ, ಐದನೇ ಸ್ಥಾನದಲ್ಲಿ ಬ್ರಹ್ಮಗಂಟು ಧಾರಾವಾಹಿ ಇದೆ.