ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೆಮಟೊಪಯಟಿಕ್ ಸ್ಟೆಮ್ ಸೆಲ್ಸ್ ಟ್ರಾನ್ಸ್ ಪ್ಲಾಂಟ್ (ಎಚ್‌ಎಸ್‌ಸಿಟಿ) ಮತ್ತು ಬೋನ್ ಮಾರೋ ಟ್ರಾನ್ಸ್ ಪ್ಲಾಂಟ್ (ಬಿಎಂಟಿ) ಅವಲೋಕನ

ಟ್ರಾನ್ಸ್ ಪ್ಲಾಂಟ್ ಮಾಡಲು ಕಾಂಡಕೋಶಗಳನ್ನು ಮೂಲವಾಗಿ ದಾನಿಗಳಿಂದ (ಆಲೋಜೆನಿಕ್), ರೋಗಿ ಯ ಜೀವಕೋಶಗಳನ್ನು(ಆಟೋಲೋಗಸ್) ಅಥವಾ ಸಾರ್ವಜನಿಕ ಬಳ್ಳಿ ಬ್ಯಾಂಕ್‌ಗಳಲ್ಲಿ ಸಂಗ್ರಹಿಸ ಲಾದ ಹೊಕ್ಕುಳಬಳ್ಳಿಯ ರಕ್ತದಿಂದ ಪಡೆಯಬಹುದಾಗಿದೆ. ದಾನಿಗಳಿಂದ ಕಾಂಡಕೋಶಗಳನ್ನು ದ್ರಾವಣದ ಮೂಲಕ ಪಡೆಯುವ ಮೊದಲು ರೋಗಿಗಳು ಹೆಚ್ಚಿನ ಡೋಸ್ ಉಳ್ಳ ಕೀಮೋಥೆರಪಿ ಮತ್ತು ವಿಕರಣಕ್ಕೆ ಒಳಗಾಗುತ್ತಾರೆ

ಜಾಗತಿಕ ಮಾನದಂಡಗಳ ಮೂಲಕವೇ ಚಿಕಿತ್ಸೆ ನೀಡುವ ಗುರಿ

Profile Ashok Nayak Apr 15, 2025 11:01 PM

ಡಾ.ಸಂತೋಷ್ ಕೆ.ದೇವದಾಸ್, ಮುಖ್ಯಸ್ಥರು - ತಜ್ಞ ವೈದ್ಯರು - ಮೆಡಿಕಲ್ ಆಂಕೋಲಜಿ ವಿಭಾಗ, ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಆಂಕೋಸೈನ್ಸಸ್, ರಾಮಯ್ಯ ಮೆಮೋರಿಯಲ್ ಆಸ್ಪತ್ರೆ

ಬೆಂಗಳೂರು: ಈ ಎಚ್‌ಎಸ್‌ಟಿ ಮತ್ತು ಬಿಎಂಟಿ ಅನ್ನು 6೦ ವರ್ಷಗಳ ಹಿಂದೆ ಅಭಿವೃದ್ಧಿಪಡಿಸ ಲಾಯಿತು ಮತ್ತು ಈಗ ಮಾರಣಾಂತಿಕ ಮತ್ತು ಮಾರಣಾಂತಿಕವಲ್ಲದ ರಕ್ತದ ಆಸ್ವಸ್ಥತೆಗಳಿಗೆ ಪ್ರಮಾಣಿತ ಚಿಕಿತ್ಸೆಯಾಗಿ ಇದು ಹೊರಹೊಮ್ಮಿದೆ. 1957ರಲ್ಲಿ ಡಾ.ಎಡ್ವರ್ಡ್ ಡೊನಾಲ್ ಥಾಮಸ್ ಇದನ್ನು ಜಗತ್ತಿಗೆ ಪರಿಚಯಿಸಿದರು. ಇದರಿಂದ 1.5 ಬಿಲಿಯಲ್ ಟ್ರಾನ್ಸ್ ಪ್ಲಾಂಟ್ ಗಳನ್ನು ನಡೆಸ ಲಾಗಿದೆ. ಈ ಎಚ್‌ಎಸ್‌ಟಿ ರೋಗಗ್ರಸ್ತ ಮೊಳೆ ಮಜ್ತೆಯನ್ನು ಆರೋಗ್ಯಕರ ಕಾಂಡಕೋಶಗಳೊಂದಿಗೆ ಬದಲಾಯಿಸುವ ಪ್ರಕ್ರಿಯೆಯಾಗಿದೆ. ಲ್ಯುಕೇಮಿಯಾ, ಲಿಂಫೋಮಾ, ಕುಡಗೋಲು ಕಣ ರಕ್ತಹೀನತೆ ಮತ್ತು ಪ್ರತಿ ರಕ್ಷಣಾ ಕೊರತೆಯಂತಹ ಪರಿಸ್ಥಿತಿಗಳಿಗೆ ಸಂಭಾವ್ಯ ಚಿಕಿತ್ಸೆ ನೀಡುತ್ತದೆ.

ಟ್ರಾನ್ಸ್ ಪ್ಲಾಂಟ್ ಮಾಡಲು ಕಾಂಡಕೋಶಗಳನ್ನು ಮೂಲವಾಗಿ ದಾನಿಗಳಿಂದ (ಆಲೋಜೆನಿಕ್), ರೋಗಿಯ ಜೀವಕೋಶಗಳನ್ನು(ಆಟೋಲೋಗಸ್) ಅಥವಾ ಸಾರ್ವಜನಿಕ ಬಳ್ಳಿ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಲಾದ ಹೊಕ್ಕುಳಬಳ್ಳಿಯ ರಕ್ತದಿಂದ ಪಡೆಯಬಹುದಾಗಿದೆ. ದಾನಿಗಳಿಂದ ಕಾಂಡಕೋಶ ಗಳನ್ನು ದ್ರಾವಣದ ಮೂಲಕ ಪಡೆಯುವ ಮೊದಲು ರೋಗಿಗಳು ಹೆಚ್ಚಿನ ಡೋಸ್ ಉಳ್ಳ ಕೀಮೋಥೆರಪಿ ಮತ್ತು ವಿಕರಣಕ್ಕೆ ಒಳಗಾಗುತ್ತಾರೆ. ಈ ಜೀವಕೋಶಗಳು ಮಜ್ಜೆಗೆ ಪ್ರಯಾಣಿಸಿ, ಹೊಸ ಕೆಂಪು ಮತ್ತು ಬಿಳಿ ರಕ್ತ ಕಣಗಳು ಮತ್ತು ಪ್ಲೇಟ್‌ಲೇಟ್‌ಗಳನ್ನು ಉತ್ಪಾದಿಸುತ್ತದೆ.

ಇದನ್ನೂ ಓದಿ: Bangalore Traffic Advisory: ಇಂದು ರಂಜಾನ್‌ ಪ್ರಯುಕ್ತ ಸಂಚಾರ ಬದಲಾವಣೆ; ಚಾಮರಾಜಪೇಟೆ, ಮೈಸೂರು ರಸ್ತೆಗಳಲ್ಲಿ ಸಂಚರಿಸುವವರು ಗಮನಿಸಿ

ಎಚ್‌ಎಸ್‌ಟಿ ಲ್ಯುಕೇಮಿಯಾಗಳು ಉದಾಹರಣೆಗೆ (ಎಎಂಎಲ್, ಎಎಲ್‌ಎಲ್, ಸಿಎಂಎಲ್) ಲಿಂಫೋಮಾಗಳು, ಮೂಳೆ ಮಜ್ಜೆಯ ವೈಫಲ್ಯದ ರೋಗ ಲಕ್ಷಣಗಳು. ಪ್ರತಿ ರಕ್ಷಣಾ ಕೊರತೆ (ಉದಾಹರಣೆ ಎಸ್‌ಸಿಐಡಿ) ಹಿಮೋಗ್ಲೋಬಿನೋಪತಿಗಳು(ಉದಾಹರಣೆ ಬೀಟಾ, ಥಲಸ್ಸೇಮಿಯಾ, ಕುಡಗೋಲು ಕೋಶ ರೋಗ) ಅನುವಂಶಿಕ ಅಸ್ವಸ್ಥೆಗಳು ಮತ್ತು ಆಟೋಬೋಲಿಕ್ ಅಸ್ವಸ್ಥತೆಗಳು ಸೇರಿದಂತೆ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುತ್ತದೆ. ಬಹುವಿಧವಾದ ಸ್ಕ್ಲೆರೋಸಿಸ್ ಚೇತರಿಕೆಯ ಸೋಂಕುಗಳು ಇನ್‌ಫ್ಲೇಕ್ಷನ್ಸ್, ಗ್ರಾಫ್ಟ್ ವೈಫಲ್ಯ ಹಾಗೂ ಗ್ರಾಫ್ಟ್ ವೇರಸ್ ಹೋಸ್ಟ್ ಡಿಸೀಸಸ್( ಜಿವಿಎಚ್‌ಡಿ) ಇವುಗಳಲ್ಲಿನ ಸಂಭವಿಸಬಹುದಾದ ಅಪಾಯಗಳನ್ನು ನಿರ್ವಹಣೆ ಮಾಡಲಿದೆ.

ಬೆಂಗಳೂರಿನಲ್ಲಿರುವ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯಲ್ಲಿ (ಆರ್‌ಎಂಎಚ್) ಪ್ರವೇಶಿಸ ಬಹುದಾದ ಎಚ್‌ಎಸ್‌ಟಿ ಆರೈಕೆಯು ಅಗತ್ಯವಾದ ನಾವೀನ್ಯತೆಗೆ ಚಾಲನೆ ನೀಡಿದೆ. ಚಿಕಾಗೋದ ಇಲಿನಾಯ್ಸ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಆರ್‌ಎಂಎಚ್ 2015ರಲ್ಲಿ ಎಚ್‌ಎಸ್‌ಟಿ/ ಬಿಎಂಟಿ ಕೇಂದ್ರವನ್ನು ಸ್ಥಾಪಿಸಿದೆ. ರಿಯಾಯಿತಿ ವೆಚ್ಚಗಳೊಂದಿಗೆ ಉತ್ತಮ ಗುಣಮಟ್ಟ ಆರೈಕೆಯನ್ನು ಸಂಯೋಜಿಸುತ್ತದೆ.

ಮೀಸಲಾದ ತಂಡ, ಸುಧಾರಿತ ಮೂಲಸೌಕರ್ಯ ಮತ್ತು ಕಠಿಣ ಗುಣಮಟ್ಟ ಕ್ರಮಗಳೊಂದಿಗೆ ಆರ್‌ಎಂಎಸ್ 2೦೦ ಎಚ್‌ಎಸ್‌ಟಿ/ ಬಿಎಂಟಿ ಕಾರ್ಯವಿಧಾನವನ್ನು ನಿರ್ವಹಿಸುತ್ತಿದೆ. ಆರ್‌ಎಂಎಚ್‌ ನಲ್ಲಿ ವೈದ್ಯರು ಒದಗಿಸಿದ ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಹಾನುಭೂತಿ ಮತ್ತು ಸುಧಾ ರಿತ ಆರೈಕೆಯು ವಿವಿಧ ಕಟ್ಟಿಂಗ್ ಎಡ್ಜ್ ಸೌಕರ್ಯ ಮತ್ತು ಸಮಗ್ರ, ಅತ್ಯಾಧುನಿಕ ಆರೈಕೆಯನ್ನು ನಮ್ಮ ವೈದ್ಯರು ನೀಡಲಿದ್ದಾರೆ. ಶೇ.75 ರೋಗಿಗಳಲ್ಲಿ ಕಸಿ ಮತ್ತು ರೋಗ ಲಕ್ಷಣಗಳಿಂದ ಗುಣಮುಖ ರಾಗುವುದಕ್ಕೆ ಕಾರಣವಾಗಿದೆ.

ಆಟೋಲೋಗಸ್ ಮತ್ತು ಅಲೋಜೆನಿಕ್ ಕಾರ್ಯವಿಧಾನಗಳಿಗೆ ರಾಮಯ್ಯ ಮೆಮೋರಿಯಲ್ ಆಸ್ಪತ್ರೆ ಕೈಗೆಟಕುವ ದರದಲ್ಲಿ ಎಚ್‌ಎಸ್‌ಟಿಯನ್ನು ನೀಡುತ್ತಿದೆ. ಕ್ರೌಡ್‌ ಫಡಿಂಗ್, ಸರಕಾರಿ ವಿಮೆ ಮತ್ತು ರೋಗಿಗಳ ಸಹಾಯ ಯೋಜನೆಗಳ ಮೂಲಕ ಆರ್‌ಎಂಎಚ್ ಜೀವ ಉಳಿಸುವ ಚಿಕಿತ್ಸೆ ಗಳನ್ನು ಕೈಗೊಂಡಿದೆ. ಎಲ್ಲ ರೀತಿಯ ಜನರ ವರ್ಗಗಳಿಗೆ ಜಾಗತಿಕ ಮಾನದಂಡಗಳ ಮೂಲಕವೇ ಚಿಕಿತ್ಸೆ ನೀಡುವ ಗುರಿಯನ್ನು ಆಸ್ಪತ್ರೆ ಹೊಂದಿದೆ.