ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chaithra Kundapura Marriage: ಚೈತ್ರಾ ಕುಂದಾಪುರ ಮದುವೆಯಲ್ಲಿ ಅಣ್ಣನ ಸ್ಥಾನದಲ್ಲಿ ನಿಂತು ರಜತ್ ಏನೆಲ್ಲ ಮಾಡಿದ್ರು ನೋಡಿ

ಉಡುಪಿ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ನೆರವೇರಿದೆ. ವಿಶೇಷ ಎಂದರೆ ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಜತ್ ಕಿಶನ್. ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ.

ಚೈತ್ರಾ ಮದುವೆ: ಅಣ್ಣನ ಸ್ಥಾನದಲ್ಲಿ ರಜತ್ ಏನೆಲ್ಲ ಮಾಡಿದ್ರು?

Chaithra kundapura Marriage Rajath Kishan

Profile Vinay Bhat May 10, 2025 7:33 AM

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಚೈತ್ರಾ ಕುಂದಾಪುರ (Chaithra Kundapura) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 12 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಹುಡುಗ ಶ್ರೀಕಾಂತ್ ಕಶ್ಯಪ್ ಜೊತೆಗೆ ಚೈತ್ರಾ ಕುಂದಾಪುರ ಅವರು ಮೇ 9 ರಂದು ಸಪ್ತಪದಿ ತುಳಿದಿದ್ದಾರೆ. ಚೈತ್ರಾ ಅವರದ್ದು ಲವ್‌ ಕಮ್ ಅರೇಂಜ್ಡ್‌ ಮ್ಯಾರೇಜ್. ಕಾಲೇಜಿನಲ್ಲಿ ಲವ್‌ ಶುರುವಾಗಿದ್ದು ಎಂಬ ವಿಚಾರವನ್ನು ಚೈತ್ರಾ ಹೇಳಿದ್ದಾರೆ. ಮದುವೆಗೆ ಧನರಾಜ್ ಆಚಾರ್, ಗೋಲ್ಡ್ ಸುರೇಶ್, ರಜತ್ ಕಿಶನ್ ಹಾಗೂ ಅವರ ಪತ್ನಿ ಹಾಜರಿದ್ದರು.

ಉಡುಪಿ ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರ ಮದುವೆ ನೆರವೇರಿದೆ. ವಿಶೇಷ ಎಂದರೆ ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ರಜತ್ ಕಿಶನ್. ಬಿಗ್‌ ಬಾಸ್‌ ಮನೆಯಲ್ಲಿ ಅಣ್ಣ-ತಂಗಿ ಎಂದು ಬಾಸ್‌ ಎಂದು ಸಿಕ್ಕಾಪಟ್ಟೆ ಜಗಳ ಆಡಿದ್ದ ರಜತ್‌, ಚೈತ್ರಾ ಕುಂದಾಪುರ ಜುಗಲ್‌ಬಂಧಿ ನೋಡೋದೆ ಚೆಂದ ಆಗಿತ್ತು. ಈಗ ಅವರು ಚೈತ್ರಾ ಮದುವೆಗೆ ಬಂದು ಅಣ್ಣನ ಸ್ಥಾನದಲ್ಲಿ ನಿಂತು ಶಾಸ್ತ್ರವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ತಂಗಿಗೆ ಉಡುಗೊರೆ ಕೂಡ ನೀಡಿದ್ದಾರೆ. ಇದೊಂದು ಬಹಳ ಅಪರೂಪದ ಗಳಿಗೆಗೆ ಸಾಕ್ಷಿಯಾಯಿತು.

ಅಲ್ಲದೆ, ರಜತ್ ಕಾಲಿಗೆ ಬಿದ್ದು ಚೈತ್ರಾ ಕುಂದಾಪುರ ಆಶೀರ್ವಾದ ಪಡೆದುಕೊಂಡಿದ್ದು ಎಲ್ಲರ ಗಮನವನ್ನು ಸೆಳೆಯಿತು. ಬಿಗ್ ಬಾಸ್ ಮನೆಯಲ್ಲಿ ರಜತ್ ಕಿಶನ್, ಚೈತ್ರಾ ಕುಂದಾಪುರ ಅವರಿಗೆ ಸಿಕ್ಕಾಪಟ್ಟೆ ಕಾಟ ಕೊಟ್ಟಿದ್ದರು. ಚೈತ್ರಾ ಕುಂದಾಪುರ, ರಜತ್ ಜಗಳ ವಿಕೋಪಕ್ಕೂ ಹೋಗಿತ್ತು. ಆದರೆ ರಿಯಾಲಿಟಿ ಶೋ ಮುಗಿದ ಮೇಲೆ ಆ ಘಟನೆಯನ್ನೆಲ್ಲಾ ಮರೆತಿರುವ ರಜತ್ ಕಿಶನ್ ಅವರು ಚೈತ್ರಾ ಕುಂದಾಪುರ ಅವರ ಮದುವೆಗೆ ಬಂತು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಪೂರ್ಣಗೊಂಡ ಬಳಿಕವೇ ವಿವಾಹ ಆಗುವ ಆಲೋಚನೆಯಲ್ಲಿ ಇದ್ದರು. ಆದರೆ, ಆಗ ಅವರಿಗೆ ಬಾಯ್ಸ್ vs ಗರ್ಲ್ಸ್ ಶೋನ ಆಫರ್ ಬಂತು. ಇದನ್ನು ಒಪ್ಪಿದ್ದರಿಂದ ಪ್ರತಿ ವಾರ ಈ ಶೋನ ಶೂಟ್​ಗೆ ಅವರು ಹೋಗಬೇಕಿತ್ತು. ಈ ಕಾರಣಕ್ಕೆ ವಿವಾಹ ವಿಳಂಬ ಆಯಿತು. ಈಗ ಇವರು ಎಲ್ಲಾ ಜವಾಬ್ದಾರಿಗಳನ್ನು ಪೂರ್ಣಗೊಳಿಸಿಕೊಂಡಿದ್ದು, ವಿವಾಹ ಆಗಿದ್ದಾರೆ.

Chaithra Kundapura Marriage: ತಾಳಿ ಕಟ್ಟುವಾಗ ಕಣ್ಣೀರಿಟ್ಟ ಚೈತ್ರಾ ಕುಂದಾಪುರ: ವಿಡಿಯೋ ನೋಡಿ