Viral News: ಪ್ರಪಂಚದಾದ್ಯಂತ ಎಷ್ಟು ʼಭಾರತೀಯʼ ಹೊಟೇಲ್‌ಗಳನ್ನು ಪಾಕಿಸ್ತಾನಿಯವರು ನಿರ್ವಹಿಸುತ್ತಿದ್ದಾರೆ ಗೊತ್ತಾ?
ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈಗ ಪ್ರಪಂಚದಾದ್ಯಂತ ಎಷ್ಟು ಭಾರತೀಯ ರೆಸ್ಟೋರೆಂಟ್‌ಗಳನ್ನು ಪಾಕಿಸ್ತಾನಿಯವರು ನಿರ್ವಹಿಸುತ್ತಿದ್ದಾರೆ ಎಂಬ ವಿಚಾರದ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷಗಳು ಹೆಚ್ಚಾಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಕೆಲವು ವಿಚಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಈ ಬಾರಿ 'ಭಾರತೀಯ' ರೆಸ್ಟೋರೆಂಟ್‍ಗಳ ಬಗ್ಗೆ ಚರ್ಚೆ ನಡೆದಿದೆ. ಸೋಶಿಯಲ್ ಮೀಡಿಯಾ ನೆಟ್ಟಿಗರೊಬ್ಬರು ಈಗ ಪ್ರಪಂಚದಾದ್ಯಂತ ಎಷ್ಟು ʼಭಾರತೀಯʼ ಹೋಟೆಲ್‍ಗಳನ್ನು ಪಾಕಿಸ್ತಾನಿಯವರು ನಿರ್ವಹಿಸುತ್ತಿದ್ದಾರೆ ಎಂದು ಕೇಳಿದ್ದಾರೆ. ಹೈದರಾಬಾದ್‌ನಲ್ಲಿರುವ ಕರಾಚಿ ಬೇಕರಿ ವಿರುದ್ಧ ನಡೆದ ಪ್ರತಿಭಟನೆ ಬಳಿಕ ಈ ಚರ್ಚೆ ಹೆಚ್ಚು ಗಮನಸೆಳೆದಿದೆ. ಕರಾಚಿ ಬೇಕರಿ ಹೆಚ್ಚು ಜನಪ್ರಿಯ ಬೇಕರಿಯಾಗಿತ್ತು. ಪಾಕಿಸ್ತಾನಿ ಹೆಸರು ಇಟ್ಟುಕೊಂಡಿದ್ದರಿಂದ ಅದನ್ನು ಮುಚ್ಚಿಹಾಕಲಾಯಿತು. ಬೇಕರಿ ಭಾರತೀಯ ಮೂಲದ್ದಾಗಿದೆ. 1947ರಲ್ಲಿ ಪಾಕಿಸ್ತಾನದಿಂದ ವಲಸೆ ಬಂದಿದ್ದ ಸಿಂಧಿ ಅಜ್ಜನಾದ ಖಂಚಾನ್ ರಾಮ್ನಾನಿ ಅವರು 1953ರಲ್ಲಿ ಈ ಬೇಕರಿಯನ್ನು ಶುರು ಮಾಡಿದ್ದರು.
ಬೇಕರಿ ವಿವಾದದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆದಿದ್ದು ಒಬ್ಬರು, "ಇಂಗ್ಲೆಂಡ್‌ನಲ್ಲಿ ಎಷ್ಟೋ ಭಾರತೀಯ ರೆಸ್ಟೋರೆಂಟ್‍ಗಳನ್ನು ಖಂಡಿತವಾಗಿ ಭಾರತೀಯರೆಂದು ನಾಟಕ ಮಾಡುವ ಪಾಕಿಸ್ತಾನಿಗಳು ನಿರ್ವಹಿಸುತ್ತಿದ್ದಾರೆ. ಯಾಕೆ ಹೀಗೆ?" ಎಂದು ಕೇಳಿದ್ದಾನೆ.
VIDEO | Protests erupt in Hyderabad against a bakery named after Karachi. The owner clarifies and says, "Karachi Bakery was founded here in Hyderabad in 1953 by Khanchand Ramnani, who migrated to India during the Partition. It has been 73 years. Our grandfather named it after… pic.twitter.com/i6dAkwxDIR
— Press Trust of India (@PTI_News) May 8, 2025
ಇದಕ್ಕೆ ಕಾಮೆಂಟ್ ಮಾಡಿದ ನೆಟ್ಟಿಗರು, ”ಭಾರತೀಯ ರೆಸ್ಟೋರೆಂಟ್‌ಗಳು ಯಾವುದು ಎಂದು ಹೇಗೆ ಕಂಡು ಹಿಡಿಯುವುದು?” ಎಂದು ಪ್ರಶ್ನಿಸಿದ್ದಾನೆ. ಇದಕ್ಕೆ ಉತ್ತರಿಸಿದ ಮತ್ತೊಬ್ಬರು, "ಪ್ರತಿ ಭಾರತೀಯ ರೆಸ್ಟೋರೆಂಟ್‍ಗಳು ತಮ್ಮ ಮಾಲೀಕನ ಭಾರತೀಯ ಎಂಬೆಸಿ ಸರ್ಟಿಫಿಕೇಟ್ ಅಥೆನ್ಟಿಸಿಟಿಯಿಂದ ಪಡೆದ NRI / OCI ಪ್ರಮಾಣಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು." ಎಂದು ಹೇಳಿದ್ದಾರೆ.
ಈ ಪೋಸ್ಟ್‌ನಲ್ಲಿ ಅನೇಕ ಭಾರತೀಯರು ಮತ್ತು ಪ್ರವಾಸಿಗರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಮೆರಿಕದಲ್ಲಿ ಇದ್ದ ಒಬ್ಬ ಭಾರತೀಯ ನೆಟ್ಟಿಗರು, “ಅಮೆರಿಕಾದಲ್ಲಿ ಪಾಕಿಸ್ತಾನಿಗಳಿಂದ ನಡೆಸಲಾಗುವ ಕೆಲವು ‘ಭಾರತೀಯ’ ಹೋಟೆಲ್‍ಗಳನ್ನು ನೋಡಿದ್ದೇನೆ” ಎಂದಿದ್ದಾರೆ.
“ಫ್ರಾನ್ಸ್‌ನಲ್ಲಿ ಸಹ, ಹೆಚ್ಚು ಭಾರತೀಯ ರೆಸ್ಟೋರೆಂಟ್‌ಗಳನ್ನು ಇಸ್ಲಾಮಿಕ್ ವ್ಯಕ್ತಿಗಳು ನಿರ್ವಹಿಸುತ್ತಾರೆ” ಎಂದು ಇನ್ನೊಬ್ಬ ನೆಟ್ಟಿಗರು ಹಂಚಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಹಣೆ ತುಂಬಾ ಸಿಂದೂರ ಹಚ್ಚಿಕೊಂಡ ಬಿಹಾರಿ ವಧು; ವಿಡಿಯೊ ನೋಡಿ ನೆಟ್ಟಿಗರು ಹೇಳಿದ್ದೇನು?
ವಿದೇಶದಲ್ಲಿರುವ ಹೋಟೆಲ್‍ಗಳಿಗೆ ಭಾರತೀಯ ಮತ್ತು ಪಾಕಿಸ್ತಾನಿ ಮಾಲೀಕತ್ವವನ್ನು ವಿಭಜಿಸುವ ಅಧಿಕೃತ ಜಾಗತಿಕ ದಾಖಲಾತಿ ಇಲ್ಲ. ಗ್ರಾಹಕರನ್ನು ಆಕರ್ಷಿಸಲು ಯುಎಸ್ ಮತ್ತು ಇತರ ದೇಶಗಳ ಹೋಟೆಲ್ ಮಾಲೀಕರು ಹೆಚ್ಚಾಗಿ ತಮ್ಮ ಆಹಾರವನ್ನು 'ಭಾರತೀಯ ಆಹಾರ’ವೆಂದು ಬಟರ್ ಚಿಕನ್ ಮತ್ತು ಚನ್ನಾ ಮಸಾಲಾಗಳಂತಹ ಆಹಾರಕ್ಕೆ ಲೇಬಲ್ ಅಂಟಿಸುತ್ತಾರೆ. ಆದರೆ ಮೂಲ ಪಾಕಿಸ್ತಾನಿ ಆಹಾರಗಳಾದ ಹಲೀಮ್, ಲಾಹೋರಿ ಫ್ರೈಡ್ ಫಿಶ್ ಅಥವಾ ಕಾಬೂಲಿ ಪುಲಾವ್‍ಗಳಿಗೆ ಲೇಬಲ್ ಹಾಕುವುದಿಲ್ಲವಂತೆ.